ಈ ದಿನ ಸಂಪಾದಕೀಯ | ರಾಷ್ಟ್ರಧ್ವಜ ವಿರುದ್ಧದ RSS ‘ಕುತಂತ್ರ’ ಸೋಲುತ್ತಲೇ ಇರುತ್ತದೆ!

Date:

ತ್ರಿವರ್ಣ ರಾಷ್ಟ್ರಧ್ವಜವನ್ನು ತಿರಸ್ಕರಿಸಿ, ಕೇಸರಿ ಧ್ವಜವೇ ಭಾರತದ ನಿಜವಾದ ರಾಷ್ಟ್ರಧ್ವಜವಾಗಬೇಕೆಂದು ಪ್ರತಿಪಾದಿಸುವ ಸಂಘಪರಿವಾರ, ದೇಶಪ್ರೇಮದ ಪಾಠ ಹೇಳುತ್ತಿದೆ. ರಾಷ್ಟ್ರಧ್ವಜ ಹಿಡಿದು ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ಆಗ್ರಹಿಸುವ ಯುವಜನರನ್ನು ಮೋದಿ ಸರ್ಕಾರದ ಪೊಲೀಸ್‌ ಪಡೆ ತಡೆದು ದಮನಿಸುತ್ತಿದೆ. ಇದು ಕೇವಲ ರಾಜಕೀಯ ವಿಪರ್ಯಾಸವಲ್ಲ; ರಾಷ್ಟ್ರೀಯತೆಯನ್ನು ಅಧಿಕಾರದೊಂದಿಗೆ ಸಮೀಕರಿಸುವ ಅಪಾಯಕಾರಿ ಪ್ರವೃತ್ತಿ.

ರಾಷ್ಟ್ರಧ್ವಜವು ದೇಶದ ಎಲ್ಲ ನಾಗರಿಕರ ಸ್ವಾಭಿಮಾನ ಮತ್ತು ಸಾರ್ವಭೌಮತ್ವದ ಸಂಕೇತ. ಅದು ಸರ್ಕಾರದ ಸ್ವತ್ತಲ್ಲ. ಆಡಳಿತಾರೂಢ ಪಕ್ಷದ ರಾಜಕೀಯ ಪ್ರಚಾರದ ಸಾಧನವೂ ಅಲ್ಲ. ಆದರೆ, ದೆಹಲಿಯಲ್ಲಿ ಸಿಜೆಪಿ ನೇತೃತ್ವದ ತಿರಂಗಾ ಯಾತ್ರೆಗೆ ಮೋದಿ ಸರ್ಕಾರ ಅಡ್ಡಿಪಡಿಸಿದೆ. ಈ ಘಟನೆ ಮೂಲಭೂತ ಪ್ರಜಾಸತ್ತಾತ್ಮಕ ಮೌಲ್ಯವನ್ನೇ ಪ್ರಶ್ನಿಸುವಂತೆ ಮಾಡಿದೆ.

- Advertisement -

ಚುನಾವಣಾ ಆಯೋಗದ ಪಾರದರ್ಶಕತೆ ಮತ್ತು ಮತದಾನದ ಹಕ್ಕಿನ ರಕ್ಷಣೆಗೆ ಒತ್ತಾಯಿಸಿ ದೆಹಲಿಯಲ್ಲಿ ರಾಷ್ಟ್ರಧ್ವಜ ಹಿಡಿದು ಯುವಜನರು ಶುಕ್ರವಾರ ಸಂಜೆ ಬೀದಿಗಿಳಿದಿದ್ದರು. ತಿರಂಗಾ ಯಾತ್ರೆ ನಡೆಸಲು ಮುಂದಾದ ಯುವಜನರನ್ನು ಪೊಲೀಸರ ಮೂಲಕ ಮೋದಿ ಸರ್ಕಾರ ತಡೆಯಿತು. ಜನರ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಅವರ ಪ್ರತಿಭಟನೆಯನ್ನು ನಿರ್ಬಂಧಿಸುವುದು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಅಪಾಯಕಾರಿ. ಆದರೆ, ಈ ಪ್ರಜಾಪ್ರಭುತ್ವವನ್ನೇ ಇಲ್ಲವಾಗಿಸಿ, ಸರ್ವಾಧಿಕಾರಿ ಮತ್ತು ಮನುವಾದಿ ಆಡಳಿತವನ್ನು ದೇಶದ ಮೇಲೆ ಹೇರಲು ಬಯಸುತ್ತಿರುವ ಬಿಜೆಪಿ ಸರ್ಕಾರ, ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ, ಯುವ ಹೋರಾಟಗಾರ್ತಿ ನೇಹಾ ಬೋರಾ ಸೇರಿದಂತೆ ಪ್ರತಿಭಟನಾಕಾರರನ್ನು ಬಂಧಿಸಿತು. ತಿರಂಗಾ ಯಾತ್ರೆಯನ್ನು ತಡೆಯಲೆತ್ನಿಸಿತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ನಾವು ಎಂದಿಗೂ ಮರೆಯಬಾರದ ಒಂದು ಅಂಶವಿದೆ. ಅದು, ರಾಷ್ಟ್ರಪ್ರೇಮದ ಪಾಠ ಹೇಳುವ ಬಿಜೆಪಿ ಮತ್ತು ಸಂಘಪರಿವಾರವು ರಾಷ್ಟ್ರಧ್ವಜದ ಮೇಲೆ ಹೊಂದಿರುವ ಐತಿಹಾಸಿಕ ಧೋರಣೆ. ಸ್ವಾತಂತ್ರ್ಯಪೂರ್ವ ಭಾರತದ ಸಂದರ್ಭದಲ್ಲಿ ಸಂಘಪರಿವಾರವು ತಿರಂಗಾವನ್ನು ರಾಷ್ಟ್ರಧ್ವಜವಾಗಿ ಒಪ್ಪಿಕೊಳ್ಳಲು ನಿರಾಕರಿಸಿತ್ತು. ಆದ್ದರಿಂದಲೇ, ಸುಮಾರು 50 ವರ್ಷಗಳ ಕಾಲ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ ತಿರಂಗಾ ಧ್ವಜವನ್ನು ಹಾರಿಸಿಯೇ ಇರಲಿಲ್ಲ. ಇದು ಕೇವಲ ರಾಜಕೀಯ ಭಿನ್ನಾಭಿಪ್ರಾಯ ಮಾತ್ರವೇ ಆಗಿರಲಿಲ್ಲ. ಬದಲಾಗಿ, ಭಾರತದ ರಾಷ್ಟ್ರೀಯತೆಯ ಸ್ವರೂಪವನ್ನೇ ಬದಲಿಸಲು ಮುಂದಿಟ್ಟ ಸೈದ್ಧಾಂತಿಕ ಪ್ರತಿಪಾದನೆಯಾಗಿತ್ತು.

ಆರ್‌ಎಸ್‌ಎಸ್‌ನ ಮುಖವಾಣಿ ‘ಆರ್ಗನೈಸರ್‌’ನಲ್ಲಿ 1947ರ ಜುಲೈ 17ರಂದು ಪ್ರಕಟವಾಗಿದ್ದ ಸಂಪಾದಕೀಯವು ಭಾರತದ ರಾಷ್ಟ್ರಧ್ವಜ ಕೇಸರಿ ಧ್ವಜವೇ ಆಗಬೇಕೆಂದು ಪ್ರತಿಪಾದಿಸಿತ್ತು. ರಾಷ್ಟ್ರಧ್ವಜವು ಎಲ್ಲ ಸಮುದಾಯಗಳಿಗೂ ಸ್ವೀಕಾರಾರ್ಹವಾಗಿರಬೇಕು ಎಂಬ ಸಂವಿಧಾನ ರಚನಾ ಸಭೆಯ ಆಶಯವನ್ನೇ ತಿರಸ್ಕರಿಸಿತ್ತು. ಭಾರತವು ಹಿಂದು ರಾಷ್ಟ್ರವಾಗಿರುವುದರಿಂದ ರಾಷ್ಟ್ರಧ್ವಜವೂ ಆ ರಾಷ್ಟ್ರದ ಗುರುತನ್ನು ಮಾತ್ರ ಪ್ರತಿನಿಧಿಸಬೇಕು ಎಂಬ ವಾದವನ್ನು ಮಂಡಿಸಿತ್ತು. ಇದು ಬಹುಧರ್ಮೀಯ ಭಾರತದ ಸಮಾನ ನಾಗರಿಕತ್ವದ ಕಲ್ಪನೆಗೆ ವಿರುದ್ಧವಾದ ಸೈದ್ಧಾಂತಿಕ ನಿಲುವಾಗಿತ್ತು.

ಅಂತೆಯೇ, 1947ರ ಆಗಸ್ಟ್ 14ರ ಸಂಪಾದಕೀಯದಲ್ಲಿ, ತ್ರಿವರ್ಣ ಧ್ವಜವನ್ನು ಹಿಂದುಗಳು ಗೌರವಿಸುವುದಿಲ್ಲ ಎಂಬ ಪ್ರಚೋದನಾಕಾರಿ ಹೇಳಿಕೆಯನ್ನು ಉಲ್ಲೇಖಿಸಿತ್ತು. ಮೂರು ಬಣ್ಣಗಳನ್ನು ಹೊಂದಿರುವ ಧ್ವಜವೇ ದೇಶಕ್ಕೆ ಹಾನಿಕಾರಕ ಎಂಬ ಧೋರಣೆಯನ್ನು ಆರ್‌ಎಸ್‌ಎಸ್‌ ಮಂಡಿಸಿತ್ತು.

ಆದರೆ, ಭಾರತದ ಸಂವಿಧಾನ ರಚನಾ ಸಭೆ ಈ ಸಂಕುಚಿತ ರಾಷ್ಟ್ರೀಯ ಕಲ್ಪನೆಯನ್ನು ಅಂಗೀಕರಿಸಲಿಲ್ಲ. 1947ರ ಜುಲೈ 22ರಂದು ತ್ರಿವರ್ಣ ಧ್ವಜವನ್ನು ಭಾರತದ ರಾಷ್ಟ್ರಧ್ವಜವನ್ನಾಗಿ ಸಂವಿಧಾನ ಸಭೆ ಘೋಷಿಸಿತು. ಧರ್ಮ, ಜಾತಿ ಹಾಗೂ ಭಾಷೆಗಳನ್ನು ಮೀರಿ ದೇಶದ ಎಲ್ಲ ಜನರನ್ನು ಪ್ರತಿನಿಧಿಸುವ ರಾಷ್ಟ್ರದ ಸಂಕೇತವಾಗಿ ತಿರಂಗಾ ರೂಪುಗೊಂಡಿತು. ಅಶೋಕ ಚಕ್ರವು ಅದರ ಮಧ್ಯದಲ್ಲಿ ಸ್ಥಾನ ಪಡೆದದ್ದು ಭಾರತದ ಐತಿಹಾಸಿಕ ಪರಂಪರೆ ಮತ್ತು ಧರ್ಮನಿಷ್ಠ ಆಡಳಿತದ ಆದರ್ಶಗಳನ್ನು ನೆನಪಿಸುವಂತಿತ್ತು.

ಈ ರಾಷ್ಟ್ರಧ್ವಜದ ಆಯ್ಕೆಯು ಭಾರತದ ರಾಷ್ಟ್ರ ನಿರ್ಮಾಣದ ಅತ್ಯಂತ ಮಹತ್ವದ ಆಯ್ಕೆಗಳಲ್ಲಿ ಒಂದಾಗಿತ್ತು. ರಾಷ್ಟ್ರಧ್ವಜವು ನಿರ್ದಿಷ್ಟ ಧರ್ಮದ ಆಸ್ತಿಯಾಗಬಾರದು; ದೇಶದ ಪ್ರತಿಯೊಬ್ಬ ಪ್ರಜೆಯೂ ಅದರೊಂದಿಗೆ ತನ್ನ ಸಂಬಂಧವನ್ನು ಗುರುತಿಸಿಕೊಳ್ಳುವಂತಿರಬೇಕು ಎಂಬ ಕಲ್ಪನೆಗೆ ಆದ್ಯತೆ ದೊರೆತಿತ್ತು. ಈ ಅರ್ಥದಲ್ಲಿಯೇ ತಿರಂಗಾ ಭಾರತದ ವೈವಿಧ್ಯತೆ, ಸಮಾನತೆ ಹಾಗೂ ಒಗ್ಗಟ್ಟಿನ ಸಂಕೇತವಾಗಿದೆ.

ಸ್ವಾತಂತ್ರ್ಯಾನಂತರದಲ್ಲಿ ಆರ್‌ಎಸ್‌ಎಸ್‌ ರಾಜಕೀಯ ಅಸ್ತಿತ್ವದ ಕಾರಣಕ್ಕಾಗಿ ತ್ರಿವರ್ಣ ಧ್ವಜವನ್ನು ರಾಷ್ಟ್ರಧ್ವಜವಾಗಿ ಒಪ್ಪಿಕೊಂಡಿದೆ. ಆದರೆ, ಅಪ್ಪಿಕೊಂಡಿಲ್ಲ. ಆದ್ದರಿಂದಲೇ, 2002ರವರೆಗೆ ನಾಗ್ಪುರದಲ್ಲಿರುವ ಆರ್‌ಎಸ್‌ಎಸ್‌ ಕೇಂದ್ರ ಕಚೇರಿಯಲ್ಲಿ ತಿರಂಗಾವನ್ನು ಹಾರಿಸಿರಲಿಲ್ಲ. ಮಾತ್ರವಲ್ಲ, 2001ರ ಜನವರಿ 26ರಂದು ರಾಷ್ಟ್ರಪ್ರೇಮಿ ಯುವ ದಳದ ಮೂವರು ಕಾರ್ಯಕರ್ತರು ಆರ್‌ಎಸ್‌ಎಸ್‌ ಕಚೇರಿ ಮೇಲೆ ಬಲವಂತವಾಗಿ ತಿರಂಗಾ ಹಾರಿಸಿದ್ದರು. ಅವರ ವಿರುದ್ಧ ಸಂಘಪರಿವಾರ ಪ್ರಕರಣ ದಾಖಲಿಸಿತ್ತು.

ಇದು ಕೇವಲ ರಾಷ್ಟ್ರಧ್ವಜದ ಕುರಿತ ಸಂಘಪರಿವಾರದ ಐತಿಹಾಸಿಕ ನಿಲುವಿನ ಪ್ರಶ್ನೆ ಮಾತ್ರವಲ್ಲ. ಜೊತೆಗೆ ಅದರ ರಾಷ್ಟ್ರೀಯತೆಯ ವ್ಯಾಖ್ಯಾನದ ಪ್ರಶ್ನೆಯೂ ಇದೆ. ದೇಶಪ್ರೇಮವನ್ನು ನಿರ್ದಿಷ್ಟ ಧರ್ಮ, ಭಾಷೆ ಅಥವಾ ಸಾಂಸ್ಕೃತಿಕ ಗುರುತಿನೊಂದಿಗೆ ಆರ್‌ಎಸ್‌ಎಸ್‌ ಸಮೀಕರಿಸುತ್ತಿದೆ. ಇದು ಆ ಗುರುತಿಗೆ ಸೇರದ ಜನರ ರಾಷ್ಟ್ರೀಯ ನಿಷ್ಠೆಯನ್ನೇ ಅನುಮಾನಿಸುವ ಅಪಾಯವಿದೆ. ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಈ ಪ್ರವೃತ್ತಿ ಸಾಮಾಜಿಕ ಒಗ್ಗಟ್ಟಿಗೆ ಹಾನಿಕಾರಕ.

ಇದೇ ಕಾರಣಕ್ಕೆ 1947ರಲ್ಲಿ ರಾಷ್ಟ್ರಧ್ವಜದ ಜೊತೆಗೆ ದೇಶದ ಹೆಸರು ಮತ್ತು ಭಾಷೆಯ ಕುರಿತೂ ನಡೆದ ವಾದಗಳು ಮಹತ್ವ ಪಡೆಯುತ್ತವೆ. ‘ಹಿಂದುಸ್ತಾನ’ ಎಂಬ ಹೆಸರನ್ನೇ ಪ್ರತಿಪಾದಿಸುವುದು, ಹಿಂದಿಯನ್ನು ಹಿಂದುಗಳ ರಾಷ್ಟ್ರೀಯ ಭಾಷೆಯೆಂದು ಗುರುತಿಸುವುದು ಹಾಗೂ ಕೇಸರಿ ಧ್ವಜಕ್ಕೆ ರಾಷ್ಟ್ರೀಯ ಸ್ಥಾನ ನೀಡಬೇಕೆಂದು ಒತ್ತಾಯಿಸುವುದು — ಇವೆಲ್ಲವೂ ಒಂದೇ ರೀತಿಯ ರಾಷ್ಟ್ರೀಯ ಗುರುತಿನ ಕಲ್ಪನೆಯನ್ನು ಹೊಂದಿದ್ದವು. ಆದರೆ, ಸಂವಿಧಾನ ರಚನಾಕಾರರು ಭಾರತದ ಬಹುಭಾಷಾ, ಬಹುಧರ್ಮೀಯ ಸ್ವರೂಪವನ್ನು ಒಳಗೊಳ್ಳುವ – ಆಚರಿಸುವ ವ್ಯವಸ್ಥೆಯನ್ನು ರೂಪಿಸಿದರು.

ಈ ಲೇಖನ ಓದಿದ್ದೀರಾ?: ಕಾಕ್ರೋಚ್‌ಗಳ ಮೇಲೆ ಮೋದಿ ಸರ್ಕಾರದ ಸರ್ವಾಧಿಕಾರ; ಅವನತಿಯ ಮುನ್ಸೂಚನೆಯೇ?

ಇಂದಿಗೂ ರಾಷ್ಟ್ರಧ್ವಜ, ರಾಷ್ಟ್ರೀಯ ಭಾಷೆ ಹಾಗೂ ದೇಶದ ಹೆಸರಿನ ಕುರಿತು ನಡೆಯುವ ಚರ್ಚೆಗಳಲ್ಲಿ ಆ ಐತಿಹಾಸಿಕ ಭಿನ್ನಾಭಿಪ್ರಾಯಗಳ ಪ್ರತಿಧ್ವನಿ ಕೇಳಿಸುತ್ತದೆ. ಮೋದಿ ಸರ್ಕಾರವು, ರಾಷ್ಟ್ರೀಯ ಸಂಕೇತಗಳನ್ನು ತಮ್ಮ ಪಕ್ಷ ಮತ್ತು ಸೈದ್ಧಾಂತಿಕ ತಾಯಿ ಆರ್‌ಎಸ್‌ಎಸ್‌ನ ಸಿದ್ದಾಂತಕ್ಕೆ ತಕ್ಕಂತೆ ಚರ್ಚೆಗಳನ್ನು ಹೆಣೆಯುತ್ತಿದೆ.

ಆದ್ದರಿಂದಲೇ, ಶುಕ್ರವಾರದ ಸಿಜೆಪಿ ನೇತೃತ್ವದ ತಿರಂಗಾ ಯಾತ್ರೆಯನ್ನು ಮೋದಿ ಸರ್ಕಾರಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರಧ್ವಜ ಹಿಡಿದು ಮೆರವಣಿಗೆ ಮಾಡುವುದನ್ನೇ ಅಪರಾಧವೆಂದು ಬಿಂಬಿಸುತ್ತಿದೆ. ತ್ರಿವರ್ಣ ಧ್ವಜ ಪ್ರದರ್ಶಿಸಿದವರ ವಿರುದ್ಧ ಪ್ರಕರಣವನ್ನೂ ದಾಖಲಿಸುತ್ತಿದೆ.

ಆದರೆ, ಪ್ರಜಾಪ್ರಭುತ್ವದಲ್ಲಿ ಅಧಿಕಾರದಲ್ಲಿದ್ದವರು ಮಾಡಬೇಕಾದ್ದು: ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವುದು, ಧ್ವಜವು ಪ್ರತಿನಿಧಿಸುವ ಸ್ವಾತಂತ್ರ್ಯ ಮತ್ತು ಸಮಾನತೆಯ ಮೌಲ್ಯಗಳನ್ನೂ ಕಾಪಾಡುವುದು. ಅಂತೆಯೇ, ಸರ್ಕಾರವನ್ನು ಪ್ರಶ್ನಿಸುವ ದೇಶದ ನಾಗರಿಕರು ರಾಷ್ಟ್ರಧ್ವಜವನ್ನು ಹಿಡಿದು ಮೆರವಣಿಗೆ ನಡೆಸುವ ಹಕ್ಕು ಹೊಂದಿದ್ದಾರೆ. ಆದರೆ, ಮೋದಿ ಸರ್ಕಾರಕ್ಕೆ ರಾಷ್ಟ್ರಧ್ವಜದ ಮೇಲೆ  ಗೌರವವಿಲ್ಲ. ಅದನ್ನು ಸಹಿಸುವುದೂ ಇಲ್ಲ.

ಈಗಾಗಲೇ, ಸಂಘಪರಿವಾರದ ತಿರಂಗಾ ವಿರೋಧದ ಐತಿಹಾಸಿಕ ನಿಲುವು ಪದೇ-ಪದೇ ಸೋಲುಂಡಿದೆ. ತ್ರಿವರ್ಣ ಧ್ವಜವನ್ನು ಹಾರಿಸಲು ಹಿಂದೇಟು ಹಾಕಿದ್ದ ಆರ್‌ಎಸ್‌ಎಸ್‌, ಈಗ ತನ್ನ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುತ್ತಿದೆ. ಪ್ರಧಾನಿ ಮೋದಿ ಅವರು ಮುಕ್ತ ಮನಸ್ಸಿನಿಂದ ಅಲ್ಲದೇ ಇದ್ದರೂ, ಅನಿವಾರ್ಹವಾಗಿಯಾದರೂ, ತಿರಂಗಾಕ್ಕೆ ನಮಿಸುವಂತಾಗಿದೆ. ಮುಂದೆಯೂ ರಾಷ್ಟ್ರಧ್ವಜವೇ ಗೆಲ್ಲಲಿದೆ – ಆರ್‌ಎಸ್‌ಎಸ್‌/ಬಿಜೆಪಿ ಅಜೆಂಡಾಗಳು ಮಣ್ಣು ಕಚ್ಚಲಿವೆ. ಯಾಕೆಂದರೆ, ತಿರಂಗಾ ಭಾರತದ ಪ್ರತಿಯೊಬ್ಬ ನಾಗರಿಕನ ಧ್ವಜ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಮಹಿಳೆಯರನ್ನು ಗೌರವಿಸುವ ಯುವಜನತೆಯ ಮುಂದೆ ಬಿಜೆಪಿಯ ನಿಜಬಣ್ಣ ಬಯಲಾಗಿದೆ’: ಪ್ರಕಾಶ್ ರಾಜ್

ದೇಶದ ವಿವಿಧ ಭಾಗಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ಯುವಜನತೆಯನ್ನು ಶ್ಲಾಘಿಸಿರುವ ನಟ...

ಇಂಡಿ |‌ ಜೋಡೆತ್ತು ಕೃಷಿಕರ ಪ್ರತಿಭಟನೆ; ಅಹವಾಲು ಆಲಿಸಿದ ಶಾಸಕ ಯಶವಂತರಾಯಗೌಡ ಪಾಟೀಲ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಜೋಡೆತ್ತಿನ ಕೃಷಿಕರ ಬೇಡಿಕೆಗಳನ್ನು...

SIR | ಯುವಜನರ ಮೇಲಿನ ದಮನಕಾರಿ ಕ್ರಮಗಳ ಕುರಿತು ಅಮೆರಿಕದ 6 ಡೆಮಾಕ್ರಟಿಕ್ ಸಂಸದರ ಕಳವಳ; ವಿದೇಶಾಂಗ ಕಾರ್ಯದರ್ಶಿಗೆ ಪತ್ರ

ದೆಹಲಿ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳ ವೇಳೆ ಅತಿಯಾದ...

ಇಂಡಿಯಾ ಒಕ್ಕೂಟದತ್ತ ಮುಖ ಮಾಡಿದರೇ ಜಗನ್?

ಆಂಧ್ರಪ್ರದೇಶದ ರಾಜಕಾರಣದಲ್ಲಿ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೊಸದೊಂದು ರಾಜಕೀಯ ಸಮೀಕರಣ ರೂಪುಗೊಳ್ಳುವ...