ದೊಡ್ಡಬಳ್ಳಾಪುರ | ಕೆವಿಎನ್ ಕನ್ನಡ ವ್ಯಾಕರಣದ ತೋರುದೀಪ’ದೊಡ್ಡಬಳ್ಳಾಪುರದಲ್ಲಿ ಚಿಂತನ -ಮಂಥನ

Date:

ಭಾಷೆ ಕಲಿಕೆಯಿಂದ ಬರುವಂಥದ್ದಲ್ಲ. ಹುಟ್ಟಿನಿಂದಲೇ ಬಂದಿರುವ ಸಾಮರ್ಥ್ಯ. ಇದನ್ನು ಯೂನಿವರ್ಸಲ್ ಗ್ರಾಮರ್ ಎನ್ನುತ್ತೇವೆ. ಇದು ಜಗತ್ತಿನ ಯಾವುದೇ ಭಾಷೆಯಾಗಿ ಬದಲಾಗುವ ಮೂಲ ವಸ್ತು. ಆದರೆ ನಾವಿನ್ನೂ ಭಾಷೆ ಕಲಿಕೆಯಿಂದ ಬರುವಂಥದ್ದು ಎಂಬುದಕ್ಕೆ ಅಂಟಿಕೊಂಡಿದ್ದೇವೆ. ಭಾಷಾ ವಿಜ್ಞಾನ ನಮ್ಮ ಶಾಲೆ ಕಾಲೇಜುಗಳಿಗೆ ಪ್ರವೇಶವೇ ಪಡೆದಿಲ್ಲ ಎಂಬುದನ್ನು ಕನ್ನಡದ ಪ್ರತಿಭಾಶಾಲಿ ಡಾ.ಕೆ.ವಿ.ನಾರಾಯಣ ಅವರು ಚಾಮ್ಸ್ಕಿಯೊಂದಿಗೆ ಎರಡು ಹೆಜ್ಜೆ ಕೃತಿಯಲ್ಲಿ ಸಾಧಾರವಾಗಿ ನಿರೂಪಿಸಿದ್ದಾರೆ ಎಂದು ಅಧ್ಯಾಪಕ ಕೆ.ವೆಂಕಟೇಶ ಹೇಳಿದರು.

ಅವರು ದೊಡ್ಡಬಳ್ಳಾಪುರದ ಕನ್ನಡ ಜಾಗೃತ ಪರಿಷತ್ ಸಭಾಂಗಣದಲ್ಲಿ ನಡೆದ ಕೆ.ವಿ.ನಾರಾಯಣ ದಾರಿ ದಿಕ್ಕು: ಸಾಗುತ್ತಿರುವವರೊಂದಿಗೆ ಮಾತುಕತೆ –ಕಾರ್ಯಕ್ರಮದಲ್ಲಿ ಮಾತನಾಡಿದರು.

ಭಾಷೆಗೆ ಸಂಬಂಧಿಸಿದ ಎಲ್ಲ ನಿರ್ದೇಶನಗಳನ್ನು ನೀಡುವ ಮೆದುಳಿನ ವ್ಯವಸ್ಥೆಯನ್ನು ಲಾಂಗ್ವೇಜ್ ಆಕ್ವೈರ್ಡ್ ಡಿವೈಸ್ (ಎಲ್ ಎಡಿ) ಎನ್ನಲಾಗುತ್ತದೆ. ಇದು ಮಗುವಿನಲ್ಲಿ ೧೨-೧೪ನೇ ವಯೋಮಾನದ ತನಕ ಸಕ್ರಿಯವಾಗಿರುತ್ತದೆ. ಈ ಅವಧಿಯಲ್ಲಿ ಭಾಷೆಗಳನ್ನು ಸುಲಭವಾಗಿ ದಕ್ಕಿಸಿಕೊಳ್ಳಬಹುದು. ಆಮೇಲೆ ಭಾಷೆ ಬರುವುದಿಲ್ಲವೇ ಎಂದರೆ ಸಾಧ್ಯ. ಕೆಲವು ನಿಯಮಗಳನ್ನು ಕಲಿತು ಅದರ ಮೂಲಕ ವಾಕ್ಯಗಳನ್ನು ಹೇಳಬಹುದು. ಇದು ಸೀಮಿತ. ಇದನ್ನು ನಿದರ್ಶನಗಳ ಸಮೇತ ಕೆವಿಎನ್ ಸಾಧಿಸಿ ತೋರಿಸಿದ್ದಾರೆ. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ ಎಂಬ ಸರ್ವಜನ ಪರವಾಗಿರುವುದನ್ನು ಕಟ್ಟಿದ್ದಾರೆ. ಈ ಹಾದಿಯಲ್ಲಿ ನಾವು ಸಾಗಬೇಕು ಎಂದರು.

ಅಧ್ಯಾಪಕ. ವಿಮರ್ಶಕ ಹಾಗೂ ಅನುವಾದಕ ಡಾ.ಸುಭಾಷ್ ರಾಜಮಾನೆ ಮಾತನಾಡಿ “ ಮೆಚ್ಚುಗೆಗಳ ಹಪಾಹಪಿ ಇಲ್ಲದ ಆತ್ಮರತಿಯನ್ನು ಸೋಂಕಿಸಿಕೊಳ್ಳದ ಎಲ್ಲರೊಂದಿಗೆ ಮುಕ್ತ ಸಂವಾದ ನಡೆಸುತ್ತಿದ್ದ ಕೆವಿಎನ್ ನಮ್ಮೊಂದಿಗೆ ಇಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದರು. ಕನ್ನಡ ವಿಮರ್ಶೆ, ಭಾಷಾ ವಿಜ್ಞಾನ, ಕಾವ್ಯ ಮೀಮಾಂಸೆಯಲ್ಲಿ ಇವರುತಮ್ಮದೇ ಹಾದಿಯಲ್ಲಿ ನಡೆದರು. ಶಂಭಾ ಜೋಷಿ ನಂತರ ಕನ್ನಡದ ಅತಿ ದೊಡ್ಡ ಸಂಶೋಧಕ ಎಂದು ಕವಿ ಎಚ್.ಎಸ್. ಶಿವಪ್ರಕಾಶ್ ಬಣ್ಣಿಸಿದ್ದಾರೆ. ನಾನು ಯಲಹಂಕ ಸರಕಾರಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕನಾಗಿ ಅವರಿಂದ ಬೇಕಾದಷ್ಟು ಕಲಿತಿರುವೆ. ಅವರಿನ್ನೂ ಇರಬೇಕಿತ್ತು ಎಂದು ಅವರು ತಮ್ಮ ಒಡಲ ಸಂಕಟವನ್ನು ಹೇಳಿಕೊಂಡರು.

ಆಕೃತಿ ಪ್ರಕಾಶನದ ಗುರು ಪ್ರಸಾದ್ “ ನಾನು ಮೂಲತಃ ಎಂಜಿನಿಯರ್. ಆದರೆ ಕನ್ನಡ ಪುಸ್ತಕ ಪ್ರಕಟಣೆ ವಲಯಕ್ಕೆ ಬಂದೆ. ಕುವೆಂಪು ಸೇರಿದಂತೆ ಮಹಾನ್ ಲೇಖಕರನ್ನು ಓದುವ ಕ್ರಮವನ್ನು ಕೆವಿಎನ್ ಕಲಿಸಿದರು. ಅವರೊಂದಿಗಿನ ಒಡನಾಟವನ್ನು ಮಾತಿನಲ್ಲಿ ಕಟ್ಟಿಕೊಡುವುದು ಕಷ್ಟ ಎಂದರು. ಯಾವುದೇ ಲೇಖಕರನ್ನು ಗುಣಗಾನ ಮಾಡುವುದಕ್ಕಿಂತ ಅವರ ವಿಧಿ ವಿಧಾನಗಳನ್ನು ಅನುಸರಿಸಬೇಕು. ಕೆವಿಎನ್ ೨೦ ಮತ್ತು ೨೧ನೇ ಶತಮಾನದ ಹಲವು ಅವಸ್ಥಾಂತರಗಳ ಕಾಲ ಘಟ್ಟದಲ್ಲಿ ಬದುಕಿದ್ದ ಚೇತನ. ಅವರ ಚಿಂತನೆಗಳ ಹಾದಿಯಲ್ಲಿ ಸಾಗಲು ನಮಗೆ ದೊಡ್ಡ ಅವಕಾಶಗಳಿವೆ ಎಂದು ಅಧ್ಯಾಪಕ ಮತ್ತು ಸಂಶೋಧಕ ಡಾ. ಡಿ.ಆರ್. ದೇವರಾಜ್ ಪ್ರತಿಪಾದಿಸಿದರು.

ಬೆಸಗರಹಳ್ಳಿ ರಾಮಣ್ಣ ಟ್ರಸ್ಟ್ ಕುಪ್ಪಳಿಯಲ್ಲಿ ಕಳೆದ ೧೯ ವರುಷಗಳಿಂದ ಸಾಹಿತ್ಯ ಕಮ್ಮಟವನ್ನು ನಡೆಸುತ್ತಿತ್ತು. ಇದರ ಮೂಲ ಚೇತನ ಕೆವಿಎನ್ ಆಗಿದ್ದರು. ಕಿರಿಯ ತಲೆಮಾರಿನ ಪಾಲಿಗೆ ಅವರು ತಿಳಿವಿನ ಸೂರ್ಯ ರಾಗಿದ್ದರು ಎಂದು ವಿಮರ್ಶಕ ಡಾ. ಪ್ರಕಾಶ್ ಮಂಟೇದ ಬಣ್ಣಿಸಿದರು.


ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್

ಕನ್ನಡ ಜಾಗೃತ ಪರಿಷತ್ನ ಕಾರ್ಯದರ್ಶಿ ಡಿ.ಪಿ. ಆಂಜನೇಯ ಕಾರ್ಯಕ್ರಮವನ್ನು ನಿರೂಪಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ರೈತರ ಹೋರಾಟಕ್ಕೆ ಸ್ಪಂದನೆ; ಬಸವಸಾಗರದಿಂದ 1.5 ಟಿಎಂಸಿ ನೀರು ಬಿಡುಗಡೆಗೆ ಆದೇಶ

ಬರಗಾಲದ ಸಂಕಷ್ಟದಿಂದ ಕಂಗಾಲಾಗಿದ್ದ ಕಾಲುವೆ ಅಚ್ಚುಕಟ್ಟು ಪ್ರದೇಶದ ರೈತರಿಗೆ ಕೊನೆಗೂ ಕೊಂಚ...

ಯಾದಗಿರಿ | ಎಂಬಿಬಿಎಸ್‌ ವಿದ್ಯಾರ್ಥಿಗಳ ಬಾಕಿ ವಿದ್ಯಾರ್ಥಿವೇತನ ಬಿಡುಗಡೆಗೆ ಸದ್ದಮ್ ಹುಸೇನ್ ಆಗ್ರಹ

ಕೋವಿಡ್ ಸಾಂಕ್ರಾಮಿಕ ಹಾಗೂ ಪ್ರವೇಶ ಪ್ರಕ್ರಿಯೆಯಲ್ಲಿನ ವಿಳಂಬದಿಂದಾಗಿ 2021ನೇ ಸಾಲಿನ ಎಂಬಿಬಿಎಸ್...

ಯಾದಗಿರಿ | ಕೆಂಭಾವಿಯಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪನೆಗೆ ಆಗ್ರಹಿಸಿ ನಮ್ಮ ಕರ್ನಾಟಕ ಸೇನೆಯಿಂದ ಮನವಿ

ಕೆಂಭಾವಿ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಸ್ಥಾಪಿಸಿ, ಅಗ್ನಿಶಾಮಕ ವಾಹನ ಹಾಗೂ ಅಗತ್ಯ...

ವಿಜಯಪುರ |ಬಸವ ತತ್ವದ ವಿರುದ್ಧದ ಅಪಪ್ರಚಾರ | ಎಸ್‌ಐಟಿ ತನಿಖೆಗೆ ಆಗ್ರಹ

ಬಸವಣ್ಣನವರ ವಚನಗಳು, ವಿಚಾರಧಾರೆ ಹಾಗೂ ಶರಣ ಚಳವಳಿಯ ಇತಿಹಾಸವನ್ನು ತಿರುಚಿ ಸಮಾಜದಲ್ಲಿ...