ದೇಶ

ಗುಜರಾತ್‌ | ಸಿಎಂ ವಸತಿ ಯೋಜನೆಯಡಿ ಮುಸ್ಲಿಂ ಮಹಿಳೆಗೆ ಫ್ಲ್ಯಾಟ್ ಮಂಜೂರು; ಹಿಂದುಗಳಿಂದ ವಿರೋಧ

ಈ ಹಿಂದೆ ಕೇಂದ್ರದಲ್ಲಿ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರವಿದ್ದಾಗ ದೇಶದಲ್ಲಿ ವಿಪರೀತಕ್ಕೆ ಹೋಗಿದ್ದ ಮುಸ್ಲಿಂ ದ್ವೇಷವು, ಮೋದಿಯವರ ಎನ್‌ಡಿಎ ಮೈತ್ರಿಕೂಟದ ಸರ್ಕಾರದ ಬಂದ ಮೇಲೂ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಯಾಕೆಂದರೆ ಗುಜರಾತ್‌ನ ವಡೋದರಾದಲ್ಲಿ ಸಿಎಂ...

ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಪವನ್ ಕಲ್ಯಾಣ್ ನೇಮಕ

ಆಂಧ್ರಪ್ರದೇಶದ ನೂತನ ಉಪ ಮುಖ್ಯಮಂತ್ರಿಯಾಗಿ ಜನಸೇನಾ ಪಕ್ಷದ ಮುಖ್ಯಸ್ಥ, ನಟ ಪವನ್ ಕಲ್ಯಾಣ್ ಅವರು ಇಂದು (ಶುಕ್ರವಾರ) ನೇಮಕಗೊಂಡಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಪವನ್ ಕಲ್ಯಾಣ್...

ನೀಟ್ ವಿವಾದ | ಸಿಬಿಐ ತನಿಖೆಗಾಗಿ 2 ವಾರಗಳಲ್ಲಿ ಉತ್ತರಿಸಲು ಕೇಂದ್ರ, ಎನ್‌ಟಿಎಗೆ ಸುಪ್ರೀಂ ಸೂಚನೆ

ಗಮನಾರ್ಹ ಬೆಳವಣಿಗೆಯಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಇತರ ಪರೀಕ್ಷೆಯ ಅಕ್ರಮಗಳ ಕುರಿತು ಸಿಬಿಐ ತನಿಖೆಗೊಳಪಡಿಸಲು ಸಲ್ಲಿಸಲಾಗಿದ್ದ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಹಾಗೂ ಎನ್‌ಟಿಎ ಎರಡು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್...

ಒತ್ತುವರಿ ಆರೋಪ: ಮಾಜಿ ಕ್ರಿಕೆಟಿಗ, ಟಿಎಂಸಿ ಸಂಸದ ಯೂಸುಫ್ ಪಠಾಣ್‌ಗೆ ನೋಟಿಸ್

ಗುಜರಾತ್‌ನ ಬಿಜೆಪಿ ಆಡಳಿತವಿರುವ ವಡೋದರ ಮಹಾನಗರ ಪಾಲಿಕೆ(ವಿಎಂಸಿ) ಮಾಜಿ ಟೀಂ ಇಂಡಿಯಾ ಕ್ರಿಕೆಟಿಗ ಹಾಗೂ ನೂತನವಾಗಿ ಪಶ್ಚಿಮ ಬಂಗಾಳದಿಂದ ಆಯ್ಕೆಯಾಗಿರುವ ಸಂಸದ ಯೂಸುಫ್‌ ಪಠಾಣ್‌ ಅವರಿಗೆ ಪಾಲಿಕೆಗೆ ಸೇರಿದ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವ...

ಕುವೈತ್‌ನಿಂದ 45 ಭಾರತೀಯರ ಮೃತದೇಹಗಳನ್ನು ಕೇರಳಕ್ಕೆ ಕರೆತಂದ ವಿಮಾನ

ಕುವೈತ್‌ ಬೆಂಕಿ ದುರಂತದಲ್ಲಿ ಮೃತಪಟ್ಟ 45 ಭಾರತೀಯರನ್ನು ಕರೆತಂದಿರುವ ವಾಯುಪಡೆಯ ವಿಶೇಷ ವಿಮಾನ ಕೇರಳದ ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು 10.30ಕ್ಕೆ ಲ್ಯಾಂಡ್‌ ಆಗಿದೆ. ಕುವೈತ್‌ಗೆ ತೆರಳಿದ್ದ ವಿದೇಶಾಂಗ ಇಲಾಖೆಯ ರಾಜ್ಯ ಖಾತೆಯ...

ಕುವೈತ್ ಭೇಟಿಗೆ ಕೇಂದ್ರದಿಂದ ಅವಕಾಶ ನಿರಾಕರಣೆ: ಕೇರಳ ಸಚಿವೆ ವೀಣಾ ಜಾರ್ಜ್ ಆರೋಪ

ಕುವೈತ್‌ನ ಬೆಂಕಿ ದುರಂತದಲ್ಲಿ ಮೃತರು ಹಾಗೂ ಗಾಯಗೊಂಡ ಕೇರಳ ಮೂಲದವರ ಭೇಟಿಗೆ ತೆರಳುತ್ತಿದ್ದ ತನ್ನನ್ನು ಕೇಂದ್ರ ವಿದೇಶಾಂಗ ಇಲಾಖೆ ರಾಜಕೀಯ ಕ್ಲಿಯರೆನ್ಸ್‌ ನೀಡದೆ ನಿರಾಕರಿಸಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌...

ಆಂಧ್ರ, ತೆಲಂಗಾಣದಲ್ಲಿ ರಸ್ತೆ ಅಪಘಾತ: 8 ಸಾವು

ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ನಡೆದ ಪ್ರತ್ಯೇಕ ಅಪಘಾತಗಳಲ್ಲಿ 8 ಮಂದಿ ಮೃತಪಟ್ಟು, 7ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆಂಧ್ರದ ಕೃಷ್ಣ ಜಿಲ್ಲೆಯ ಸೀತನಪಲ್ಲಿಯಲ್ಲಿ ಟ್ರಕ್‌ವೊಂದು ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ...

ದುರಹಂಕಾರಿಗಳಿಗೆ ಭಗವಾನ್ ರಾಮ 241ಕ್ಕೆ ನಿಲ್ಲಿಸಿದ್ದಾನೆ: ಬಿಜೆಪಿ ವಿರುದ್ಧ ಆರ್‌ಎಸ್‌ಎಸ್‌ ನಾಯಕ ವಾಗ್ದಾಳಿ

ಬಿಜೆಪಿಯ ವಿರುದ್ಧ ಆರ್‌ಎಸ್‌ಎಸ್‌ ನಾಯಕರೊಬ್ಬರು ವಾಗ್ದಾಳಿ ನಡೆಸಿದ್ದು, ಆಡಳಿತ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಅವರ ದುರಹಂಕಾರವೇ ಕಾರಣ ಎಂದು ದೂರಿದ್ದಾರೆ. ರಾಜಸ್ಥಾನದ ಜೈಪುರದ ಕನೋಟಾದಲ್ಲಿ ಮಾತನಾಡಿದ ಇಂದ್ರೇಶ್ ಕುಮಾರ್,ಭಗವಾನ್‌ ರಾಮನನ್ನು...

ಕುವೈತ್ ಅಗ್ನಿ ದುರಂತದಲ್ಲಿ ಸಾವಿಗೀಡಾದ 45 ಮಂದಿಯ ಮೃತದೇಹಗಳು ಇಂದು ಭಾರತಕ್ಕೆ

ಎರಡು ದಿನಗಳ ಹಿಂದೆ ಕುವೈತ್ ಬೆಂಕಿ ದುರಂತದಲ್ಲಿ ಸಾವಿಗೀಡಾದ 45 ಮಂದಿಯ ಮೃತದೇಹಗಳನ್ನು ಭಾರತೀಯ ವಾಯುಪಡೆಯ ವಿಶೇಷ ವಿಮಾನ ಇಂದು ಭಾರತಕ್ಕೆ ಕರೆತರಲಿದೆ. ವಿಮಾನವು ಬೆಳಿಗ್ಗೆ 11 ಗಂಟೆಗೆ ಕೇರಳದ ಕೊಚ್ಚಿಗೆ ಆಗಮಿಸಲಿದ್ದು,...

ಶಾಸಕ ಸ್ಥಾನಕ್ಕೆ ಸಿಕ್ಕಿಂ ಸಿಎಂ ಪತ್ನಿ ರಾಜೀನಾಮೆ: ಒಂದು ದಿನದ ಹಿಂದಷ್ಟೆ ಪ್ರೇಮ್ ಸಿಂಗ್‌ ಪ್ರಮಾಣವಚನ

ಒಂದು ದಿನದ ಹಿಂದಷ್ಟೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್‌ ತಮಾಂಗ್ ಅವರಿಗೆ ಸ್ವತಃ ಪತ್ನಿಯೇ ಆಘಾತ ನೀಡಿದ್ದಾರೆ. ಶಾಸಕರಾಗಿ ಆಯ್ಕೆಯಾಗಿದ್ದ ಪ್ರೇಮ್‌ ಸಿಂಗ್‌ ಅವರ ಪತ್ನಿ ಕೃಷ್ಣ...

ಅಜಿತ್ ದೋವಲ್ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಮುಂದುವರಿಕೆ

ಅಜಿತ್ ದೋವಲ್ ಅವರನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ಕೇಂದ್ರ ಸರ್ಕಾರ ಪುನರ್‌ನೇಮಕ ಮಾಡಿದೆ. ಹಾಗೆಯೇ ಸಂಪುಟದ ನೇಮಕಾತಿ ಸಮಿತಿ ಡಾ. ಪಿ ಕೆ ಮಿಶ್ರಾ ಅವರನ್ನು ಪ್ರಧಾನ ಮಂತ್ರಿಗಳ ಪ್ರಧಾನ ಕಾರ್ಯದರ್ಶಿಗಳಾಗಿ ಮುಂದುವರೆಸಿದೆ. ಇಬ್ಬರು...

ಮಣಿಪುರ | ಅಂಗಡಿಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; 24 ಗಂಟೆ ಭದ್ರತೆಗೆ ಬುಡಕಟ್ಟು ಜನಾಂಗ ಆಗ್ರಹ

ಮಣಿಪುರದಲ್ಲಿ ಕಳೆದ ವರ್ಷ ಆರಂಭವಾದ ಬುಡಕಟ್ಟು ಜನಾಂಗಗಳ ನಡುವಿನ ಹಿಂಸಾಚಾರವು ಇನ್ನೂ ಕೂಡಾ ಕೊನೆಯಾಗಿಲ್ಲ. ಹ್ಮಾರ್-ಕುಕಿ-ಜೋಮಿ ಬುಡಕಟ್ಟು ಜನಾಂಗದವರು ನಡೆಸುತ್ತಿದ್ದ ನಾಲ್ಕು ಅಂಗಡಿಗಳಿಗೆ ಬೆಂಕಿ ಹಚ್ಚಿದ ನಂತರ ಈಗ ಜಿರಿಬಾಮ್‌ನಲ್ಲಿ ಹೊಸ ಉದ್ವಿಗ್ನತೆ...

ಈ ಹೊತ್ತಿನ ಪ್ರಮುಖ ಸುದ್ದಿ