ಕೋಮುದ್ವೇಷ | 3 ತಿಂಗಳಲ್ಲಿ 16 ಮುಸ್ಲಿಮರ ಹತ್ಯೆ

Date:

2026ರ ಆಗಸ್ಟ್‌ ಮತ್ತು ಅಕ್ಟೋಬರ್‌ ನಡುವಿನ ಮೂರು ತಿಂಗಳ ಅವಧಿಯಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಶಕ್ತಿಗಳಿಂದ ಕನಿಷ್ಠ 16 ಮುಸ್ಲಿಮರು ಹತ್ಯೆಗೀಡಾಗಿದ್ದಾರೆ ಎಂದು ದಕ್ಷಿಣ ಏಷ್ಯಾ ಜಸ್ಟಿಸ್ ಕ್ಯಾಂಪೇನ್‌ನ ‘ಇಂಡಿಯಾ ಪರ್ಸಿಕ್ಯೂಷನ್ ಟ್ರ್ಯಾಕರ್’ (IPT) ವರದಿ ಹೇಳಿದೆ. ಇದರಲ್ಲಿ ಆರು ರಾಜ್ಯಗಳಲ್ಲಿ ಸರ್ಕಾರಿ ನೌಕರರು ಅಥವಾ ಪೊಲೀಸರಿಂದ 8 ಮಂದಿ (3 ಪೊಲೀಸ್ ಎನ್‌ಕೌಂಟರ್‌, 5 ಕಸ್ಟಡಿ ಸಾವು) ಹಾಗೂ 4 ರಾಜ್ಯಗಳಲ್ಲಿ ನಕಲಿ ಗೋರಕ್ಷಕರಿಂದ 8 ಮಂದಿ ಮುಸ್ಲಿಮರು ಹತ್ಯೆಗೀಡಾಗಿದ್ದಾರೆ.

- Advertisement -

ಈ ವರದಿಯಲ್ಲಿ ಉಲ್ಲೇಖಿಸಿರುವಂತೆ ಇದೇ ಮೂರು ತಿಂಗಳ ಅವಧಿಯಲ್ಲಿ ಒಟ್ಟು 146 ಮುಸ್ಲಿಂ ವಿರೋಧಿ ಕ್ರೌರ್ಯದ ಘಟನೆಗಳು ನಡೆದಿವೆ. ಈ ಪೈಕಿ, ಚುನಾವಣಾ ವಸ್ತಿಲಿನಲ್ಲಿರುವ ಉತ್ತರ ಪ್ರದೇಶವೊಂದರಲ್ಲೇ 103 ಘಟನೆಗಳು ನಡೆದಿವೆ. ಅಲ್ಲಿ, ಮುಸ್ಲಿಮರ ವಿರುದ್ಧದ ಹಿಂಸಾಚಾರ, ಬಲವಂತದ ಪೊಲೀಸ್ ಗಿರಿ ಹಾಗೂ ಮುಸ್ಲಿಂ ವಿರೋಧಿ ಹೇಳಿಕೆಗಳು ಹೆಚ್ಚಾಗಿ ಸಾಂಸ್ಥೀಕರಣಗೊಂಡಿರುವುದು ಕಂಡುಬಂದಿದೆ. ಪೊಲೀಸರು ನೂರಕ್ಕೂ ಹೆಚ್ಚು ಮುಸ್ಲಿಂ ಪುರುಷರನ್ನು, ಹೆಚ್ಚಾಗಿ ಗೋಹತ್ಯೆ ಅಥವಾ ಜಾನುವಾರುಗಳಿಗೆ ಸಂಬಂಧಿಸಿದ ಪ್ರಕರಣಗಳ ನೆಪದಲ್ಲಿ ಗುಂಡಿಕ್ಕಿ ಹೊಡೆದಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೆಕ್ಕೆಜೋಳಕ್ಕೆ ಉತ್ತಮ ಬೆಲೆ: ಬರದಿಂದ ಉತ್ಪಾದನೆ ಶೇ.33ರಷ್ಟು ಕುಸಿತ,...

ಕರ್ನಾಟಕದ ಕೃಷಿ ಕ್ಷೇತ್ರದಲ್ಲಿ ಈ ಬಾರಿ ಮೆಕ್ಕೆಜೋಳದ ಬೆಲೆ ಏರಿಕೆ ಪ್ರಮುಖ ಚರ್ಚೆಯ ವಿಷಯವಾಗಿದೆ. ಮುಂಗಾರು ಮಳೆ ಕೈಕೊಟ್ಟು, ಬಿತ್ತನೆ ಪ್ರದೇಶ ಕುಸಿದು, ಬೆಳೆದ ಬೆಳೆಯೂ ಒಣಹವೆಯಿಂದ ಹಾನಿಗೊಳಗಾದ ಪರಿಣಾಮ ಮೆಕ್ಕೆಜೋಳದ ಉತ್ಪಾದನೆ...

ಯುಪಿ ಚುನಾವಣೆ | ಬಿಜೆಪಿಯ ಹಿಂದುತ್ವದ ಅಸ್ತ್ರಕ್ಕೆ ಎಸ್‌ಪಿ...

ಉತ್ತರ ಪ್ರದೇಶದ 2027ರ ವಿಧಾನಸಭಾ ಚುನಾವಣೆಗೆ ಕೇವಲ ಕೆಲವೇ ತಿಂಗಳುಗಳು ಬಾಕಿ ಇವೆ. ಆ ರಾಜ್ಯದ ರಾಜಕೀಯ ರಂಗದಲ್ಲಿ ಅತ್ಯಂತ ಮಹತ್ವದ ಬೆಳವಣಿಗೆಗಳು ಕಂಡುಬರುತ್ತಿವೆ. ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ, ಮಾಜಿ ಮುಖ್ಯಮಂತ್ರಿ...

ಪಾತಾಳ ಸೀಳಿ ಪೈರಾಗಿ ಎದ್ದವನು: ಕನ್ನಡ ಮನಸ್ಸಿನಲ್ಲಿ ಬಲೀಂದ್ರನ...

ಸತ್ಯನಿಷ್ಠೆ, ಮಹೋದಾರತೆ ಮತ್ತು ಶ್ರಮಸಂಸ್ಕೃತಿಯ ಫಲವಂತಿಕೆಯಾಗಿ ಸಾವನ್ನು ಗೆದ್ದು ಜನಮಾನಸದಲ್ಲಿ ನೆಲೆಗೊಂಡಿರುವ ಬಲಿ ಕೇವಲ ಸೋಲಿನ ಸಂಕೇತವಲ್ಲ; ಆತ ಚಾರಿತ್ರಿಕವಾಗಿ ಪ್ರಭುತ್ವದ ವಂಚನೆಯನ್ನು ಬಯಲು ಮಾಡುವ ಜೀವಂತ ಪ್ರತಿರೋಧ. ಊರಿಗೆಲ್ಲ ದೀಪಾವಳಿಯು ಬೆಳಕಿನ ಸಂಭ್ರಮವಾದರೆ,...

ಆಗಸ್ಟ್ ಮತ್ತು ಅಕ್ಟೋಬರ್ ನಡುವೆ ದೇಶಾದ್ಯಂತ ಪೊಲೀಸರು ಕನಿಷ್ಠ 118 ಮುಸ್ಲಿಂ ಪುರುಷರನ್ನು ‘ಕಾಲುಗಳಿಗೆ ಗುಂಡು ಹಾರಿಸುವ’ ಮೂಲಕ ಗಾಯಗೊಳಿಸಿದ್ದಾರೆ. ಇವರಲ್ಲಿ 105 ಜನರು ಉತ್ತರ ಪ್ರದೇಶದವರಾಗಿದ್ದಾರೆ.

ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ರಾಜ್ಯ ಪೊಲೀಸ್ ದತ್ತಾಂಶದ ಪ್ರಕಾರ, 2017ರಿಂದ ಉತ್ತರ ಪ್ರದೇಶದ ಎನ್‌ಕೌಂಟರ್‌ಗಳಲ್ಲಿ ಹತ್ಯೆಯಾದ 316 ಜನರಲ್ಲಿ 110 ಮಂದಿ (35%) ಮುಸ್ಲಿಮರಾಗಿದ್ದಾರೆ. ಅಂದಹಾಗೆ, ರಾಜ್ಯದಲ್ಲಿ ಮುಸ್ಲಿಮರ ಜನಸಂಖ್ಯೆ ಇರುವುದು 19%ರಷ್ಟು ಮಾತ್ರ.

ಅಸೋಸಿಯೇಟೆಡ್ ಪ್ರೆಸ್ ತನಿಖೆಯ ಪ್ರಕಾರ, 2020ರಿಂದ ಗೋ ಕಳ್ಳಸಾಗಣೆ ಪ್ರಕರಣಗಳಲ್ಲಿ ಉತ್ತರ ಪ್ರದೇಶ ಪೊಲೀಸರಿಂದ ಗುಂಡೇಟಿಗೆ ಒಳಗಾದ ಸುಮಾರು 650 ಜನರಲ್ಲಿ 93%ರಷ್ಟು ಜನರು ಮುಸ್ಲಿಮರಾಗಿದ್ದಾರೆ. ಅಂತಹ ಗುಂಡಿನ ದಾಳಿ ನಡೆಸಿದ ಪೊಲೀಸ್ ಅಧಿಕಾರಿಗಳಿಗೆ ‘ಉತ್ತಮ ಸೇವೆ’ ಹೆಸರಿನಲ್ಲಿ ಪ್ರಶಸ್ತಿಗಳು ಮತ್ತು ಪುರಸ್ಕಾರಗಳನ್ನು ನೀಡಲಾಗಿದೆ ಎಂಬುದು ಕೂಡ ಬಹಿರಂಗಗೊಂಡಿದೆ.

ಚುನಾವಣಾ ರಾಜ್ಯಗಳಲ್ಲಿ ದ್ವೇಷದ ರಾಜಕಾರಣ ಮತ್ತು ಹಿಂಸಾಚಾರವು ತೀವ್ರಗೊಂಡಿದ್ದು, ಕನಿಷ್ಠ 10 ರಾಜ್ಯಗಳಲ್ಲಿ ಮುಸ್ಲಿಮರ ಮೇಲೆ ಹಲ್ಲೆಗಳು, ಬಲವಂತವಾಗಿ ‘ಜೈ ಶ್ರೀ ರಾಮ್’ ಘೋಷಣೆ ಕೂಗಿಸುವುದು ಹಾಗೂ ಧಾರ್ಮಿಕ ಅವಮಾನದ ಘಟನೆಗಳು ವರದಿಯಾಗಿವೆ.

ಈ ಲೇಖನ ಓದಿದ್ದೀರಾ?: ಗಡ್ಕರಿ-ಮೋಶಾ ಆಡಳಿತದಲ್ಲಿ ‘ವೋಟ್‌ ಚೋರಿ’ ಬೆನ್ನಲ್ಲೇ ‘ಪೆಟ್ರೋಲ್ ಚೋರಿ’: ₹62,000 ಕೋಟಿ ದೋಚುವ ಹುನ್ನಾರ!

ಇನ್ನು, ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಬಂಗಾಳಿ ಮಾತನಾಡುವ ಮುಸ್ಲಿಮರನ್ನು ಬಾಂಗ್ಲಾದೇಶದಿಂದ ಬಂದ ಅಕ್ರಮ ವಲಸಿಗರೆಂದು ಬಿಂಬಿಸಿ ಅವರನ್ನು ಮತದಾರರ ಪಟ್ಟಿಯಿಂದ ಕೈಬಿಡುವ ಸಂಚು ಮುಂದುವರೆದಿದೆ.

ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಉತ್ತರಾಖಂಡದ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡಿರುವುದು ವರದಿಯಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂಬರುವ ಚುನಾವಣೆಯನ್ನು ’80 vs 20′ ಎಂದು ಬಣ್ಣಿಸಿದ್ದಾರೆ.

ಸೆಪ್ಟೆಂಬರ್ ತಿಂಗಳೊಂದರಲ್ಲೇ ಕನಿಷ್ಠ 6 ಮಸೀದಿಗಳನ್ನು ಪೂರ್ಣವಾಗಿ ಅಥವಾ ಭಾಗಶಃ ಧ್ವಂಸಗೊಳಿಸಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಮದರಸಾಗಳನ್ನು ಮುಚ್ಚಲು ಆದೇಶಿಸಲಾಗಿದೆ ಮತ್ತು ಧ್ವನಿವರ್ಧಕಗಳನ್ನು ತೆರವುಗೊಳಿಸಲಾಗಿದೆ. ಛತ್ತೀಸ್‌ಗಢ ಮತ್ತು ಮಹಾರಾಷ್ಟ್ರದಲ್ಲಿ ಮತಾಂತರ ವಿರೋಧಿ ಕಾನೂನುಗಳು ಜಾರಿಗೆ ಬಂದಿದ್ದು, ಅಸ್ಸಾಂ ಮತ್ತು ಗುಜರಾತ್‌ನಲ್ಲಿ ಸಮಾನ ನಾಗರಿಕ ಸಂಹಿತೆ (UCC) ಮಸೂದೆಗಳಿಗೆ ಒಪ್ಪಿಗೆ ನೀಡಲಾಗಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ದಾಂಪತ್ಯವು ಮೌಲ್ಯ, ಭಾವನೆ, ವೈಫಲ್ಯಗಳ ಸಮ್ಮಿಶ್ರಣ’: ಪತಿಯ ವಿಚ್ಛೇದನ ಅರ್ಜಿ ವಜಾಗೊಳಿಸಿದ ಹೈಕೋರ್ಟ್‌

ದಾಂಪತ್ಯ ಸಂಬಂಧಗಳು ಮಾನವೀಯ ಮೌಲ್ಯಗಳು, ಭಾವನೆಗಳು ಹಾಗೂ ವ್ಯಕ್ತಿಗತ ವೈಫಲ್ಯಗಳ ಸಂಕೀರ್ಣ...

ಕಬ್ಬಿಗೆ ಬೆಲೆ ನಿಗದಿ ಮಾಡದ ಸರ್ಕಾರಗಳು; ಬೆಳಗಾವಿಯ ವೆಂಕಟೇಶ್ವರ ಕಾರ್ಖಾನೆಯಿಂದ ಟನ್‌ಗೆ ₹4,200 ಘೋಷಣೆ

ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿ ಕಬ್ಬಿನ ದರ ಸಮರ ತೀವ್ರ ಸ್ವರೂಪ ಪಡೆದುಕೊಂಡಿದ್ದು,...

ಗಡಿ ಮೀರಿದ ಮಾಲಿನ್ಯ: ಉಸಿರುಗಟ್ಟಿಸುವ ವಿಷಗಾಳಿಯಲ್ಲಿ ಬೆಂದ ದೆಹಲಿ, ಕಂಗೆಟ್ಟ ಲಾಹೋರ್

ದೇಶದ ರಾಜಧಾನಿ ನವದೆಹಲಿ ನಿಯಮಗಳನ್ನು ಗಾಳಿಗೆ ತೂರಿ ತನ್ನ ಕಾಲ ಮೇಲೆ...