ಈ ದಿನ ಸಂಪಾದಕೀಯ | ತಾಪಮಾನ ಏರಿಕೆಗೆ ಬದುಕಿನ ಬೆಲೆ ತೆರುವವರು ಯಾರು?

Date:

ಭೂಮಿಗೆ ನಮ್ಮ ಅಗತ್ಯವಿಲ್ಲ, ನಮಗೆ ಭೂಮಿಯ ಅಗತ್ಯವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ತಾಪಮಾನ ಏರಿಕೆಯ ಜಗತ್ತಿನಲ್ಲಿ ನಮಗೆ ಬೇಕಾಗಿರುವುದು ಕೇವಲ ಹೊಸ ತಂತ್ರಜ್ಞಾನಗಳಲ್ಲ. ಹೊಸ ರಾಜಕೀಯ ದೃಷ್ಟಿಕೋನ ಎಂಬುದನ್ನು ಅರಿಯಬೇಕು. ಪ್ರಕೃತಿಯ ಮೇಲೆ ಅಧಿಕಾರ ಸಾಧಿಸುವ ಮನೋಭಾವದಿಂದ ಹೊರಬಂದು, ಪ್ರಕೃತಿಯೊಂದಿಗೆ ಬದುಕುವ ಮಾರ್ಗವನ್ನು ಕಲಿಯಬೇಕು.

ಭೂಮಿಯ ಸರಾಸರಿ ತಾಪಮಾನ ಏರಿಕೆಯನ್ನು 1.5 ಡಿಗ್ರಿ ಸೆಲ್ಸಿಯಸ್ ಒಳಗೆ ನಿಯಂತ್ರಿಸುವ ಪ್ಯಾರಿಸ್ ಹವಾಮಾನ ಒಪ್ಪಂದದ ಗುರಿ ಈಗ ಕೈತಪ್ಪುತ್ತಿದೆ. ತಾಪಮಾನ ನಿಯಂತ್ರಣದ ಜಾಗತಿಕ ಕನಸು ಬಹುತೇಕ ಕೈಜಾರಿದೆ ಎಂದು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (UNEP) ಇತ್ತೀಚಿನ ‘Limiting Overshoot’ ವರದಿ ಎಚ್ಚರಿಸಿದೆ. ಕಳೆದ ಕೆಲವು ವರ್ಷಗಳಲ್ಲಿ ಜಾಗತಿಕ ತಾಪಮಾನವು ಅಪಾಯದ ಗಡಿ ದಾಟಿರುವುದು, ಮಾನವಕುಲ ಈಗ ಹವಾಮಾನ ಬದಲಾವಣೆಯ ಹೊಸ ಮತ್ತು ಅನಿಶ್ಚಿತ ಹಂತಕ್ಕೆ ಪ್ರವೇಶಿಸಿರುವುದರ ಸಂಕೇತವಾಗಿದೆ.

- Advertisement -

ತಾಪಮಾನ ನಿಯಂತ್ರಣದಲ್ಲಿ 1.5 ಡಿಗ್ರಿ ಎಂಬುದು ಕೇವಲ ವಿಜ್ಞಾನಿಗಳ ಲೆಕ್ಕಾಚಾರವಲ್ಲ; ಅದು ಲಕ್ಷಾಂತರ ಜನರ ಬದುಕು, ಕೃಷಿ, ನೀರು, ಆರೋಗ್ಯ ಮತ್ತು ಭವಿಷ್ಯದ ಭದ್ರತೆಯ ಗಡಿ. ಕೆಲವು ವರ್ಷಗಳ ಹಿಂದೆ ಹವಾಮಾನ ಬದಲಾವಣೆಯನ್ನು ಭವಿಷ್ಯದ ಸಮಸ್ಯೆ ಎಂದು ಹೇಳಲಾಗುತ್ತಿತ್ತು. ಆದರೆ, ಈಗ ಅದು ವರ್ತಮಾನದ ಸಂಕಟವಾಗಿದೆ. ಯುರೋಪ್, ಅಮೆರಿಕ, ಆಸ್ಟ್ರೇಲಿಯಾದಲ್ಲಿ ಉಂಟಾಗುತ್ತಿರುವ ತೀವ್ರ ಉಷ್ಣ ಅಲೆಗಳು, ಏಷ್ಯಾದಲ್ಲಿ ಸಂಭವಿಸುತ್ತಿರುವ ಅತಿವೃಷ್ಟಿ ಮತ್ತು ಪ್ರವಾಹಗಳು, ಹಿಮಾಲಯ ಪ್ರದೇಶದಲ್ಲಿ ಹೆಚ್ಚುತ್ತಿರುವ ಹಠಾತ್ ಪ್ರವಾಹಗಳು- ಇವೆಲ್ಲವೂ ಹವಾಮಾನ ಬದಲಾವಣೆಯ ಪರಿಣಾಮಗಳು ದೂರದ ಭವಿಷ್ಯದಲ್ಲಿಲ್ಲ. ನಮ್ಮ ಕಣ್ಣೆದುರೇ ಇವೆ ಎಂಬುದನ್ನು ತೋರಿಸುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

ಪ್ರಶ್ನೆ ಈಗ ‘ಭೂಮಿ ಬಿಸಿಯಾಗುತ್ತದೆಯೇ?’ ಎಂಬುದಲ್ಲ. ಅದು ಈಗಾಗಲೇ ಬಿಸಿಯಾಗಿದೆ. ಅಂದರೆ, ಈಗಿರುವ ಪ್ರಶ್ನೆ ‘ಈ ಬಿಸಿಯಾಗುತ್ತಿರುವ ಜಗತ್ತಿನಲ್ಲಿ ಯಾರು ಸುರಕ್ಷಿತವಾಗಿರುತ್ತಾರೆ ಮತ್ತು ಯಾರು ಅದಕ್ಕೆ ಬೆಲೆ ತೆರುತ್ತಾರೆ?’ ಎಂಬುದಷ್ಟೇ…

ಇದನ್ನು ಓದಿದ್ದೀರಾ?: ದಿ ಗ್ರೇಟ್ ಹಿಮಾಲಯನ್ ಚಾಲೆಂಜ್: ಹಿಮಪರ್ವತಗಳ ಎಚ್ಚರಿಕೆ ಗಂಟೆ—ಆಲಿಸಿದರೆ ಉಳಿವು, ಕಿವುಡರಾದರೆ ಅಳಿವು!

ತಾಪಮಾನ ಏರಿಕೆಯ ಬಗ್ಗೆ ಚರ್ಚಿಸುವಾಗ ಸಾಮಾನ್ಯವಾಗಿ ಕಾರ್ಬನ್ ಹೊರಸೂಸುವಿಕೆ, ಕೈಗಾರಿಕೆಗಳು, ಇಂಧನ ಬಳಕೆ ಹಾಗೂ ತಂತ್ರಜ್ಞಾನಗಳ ಬಗ್ಗೆ ಮಾತನಾಡುತ್ತೇವೆ. ಆದರೆ, ಹವಾಮಾನ ಬದಲಾವಣೆಯ ಹೊಡೆತ ಯಾರ ಮೇಲೆ ಬೀಳುತ್ತದೆ ಎಂಬುದರ ಬಗ್ಗೆ ತೀರಾ ಕಡಿಮೆ ಚರ್ಚೆಗಳನ್ನು ಮಾಡುತ್ತೇವೆ. ಯಾಕೆಂದರೆ, ಹವಾಮಾನ ಬದಲಾವಣೆಯ ಹೊಡೆತ ಬೀಳುವುದು ತಾಪಮಾನ ಏರಿಕೆಗೆ ಅತೀ ಕಡಿಮೆ ಕೊಡುಗೆ ನೀಡಿದ ಜನರ ಮೇಲೆ. ಆ ಜನರು ಜಗತ್ತಿಗೆ, ಆಳುವವರಿಗೆ ಮುಖ್ಯವೇ ಅಲ್ಲ!

ಪ್ರಸ್ತುತ ಸಂದರ್ಭದಲ್ಲಿ; ಒಂದೆಡೆ, ಸಣ್ಣ ರೈತರು ತಮ್ಮ ಹೊಲದಲ್ಲಿ ಮಳೆಯ ನಿರೀಕ್ಷೆಯಲ್ಲಿ ಕುಳಿತಿದ್ದಾರೆ. ಮಳೆಗಾಗಿ ಪಾರ್ಥಿಸುತ್ತಿದ್ದಾರೆ. ಅವರೆಲ್ಲರೂ ಬರದ ಕರಿನೆರಳಿಗೆ ಸಿಲುಕಿದ್ದಾರೆ. ಮತ್ತೊಂದೆಡೆ, ಅತಿವೃಷ್ಟಿಯ ಅಬ್ಬರ ಹೆಚ್ಚಾಗಿದೆ. ಬೆಳೆ, ಭೂಮಿ, ಮನೆಗಳು ಕೊಚ್ಚಿಹೋಗುತ್ತಿವೆ. ಈ ಪರಿಸ್ಥಿತಿಯಲ್ಲಿ ಬೆಳೆ ಬೆಳೆಯುವ ಕಾಲದ ಲೆಕ್ಕಾಚಾರವೇ ಬದಲಾಗುತ್ತಿದೆ. ಸಾವಿರಾರು ವರ್ಷಗಳಿಂದ ಪ್ರಕೃತಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಬಂದ ಕೃಷಿ ಜ್ಞಾನ ಈಗ ಅನಿಶ್ಚಿತ ಹವಾಮಾನದ ಮುಂದೆ ಅಸಹಾಯಕವಾಗಿ ನಿಂತಿದೆ.

ನಗರಗಳಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಕಾಂಕ್ರೀಟ್ ಕಾಡುಗಳಾಗಿ ಬದಲಾಗುತ್ತಿರುವ ನಗರಗಳು ‘ಹೀಟ್ ಐಲ್ಯಾಂಡ್’ಗಳಾಗುತ್ತಿವೆ. ಮರಗಳನ್ನು ಕತ್ತರಿಸಿ, ಕೆರೆಗಳನ್ನು ಮುಚ್ಚಿ, ಗಾಳಿಯ ಹರಿವನ್ನು ತಡೆದು ನಿರ್ಮಿಸಿದ ನಗರಗಳಲ್ಲಿ ಬಡವರು ಹೆಚ್ಚು ಬಿಸಿಲನ್ನು ಅನುಭವಿಸುತ್ತಿದ್ದಾರೆ.

ಹವಾನಿಯಂತ್ರಣ ಹೊಂದಿರುವವರು ಮನೆಯೊಳಗೆ ತಮ್ಮನ್ನು ರಕ್ಷಿಸಿಕೊಳ್ಳಬಹುದು. ಆದರೆ, ರಸ್ತೆ ಬದಿಯಲ್ಲಿ ಕೆಲಸ ಮಾಡುವ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀದಿ ವ್ಯಾಪಾರಿಗಳು ಅಥವಾ ರೈತರಿಗೆ ಬಿಸಿಲಿನಿಂದ ತಪ್ಪಿಸಿಕೊಳ್ಳುವ ಅವಕಾಶ ಎಲ್ಲಿದೆ?

ಅತಿ ಕಡಿಮೆ ಮಾಲಿನ್ಯ ಸೃಷ್ಟಿಸುವವರು ಅತಿ ಹೆಚ್ಚು ಪರಿಣಾಮ ಅನುಭವಿಸುತ್ತಿದ್ದಾರೆ- ಇದು ಹವಾಮಾನ ಬದಲಾವಣೆಯ ದೊಡ್ಡ ವ್ಯಂಗ್ಯ!

ಪ್ರಸ್ತುತ, ಜಾಗತಿಕ ತಾಪಮಾನವು ಸರಾಸರಿ 17° ಇದೆ. ಭಾರತದಲ್ಲಿನ ಸರಾಸರಿ ತಾಪಮಾನ 25° ಸುತ್ತಮುತ್ತ ಇದೆ. ಜಾಗತಿಕ ತಾಪಮಾನವು ಕಳೆದ ದಶಕಕ್ಕೆ ಹೋಲಿಸಿದರೆ 1.5 ಡಿಗ್ರಿಗಿಂತ ಹೆಚ್ಚಾಗಿದೆ. ಸುಮಾರು 2-3°ರಷ್ಟು ಏರಿಕೆಯಾಗಿರುವ ಅನುಭವವಾಗುತ್ತಿದೆ. ಈ ಸ್ಥಿತಿಯಲ್ಲಿ ತಾಪಮಾನ ನಿಯಂತ್ರಣಕ್ಕಾಗಿನ ಹೋರಾಟವನ್ನು ನಿಲ್ಲಿಸಲು ಸಾಧ್ಯವಿಲ್ಲ. ತಾಪಮಾನ ಏರಿಕೆಯನ್ನು ಎಷ್ಟು ಕಡಿಮೆ ಮತ್ತು ಎಷ್ಟು ಕಡಿಮೆ ಅವಧಿಗೆ ಮಿತಿಗೊಳಿಸಬಹುದು ಎಂಬುದೇ ಈಗಿನ ಗುರಿಯಾಗಬೇಕು. ಇದನ್ನು ವಿಶ್ವಸಂಸ್ಥೆ ಕೂಡ ಹೇಳಿದೆ.

ಪ್ರತಿ ಒಂದು ಡಿಗ್ರಿಯ ಹೆಚ್ಚಳವೂ ಅಪಾಯವನ್ನು ಹೆಚ್ಚಿಸುತ್ತದೆ. ಹಿಮನದಿಗಳು ವೇಗವಾಗಿ ಕರಗುತ್ತವೆ. ಸಮುದ್ರ ಮಟ್ಟ ಏರುತ್ತದೆ. ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರ ಬದುಕು ಅಸ್ಥಿರವಾಗುತ್ತದೆ. ನೀರಿನ ಮೂಲಗಳು ಬದಲಾಗುತ್ತವೆ. ಕೆಲವು ಪ್ರದೇಶಗಳಲ್ಲಿ ಮಳೆ ಹೆಚ್ಚಾದರೆ, ಇನ್ನೂ ಕೆಲವು ಪ್ರದೇಶಗಳು ಬರದಿಂದ ನರಳುತ್ತವೆ.

ಹಿಮಾಲಯದ ಹಿಮನದಿಗಳ ಕರಗುವಿಕೆ, ಅಮೆಜಾನ್ ಕಾಡುಗಳ ನಾಶ, ಸಮುದ್ರದ ಜೀವವೈವಿಧ್ಯದ ಕುಸಿತ- ಇವೆಲ್ಲವೂ ಭೂಮಿಯ ಸಮತೋಲನಕ್ಕೆ ದೊಡ್ಡ ಸವಾಲುಗಳಾಗಿವೆ. ಹವಾಮಾನ ವಿಜ್ಞಾನಿಗಳು ‘ಟಿಪ್ಪಿಂಗ್ ಪಾಯಿಂಟ್’ಗಳ (ನಿರ್ಣಾಯಕ ತಿರುವು) ಬಗ್ಗೆ ಎಚ್ಚರಿಸುತ್ತಿದ್ದಾರೆ. ಪ್ರಕೃತಿ ವ್ಯವಸ್ಥೆಗಳು ಒಂದು ನಿರ್ದಿಷ್ಟ ಮಿತಿಯನ್ನು ದಾಟಿದ ನಂತರ ಹಿಂದಕ್ಕೆ ತಿರುಗಿಸಲಾಗದ ಸ್ಥಿತಿಗೆ ಹೋಗಬಹುದು ಎಂಬುದು ಅವರ ಕಳವಳ.

ಹವಾಮಾನ ಬದಲಾವಣೆಯ ಚರ್ಚೆಯಲ್ಲಿ ನಾವು ಒಂದು ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕು. ಅದು; ಇಂದಿನ ಅಭಿವೃದ್ಧಿಯ ಮಾದರಿ ಯಾರಿಗಾಗಿ?

ಒಂದು ನಗರದಲ್ಲಿ ಹೊಸ ರಸ್ತೆ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯಲಾಗುತ್ತದೆ. ಹೊಸ ಕಟ್ಟಡಗಳಿಗಾಗಿ ಕೆರೆಗಳನ್ನು ಮುಚ್ಚಲಾಗುತ್ತದೆ. ಹೆಚ್ಚಿನ ಉತ್ಪಾದನೆಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಅತಿಯಾಗಿ ಬಳಸಲಾಗುತ್ತದೆ. ಇವೆಲ್ಲವೂ ಆರ್ಥಿಕ ಬೆಳವಣಿಗೆಯ ಸಂಕೇತಗಳಾಗಿ ಕಾಣಬಹುದು. ಆದರೆ, ಅದರ ಪರಿಣಾಮವಾಗಿ ಉಂಟಾಗುವ ಉಷ್ಣತೆ, ಪ್ರವಾಹ, ನೀರಿನ ಕೊರತೆ ಹಾಗೂ ಆರೋಗ್ಯ ಸಮಸ್ಯೆಗಳ ಹೊರೆ ಯಾರ ಮೇಲೆ ಬೀಳುತ್ತದೆ?

ಪ್ರಕೃತಿಯ ನಾಶದ ಲಾಭ ಕೆಲವರಿಗೆ ಸಿಗುತ್ತದೆ. ಆದರೆ, ಅದರ ನಷ್ಟವನ್ನು ಸಮಾಜದ ಎಲ್ಲರೂ ಹೊರುತ್ತಾರೆ. ನೇಪಾಳದಂತಹ ದೇಶಗಳು ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ದೊಡ್ಡ ಬೆಲೆ ಕಟ್ಟುತ್ತಿವೆ. ಆದರೆ, ಜಾಗತಿಕ ತಾಪಮಾನ ಏರಿಕೆಗೆ ಅವುಗಳ ಕೊಡುಗೆ ಅತ್ಯಂತ ಕಡಿಮೆ.

ಆದ್ದರಿಂದಲೇ, ‘ಹವಾಮಾನ ನ್ಯಾಯ’ ಎಂಬ ಪರಿಕಲ್ಪನೆ ಮಹತ್ವ ಪಡೆಯುತ್ತದೆ. ಕೈಗಾರಿಕಾ ಕ್ರಾಂತಿಯ ನಂತರ ಹೆಚ್ಚು ಪ್ರಮಾಣದಲ್ಲಿ ಕಾರ್ಬನ್ ಹೊರಸೂಸಿದ ಶ್ರೀಮಂತ ರಾಷ್ಟ್ರಗಳು ಹೆಚ್ಚು ಜವಾಬ್ದಾರಿ ಹೊರುವ ಅಗತ್ಯವಿದೆ ಎಂಬುದು ಅಭಿವೃದ್ಧಿಶೀಲ ರಾಷ್ಟ್ರಗಳು ವಾದಿಸುತ್ತಿವೆ.

2022ರಲ್ಲಿ ಸ್ಥಾಪಿಸಲಾದ ‘ನಷ್ಟ ಮತ್ತು ಹಾನಿ ಪರಿಹಾರ ನಿಧಿ’ ಹವಾಮಾನ ವಿಪತ್ತುಗಳಿಂದ ಹಾನಿಗೊಳಗಾದ ದೇಶಗಳಿಗೆ ನೆರವು ನೀಡುವ ಉದ್ದೇಶ ಹೊಂದಿದೆ. ಆದರೆ, ಅದರಲ್ಲಿರುವ ಹಣ ಮತ್ತು ಅಗತ್ಯವಿರುವ ನೆರವಿನ ನಡುವಿನ ಅಂತರ ದೊಡ್ಡದಾಗಿದೆ. ಕಳೆದೊಂದು ವಾರದಿಂದ ಹಿಮ ಕುಸಿತ ಮತ್ತು ಪ್ರವಾಹಕ್ಕೆ ತುತ್ತಾಗಿರುವ ನೇಪಾಳದ ಪುನರ್ನಿರ್ಮಾಣಕ್ಕೆ ಸುಮಾರು 400ರಿಂದ 500 ಕೋಟಿ ಡಾಲರ್‌ ಹಣಬೇಕೆಂದು ಅಂದಾಜಿಸಲಾಗಿದೆ. ಆದರೆ, ಪರಿಹಾರ ನಿಧಿಯಲ್ಲಿ ಲಭ್ಯವಿರುವುದು ಕೇವಲ 35 ಕೋಟಿ ಡಾಲರ್‌ಗಳು ಮಾತ್ರ. ಪರಿಹಾರ ನಿಧಿಯಲ್ಲಿ ನೇಪಾಳಕ್ಕೆ ಬೇಕಿರುವ 10% ಹಣವೂ ಇಲ್ಲ. ಇದು ಇಂದಿನ ಜಾಗತಿಕ ತಾಪಮಾನ, ಅದರಿಂದಾಗುತ್ತಿರುವ ಪರಿಣಾಮ ಹಾಗೂ ಪರಿಹಾರದ ನಡುವಿನ ಆತಂಕವನ್ನು ಎತ್ತಿ ತೋರುತ್ತದೆ.

ತಾಪಮಾನ ಏರಿಕೆಯನ್ನು ತಡೆಯಲು ತಂತ್ರಜ್ಞಾನ ಬಳಸಲು ಜಗತ್ತು ಎದುರು ನೋಡುತ್ತಿದೆ. ಅದಕ್ಕಾಗಿ, ಕಾರ್ಬನ್ ಸೆರೆಹಿಡಿಯುವ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ಹಸಿರು ತಂತ್ರಜ್ಞಾನವನ್ನು ಬಳಸುತ್ತಿದೆ. ಇವೆಲ್ಲವೂ ಅಗತ್ಯವೂ ಕೂಡ. ಆದರೆ, ತಂತ್ರಜ್ಞಾನ ಮಾತ್ರ ಈ ಸಮಸ್ಯೆಗೆ ಪರಿಹಾರ ನೀಡಲು ಸಾಧ್ಯವಿಲ್ಲ.

ಮುಖ್ಯವಾಗಿ, ಪ್ರಕೃತಿಯನ್ನು ಕೇವಲ ಸಂಪನ್ಮೂಲ ಎಂದು ನೋಡುವ ದೃಷ್ಟಿಕೋನ ಬದಲಾಗಬೇಕು. ಕಾಡುಗಳು ಕೇವಲ ಮರಗಳಲ್ಲ. ಅವು ನೀರಿನ ಮೂಲಗಳು. ನದಿಗಳು ಕೇವಲ ನೀರಿನ ಹರಿವುಗಳಲ್ಲ. ಅವು ನಾಗರಿಕತೆಗಳ ಜೀವನಾಡಿಗಳು. ಕೃಷಿ ಕೇವಲ ಆರ್ಥಿಕ ಚಟುವಟಿಕೆಯಲ್ಲ. ಅದು ಆಹಾರದ ಭದ್ರತೆ.

ಇದನ್ನೂ ಓದಿ: ‘ಚಹಾ ವಿರಾಮ ಜೀವ ಉಳಿಸಿತು’: ನೇಪಾಳ ಪ್ರವಾಹದಿಂದ ಪಾರಾಗಿ ಬೆಂಗಳೂರಿಗೆ ಮರಳಿದ 54 ಕನ್ನಡಿಗರು

ಇದೆಲ್ಲವನ್ನೂ ಅರ್ಥ ಮಾಡಿಕೊಂಡರೆ, ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟ ಕೇವಲ ಕಾರ್ಬನ್ ಕಡಿಮೆ ಮಾಡುವ ಹೋರಾಟವಲ್ಲ ಎಂಬುದು ಅರ್ಥವಾಗುತ್ತದೆ.

ಈಗ, ತಾಪಮಾನದಲ್ಲಿನ ಏರಿಕೆಯು 1.5 ಡಿಗ್ರಿಗಿಂತ ಹೆಚ್ಚು ಏರಿಕೆ ಕಂಡಿದೆ. ಈಗಲೂ ಮನುಕುಲಕ್ಕೆ ಎಚ್ಚೆತ್ತುಕೊಳ್ಳುವ ಆಯ್ಕೆಗಳಿವೆ. ಹಾನಿಯನ್ನು ಕಡಿಮೆ ಮಾಡುವುದು, ದುರ್ಬಲರನ್ನು ರಕ್ಷಿಸುವುದು ಹಾಗೂ ಹವಾಮಾನ ನ್ಯಾಯವನ್ನು ಅಭಿವೃದ್ಧಿಯ ಕೇಂದ್ರವಾಗಿಸಬೇಕಿದೆ.

ಜೊತೆಗೆ, ಭೂಮಿಗೆ ನಮ್ಮ ಅಗತ್ಯವಿಲ್ಲ. ಆದರೆ ನಮಗೆ ಭೂಮಿಯ ಅಗತ್ಯವಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ತಾಪಮಾನ ಏರಿಕೆಯ ಜಗತ್ತಿನಲ್ಲಿ ನಮಗೆ ಬೇಕಾಗಿರುವುದು ಕೇವಲ ಹೊಸ ತಂತ್ರಜ್ಞಾನಗಳಲ್ಲ. ಹೊಸ ರಾಜಕೀಯ ದೃಷ್ಟಿಕೋನ ಎಂಬುದನ್ನು ಅರಿಯಬೇಕು. ಪ್ರಕೃತಿಯ ಮೇಲೆ ಅಧಿಕಾರ ಸಾಧಿಸುವ ಮನೋಭಾವದಿಂದ ಹೊರಬಂದು, ಪ್ರಕೃತಿಯೊಂದಿಗೆ ಬದುಕುವ ಮಾರ್ಗವನ್ನು ಕಲಿಯಬೇಕು.

ಇಲ್ಲದಿದ್ದರೆ, ಭವಿಷ್ಯದ ಇತಿಹಾಸದಲ್ಲಿ ಹವಾಮಾನ ಬದಲಾವಣೆ ಕೇವಲ ಪ್ರಕೃತಿಯ ದುರಂತವಾಗಿ ದಾಖಲಾಗುವುದಿಲ್ಲ. ಅದು ಮಾನವ ಸಮಾಜವು ತನ್ನದೇ ಎಚ್ಚರಿಕೆಗಳ ಹೊರತಾಗಿಯೂ ತನ್ನದೇ ಕೃತ್ಯಗಳಿಂದ ನಾಶವಾದ ಕಥೆಯಾಗಿ ದಾಖಲಾಗುತ್ತದೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾತ್ರೋರಾತ್ರಿ ತುರ್ತು ವಿಚಾರಣೆ ಕೋರಿ ದೆಹಲಿ ಹೈಕೋರ್ಟ್ ಮೊರೆಹೋದ ಸಿಜೆಪಿ ನಾಯಕರು

ತಮ್ಮ ನ್ಯಾಯಾಂಗ ಬಂಧನ ವಿಸ್ತರಣೆಯನ್ನು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ)...

ಹೊರದೇಶಗಳ ದೊಂಬಿಯನ್ನು ಭಾರತದ ಯುವ ಹೋರಾಟಕ್ಕೆ ಸಮೀಕರಿಸುತ್ತಿರುವ ʼಮಡಿಲ ಮಾಧ್ಯಮʼಗಳು; ಇದೇನಾ ಪತ್ರಿಕೋದ್ಯಮ?

ಹೊರದೇಶಗಳ ಬೀದಿಗಳಲ್ಲಿ ನಡೆಯುವ ದೊಂಬಿ, ಲೂಟಿಗೂ, ಭಾರತದ ಯುವಕರು ಸಂವಿಧಾನದತ್ತ ಹಕ್ಕಿಗಾಗಿ...

ಪ್ರಧಾನಿ ಮೋದಿ ಜೊತೆ ನಾಳೆ ಖರ್ಗೆ ಸಭೆ: ಎಸ್‌ಐಆರ್, ಕ್ಷೇತ್ರ ಪುನರ್‌ವಿಂಗಡಣೆ, ಮಹಿಳಾ ಮೀಸಲಾತಿ ಕುರಿತು ಚರ್ಚೆ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್), ಕ್ಷೇತ್ರ ಮರುವಿಂಗಡಣೆ ಮತ್ತು...

ಏಷ್ಯನ್ ಪ್ಯಾರಾ ಗೇಮ್ಸ್: ಮಹಿಳೆಯರ 200 ಮೀಟರ್ಸ್ ಓಟದಲ್ಲಿ ಸಿಮ್ರಾನ್‌ಗೆ ಚಿನ್ನ, ತೇಜಲ್‌ಬೆನ್‌ಗೆ ಕಂಚು

ಮಂಗಳವಾರ ಜಪಾನಿನ ನಗೋಯಾದಲ್ಲಿ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನ ಮಹಿಳೆಯರ 200...