ದೇಶ

ಮಧ್ಯಪ್ರದೇಶ | ಪೆನ್‌ಡ್ರೈವ್‌ಗಾಗಿ ಪೊಲೀಸರ ಪರದಾಟ; ಲಕ್ಷಾಂತರ ರೂ. ಖರ್ಚು!

ಮಧ್ಯಪ್ರದೇಶದ ಪೊಲೀಸರು ಪೆನ್‌ಡ್ರೈವ್‌ಗಳ ಮೊರೆಹೋಗುತ್ತಿದ್ದಾರೆ. ಅವುಗಳ ಖರೀದಿಗಾಗಿ ಭಾರೀ ಹಣ ವ್ಯಯಿಸುತ್ತಿದ್ದಾರೆ. ಮಧ್ಯಪ್ರದೇಶದಾದ್ಯಂತ ಇರುವ ಎಲ್ಲ ಪೊಲೀಸ್‌ ಠಾಣೆಗಳು ಪೆನ್‌ಡ್ರೈವ್‌ ಖರೀದಿಗಾಗಿ ತಿಂಗಳಿಗೆ ಬರೋಬ್ಬರಿ ಒಟ್ಟು 25 ಲಕ್ಷ ರೂ. ಖರ್ಚು ಮಾಡುತ್ತಿವೆ...

ಅದಾನಿಗಾಗಿ ಗಡಿ ಭದ್ರತಾ ನಿಯಮಗಳನ್ನೇ ಸಡಿಲಿಕೆ ಮಾಡಿದ ಮೋದಿ ಸರ್ಕಾರ; ಸ್ಪಷ್ಟನೆಗೆ ಕಾಂಗ್ರೆಸ್‌ ಆಗ್ರಹ

ಭಾರತದ ಗಡಿ ಭಾಗಗಳಲ್ಲಿ ಸೌರ ವಿದ್ಯುತ್ ಸ್ಥಾವರ ಮತ್ತು ನವೀಕರಿಸಬಹುದಾದ ಇಂಧನ ಪಾರ್ಕ್ ಸ್ಥಾಪಿಸಲು ಅದಾನಿ ಸಮೂಹಕ್ಕೆ ಅನುಕೂಲ ಮಾಡಿಕೊಡಲು ಭಾರತ-ಪಾಕಿಸ್ತಾನ ಗಡಿ ಭದ್ರತಾ ನಿಯಮಗಳನ್ನು ಕೇಂದ್ರ ಸರ್ಕಾರ ಸಡಿಲಿಕೆ ಮಾಡಿದೆ ಎಂಬ...

ಶಿವನ ದೇವಾಲಯದಲ್ಲಿ ಮಾಂಸದ ತುಂಡು ಪತ್ತೆಗೆ ಕೋಮು ಬಣ್ಣ; ಆದರೆ, ನಿಜವಾದ ಅಪರಾಧಿ ಬೆಕ್ಕು

ಹೈದರಾಬಾದ್‌ನ ತಪ್ಪಚಬುತ್ರದ ಹನುಮಾನ್ ದೇವಸ್ಥಾನದ ಆವರಣದಲ್ಲಿದ್ದ ಶಿವ ದೇವಾಲಯದಲ್ಲಿ ಬುಧವಾರ ಮಾಂಸದ ತುಂಡು ಪತ್ತೆಯಾಗಿತ್ತು. ಬಳಿಕ, ಪ್ರಕರಣಕ್ಕೆ ಕೋಮು ಬಣ್ಣ ಬಳಿದು, ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ದೇವಾಲಯದಲ್ಲಿ ಮಾಂಸದ ತುಂಡು ಹಾಕಿದ್ದು...

ದೆಹಲಿ ಚುನಾವಣೆಯಲ್ಲಿ ಎಎಪಿ, ಕಾಂಗ್ರೆಸ್ ಜೊತೆಯಾಗಿ ಸ್ಪರ್ಧಿಸಬೇಕಿತ್ತು: ಅಮರ್ತ್ಯ ಸೇನ್

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಜೊತೆಯಾಗಿ ಸ್ಪರ್ಧಿಸಬೇಕಿತ್ತು. ಉಭಯ ಪಕ್ಷಗಳ ನಡುವೆ ಒಗ್ಗಟ್ಟು ಅತೀ ಮುಖ್ಯವಾಗಿತ್ತು. ಬಹುತೇಕ ಭಾರತೀಯರಿಗೆ ಹಿಂದೂ ರಾಷ್ಟ್ರ ಬೇಕಾಗಿಲ್ಲ ಎಂದು ನೊಬೆಲ್...

ಅತ್ಯಾಚಾರ ಸಂತ್ರಸ್ತರಿಗೆ ಗರ್ಭಪಾತ ಮಾಡಿಸುವ ಹಕ್ಕಿದೆ: ಅಲಹಾಬಾದ್ ಹೈಕೋರ್ಟ್

ಅತ್ಯಾಚಾರ ಸಂತ್ರಸ್ತೆಯು ಗರ್ಭಪಾತ ಮಾಡಿಸಿಕೊಳ್ಳುವ ಎಲ್ಲಾ ಹಕ್ಕನ್ನು ಹೊಂದಿದ್ದಾರೆ. ಹೆರುವಂತೆ ಆಕೆಗೆ ಒತ್ತಡ ಹೇರುವುದು ಆಕೆಯ ಘನತೆಗೆ ಚ್ಯುತಿ ತಂದಂತೆ ಮತ್ತು ಆಕೆಯ ಮೂಲಭೂತ ಹಕ್ಕು ಉಲ್ಲಂಘಿಸಿದಂತೆ ಆಗುತ್ತದೆ ಎಂದು ಅಲಹಾಬಾದ್ ಹೈಕೋರ್ಟ್...

ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಪಟ್ಟಿಯಲ್ಲಿ ಹೂವುಗಳು ಯಾಕಿಲ್ಲ: ಕೇಂದ್ರಕ್ಕೆ ಹೈಕೋರ್ಟ್ ಪ್ರಶ್ನೆ

ನಿಷೇಧಿಸಲಾದ ಏಕ ಬಳಕೆ ಪ್ಲಾಸ್ಟಿಕ್‌ಗಳ ಪಟ್ಟಿಯಲ್ಲಿ ಪ್ಲಾಸ್ಟಿಕ್ ಹೂವುಗಳ ಪಟ್ಟಿಯಲ್ಲಿ ಸೇರಿಸಿಲ್ಲ? ಈ ಪ್ಲಾಸ್ಟಿಕ್ ಹೂವುಗಳನ್ನು ಮರುಬಳಕೆ ಮಾಡಲು ಸಾಧ್ಯವೇ ಎಂದು ಕೇಂದ್ರ ಸರ್ಕಾರವನ್ನು ಬಾಂಬೆ ಹೈಕೋರ್ಟ್ ಪ್ರಶ್ನಿಸಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲೋಕ್...

2 ವರ್ಷಗಳಲ್ಲಿ ಐಐಟಿ, ಐಐಎಂಗಳಿಗೆ ನೇಮಕಗೊಂಡ ಬೋಧಕರಲ್ಲಿ ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳ ಸಂಖ್ಯೆ ಶೇ.10 ಮಾತ್ರ: ಕೇಂದ್ರ ಸರಕಾರ

ಐಐಟಿಗಳು ಮತ್ತು ಐಐಎಂಗಳು ಮೀಸಲು ವರ್ಗಗಳಿಂದ ಅಧ್ಯಾಪಕರನ್ನು ಭರ್ತಿ ಮಾಡಿಕೊಳ್ಳಲು ಅಭಿಯಾನವನ್ನು ಹಮ್ಮಿಕೊಂಡಾಗಿನಿಂದ ಎರಡು ವರ್ಷಗಳಲ್ಲಿ ಈ ಸಂಸ್ಥೆಗಳು ಒಟ್ಟಾಗಿ ನೇಮಕ ಮಾಡಿಕೊಂಡಿರುವ ಬೋಧಕರ ಪೈಕಿ ಕೇವಲ ಶೇ.10ರಷ್ಟು ಅಭ್ಯರ್ಥಿಗಳು ಪರಿಶಿಷ್ಟ ಜಾತಿಗಳು(ಎಸ್‌ಸಿ)...

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪುತ್ರ ಅಭಿಜಿತ್ ಮತ್ತೆ ಕಾಂಗ್ರೆಸ್ ಸೇರ್ಪಡೆ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಪುತ್ರ, ಮಾಜಿ ಸಂಸದ ಅಭಿಜಿತ್ ಮುಖರ್ಜಿ ಅವರು ಸುಮಾರು ನಾಲ್ಕು ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅಭಿಜಿತ್ ನಾಲ್ಕು ವರ್ಷಗಳ ಹಿಂದೆ ತೃಣಮೂಲ ಕಾಂಗ್ರೆಸ್...

ರಾಜಕೀಯ ಬಿಕ್ಕಟ್ಟಿನ ನಡುವೆ ಮಣಿಪುರ ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ನಾಯಕ ಸಂಬಿತ್ ಪಾತ್ರಾ

ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಭಾನುವಾರ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಈವರೆಗೂ ಬಿಜೆಪಿ ನೂತನ ಮುಖ್ಯಮಂತ್ರಿ ಆಯ್ಕೆಯನ್ನು ಮಾಡಿಲ್ಲ. ಈ ರಾಜಕೀಯ ಬಿಕ್ಕಟ್ಟಿನ ನಡುವೆ ಬಿಜೆಪಿ ನಾಯಕ, ಮಣಿಪುರ ಉಸ್ತುವಾರಿ...

ಮುಂಬೈನಲ್ಲಿ ಜಿಬಿಎಸ್ ಸೋಂಕಿಗೆ ಮೊದಲ ಬಲಿ

ಮುಂಬೈನಲ್ಲಿ ಗಿಲಿಯಾನ್ ಬಾರೆ ಸಿಂಡ್ರೋಮ್ (ಜಿಬಿಎಸ್) ಸೋಂಕಿಗೆ ಮೊದಲ ಬಲಿಯಾಗಿದೆ. ನಾಯರ್ ಆಸ್ಪತ್ರೆಯಲ್ಲಿ ಬುಧವಾರ ಜಿಬಿಎಸ್ ಸೋಂಕಿನಿಂದಾಗಿ 53 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಮಹಾರಾಷ್ಟ್ರದಲ್ಲಿ ಜಿಬಿಎಸ್‌ನಿಂದ ಮೃತಪಟ್ಟವರ ಸಂಖ್ಯೆಯು 8ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರ...

ಉದ್ಯೋಗವಕಾಶ ಇದ್ದರೂ ಕೆಲಸ ಮಾಡಲು ಬಯಸದ ಕಾರ್ಮಿಕರು: ಎಲ್‌&ಟಿ ಅಧ್ಯಕ್ಷರ ಮತ್ತೊಂದು ವಿವಾದ

ಲಾರ್ಸೆನ್ & ಟೂಬ್ರೊ (ಎಲ್‌&ಟಿ) ಅಧ್ಯಕ್ಷ ಎಸ್.ಎನ್. ಸುಬ್ರಹ್ಮಣ್ಯನ್ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದಾರೆ. ಈ ಹಿಂದೆ "ಉದ್ಯೋಗಿಗಳು ವಾರದಲ್ಲಿ 90 ಗಂಟೆಗಳ ಕಾಲ ಕೆಲಸ ಮಾಡಬೇಕು, ಎಷ್ಟು ಹೊತ್ತು ಪತಿ, ಪತ್ನಿ ಮುಖವನ್ನು...

ಹೆಣ್ಣು ಮಕ್ಕಳ ಅಗೌರವದ ಹೇಳಿಕೆ; ನಟ ಚಿರಂಜೀವಿ ವಿರುದ್ಧ ಆಕ್ರೋಶ

ಹೆಣ್ಣು ಮಕ್ಕಳ ವಿಚಾರದಲ್ಲಿ ತೆಲುಗು ಚಿತ್ರರಂಗದ ಸ್ಟಾರ್ ನಟ ಚಿರಂಜೀವಿ ಹೊಂದಿರುವ ಧೋರಣೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಹೆಣ್ಣು ಮಕ್ಕಳನ್ನು ಚಿರಂಜೀವಿ ಈಗಲೂ ಎರಡನೇ ದರ್ಜೆಯ ಪ್ರಜೆಗಳಂತೆ ನೋಡುತ್ತಿದ್ದಾರೆ ಎಂದು...

ಈ ಹೊತ್ತಿನ ಪ್ರಮುಖ ಸುದ್ದಿ