ಬಿಜೆಪಿಯ ವಿರುದ್ಧ ಆರ್‌ಎಸ್‌ಎಸ್ ನಾಯಕರೊಬ್ಬರು ವಾಗ್ದಾಳಿ ನಡೆಸಿದ್ದು, ಆಡಳಿತ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿದ್ದಕ್ಕೆ ಅವರ ದುರಹಂಕಾರವೇ ಕಾರಣ ಎಂದು ದೂರಿದ್ದಾರೆ.
ರಾಜಸ್ಥಾನದ ಜೈಪುರದ ಕನೋಟಾದಲ್ಲಿ ಮಾತನಾಡಿದ ಇಂದ್ರೇಶ್ ಕುಮಾರ್,ಭಗವಾನ್ ರಾಮನನ್ನು ಪೂಜಿಸಿದವರು ಕ್ರಮೇಣ ದುರಹಂಕಾರಿಗಳಾದರು. ದೊಡ್ಡ ಪಕ್ಷ ಎಂದು ಹೇಳಿಕೊಳ್ಳುವ ದುರಹಂಕಾರಿಗಳಾದವರನ್ನು ರಾಮ 241ಕ್ಕೆ ನಿಲ್ಲಿಸಿದ್ದಾನೆ ಎಂದು ಹೇಳಿದ್ದಾರೆ.
ಇಂದ್ರೇಶ್ ಕುಮಾರ್ ಅವರು ಆರ್‌ಎಸ್‌ಎಸ್‌ನ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿಯ ಸದಸ್ಯರಾಗಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಹುಮತ ಸಂಖ್ಯೆ ಪಡೆಯಲು ವಿಫಲರಾಗಿ 241 ಸಂಖ್ಯೆಗೆ ಸೀಮಿತವಾದ ನಂತರ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಳೆದ ಒಂದು ದಶಕದಿಂದ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ತೋರಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕೊಡುವ ಸ್ಥಾನದಲ್ಲಿರುವವರು ಒಳ್ಳೆಯದನ್ನೇ ಕೊಡಬೇಕು ಎಂದು ರಾಜ್ ಹೇಳಿದ್ದು ಯಾರಿಗೆ?
ಇದೇ ಸಂದರ್ಭದಲ್ಲಿ ಇಂಡಿಯಾ ಒಕ್ಕೂಟದ ವಿರುದ್ಧವು ಮಾತನಾಡಿರುವ ಇಂದ್ರೇಶ್ ಕುಮಾರ್, ರಾಮನ ಮೇಲೆ ನಂಬಿಕೆಯಿಲ್ಲದವರಿಗೆ ಅವರು ಒಟ್ಟಾದರೂ 234ಕ್ಕೆ ತಡೆದಿದ್ದಾನೆ. ದೇವರ ನ್ಯಾಯ ನೈಜವಾದುದಾಗಿದೆ ಹಾಗೂ ಸಂತಸದಾಯಕವಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರದ ಬಿಜೆಪಿ ನಾಯಕರ ವಿರುದ್ಧ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇತ್ತೀಚಿಗಷ್ಟೆ ಆಕ್ರೋಶ ಹೊರಹಾಕಿದ್ದರು. ನಿಜವಾದ ಸೇವಕರಿಗೆ ಅಹಂಕಾರವಿರುವುದಿಲ್ಲ. ಆತ ಕೆಲಸ ಮಾಡುವಾಗ ನಮ್ರತೆಯನ್ನು ಅನುಸರಿಸುತ್ತಾನೆ. ನಾನೇ ಈ ಕೆಲಸ ಮಾಡಿದೆ ಎನ್ನುವ ಅಹಂಕಾರ ಆತನಿಗಿರುವುದಿಲ್ಲ. ಅಂತಹವರನ್ನು ನಿಜವಾದ ಸೇವಕ ಎಂದು ಕರೆಯಲಾಗುತ್ತದೆ ಎಂದಿದ್ದರು.
ಈ ಹೇಳಿಕೆ ನೀಡಿದ ಕೆಲವು ದಿನಗಳ ನಂತರ ಆರ್‌ಎಸ್‌ಎಸ್ ನಾಯಕರು ಬಿಜೆಪಿಯನ್ನು ಟೀಕಿಸಿದ್ದಾರೆ.
