ಅಲ್ಲಮನ ಅನನ್ಯ ಪದಪ್ರಯೋಗಗಳು | ಭೈತ್ರಕ್ಕೆ ಬೈಗುಂಡು

Date:

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…

ಭೈತ್ರಕ್ಕೆ ಬೈಗುಂಡು
ಲೋಕ ಒಂದನೆಂದಡೆ
ತಾನೊಂದನೆನಬೇಡ.
ಮತ್ತಾರೇನೆಂದಡೆಯೂ
ತನ್ನನೆಂದರೆನಬೇಡ.
ಅದೆಂತೆಂದಡೆ
ನಾಹಂ ಲೋಕೇ ನ ಲೋಕೋಹಂ ಲೋಕನಿಂದಾ ಕುತೋ ಮಮ |
ಇತಿ ನಿಶ್ಚಯವದ್ಭಾವಹ ಶಿವಜ್ಞಾನೀತಿ ಕಥ್ಯತೇ ||
ಇಂತೆಂದುದಾಗಿ, ಇದನರಿದು
ಭೈತ್ರಕ್ಕೆ ಬೈಗುಂಡನಿಕ್ಕಿದಂತಿರಬೇಕು ಹಿರಿಯರು, ಗುಹೇಶ್ವರಾ

- Advertisement -

ಪದಾರ್ಥ:
ಭೈತ್ರ = ನೌಕೆ
ಬೈಗುಂಡು = ಲಂಗರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಶ್ಲೋಕಾರ್ಥ:
ಲೋಕದಲ್ಲಿ ನಾನಿಲ್ಲ ಲೋಕವು ನಾನಲ್ಲ ಹೀಗಿರುವಾಗ ಲೋಕನಿಂದೆಯು ನನಗೆಲ್ಲಿ? ಈ ರೀತಿ ನಿಶ್ಚಯಭಾವವುಳ್ಳವನು ಶಿವಜ್ಞಾನಿ ಎಂದು ಬಲ್ಲವರು ಹೇಳುತ್ತಾರೆ

ವಚನಾರ್ಥ:
ಈ ವಚನವನ್ನು ಸುಲಭ ಭಾಷೆಯಲ್ಲಿ ಬರೆದರೆ ಹೀಗೆ ಕಂಡು ಬರುತ್ತದೆ. ಲೋಕ ಒಂದು ಅಂದರೆ ತಾನು ಮತ್ತೊಂದು ಅನ್ನಬಾರದು. ಮತ್ತೆ ಯಾರೋ ಏನೋ ಅಂದರೂ ತನ್ನನ್ನೇ ಅಂದರು ಅಂದುಕೊಳ್ಳಬಾರದು. ತಿಳಿದವರು, ಹಿರಿಯರಾದವರು, ಶಿವಜ್ಞಾನವುಳ್ಳವರು ನೌಕೆಯ ಲಂಗರಿನಂತೆ ಸ್ಥಿರವಾಗಿ ಇರಬೇಕು. ಅವರ ಸ್ಥಿರತೆಯ ಮಟ್ಟ ಹೇಗಿರಬೇಕು ಅಂದರೆ ಲೌಕಿಕವಾದ ರಾಗ ದ್ವೇಷಗಳ ಪ್ರವಾಹದಲ್ಲಿ ಕೊಚ್ಚಿ ಹೋಗದಂತಿರಬೇಕು. ಪ್ರಾಪಂಚಿಕ ಪ್ರಲೋಭನೆ ಮತ್ತು ಆಕರ್ಷಣೆಗೆ ಒಳಗಾಗದೆ ಸ್ಥಿರತೆಯನ್ನು ಕಾಪಾಡಿಕೊಳ್ಳಬೇಕು.

ಪದ ಪ್ರಯೋಗಾರ್ಥ:
ಭೈತ್ರಕ್ಕೆ ಬೈಗುಂಡನಿಕ್ಕಿದಂತಿರಬೇಕು ಹಿರಿಯರು. ತಿಳಿದಂತಹವರು ನೌಕೆಯ ಲಂಗರಿನಂತೆ ಇರಬೇಕು. ಲಂಗರು ಅಂದರೆ ತೇಲುವ ನೌಕೆಯನ್ನು ಒಂದೆಡೆ ಸ್ಥಿರವಾಗಿ ಹಿಡಿದು ನಿಲ್ಲಿಸಲು ಬಳಸುವ ಲೋಹದ ಒಂದು ಸಲಕರಣೆ. ಶಿವ ಜ್ಞಾನಿಯ ನಿಶ್ಚಯಭಾವದ ಸ್ಥಿರತೆಯನ್ನು ಲಂಗರಿನ ಗುಂಡಿನ ರೂಪಕದಲ್ಲಿ ಹಿಡಿದಿಟ್ಟಿರುವುದು ಈ ವಚನದ ಬುಲೆಟ್ ಪಾಯಿಂಟ್.  ಭೈತ್ರಕ್ಕೆ ಬೈಗುಂಡು ಎಂದು ಪ್ರಾಸಬದ್ದವಾಗಿ ಪದ ಹೊಂದಿಸಿರುವುದು ಅಲ್ಲಮನಿಗೆ ಕನ್ನಡ ಭಾಷೆಯ ಮೇಲಿದ್ದ ಪ್ರಭುತ್ವಕ್ಕೆ ಪುರಾವೆ. ಕನ್ನಡದ ವಚನಗಳು ಬರೀ ಆಧ್ಯಾತ್ಮಿಕ ಅನುಭಾವವನ್ನು ವ್ಯಕ್ತಪಡಿಸುವ ಸೀಮಿತ ಉದ್ದೇಶಕ್ಕಾಗಿ ಬರೆದವಂತಹವು ಎಂದು ಪರಿಗಣಿಸಲಾಗದಂತೆ ಉನ್ನತ ಮಟ್ಟದ ಸಾಹಿತ್ಯಕ ಮೌಲ್ಯಗಳನ್ನು ಹೊಂದಿರುವುದು ವಚನ ಸಾಹಿತ್ಯದ ಹೆಗ್ಗಳಿಕೆ. ಆ ಹೆಗ್ಗಳಿಕೆಯಲ್ಲಿ ಅಲ್ಲಮನದು ಸಿಂಹಪಾಲು. ಭೈತ್ರಕ್ಕೆ ಬೈಗುಂಡು ಅಲ್ಲಮನ ಅನನ್ಯ ಪದ ಪ್ರಯೋಗ.

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಸಾಯದ ಸಂಚು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನೀರಲಾದ ನಿರ್ಮಿತಂಗಳು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಹೊದಕುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅನುಪಮಸುಖಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಆಶಾಪಾಶ ವಿರಹಿತರು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಡದಿಯರ ಒಲುಮೆ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಗೆದು ಬಿತ್ತಿದ ಬ್ರಹ್ಮಬೀಜ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ತಾನಿದ್ದಲ್ಲಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಿದ್ರೆಯೆಂಬ ಕಾಳೋರಗ 

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಕೀಲು ಮಡಗಿದಾತ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾದುದು ಮಾದುದಲ್ಲ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು

ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ

ಶಿವಕುಮಾರ್
ಹರಿಹರ ಶಿವಕುಮಾರ್
+ posts

ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಹರಿಹರ ಶಿವಕುಮಾರ್
ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಿಲ್ಲಿಮಾತು | ಟ್ರೋಲ್ ಮಾಡುವುದರಿಂದ ವಾಸ್ತವ ಬದಲಾಗದು!

“ಅತ್ಯಾಚಾರಕ್ಕೊಳಗಾದ ಮಹಿಳೆ ಬದುಕಿ ಉಳಿದರೆ, ಅವಳ ಗೌರವ ಕಡಿಮೆ ಆಗುತ್ತದೆಯೇ ?...

ಅಲ್ಲಮನ ಅನನ್ಯ ಪದಪ್ರಯೋಗಗಳು | ಅತಿನಿದ್ರಿಗಳು 

ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ...

ಲಾಪತಾ ಲೇಡೀಸ್: ಮನೆ ಒಳಗೂ ಹೊರಗೂ ಕಳೆದುಹೋಗುವ ಮಹಿಳೆಯರ ಹುಡುಕಾಟ

'ಲಾಪತಾ ಲೇಡೀಸ್' ಕೇವಲ ರೈಲಿನಲ್ಲಿ ಕಾಣೆಯಾದ ಇಬ್ಬರು ವಧುಗಳ ಕಥೆಯಲ್ಲ. ಮಹಿಳೆ...