ಮಣಿಪುರ | ಅಂಗಡಿಗಳಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು; 24 ಗಂಟೆ ಭದ್ರತೆಗೆ ಬುಡಕಟ್ಟು ಜನಾಂಗ ಆಗ್ರಹ

Date:

ಮಣಿಪುರದಲ್ಲಿ ಕಳೆದ ವರ್ಷ ಆರಂಭವಾದ ಬುಡಕಟ್ಟು ಜನಾಂಗಗಳ ನಡುವಿನ ಹಿಂಸಾಚಾರವು ಇನ್ನೂ ಕೂಡಾ ಕೊನೆಯಾಗಿಲ್ಲ. ಹ್ಮಾರ್-ಕುಕಿ-ಜೋಮಿ ಬುಡಕಟ್ಟು ಜನಾಂಗದವರು ನಡೆಸುತ್ತಿದ್ದ ನಾಲ್ಕು ಅಂಗಡಿಗಳಿಗೆ ಬೆಂಕಿ ಹಚ್ಚಿದ ನಂತರ ಈಗ ಜಿರಿಬಾಮ್‌ನಲ್ಲಿ ಹೊಸ ಉದ್ವಿಗ್ನತೆ ಉಂಟಾಗಿದೆ.

ಬುಡಕಟ್ಟುಗಳ ನಾಗರಿಕ ಸಮಾಜದ ಗುಂಪು ಈ ಬಗ್ಗೆ ಹೇಳಿಕೆಯೊಂದನ್ನು ನೀಡಿದೆ. ಸ್ಥಳೀಯ ಬುಡಕಟ್ಟು ಅಡ್ವೊಕಸಿ ಕಮಿಟಿ (ಐಟಿಎಸಿ) ಹೇಳಿಕೆಯಲ್ಲಿ ಅಧಿಕಾರಿಗಳು “ತಕ್ಷಣವೇ ಅಪರಾಧಿಗಳನ್ನು ಬಂಧಿಸಿ ಮತ್ತು ಕಾನೂನಿನ ಪ್ರಕಾರ ಅವರಿಗೆ ಸೂಕ್ತ ಶಿಕ್ಷೆ ವಿಧಿಸಬೇಕು” ಎಂದು ಹೇಳಿದೆ.

ಇದನ್ನು ಓದಿದ್ದೀರಾ?  ಬಿಜೆಪಿಯ ದುರಾಡಳಿತಕ್ಕೆ ಉತ್ತರ ಕೊಟ್ಟಂತೆ ಹೊರಬಿದ್ದಿರುವ ಮಣಿಪುರ ಫಲಿತಾಂಶ!

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಮೈತಿ ಸಶಸ್ತ್ರ ಗುಂಪು ಅರಂಬೈ ತೆಂಗೋಲ್ ಅಂಗಡಿಗಳಿಗೆ ಬೆಂಕಿ ಹಚ್ಚಿದೆ ಎಂದು ಐಟಿಎಸಿ ಆರೋಪಿಸಿದೆ. “ಮನೆಗಳು ಮತ್ತು ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಹ್ಮಾರ್ ವೆಂಗ್, ಕಾಲಿನಗರ, ಜಿರಿಬಾಮ್, ಮೈತಿ ಲೈಕೈ, ಜಿರಿಬಾಮ್‌ನಲ್ಲಿದ್ದ ಅಂಗಡಿ ಮನೆಗಳು ಸುಟ್ಟು ಕರಕಲಾಗಿದೆ” ಎಂದು ಐಟಿಎಸಿ ಹೇಳಿಕೆಯಲ್ಲಿ ಆರೋಪಿಸಿದೆ.

ಕಾಳಿನಗರ, ಹ್ಮಾರ್ ವೆಂಗ್, ಐಬಿ ಲೈಕೈ, ಕರೋಂಗ್, ರಾನಿನ್ ವೆಂಗ್, ಮಿಷನ್ ಕಾಂಪೌಂಡ್, ವೆಂಗ್ನುಮ್, ಬಾಬುಪಾರ ವಾರ್ಡ್ ನಂ. 4 (ಬಜಾರ್) ಮತ್ತು ಉಚಾಥೋಲ್‌ನಲ್ಲಿ 24 ಗಂಟೆಗಳ ರಕ್ಷಣೆ ಅಗತ್ಯವಿದೆ ಎಂದು ಹೇಳಿದೆ.

ಇದನ್ನು ಓದಿದ್ದೀರಾ?  ಮಣಿಪುರದಲ್ಲಿ ಹೆಚ್ಚಿದ ಉದ್ವಿಗ್ನತೆ: ಸಿಎಂ ಭದ್ರತಾ ತಂಡದ ಮೇಲೆ ಉಗ್ರರ ದಾಳಿ; ಪೊಲೀಸರಿಗೆ ಗಾಯ

“ಜಿರಿಬಾಮ್‌ನ ಸ್ಥಳೀಯ ಬುಡಕಟ್ಟು ಜನಾಂಗದ ಹ್ಮಾರ್, ಕುಕಿ ಮತ್ತು ಝೋಮಿ ವಾಸಿಸುವ ಪ್ರದೇಶಗಳಲ್ಲಿ ಮೈತಿ ದುಷ್ಕರ್ಮಿಗಳು ಆಸ್ತಿಗಳು ಮತ್ತು ವಸ್ತುಗಳನ್ನು ನಾಶಪಡಿಸುವುದನ್ನು, ಕದಿಯುವುದನ್ನು ತಡೆಯಲು ಕೇಂದ್ರ ಪಡೆಗಳಿಂದ 24 ಗಂಟೆಗಳ ರಕ್ಷಣೆ, ಗಸ್ತು ತಿರುಗುವಿಕೆ ತಕ್ಷಣವೇ ಆರಂಭಿಸಬೇಕು ಎಂದು ನಾವು ಸಮರ್ಥ ಅಧಿಕಾರಿಗಳಿಗೆ ಒತ್ತಾಯಿಸುತ್ತೇವೆ” ಎಂದು ಹೇಳಿಕೆಯಲ್ಲಿ ಆಗ್ರಹಿಸಿದೆ.

ಬುಡಕಟ್ಟು

ಜಿರಿಬಾಮ್‌ನಲ್ಲಿ ಹ್ಮಾರ್-ಕುಕಿ-ಜೋಮಿ ಬುಡಕಟ್ಟು ಜನಾಂಗದವರ 45 ಮನೆಗಳನ್ನು ಸುಟ್ಟು ಹಾಕಲಾಗಿದೆ. ಕಳೆದ ಶನಿವಾರದಂದು ಮೈತಿ ಗುಂಪೊಂದು ಬೆಂಕಿ ಹಚ್ಚಿತ್ತು. ಆದರೆ ಇಡೀ ಕಟ್ಟಡಕ್ಕೆ ಬೆಂಕಿ ವ್ಯಾಪಿಸುವ ಮುನ್ನ ಬೆಂಕಿ ನಂದಿಸಲಾಗಿದೆ ಎಂದು ಐಟಿಎಸಿ ಹೇಳಿದೆ.

40 ವರ್ಷದ ಎಲ್ ಲಾಲಿಯನ್‌ಮುವಾಂಗ್ ಎಂಬವರನ್ನು ಅವರ ಮನೆಯಿಂದ ಅರಂಬೈ ತೆಂಗೋಲ್ ಸದಸ್ಯರು ಅಪಹರಿಸಿದ್ದಾರೆ. ಈಗ ಲಾಲಿಯನ್‌ಮುವಾಂಗ್ ಕಾಣೆಯಾಗಿದ್ದಾರೆ ಎಂದು ಕೂಡಾ ಆರೋಪಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೇದಾರನಾಥ ದೇಗುಲದಿಂದ 228 ಕೆಜಿ ಚಿನ್ನ ನಾಪತ್ತೆ: ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ

"ಕೇದಾರನಾಥ ದೇವಸ್ಥಾನದಲ್ಲಿದ್ದ ಚಿನ್ನ ನಾಪತ್ತೆಯಾಗಿದೆ, 228 ಕೆಜಿ ಚಿನ್ನದ ಹಗರಣ ನಡೆದಿದೆ. ಆದರೆ...

ಕೇರಳ | ಆಸ್ಪತ್ರೆಗೆ ತಪಾಸಣೆಗೆಂದು ತೆರಳಿ 2 ದಿನಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿದ ವ್ಯಕ್ತಿ!

ವ್ಯಕ್ತಿಯೊಬ್ಬರು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಆಸ್ಪತ್ರೆಯಲ್ಲಿ ತಪಾಸಣೆಗೆಂದು ತೆರಳಿ 2 ದಿನಗಳ...

ಮೋದಿ ನೇತೃತ್ವದಲ್ಲಿ ಟೈಟಾನಿಕ್ ಹಡಗಿನಂತೆ ಶಾಶ್ವತವಾಗಿ ಮುಳಗಲಿರುವ ಬಿಜೆಪಿ: ಸುಬ್ರಮಣಿಯನ್ ಸ್ವಾಮಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯು ಟೈಟಾನಿಕ್ ಹಡಗಿನಂತೆ ಮುಳುಗುತ್ತದೆ...

ಅರವಿಂದ್ ಕೇಜ್ರಿವಾಲ್ ಕೋಮಾಗೆ ಜಾರಬಹುದು ಎಂದ ಎಎಪಿ, ತಿಹಾರ್ ಜೈಲು ಹೇಳುವುದೇನು?

ಆಮ್ ಆದ್ಮಿ ಪಕ್ಷದ (ಎಎಪಿ) ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಸೋಮವಾರ...