ಅಲ್ಲಮನ ಅನನ್ಯ ಪದಪ್ರಯೋಗಗಳು | ಬಿಸಿಲೆಂಬ ಗುರು-ನೆಳಲೆಂಬ ಶಿಷ್ಯ

Date:

Advertisements
ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಬಿಸಿಲೆಂಬ ಗುರು-ನೆಳಲೆಂಬ ಶಿಷ್ಯ
ಬಿಸಿಲೆಂಬ ಗುರುವಿಂಗೆ
ನೆಳಲೆಂಬ ಶಿಷ್ಯ.
ನಿರಾಳಲಿಂಗಕ್ಕೆ ಬಯಲೆ ಸೆಜ್ಜೆ,
ವಾಯುವೆ ಶಿವದಾರ,
ಬೆಳಗೆ ಸಿಂಹಾಸನ.
ಅತ್ತಲಿತ್ತ ಚಿತ್ತವ ಹರಿಯಲೀಯದೆ, ಮಜ್ಜನಕ್ಕೆರೆದು ಸುಖಿಯಾದೆ
ಗುಹೇಶ್ವರಾ. 

ಪದಾರ್ಥ:
ನಿರಾಳಲಿಂಗ  =  ಶುದ್ದವಾದ ಚೇತನ
ಸೆಜ್ಜೆ  =  ಕರಡಿಗೆ
ಬೆಳಗು = ಸದ್ಭಾವನೆಗಳು

ವಚನಾರ್ಥ:
ಇಲ್ಲಿ ಬಿಸಿಲು ಅಂದರೆ ಪ್ರಖರವಾದ ಜ್ಞಾನ. ಅಂತಹ ಜ್ಞಾನಸ್ವರೂಪಿ ಗುರುವಿಗೆ ಗುರುವಿನ ಹಾದಿಯಲ್ಲೇ ಗುರುವಿನ ನೆರಳಂತೆ ಸಾಗುವವ ಶಿಷ್ಯ. ಬಿಸಿಲಲ್ಲಿ ನಡೆಯುವಾಗ ಗುರುವಿನ ಭೌತಿಕ ದೇಹವನ್ನಾಧರಿಸಿ ಬೀಳುವ ನೆರಳಿನಂತೆ ಶಿಷ್ಯ. ಇದು ಅನಾದಿ ಕಾಲದಿಂದ ನಡೆದು ಬಂದ ಗುರು ಶಿಷ್ಯ ಪರಂಪರೆ. ಆದರೆ ಸತ್ಯ ಶುದ್ಧ ಚೇತನ ಸ್ವರೂಪವಾದ ಲಿಂಗಕ್ಕೆ ಬಿಸಿಲು ನೆಳಲೆಂಬುದಿಲ್ಲ. ಇಡೀ ಬಯಲೇ ಲಿಂಗದ ಆವಾಸ ಸ್ಥಾನ. “ಈಶ ವಾಸ್ಯಾಮ್ ಇದಂ ಸರ್ವಂ”. ಬಯಲೇ ಲಿಂಗವು ಕೊರಳಿಗೆ ಕಟ್ಟಿಕೊಳ್ಳುವ ಕರಡಿಗೆ. ಆ ಬಯಲೆಂಬ ಕರಡಿಗೆಗೆ ಕಟ್ಟುವ ಶಿವದಾರವಾದರೂ ಯಾವುದು? ವಾಯುವೆ ಶಿವದಾರ. ಬಯಲೆಂಬ ಕರಡಿಗೆಯನ್ನು ವಾಯುವೆಂಬ ಶಿವದಾರದಿಂದ ಕಟ್ಟಿ ಕುಳಿತಿರುವುದಾದರೂ ಎಲ್ಲಿ? ಬೆಳಕು ಎಂಬ ಸದ್ಭಾವನೆಗಳ ಸಿಂಹಾಸನದ ಮೇಲೆ. ಹಾಗೆ ಸಿಂಹಾಸನದ ಮೇಲೆ ವಿರಾಜಮಾನನಾಗಿರುವ ಲಿಂಗದೊಂದಿಗೆ ಮನಸ್ಸನ್ನು ಕೇಂದ್ರೀಕರಿಸಿ ಮಜ್ಜನಕ್ಕೆರೆದು ಅಂದರೆ ಅನುಸಂಧಾನಗೈದರೆ ಪರಮಸುಖ ಪ್ರಾಪ್ತಿಯಾಗುತ್ತದೆ.

ಪದ ಪ್ರಯೋಗಾರ್ಥ:
ಇದು ಅಲ್ಲಮನ ಅತ್ಯಂತ ಪ್ರಖರವಾದ ವಚನಗಳಲ್ಲೊಂದು. ಪದ ಬಳಕೆಯಲ್ಲಿ ನಿಖರತೆಯಿದೆ. ಪದ ಪ್ರಯೋಗದಲ್ಲಿ ಖಚಿತತೆಯಿದೆ. ಬಿಸಿಲು, ನೆರಳು, ಬಯಲು, ವಾಯು, ಬೆಳಕು, ನೀರು ಎಂಬ ಪಂಚಭೂತಗಳ ಪ್ರಸ್ತಾಪವಿದೆ. ಬಿಸಿಲೆಂಬ-ಗುರುವಿಂಗೆ-ನೆಳಲೆಂಬ ಎಂಬ ಪ್ರಾಸಬದ್ದ ಪದ ಜೋಡಣೆಯಿದೆ. “ಅತ್ತಲಿತ್ತ ಚಿತ್ತವ” ಎಂಬಲ್ಲಿ ಅತ್ತ-ಇತ್ತ-ಚಿತ್ತ ಎಂಬ ಪದ ಚಮತ್ಕಾರವಿದೆ. ಮಜ್ಜನಕ್ಕೆರೆದು ಸುಖಿಯಾದೆ ಎನ್ನುವಲ್ಲಿ ಆಗ ತಾನೇ ಸ್ನಾನ ಮಾಡಿ ಬಂದವನ ಮೈ ಮನಗಳಲ್ಲಿ ಹೊಮ್ಮುವ  ತಾಜಾತನದ ಸುಖಭಾವವಿದೆ. ಇವೆಲ್ಲಾ ವಚನದ ಹೊರನೋಟದಲ್ಲಿ ಕಾಣಸಿಗುವ ಪ್ರತಿಮೆಗಳು. ವಚನ ವಿನ್ಯಾಸ ಮತ್ತು ಪದಗಳ ಆಯ್ಕೆಯಲ್ಲಿ ಅಲ್ಲಮಪ್ರಭುಗಿದ್ದ ಪ್ರಬುದ್ಧತೆಗೆ ಈ ವಚನ ಉದಾಹರಣೆಯಾಗಿ ನಿಲ್ಲುತ್ತದೆ. ಗಿರೀಶ್ ಕಾರ್ನಾಡರ “ತಲೆದಂಡ” ನಾಟಕದಲ್ಲಿ ಬಿಜ್ಜಳನು ಹೇಳುವ ದೀರ್ಘ ಸಂಭಾಷಣೆ ಒಂದಿದೆ. ಆ ಸಂಭಾಷಣೆ ಮಧ್ಯದಲ್ಲಿ ಅಲ್ಲಮನ ಕುರಿತಾದ ಮಾತು ಬರುತ್ತದೆ. “ಅಲ್ಲಮ… ಅವ ಆಡುವ ಮಾತು ಕನ್ನಡವಲ್ಲ, ಅದು ಅಮೃತದ ಸೆಲೆ.” ಗಿರೀಶ್ ಕಾರ್ನಾಡ್ ಅವರ ಸ್ವಂತ ಅಭಿಪ್ರಾಯವೇ ಆಗಿ ನಾಟಕದಲ್ಲಿ ಸಂಭಾಷಣೆ ರೂಪದಲ್ಲಿ ಬಂದಿರುವ ಈ ಮಾತು ನಿಜ. ಅಲ್ಲಮನ ಕನ್ನಡದ ವಚನಗಳ ಮಾತು ಅಮೃತದ ಸೆಲೆ.

ಅಂತಹ ಅಮೃತದ ಸೆಲೆ ಈ ವಚನದಲ್ಲೂ ಚಿಮ್ಮಿದೆ. ಕನ್ನಡದ ಹೆಸರಾಂತ ಗಾಯಕ ಅಪ್ಪಗೆರೆ ತಿಮ್ಮರಾಜು ಈ ವಚನವನ್ನು ಉತ್ತಮವಾಗಿ ಹಾಡಿದ್ದಾರೆ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ 

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾಲಮಾನ | ದಸರಾ ಉತ್ಸವ; ಭಿನ್ನ ಆಚರಣೆಗಳು, ನೋಟಗಳು

ಹದಿನೆಂಟನೇ ಶತಮಾನದಲ್ಲಿ ಹೈದರ್‌ ಅಲಿ ಮತ್ತು ಟಿಪ್ಪು ಸುಲ್ತಾನ್‌ ಆಳ್ವಿಕೆಯ ಸಂದರ್ಭದಲ್ಲೂ...

ಯುಗಧರ್ಮ | ಕ್ರಿಕೆಟ್ ಒಂದು ಆಟವಾಗಿರಲಿ, ಅದನ್ನು ಹಗುರವಾಗಿ ಪರಿಗಣಿಸಬೇಡಿ

ಆಟಗಾರರು ಕೈಕುಲುಕದಿದ್ದಾಗ, ಅವರು ತಮ್ಮ ಸ್ವಂತ ಗೌರವವನ್ನು ಅಥವಾ ತಮ್ಮ ದೇಶದ...

ಭೂಮ್ತಾಯಿ | ಪ್ಯಾರಿಸ್‌ ಒಪ್ಪಂದದ ಗುರಿ ಸಾಧನೆ: ಒತ್ತಾಸೆಯಾಗಬೇಕಿದೆ ಪ್ರಜಾಪ್ರಭುತ್ವದ ಸ್ತಂಭಗಳು

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವಲ್ಲಿ ರಾಜ್ಯ ಸರ್ಕಾರಗಳ ಪಾತ್ರವನ್ನು ಬಲಪಡಿಸುವುದು ಎಂದರೆ...

Download Eedina App Android / iOS

X