ಯುಪಿ ಚುನಾವಣೆ | ಬಿಜೆಪಿಯನ್ನು ಸೋಲಿಸಲು ಎಸ್‌ಪಿ-ಕಾಂಗ್ರೆಸ್ ಗಂಭೀರವಾಗಿಲ್ಲ: ಆಜಾದ್ ಆರೋಪ

Date:

ಮುಂದಿನ ವರ್ಷ (2027) ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯನ್ನು ಸೋಲಿಸುವ ಬಗ್ಗೆ ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಯಾವುದೇ ಗಂಭೀರತೆಯಿಲ್ಲ ಎಂದು ಆಜಾದ್ ಸಮಾಜ ಪಕ್ಷದ (ಕಾನ್ಶಿ ರಾಮ್) ಅಧ್ಯಕ್ಷ, ನಗೀನಾ ಕ್ಷೇತ್ರದ ಸಂಸದ ಚಂದ್ರಶೇಖರ್ ಆಜಾದ್ ಆರೋಪಿಸಿದ್ದಾರೆ.

- Advertisement -

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, “ಆಡಳಿತ ಪಕ್ಷವನ್ನು ಒಗ್ಗಟ್ಟಾಗಿ ಎದುರಿಸಲು ತಮ್ಮ ನೇತೃತ್ವದ ‘ಸಾಮಾಜಿಕ ಪರಿವರ್ತನಾ ಮೋರ್ಚಾ’ದೊಂದಿಗೆ ಕೈಜೋಡಿಸಲು ಎಸ್‌ಪಿ ಮತ್ತು ಕಾಂಗ್ರೆಸ್‌ಗೆ ಈಗಲೂ ಬಾಗಿಲು ತೆರೆದಿದೆ” ಎಂದು ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಇಂದು ಭಗತ್ ಸಿಂಗ್ ಹೆಸರು ಬಳಸುವ ಆರ್‌ಎಸ್‌ಎಸ್ ನಾಯಕರಿಗೆ...

ಜಾತ್ಯತೀತತೆ ಮತ್ತು ಸಮಾಜವಾದದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದ, ಕೋಮುವಾದಿ ಧೋರಣೆಗಳನ್ನು ಕಟುವಾಗಿ ವಿಮರ್ಶಿಸುತ್ತಿದ್ದ ಭಗತ್ ಸಿಂಗ್ ಅವರನ್ನು ಇಂದು ಅದೇ ಸಿದ್ಧಾಂತಗಳ ವಿರುದ್ಧ ನಿಂತಿರುವ ಬಿಜೆಪಿ, ಆರ್‌ಎಸ್‌ಎಸ್, ಎಬಿವಿಪಿ ನಾಯಕರು ತಮ್ಮ 'ಸ್ವಂತ...

ಬರಗಾಲ | ಕಾಡಿನ ಮೌನದ ಹಿಂದೆ ಅಡಗಿದೆ ಜೀವಸಂಕುಲದ...

ಒಂದು ಆನೆಗೆ ದಿನಕ್ಕೆ ನೂರಾರು ಲೀಟರ್ ನೀರು ಮತ್ತು ನೂರಾರು ಕೆ.ಜಿ. ಆಹಾರ ಬೇಕಾಗುತ್ತದೆ. ಇನ್ನು ಕಾಡಿನಲ್ಲಿರುವ ಸಾವಿರಾರು ಆನೆಗಳು, ಹುಲಿಗಳು, ಚಿರತೆಗಳು, ಜಿಂಕೆಗಳು, ಕಾಡೆಮ್ಮೆಗಳು ಸೇರಿದಂತೆ ವಿವಿಧ ವನ್ಯಜೀವಿಗಳ ಅಗತ್ಯವನ್ನು ಲೆಕ್ಕಹಾಕಿದರೆ...

ಬಾಗಲಕೋಟೆ | ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ತರಗತಿ ಆರಂಭ;...

ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ಕಾಲ ಕೂಡಿಬಂದಿದೆ. ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕು ಎಂಬ ದಶಕಗಳ ಬೇಡಿಕೆಗೆ ಸಾಕಾರ ರೂಪ ಸಿಕ್ಕಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ನಗರದ ಬಹುನಿರೀಕ್ಷಿತ...

ಅಲ್ಲದೆ, ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮೇಲಿನ ಜನರ ನಂಬಿಕೆ ಕುಸಿಯುತ್ತಿದ್ದು, ತಮ್ಮ ಆಜಾದ್ ಸಮಾಜ ಪಕ್ಷಕ್ಕೆ ಜನಬೆಂಬಲ ನಿರಂತರವಾಗಿ ಹೆಚ್ಚುತ್ತಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

2027ರ ಉತ್ತರ ಪ್ರದೇಶ ಚುನಾವಣೆಗಾಗಿ ಹೊಸದಾಗಿ ರಚನೆಯಾಗಿರುವ ‘ಸಾಮಾಜಿಕ ಪರಿವರ್ತನಾ ಮೋರ್ಚಾ’ದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಚಂದ್ರಶೇಖರ್ ಆಜಾದ್ ಅವರನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಘೋಷಿಸಿದ ಕೆಲವೇ ದಿನಗಳ ನಂತರ ಆಜಾದ್ ಈ ಹೇಳಿಕೆ ನೀಡಿದ್ದಾರೆ. ಬಿಜೆಪಿಯನ್ನು ತಡೆಯಲು ವಿರೋಧ ಪಕ್ಷಗಳ ಬೃಹತ್ ಮೈತ್ರಿಕೂಟ ರಚಿಸಲು ತಾವು ಎಲ್ಲ ಪಕ್ಷಗಳನ್ನು ಸಂಪರ್ಕಿಸಿ, ಜವಾಬ್ದಾರಿಯುತ ನಾಯಕರಿಗೆ ಅಧಿಕೃತ ಸಂದೇಶಗಳನ್ನು ಕಳುಹಿಸಿದ್ದಾಗಿ ಆಜಾದ್ ವಿವರಿಸಿದ್ದಾರೆ. 2017 ಮತ್ತು 2022ರ ಚುನಾವಣಾ ಅನುಭವಗಳ ಪ್ರಕಾರ ಬಿಜೆಪಿಯ ಮತ ಹಂಚಿಕೆಯನ್ನು ಮೀರಿಸಲು ದೊಡ್ಡ ಮೈತ್ರಿ ಅಗತ್ಯವಿತ್ತು. ಆದರೆ ಎಸ್‌ಪಿ ಮತ್ತು ಕಾಂಗ್ರೆಸ್‌ಗೆ ಬಿಜೆಪಿಯನ್ನು ಸೋಲಿಸುವ ಇಚ್ಛಾಶಕ್ತಿಯಿಲ್ಲ ಎಂಬುದು ಮನವರಿಕೆಯಾದ ನಂತರ, ಪ್ರತ್ಯೇಕ ಮೈತ್ರಿಕೂಟ ರಚಿಸುವ ನಿರ್ಧಾರಕ್ಕೆ ಬರಲಾಯಿತು ಎಂದು ಅವರು ಹೇಳಿದ್ದಾರೆ.

“ಬಡವರು ಮತ್ತು ದುರ್ಬಲರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದರೂ, ಈ ವಿರೋಧ ಪಕ್ಷಗಳ ನಾಯಕರು 2017, 2019 ಮತ್ತು 2024ರಲ್ಲೂ ಬಿಜೆಪಿಯನ್ನು ಸೋಲಿಸುವ ಬಗ್ಗೆ ಗಂಭೀರವಾಗಿರಲಿಲ್ಲ” ಎಂದು ಅವರು ಟೀಕಿಸಿದ್ದಾರೆ.

ತಮ್ಮ ಮತ್ತು ಓವೈಸಿ ನೇತೃತ್ವದ ಎಐಎಂಐಎಂ ನಡುವಿನ ಹೊಸ ಮೈತ್ರಿಯು ಅತ್ಯಂತ ಬಲಿಷ್ಠವಾಗಿ ಹೋರಾಡಿ ಏಕಾಂಗಿಯಾಗಿ ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ ಎಂದು ಆಜಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ದೊಡ್ಡ ಮತಬ್ಯಾಂಕ್ ಹೊಂದಿರುವ ಸಮುದಾಯಗಳ ಈ ಮೈತ್ರಿ ರಚನೆಯಾಗದಂತೆ ದೀರ್ಘಕಾಲದಿಂದ ತಡೆಯುವ ಪ್ರಯತ್ನಗಳು ನಡೆದಿದ್ದವು ಎಂದಿರುವ ಅವರು, ನವೆಂಬರ್ 26ರಂದು ಲಕ್ನೋದಲ್ಲಿ ನಡೆಯಲಿರುವ ತಮ್ಮ ಮೈತ್ರಿಕೂಟದ ಬೃಹತ್ ಸಮಾವೇಶದ ಶಕ್ತಿ ಪ್ರದರ್ಶನವನ್ನು ವೀಕ್ಷಿಸಿ, ಉತ್ತರ ಪ್ರದೇಶವನ್ನು ಉಳಿಸುವ ಬಗ್ಗೆ ಎಸ್‌ಪಿ ಮತ್ತು ಕಾಂಗ್ರೆಸ್ ನಿರ್ಧಾರ ತೆಗೆದುಕೊಳ್ಳಲಿ ಎಂದು ಆಹ್ವಾನ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ತನ್ನ ನೆಲೆ ಕಳೆದುಕೊಳ್ಳುತ್ತಿರುವ ಕುರಿತು ಪ್ರತಿಕ್ರಿಯಿಸಿದ ಆಜಾದ್, “2007ರಲ್ಲಿ ಶೇ. 30ರಷ್ಟಿದ್ದ ಬಿಎಸ್‌ಪಿ ಮತ ಹಂಚಿಕೆ ಇಂದು ಶೇ. 9ಕ್ಕೆ ಕುಸಿದಿದೆ.ಈ ಶೇ. 21ರಷ್ಟು ಮತಗಳ ಕುಸಿತವು ಚುನಾವಣೆಯಿಂದ ಚುನಾವಣೆಗೆ ಜನರ ನಂಬಿಕೆ ಕಡಿಮೆಯಾಗಿರುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಇಂದು ಲೋಕಸಭೆ, ವಿಧಾನಸಭೆ ಅಥವಾ ರಾಜ್ಯಸಭೆ ಸೇರಿದಂತೆ ಯಾವುದೇ ಸದನದಲ್ಲಿ ಬಿಎಸ್‌ಪಿಗೆ ಒಬ್ಬನೇ ಒಬ್ಬ ಪ್ರತಿನಿಧಿ ಇಲ್ಲದಂತಾಗಿದೆ” ಎಂದು ವಿಶ್ಲೇಷಿಸಿದ್ದಾರೆ.

ತಮ್ಮ ಮೈತ್ರಿಕೂಟವನ್ನು ಬಿಜೆಪಿಯ ‘ಬಿ-ಟೀಮ್’ ಎಂದು ಕರೆಯುತ್ತಿರುವ ವಿರೋಧ ಪಕ್ಷಗಳ ಆರೋಪವನ್ನು ಆಜಾದ್ ತೀವ್ರವಾಗಿ ತಳ್ಳಿಹಾಕಿದ್ದಾರೆ. ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುವುದೇ ‘ಬಿ-ಟೀಮ್’ ಎನಿಸಿಕೊಳ್ಳುವುದಾದರೆ, 2022ರಲ್ಲಿ ಎಸ್‌ಪಿ ವಿರುದ್ಧ 399 ಸ್ಥಾನಗಳಲ್ಲಿ ಸ್ಪರ್ಧಿಸಿ ಸುಮಾರು 300 ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡ ಕಾಂಗ್ರೆಸ್ ಯಾವ ತಂಡವಾಗಿತ್ತು ಎಂದು ಪ್ರಶ್ನಿಸಿದ್ದಾರೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೋಹಿಂಗ್ಯಾ ಮುಸ್ಲಿಮರ ನರಮೇಧಕ್ಕೆ ಇಸ್ರೇಲ್ ಶಸ್ತ್ರಾಸ್ತ್ರ ಪೂರೈಕೆ, ತರಬೇತಿ: ಗಂಭೀರ ಆರೋಪ

ರೋಹಿಂಗ್ಯಾ ಮುಸ್ಲಿಮರ ವಿರುದ್ಧ ಮ್ಯಾನ್ಮಾರ್ ಸೇನೆ ನಡೆಸಿದ ನರಮೇಧಕ್ಕೆ ಇಸ್ರೇಲ್ ಶಸ್ತ್ರಾಸ್ತ್ರಗಳನ್ನು...

ಮ್ಯಾಕ್ಸ್ ಆಸ್ಪತ್ರೆ ಕಿರುಕುಳ ಆರೋಪ: ಡೆತ್‌ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆಗೆ ಯತ್ನ

ಶಿವಮೊಗ್ಗ ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಒಂದಾದ ಮ್ಯಾಕ್ಸ್ ಆಸ್ಪತ್ರೆಯ ವಿರುದ್ಧ...

ಮುಂಡಗೋಡ | ಮನೆಯಲ್ಲಿ ಕಾಡು ಹಂದಿ ಮಾಂಸ ಪತ್ತೆ: ಓರ್ವ ಅರೆಸ್ಟ್, ಮತ್ತೊಬ್ಬ ಪರಾರಿ!

ಬಾಡಿಗೆ ಮನೆಯಲ್ಲಿ ಅಕ್ರಮವಾಗಿ ಕಾಡು ಹಂದಿ ಮಾಂಸವನ್ನು ಪಾಲು ಮಾಡಿ ಅಡುಗೆ...