ದೇಶ

ಮೀನು ತಿಂದರೆ ನಿಮ್ಮ ಕಣ್ಣು ಐಶ್ವರ್ಯ ರೈ ತರಹ ಆಗುತ್ತದೆ: ಮಹಾರಾಷ್ಟ್ರ ಬಿಜೆಪಿ ಮಂತ್ರಿಯ ವಿವಾದಾತ್ಮಕ ಹೇಳಿಕೆ

ದಿನವೂ ಮೀನು ತಿನ್ನುವುದರಿಂದ ನಿಮ್ಮ ಕಣ್ಣು ಐಶ್ವರ್ಯ ರೈ ತರಹ ಹೊಳೆಯುತ್ತದೆ ಎಂದು ಮಹಾರಾಷ್ಟ್ರದ ಬುಡಕಟ್ಟು ಸಚಿವ ವಿಜಯ್‌ಕುಮಾರ್ ಗವಿತ್ ಹೇಳಿಕೆ ನೀಡಿದ್ದಾರೆ.   ಉತ್ತರ ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ...

ತೆಲಂಗಾಣ | ಚುನಾವಣೆ ಘೋಷಣೆಗೂ ಮುನ್ನವೇ ಬಹುತೇಕ ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಿದ ಕೆಸಿಆರ್

ತೆಲಂಗಾಣ ವಿಧಾನಸಭಾ ಚುನಾವಣೆಗೆ ನಾಲ್ಕು ತಿಂಗಳು ಬಾಕಿ ಇರುವ ಮುನ್ನವೇ ಮುಖ್ಯಮಂತ್ರಿ ಕೆ ಚಂದ್ರಶೇಖರ್‌ ರಾವ್‌ ತಮ್ಮ ಬಿಆರ್‌ಎಸ್‌ ಪಕ್ಷದ ಬಹುತೇಕ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ತೆಲಂಗಾಣದ ಒಟ್ಟು 119 ಕ್ಷೇತ್ರಗಳಲ್ಲಿ 115 ಕ್ಷೇತ್ರಗಳಿಗೆ...

ಕರ್ನಾಟಕ – ತಮಿಳುನಾಡು ಕಾವೇರಿ ನದಿ ವಿವಾದ: ನೀರು ಹಂಚಿಕೆಗೆ ಪ್ರತ್ಯೇಕ ಪೀಠ ರಚನೆಗೆ ಸುಪ್ರೀಂ ಒಪ್ಪಿಗೆ

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಪೀಠ ರಚನೆಗೆ ಸುಪ್ರೀಂ ಕೋರ್ಟ್ ಇಂದು(ಆಗಸ್ಟ್‌ 21) ಒಪ್ಪಿಗೆ ನೀಡಿದೆ. ಸುಪ್ರೀಂ ಕೋರ್ಟ್​ನಲ್ಲಿ ಸಿಜೆಐ ಪೀಠದ ಮುಂದೆ...

ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ; ಸರ್ಕಾರಿ ಅಧಿಕಾರಿ ವಿರುದ್ಧ ಎಫ್‌ಐಆರ್

ಸ್ನೇಹಿತನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ್ದ ಆರೋಪದ ಮೇಲೆ ದೆಹಲಿ ಸರ್ಕಾರಿ ಅಧಿಕಾರಿ ವಿರುದ್ಧ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದೆಹಲಿಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಯೊಬ್ಬ ತನ್ನ ಮೃತ ಸ್ನೇಹಿತನ...

ಆರ್‌ಟಿಐ ನಿಬಂಧನೆಗಳ ವಸ್ತುನಿಷ್ಠ ಅನುಷ್ಠಾನಕ್ಕೆ ಸುಪ್ರೀಂ ನಿರ್ದೇಶನ

ಸರ್ಕಾರಿ ಅಧಿಕಾರಿಗಳು ಮಾಹಿತಿಯನ್ನು ಪೂರ್ವಭಾವಿಯಾಗಿ ಬಹಿರಂಗಪಡಿಸುವುದು ಸೇರಿದಂತೆ ಮಾಹಿತಿ ಹಕ್ಕು ಕಾಯ್ದೆ-2005ರ (ಆರ್‌ಟಿಐ) ಎಲ್ಲ ನಿಬಂಧನೆಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರಲು ಕೇಂದ್ರ ಮಾಹಿತಿ ಆಯೋಗ ಮತ್ತು ರಾಜ್ಯ ಮಾಹಿತಿ ಆಯೋಗಗಳಿಗೆ ಸುಪ್ರೀಂ ಕೋರ್ಟ್...

ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನ ಹಗರಣ: ಸಿಬಿಐ ತನಿಖೆಗೆ ವಹಿಸಿದ ಕೇಂದ್ರ

ಕೇಂದ್ರ ಸರ್ಕಾರದ ಅಲ್ಪಸಂಖ್ಯಾತರ ವಿದ್ಯಾರ್ಥಿವೇತನ ವಿತರಣೆ ಯೋಜನೆಯಲ್ಲಿ ನಡೆದಿರುವ ಬೃಹತ್ ಹಗಣವೊಂದು ಬಯಲಿಗೆ ಬಂದಿದೆ. ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನದಡಿ ನೀಡಲಾಗಿದ್ದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಪ್ರಕರಣವನ್ನು ಕೇಂದ್ರೀಯ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಕೇಂದ್ರ...

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಪುನಾರಚನೆ: ರಾಜ್ಯದ ಸಯ್ಯದ್ ನಾಸೀರ್‌ ಹುಸೇನ್‌ ಅವರಿಗೆ ಸ್ಥಾನ

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಜನ್ಮದಿನದ ಪ್ರಯುಕ್ತ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಪುನಾರಚನೆ ಮಾಡಿದ್ದು, ರಾಜ್ಯದಿಂದ ರಾಜ್ಯಸಭಾ ಸದಸ್ಯರಾದ ಸಯ್ಯದ್‌ ನಾಸೀರ್‌ ಹುಸೇನ್‌ ಅವರು...

ಯಾವ ಪಾರಿವಾಳವೂ ಬಂದಿಲ್ಲ, ಫೋನೂ ಬಂದಿಲ್ಲ; ‘ಇಂಡಿಯಾ’ ಜೊತೆ ಮೈತ್ರಿ ಬಗ್ಗೆ ಪ್ರಕಾಶ್ ಅಂಬೇಡ್ಕರ್ ಹೇಳಿಕೆ

ವಿರೋಧ ಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ದಿಂದ ಮೈತ್ರಿಗಾಗಿ ತಮಗೆ ಆಹ್ವಾನ ಬಂದಿಲ್ಲ ಎಂದು ‘ವಂಚಿತ ಬಹುಜನ ಅಘಾಡಿ’ (ವಿಬಿಎ) ಸಂಸ್ಥಾಪಕ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ತಿಳಿಸಿದ್ಧಾರೆ. ಪ್ರಕಾಶ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್...

ಉತ್ತರ ಪ್ರದೇಶ | ಹಿಂದೂ ಹುಡುಗಿಯನ್ನು ಪ್ರೀತಿಸಿದ ಯುವಕ; ಯುವತಿ ಕುಟುಂಬದಿಂದ ಮುಸ್ಲಿಂ ಪೋಷಕರ ಹತ್ಯೆ

ಮುಸ್ಲಿಂ ಸಮುದಾಯದ ಯುವಕನೊಬ್ಬ ಹಿಂದೂ ಹುಡುಗಿಯನ್ನು ಪ್ರೀತಿಸಿ ಓಡಿ ಹೋಗಿದ್ದಕ್ಕೆ ಯುವಕನ ತಂದೆ-ತಾಯಿಯನ್ನು ಯುವತಿ ಕುಟುಂಬದವರು ಮಾರಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ನಡೆದಿದೆ.   ಶುಕ್ರವಾರ (ಆಗಸ್ಟ್...

ಲಡಾಕ್‌ನಲ್ಲಿ 130 ಕಿಮೀ ಬೈಕ್‌ ಸವಾರಿ ಮಾಡಿದ ರಾಹುಲ್‌ ಗಾಂಧಿ; ಈ ವಾರ ಕಾರ್ಗಿಲ್‌ಗೆ ಭೇಟಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ(ಆಗಸ್ಟ್‌ 19) ತಮ್ಮ ತಂದೆ ರಾಜೀವ್ ಗಾಂಧಿ ಅವರ ಜನ್ಮದಿನದ ಮುನ್ನಾದಿನದಂದು ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಲೇಹ್‌ನಿಂದ ಪಾಂಗಾಂಗ್ ಸರೋವರದವರೆಗೆ ಬೈಕ್ ಸವಾರಿ ಮಾಡಿದ್ದಾರೆ. ಆಗಸ್ಟ್ 2019 ರಲ್ಲಿ...

ಗುಜರಾತ್ ಚುನಾವಣೆ | ಬಿಜೆಪಿ ₹209 ಕೋಟಿ, ಕಾಂಗ್ರೆಸ್ ₹103 ಕೋಟಿ ಖರ್ಚು ಮಾಡಿವೆ

2022ರ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 209 ಕೋಟಿ ರೂಪಾಯಿ ಖರ್ಚು ಮಾಡಿದೆ. ಈ ಮೊತ್ತವು ಕಾಂಗ್ರೆಸ್ ಖರ್ಚು ಮಾಡಿದ್ದಕ್ಕಿಂತ ದುಪ್ಪಟ್ಟಿದೆ ಎಂದು ಚುನಾವಣಾ ಆಯೋಗಕ್ಕೆ ಪಕ್ಷಗಳು ಸಲ್ಲಿಸಿದ ವೆಚ್ಚದ ವರದಿಯಲ್ಲಿ ತಿಳಿದುಬಂದಿದೆ....

ಹದಿಹರೆಯದ ಒಪ್ಪಿತ ಲೈಂಗಿಕತೆಯನ್ನು ಅಪರಾಧ ಎನ್ನಬೇಕೇ? ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

18 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಒಪ್ಪಿತ ಲೈಂಗಿಕತೆಯನ್ನು ಅಪರಾಧವೆಂದು ಪರಿಗಣಿಸಬೇಕೇ? ಈ ವಿಚಾರದಲ್ಲಿ ಭಾರತಕ್ಕೆ ರೋಮಿಯೋ-ಜೂಲಿಯೆಟ್ ಕಾನೂನಿನ ಅನ್ವಯ ಮಾಡಬಹುದೇ? ಎಂಬುದರ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿದೆ. ಹದಿಹರೆಯದ ಲಕ್ಷಾಂತರ...

ಈ ಹೊತ್ತಿನ ಪ್ರಮುಖ ಸುದ್ದಿ