ದಿ ಗ್ರೇಟ್ ಹಿಮಾಲಯನ್ ಚಾಲೆಂಜ್: ಹಿಮಪರ್ವತಗಳ ಎಚ್ಚರಿಕೆ ಗಂಟೆ—ಆಲಿಸಿದರೆ ಉಳಿವು, ಕಿವುಡರಾದರೆ ಅಳಿವು!

Date:

ನೇಪಾಳದಲ್ಲಿ ನಡೆದ ಈ ದುರಂತವು ಕೇವಲ ಆ ದೇಶಕ್ಕಷ್ಟೇ ಸೀಮಿತವಾದ ಬಿಕ್ಕಟ್ಟಲ್ಲ. ಹಿಮಾಲಯದ ಮಡಿಲಲ್ಲಿರುವ ಭಾರತದ ಉತ್ತರಾಖಂಡ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಈಶಾನ್ಯ ರಾಜ್ಯಗಳಿಗೂ ಇದು ನೇರ ಎಚ್ಚರಿಕೆಯ ಕರೆಗಂಟೆ. ಗಂಗಾ, ಯಮುನಾ, ಸಿಂಧೂ ಮತ್ತು ಬ್ರಹ್ಮಪುತ್ರ ನದಿಗಳ ಮೂಲಕ ಶತಕೋಟಿ ಜನರಿಗೆ ನೀರು ನೀಡುವ ಹಿಮಾಲಯದ ಸ್ಥಿರತೆ ತಪ್ಪಿದರೆ, ಇಡೀ ದಕ್ಷಿಣ ಏಷ್ಯಾದಲ್ಲಿ ಕುಡಿಯುವ ನೀರು ಮತ್ತು ಆಹಾರ ಭದ್ರತೆಯ ತೀವ್ರ ಅಭಾವ ಎದುರಾಗಲಿದೆ.

ದಕ್ಷಿಣ ಏಷ್ಯಾದ ಪ್ರಮುಖ ಜೀವನಾಡಿ ಮತ್ತು ಶತಕೋಟಿ ಜನರ ತೃಷೆಯನ್ನು ತಣಿಸುವ ವಿಶಾಲ ಹಿಮಭಂಡಾರ ಹಿಮಾಲಯ ಪರ್ವತ ಶ್ರೇಣಿಗಳು. ಪ್ರಕೃತಿಯ ಮಹೋನ್ನತ ಸೌಂದರ್ಯದ ಪ್ರತೀಕವಾದ ಈ ಹಿಮ ಪರ್ವತಗಳಿಂದು ಅತ್ಯಂತ ಕಠಿಣ ಪರಿಸರ ಬಿಕ್ಕಟ್ಟನ್ನು ಎದುರಿಸುತ್ತಿವೆ. ಕಳೆದ ಕೆಲವು ದಶಕಗಳಿಂದ ಮಾನವನ ಅತಿಯಾದ ಹಸ್ತಕ್ಷೇಪ, ಕೈಗಾರಿಕೀಕರಣ ಮತ್ತು ಜಾಗತಿಕ ತಾಪಮಾನದ ಏರಿಕೆಯ ಪರಿಣಾಮ ಒಂದಾದ ಮೇಲೆ ಒಂದರಂತೆ ಜಗತ್ತಿಗೆ ತಟ್ಟುತ್ತಿದೆ. ಈ ಸೂಕ್ಷ್ಮ ಹಿಮಾಲಯ ಪರಿಸರ ವ್ಯವಸ್ಥೆಯ ಸಮತೋಲನ ಸಂಪೂರ್ಣವಾಗಿ ತಪ್ಪುತ್ತಿದೆ.

- Advertisement -

ಇತ್ತೀಚೆಗೆ ನೇಪಾಳದಲ್ಲಿ ಸಂಭವಿಸಿದ ಪ್ರಳಯಾಂತಕ ಮೇಘಸ್ಫೋಟ, ಹಿಮನದಿ ಕುಸಿತ, ಸರಣಿ ಭೂಕುಸಿತ ಮತ್ತು ಜಲಪ್ರಳಯವು ಕೇವಲ ಒಂದು ತಾತ್ಕಾಲಿಕ ನೈಸರ್ಗಿಕ ವಿಕೋಪವಾಗಿ ಉಳಿದಿಲ್ಲ. ಇದು ಇಡೀ ಮಾನವಕುಲಕ್ಕೆ ಹಿಮಾಲಯ ನೀಡುತ್ತಿರುವ ಗಂಭೀರ ಎಚ್ಚರಿಕೆಯ ಸಂಕೇತ ಎಂಬುದು ಸ್ಪಷ್ಟ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಇದನ್ನೂ ಓದಿ: ‘ಚಹಾ ವಿರಾಮ ಜೀವ ಉಳಿಸಿತು’: ನೇಪಾಳ ಪ್ರವಾಹದಿಂದ ಪಾರಾಗಿ ಬೆಂಗಳೂರಿಗೆ ಮರಳಿದ 54 ಕನ್ನಡಿಗರು

ಕಠ್ಮಂಡು ಕಣಿವೆ ಸೇರಿದಂತೆ ದಕ್ಷಿಣ ಮತ್ತು ಪೂರ್ವ ನೇಪಾಳದಾದ್ಯಂತ ಸುರಿದ ಭೀಕರ ಮಳೆಯು ಬಾಗ್‌ಮತಿ, ಕೋಸಿ ಮತ್ತು ಗಂಧಕಿ ನದಿಗಳನ್ನು ಕ್ಷಣಾರ್ಧದಲ್ಲಿ ರೌದ್ರಾವತಾರ ತಾಳುವಂತೆ ಮಾಡಿತು. ನೂರಾರು ಅಮಾಯಕ ಜೀವಿಗಳು ಜಲಸಮಾಧಿಯಾದವು, ಕೃಷಿ ಭೂಮಿ, ಸೇತುವೆಗಳು ಹಾಗೂ ಮೂಲಸೌಕರ್ಯಗಳು ನೀರಿನಲ್ಲಿ ಕೊಚ್ಚಿಹೋದವು. ಈ ದುರಂತವು ಪ್ರಕೃತಿಯ ವಿಕೋಪಕ್ಕಿಂತ ಹೆಚ್ಚಾಗಿ ಮಾನವನ ನಿರ್ಲಕ್ಷ್ಯದ ಫಲ ಎಂಬುದು ಕಟು ಸತ್ಯ.

ನೇಪಾಳದಲ್ಲಿ ಭೀಕರ ಪ್ರವಾಹಕ್ಕೆ ಈವರೆಗೆ ಕನಿಷ್ಠ 903 ಮಂದಿ ಪ್ರವಾಹಕ್ಕೆ ಬಲಿಯಾಗಿದ್ದಾರೆ. ನೆರೆಯ ಟಿಬೆಟ್ ಪ್ರಾಂತ್ಯದ 16 ಸಾವುಗಳನ್ನೂ ಒಳಗೊಂಡರೆ ಒಟ್ಟು ಮೃತರ ಸಂಖ್ಯೆ 919 ದಾಟಿದೆ. ನೇಪಾಳವೊಂದರಲ್ಲೇ 4,247 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಇವರಲ್ಲಿ 3,655 ನೇಪಾಳಿ ನಾಗರಿಕರು ಮತ್ತು ಸುಮಾರು 592 ವಿದೇಶಿ ಪ್ರವಾಸಿಗರಿದ್ದಾರೆ. ಭಾರತದ ವಿದೇಶಾಂಗ ಸಚಿವಾಲಯ ಮತ್ತು ನೇಪಾಳದ ಮೂಲಗಳ ಪ್ರಕಾರ, ಕನಿಷ್ಠ 288 ರಿಂದ 320 ಭಾರತೀಯ ಪ್ರಜೆಗಳು ಇನ್ನೂ ನಾಪತ್ತೆಯಾಗಿದ್ದಾರೆ ಅಥವಾ ಸಂಪರ್ಕಕ್ಕೇ ಸಿಗುತ್ತಿಲ್ಲ. ಇವರಲ್ಲಿ ಜಲವಿದ್ಯುತ್ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 73 ಕಾರ್ಮಿಕರು ಮತ್ತು ಕೈಲಾಶ ಮಾನಸಸರೋವರ ಯಾತ್ರೆ ಹಾಗೂ ಪ್ರವಾಸಕ್ಕೆ ತೆರಳಿದ್ದ ಪ್ರವಾಸಿಗರು ಸೇರಿದ್ದಾರೆ.

ನೇಪಾಳದ ಜಲಪ್ರಳಯದ ಹಿಂದು-ಮುಂದು

ಹಲವು ವರ್ಷಗಳ ಹಿಂದಿನಿಂದಲೇ ತಜ್ಞರು ಎಚ್ಚರಿಕೆ ನೀಡುತ್ತಿದ್ದಂತೆ ಈಗ ಸಂಭವಿಸುತ್ತಿದೆ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಮಾಲಯದ ಹಿಮನದಿಗಳು (Glaciers) ಹಿಂದೆಂದೂ ಇಲ್ಲದಷ್ಟು ವೇಗವಾಗಿ ಕರಗುತ್ತಿವೆ. ಇದರಿಂದಾಗಿ ಪರ್ವತಗಳ ಮೇಲ್ಭಾಗದಲ್ಲಿ ತಾತ್ಕಾಲಿಕ ಹಿಮಸರೋವರಗಳು ನಿರ್ಮಾಣಗೊಂಡಿದೆ. ಅವುಗಳು ನೈಸರ್ಗಿಕ ತಡೆಗೋಡೆಗಳನ್ನು ಒಡೆದುಕೊಂಡು ಒಮ್ಮೆಗೆ ಕೆಳಮುಖವಾಗಿ ಬೃಹತ್ ಪ್ರವಾಹವಾಗಿ ಅಪ್ಪಳಿಸುತ್ತಿವೆ. ಇದರ ಸದ್ದನ್ನು ನಾವು ಆಲಿಸಿ ಇನ್ನು ಮುಂದಾದರೂ ಎಚ್ಚೆತ್ತುಕೊಂಡರೆ ನಮ್ಮ ಉಳಿವು, ಕಿವುಡರಾದರೆ ಅಳಿವು!

ಇದನ್ನೂ ಓದಿ: ನೇಪಾಳ ಪ್ರವಾಹ | ಯುಪಿ ಗಡಿಯಲ್ಲಿ ವ್ಯಾಪಾರ ಸ್ಥಗಿತ; 16 ಕಿ.ಮೀ ಕ್ಯೂ ನಿಂತ ಸರಕು ಲಾರಿಗಳು!

ಇನ್ನೊಂದೆಡೆ ಹವಾಮಾನ ಬದಲಾವಣೆಯ ಪರಿಣಾಮವಾಗಿ ಮಾನ್ಸೂನ್ ಮಳೆಯ ಮಾದರಿ ಸಂಪೂರ್ಣ ಬದಲಾಗಿದೆ. ಸಾಧಾರಣವಾಗಿ ತಿಂಗಳುಗಳ ಕಾಲ ಹರಡಬೇಕಾದ ಮಳೆ, ಕೇವಲ ಕೆಲವೇ ಗಂಟೆಗಳಲ್ಲಿ ಮೇಘಸ್ಫೋಟದ ರೂಪದಲ್ಲಿ ಒಂದೇ ಪ್ರದೇಶಕ್ಕೆ ಸುರಿದು ಭೀಕರ ಪ್ರವಾಹವನ್ನು ಸೃಷ್ಟಿಸುತ್ತಿದೆ. ಇವೆಲ್ಲವುದರ ಜತೆಗೆ ಹಿಮಾಲಯದಂತಹ ಸೂಕ್ಷ್ಮ ವಲಯಗಳಲ್ಲಿ ರಸ್ತೆ ಅಗಲೀಕರಣ, ಸುರಂಗ ಮಾರ್ಗಗಳ ನಿರ್ಮಾಣ ಮತ್ತು ಬೃಹತ್ ಜಲವಿದ್ಯುತ್ ಯೋಜನೆಗಳಿಗಾಗಿ ಅತಿಯಾದ ಯಂತ್ರಗಳ ಬಳಕೆ ಪರ್ವತಗಳ ಆಂತರಿಕ ಸ್ಥಿರತೆಯನ್ನು ಸಂಪೂರ್ಣವಾಗಿ ಕುಗ್ಗಿಸಿದೆ. ಪರ್ವತಗಳ ಇಳಿಜಾರುಗಳಲ್ಲಿರುವ ಅರಣ್ಯ ಸಂಪತ್ತನ್ನು ನಾಶಪಡಿಸಿರುವುದರಿಂದ ಮಣ್ಣಿನ ಹಿಡಿತ ತಪ್ಪಿ, ಸಣ್ಣ ಮಳೆಗೂ ಬೃಹತ್ ಪ್ರಮಾಣದ ಭೂಕುಸಿತಗಳು ಸಂಭವಿಸುತ್ತಿವೆ.

ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಎಚ್ಚರಿಕೆಯ ಕರೆಗಂಟೆ

ನೇಪಾಳದಲ್ಲಿ ನಡೆದ ಈ ದುರಂತವು ಕೇವಲ ಆ ದೇಶಕ್ಕಷ್ಟೇ ಸೀಮಿತವಾದ ಬಿಕ್ಕಟ್ಟಲ್ಲ. ಹಿಮಾಲಯದ ಮಡಿಲಲ್ಲಿರುವ ಭಾರತದ ಉತ್ತರಾಖಂಡ, ಹಿಮಾಚಲ ಪ್ರದೇಶ, ಸಿಕ್ಕಿಂ ಮತ್ತು ಈಶಾನ್ಯ ರಾಜ್ಯಗಳಿಗೂ ಇದು ನೇರ ಎಚ್ಚರಿಕೆಯ ಕರೆಗಂಟೆ. ಗಂಗಾ, ಯಮುನಾ, ಸಿಂಧೂ ಮತ್ತು ಬ್ರಹ್ಮಪುತ್ರ ನದಿಗಳ ಮೂಲಕ ಶತಕೋಟಿ ಜನರಿಗೆ ನೀರು ನೀಡುವ ಹಿಮಾಲಯದ ಸ್ಥಿರತೆ ತಪ್ಪಿದರೆ, ಇಡೀ ದಕ್ಷಿಣ ಏಷ್ಯಾದಲ್ಲಿ ಕುಡಿಯುವ ನೀರು ಮತ್ತು ಆಹಾರ ಭದ್ರತೆಯ ತೀವ್ರ ಅಭಾವ ಎದುರಾಗಲಿದೆ.

ಈ ಸಂದರ್ಭದಲ್ಲಿ ಹಿಮಾಲಯದ ಪರಿಸರವನ್ನು ರಕ್ಷಿಸಲು ತಕ್ಷಣದ ಜಾಗತಿಕ ಮತ್ತು ಪ್ರಾದೇಶಿಕ ಕ್ರಮಗಳು ಅಗತ್ಯ. ಪರ್ವತ ಪ್ರದೇಶಗಳಲ್ಲಿ ಯಾವುದೇ ಅಭಿವೃದ್ಧಿ ಯೋಜನೆ ಕೈಗೊಳ್ಳುವ ಮೊದಲು ಕಟ್ಟುನಿಟ್ಟಾದ ‘ಪರಿಸರ ಪ್ರಭಾವ ಮೌಲ್ಯಮಾಪನ’ (EIA) ನಡೆಯಬೇಕಾಗಿದೆ. ಅದರೊಂದಿಗೆ ಹಿಮಸರೋವರಗಳ ಮಟ್ಟವನ್ನು ಉಪಗ್ರಹಗಳ ಮೂಲಕ ಸದಾ ನಿಗಾವಹಿಸಿ ಪ್ರವಾಹದ ಮುನ್ಸೂಚನೆ ನೀಡುವ ತಂತ್ರಜ್ಞಾನವನ್ನು ಬಲಪಡಿಸುವುದು ಅತ್ಯಗತ್ಯ. ಪ್ರಕೃತಿ ನೀಡುತ್ತಿರುವ ಈ ಎಚ್ಚರಿಕೆಯ ಗಂಟೆಯನ್ನು ಆಲಿಸಿ ಈಗಲೇ ಜಾಗೃತರಾದರೆ ಮಾತ್ರ ಜೀವ ಸಂಕುಲದ ಉಳಿವು ಸಾಧ್ಯ, ಇಲ್ಲದಿದ್ದರೆ ಅಳಿವು ನಿಶ್ಚಿತ.

WhatsApp Image 2025 11 17 at 4.20.34 PM
+ posts

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಮಯೂರಿ ಬೋಳಾರ್
ಮಯೂರಿ ಬೋಳಾರ್
ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್‌ ಸುದ್ದಿಗಳಲ್ಲಿ ಆಸಕ್ತಿ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ | ಅಂಕಿತಾ ಹತ್ಯೆ ಶಂಕಿತರಿಗೆ ಸಾಂವಿಧಾನಿಕ ಹುದ್ದೆ ಸರಿಯೇ?

ಅಂಕಿತಾ ಭಂಡಾರಿ ಕೊಲೆ ಪ್ರಕರಣದಲ್ಲಿದ್ದ ವಿಐಪಿ ದುಶ್ಯಂತ್‌ ಅವರ ಮೇಲಿನ...

‘ಮೋದಿಯನ್ನು ದೇವರನ್ನಾಗಿಸುವ ಯತ್ನ’: ಬಿಹಾರ ಸಿಎಂ ಹೇಳಿಕೆಗೆ ಪ್ರಶಾಂತ್ ಕಿಶೋರ್ ಕಿಡಿ

ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀರಾಮನಿಗೂ ಮನೆ ಒದಗಿಸಿದರು ಎಂಬ ಬಿಹಾರ...

ಬಾಗಲಕೋಟೆ | ಎಸ್‌ಐಆರ್ ಪ್ರಕ್ರಿಯೆ ಸ್ಥಗಿತಕ್ಕೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಜಾಗೊಳಿಸಿ, ಅವರ ವಿರುದ್ಧ ಕ್ರಿಮಿನಲ್...

ಬೆಳಗಾವಿ | ಚೂನಪ್ಪ ಪೂಜೇರಿ, ನಾನು ಸತ್ತರೂ ಒಂದೇ ಗೋರಿಯಲ್ಲಿ ಮಣ್ಣಾಗಬೇಕು: ಶಶಿಕಾಂತ ಗುರೂಜಿ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಹತ್ತರಗಿ...