2027ರ ಪಂಜಾಬ್ ಚುನಾವಣೆ: ಅಮೃತಪಾಲ್ ಸಿಂಗ್ ಪಕ್ಷ, ಬಿಎಸ್‌ಪಿ ನಡುವೆ ಮೈತ್ರಿ ಕಸರತ್ತು

Date:

ಮುಂಬರುವ 2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಪೂರ್ವಭಾವಿಯಾಗಿ ರಾಜ್ಯ ರಾಜಕೀಯದಲ್ಲಿ ಹೊಸ ಮೈತ್ರಿ ಸಮೀಕರಣಗಳು ಗರಿಗೆದರಿವೆ. ಖಡೂರ್ ಸಾಹಿಬ್ ಸಂಸದ ಅಮೃತಪಾಲ್ ಸಿಂಗ್ ನೇತೃತ್ವದ ‘ಅಕಾಲಿ ದಳ (ವಾರಿಸ್ ಪಂಜಾಬ್ ದೇ)’ ಮತ್ತು ಮಾಯಾವತಿ ನೇತೃತ್ವದ ‘ಬಹುಜನ ಸಮಾಜ ಪಕ್ಷ’ (ಬಿಎಸ್‌ಪಿ) ನಡುವೆ ಚುನಾವಣಾ ಪೂರ್ವ ಮೈತ್ರಿ ಕಸರತ್ತು ನಡೆಯುತ್ತಿವೆ.

- Advertisement -

ಪಂಜಾಬ್‌ನಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರವನ್ನು ಪುನರ್‌ಪರಿಶೀಲಿಸುತ್ತಿರುವ ಬಿಎಸ್‌ಪಿ, ಈಗಾಗಲೇ ಅಕಾಲಿ ದಳ (ವಾರಿಸ್ ಪಂಜಾಬ್ ದೇ) ನಾಯಕರೊಂದಿಗೆ ತೆರೆಮರೆಯ ಮಾತುಕತೆಗಳನ್ನು ಆರಂಭಿಸಿದೆ. ಸೀಟು ಹಂಚಿಕೆ ಕುರಿತು ಉಭಯ ಪಕ್ಷಗಳ ನಡುವೆ ಚರ್ಚೆಗಳು ಮುಂದುವರಿದಿದ್ದು, ಬಿಎಸ್‌ಪಿ ವರಿಷ್ಠೆ ಮಾಯಾವತಿ ಅವರ ಅಂತಿಮ ಒಪ್ಪಿಗೆಗಾಗಿ ಕಾಯಲಾಗುತ್ತಿದೆ. ಮುಂದಿನ ಎರಡು ವಾರಗಳಲ್ಲಿ ಈ ಮೈತ್ರಿಯ ಕುರಿತು ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆಯಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇಂದು ಭಗತ್ ಸಿಂಗ್ ಹೆಸರು ಬಳಸುವ ಆರ್‌ಎಸ್‌ಎಸ್ ನಾಯಕರಿಗೆ...

ಜಾತ್ಯತೀತತೆ ಮತ್ತು ಸಮಾಜವಾದದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದ, ಕೋಮುವಾದಿ ಧೋರಣೆಗಳನ್ನು ಕಟುವಾಗಿ ವಿಮರ್ಶಿಸುತ್ತಿದ್ದ ಭಗತ್ ಸಿಂಗ್ ಅವರನ್ನು ಇಂದು ಅದೇ ಸಿದ್ಧಾಂತಗಳ ವಿರುದ್ಧ ನಿಂತಿರುವ ಬಿಜೆಪಿ, ಆರ್‌ಎಸ್‌ಎಸ್, ಎಬಿವಿಪಿ ನಾಯಕರು ತಮ್ಮ 'ಸ್ವಂತ...

ಬರಗಾಲ | ಕಾಡಿನ ಮೌನದ ಹಿಂದೆ ಅಡಗಿದೆ ಜೀವಸಂಕುಲದ...

ಒಂದು ಆನೆಗೆ ದಿನಕ್ಕೆ ನೂರಾರು ಲೀಟರ್ ನೀರು ಮತ್ತು ನೂರಾರು ಕೆ.ಜಿ. ಆಹಾರ ಬೇಕಾಗುತ್ತದೆ. ಇನ್ನು ಕಾಡಿನಲ್ಲಿರುವ ಸಾವಿರಾರು ಆನೆಗಳು, ಹುಲಿಗಳು, ಚಿರತೆಗಳು, ಜಿಂಕೆಗಳು, ಕಾಡೆಮ್ಮೆಗಳು ಸೇರಿದಂತೆ ವಿವಿಧ ವನ್ಯಜೀವಿಗಳ ಅಗತ್ಯವನ್ನು ಲೆಕ್ಕಹಾಕಿದರೆ...

ಬಾಗಲಕೋಟೆ | ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತರಗತಿ ಆರಂಭ;...

ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಕಾಲ ಕೂಡಿಬಂದಿದೆ. ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂಬ ದಶಕಗಳ ಬೇಡಿಕೆಗೆ ಸಾಕಾರ ರೂಪ ಸಿಕ್ಕಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನಗರದ ಬಹುನಿರೀಕ್ಷಿತ...

ಇದನ್ನೂ ಓದಿ: ಬಿಎಸ್‌ಪಿ ಯಾವುದೇ ಪ್ರಾದೇಶಿಕ ಪಕ್ಷಗಳೊಂದಿಗೆ ಮೈತ್ರಿ ಮಾಡಲ್ಲ: ಮಾಯಾವತಿ

ಪಂಜಾಬ್‌ನಲ್ಲಿ ತನ್ನ ಅಸ್ತಿತ್ವವನ್ನು ಮರುಸ್ಥಾಪಿಸಿಕೊಳ್ಳಲು ಬಿಎಸ್‌ಪಿ ಹವಣಿಸುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 13 ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಬಿಎಸ್‌ಪಿ ಕೇವಲ ಶೇ. 2.49ರಷ್ಟು ಮತಗಳನ್ನು ಪಡೆದಿತ್ತು. ಹೀಗಾಗಿ ಪ್ರಬಲ ಸ್ಥಳೀಯ ಶಕ್ತಿಯೊಂದಿಗೆ ಕೈಜೋಡಿಸಿ ಮತಬ್ಯಾಂಕ್ ವೃದ್ಧಿಸಿಕೊಳ್ಳುವುದು ಅದರ ಗುರಿಯಾಗಿದೆ.

2025ರ ಜನವರಿಯಲ್ಲಿ ಅಸ್ತಿತ್ವಕ್ಕೆ ಬಂದ ಅಮೃತಪಾಲ್ ಸಿಂಗ್ ಅವರ ಪಕ್ಷಕ್ಕೆ, ಬಿಎಸ್‌ಪಿಯ ಸಾಂಪ್ರದಾಯಿಕ ದಲಿತ ಮತಬ್ಯಾಂಕ್ ಮತ್ತು ರಾಜ್ಯವ್ಯಾಪಿ ಸಂಘಟನಾ ಜಾಲದ ಬೆಂಬಲ ಸಿಗಲಿದೆ. ಇದು ತನ್ನ ಸಾಂಪ್ರದಾಯಿಕ ‘ಪಂಥಿಕ್’ (ಸಿಖ್) ನೆಲೆಯನ್ನು ಮೀರಿ ಇತರ ಸಮುದಾಯಗಳಿಗೂ ವಿಸ್ತರಿಸಲು ಸಹಾಯ ಮಾಡಲಿದೆ ಎಂಬುದು ಲೆಕ್ಕಾಚಾರವಾಗಿದೆ.

2027ರ ಚುನಾವಣೆಯಲ್ಲಿ ಸ್ಪರ್ಧಿಸಲು ‘ಅಕಾಲಿ ದಳ (ವಾರಿಸ್ ಪಂಜಾಬ್ ದೇ)’ ಪಕ್ಷವು ಭಾರತೀಯ ಚುನಾವಣಾ ಆಯೋಗದಿಂದ (ಇಸಿಐ) ಅಧಿಕೃತ ರಾಜಕೀಯ ಪಕ್ಷವಾಗಿ ನೋಂದಣಿ ಪಡೆಯುವುದು ಅತ್ಯಗತ್ಯವಾಗಿದ್ದು, ಆ ಅರ್ಜಿ ಇನ್ನೂ ಬಾಕಿ ಇದೆ. ಇದೇ ವೇಳೆ, ತಮ್ಮ ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಅಮೃತಪಾಲ್ ಸಿಂಗ್ ಅವರಿಗೆ ನೀಡಲಾಗಿದ್ದ ಮೂರು ಗಂಟೆಗಳ ಪೆರೋಲ್ ಭೇಟಿಯು ಬೆಂಬಲಿಗರಲ್ಲಿ ಹೊಸ ಉತ್ಸಾಹ ತುಂಬಿದ್ದು, ಅಕಾಲಿ ದಳ ರಾಜಕೀಯ ಚಟುವಟಿಕೆಗಳಿಗೆ ವೇಗ ನೀಡಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವೋಟ್ ಇಲ್ಲದಿದ್ದರೆ ಲೈಟೂ ಇಲ್ಲ; ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸೋತ ಬೆನ್ನಲ್ಲೇ ಗ್ರಾಮದ ಬೀದಿ ದೀಪಗಳು ಆಫ್!

ಪಂಚಾಯತ್ ಸಮಿತಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರಾಭವಗೊಂಡ ಬೆನ್ನಲ್ಲೇ, ಚುನಾವಣೆಗೂ ಮುನ್ನ...

ಬರ ಹಿನ್ನೆಲೆ; ವಿಬಿ-ಜಿ ರಾಮ್‌ಜಿ ಯೋಜನೆಯಡಿ 175 ದಿನಗಳ ಕೆಲಸಕ್ಕೆ ಪತ್ರ: ಈಶ್ವರ ಖಂಡ್ರೆ

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರಗಾಲ ಆವರಿಸಿದ್ದು, "ವಿಕಸಿತ ಭಾರತ - ಗ್ಯಾರಂಟಿ...

ಬಾಗಲಕೋಟೆ | ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತರಗತಿ ಆರಂಭ; ಫಲಿಸಿತು ದಶಕಗಳ ಬೇಡಿಕೆ

ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಕಾಲ ಕೂಡಿಬಂದಿದೆ. ಬಾಗಲಕೋಟೆಯಲ್ಲಿ...

ರೋಹಿಂಗ್ಯಾ ಮುಸ್ಲಿಮರ ನರಮೇಧಕ್ಕೆ ಇಸ್ರೇಲ್ ಶಸ್ತ್ರಾಸ್ತ್ರ ಪೂರೈಕೆ, ತರಬೇತಿ: ಗಂಭೀರ ಆರೋಪ

ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಮ್ಯಾನ್ಮಾರ್ ಸೇನೆ ನಡೆಸಿದ ನರಮೇಧಕ್ಕೆ ಇಸ್ರೇಲ್ ಶಸ್ತ್ರಾಸ್ತ್ರಗಳನ್ನು...