ಬೋಧನಾ ಕೌಶಲ್ಯ ಕಾರ್ಯಗಾರ; ಕಣಜ ಯುವ ಸಂಶೋಧನಾ ಕೇಂದ್ರದಿಂದ ಅರ್ಜಿ ಆಹ್ವಾನ

Date:

Advertisements
  • ಮೇ 5ರಂದು ಒಂದು ದಿನದ ಕಾರ್ಯಗಾರ
  • ತಳಸಮುದಾಯಗಳ ಭಾಗಾರ್ಥಿಗಳಿಗೆ ಉಚಿತ

ಸರ್ಕಾರೇತರ ಸಂಸ್ಥೆ ‘ಸಂವಾದ’ದ ಭಾಗವಾಗಿರುವ ಕಣಜ ಯುವ ಸಂಶೋಧನಾ ಕೇಂದ್ರವು ಸಾಮಾಜಿಕ ನ್ಯಾಯದ ದೃಷ್ಟಿಕೋನದಲ್ಲಿ ‘ಬೋಧನಾ ಕೌಶಲ್ಯ’ ಕುರಿತು ಒಂದು ದಿನದ ಕಾರ್ಯಗಾರ ಹಮ್ಮಿಕೊಂಡಿದೆ.

ಟಿಇಎಸ್ಎಫ್ – ಐಐಎಚ್ಎಸ್ ಸಂಸ್ಥೆಯ ನೆರವಿನೊಂದಿಗೆ ಕೇಂದ್ರವು ಸಂಶೋಧನೆಯೊಂದನ್ನು ಮಾಡಿದೆ. ಅದಕ್ಕೆ ಸಂಬಂಧಿಸಿದಂತೆ ‘ಯುವಜನ ಕಾರ್ಯಕರ್ತರ ತರಬೇತಿ ಕೈಪಿಡಿ’ಯನ್ನು ಬಿಡುಗಡೆ ಮಾಡುವ ಉದ್ದೇಶದಿಂದ ಒಂದು ದಿನದ ‘ಫ್ಯಾಕಲ್ಟಿ ಡೆವಲಪ್ಮೆಂಟ್’ ಕಾರ್ಯಾಗಾರವನ್ನು ಆಯೋಜಿಸಿದೆ.

ಸಂವಾದ ಮತ್ತು ಹ್ಯುಮಾನಿಟೀಸ್ ಮತ್ತು ಸೋಶಿಯಲ್ ಸೈನ್ಸಸ್ ಡಿಪಾರ್ಟ್ ಮೆಂಟ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಹಯೋಗದಲ್ಲಿ ಕಾರ್ಯಾಗಾರ ನಡೆಯಲಿದೆ. ಮೇ 5ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮಣಿಪಾಲ್ ಯೂನಿವರ್ಸಿಟಿಯ ಯಲಹಂಕ ಕ್ಯಾಂಪಸ್‌ನಲ್ಲಿ ಕಾರ್ಯಗಾರ ನಡೆಯಲಿದೆ ಎಂದು ಕೇಂದ್ರವು ತಿಳಿಸಿದೆ.

Advertisements

ಯುವಜನರೊಟ್ಟಿಗೆ ಕೆಲಸ ಮಾಡುತ್ತಿರುವ ಸಂಸ್ಥೆಗಳ ಕಾರ್ಯಕರ್ತರು, ಬೋಧನಾ ಸಿಬ್ಬಂದಿ, ಸಂಶೋಧನಕಾರರು ಈ ಕಾರ್ಯಾಗಾರದಲ್ಲಿ ಭಾಗವಹಿಸಬಹುದು. ತಳಸಮುದಾಯಗಳ ಭಾಗಾರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ, ಉಚಿತ ಪ್ರವೇಶ ನೀಡಲಾಗುತ್ತದೆ ಎಂದು ಕೇಂದ್ರ ಹೇಳಿದೆ.

ಆಸಕ್ತರು https://forms.gle/xdBduXJsjUzSftmg7 ಈ ‘ಗೂಗಲ್ ಫಾರ್ಮ್’ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 9964601753, 9880620890 ಅಥವಾ kanajaresearchcell@samvadabaduku.org ಮೂಲಕ ಸಂಪರ್ಕಿಸಬಹುದು.

ಈ ಸುದ್ದಿ ಓದಿದ್ದೀರಾ? ಆಶ್ರಮಕ್ಕೆ ಬೆಂಕಿ ಪ್ರಕರಣ; ಆರ್‌ಎಸ್‌ಎಸ್‌ ಕಾರ್ಯಕರ್ತ, ಬಿಜೆಪಿ ನಾಯಕನ ಬಂಧನ

“ಕಣಜ ಯುವ ಸಂಶೋಧನಾ ಕೇಂದ್ರದಿಂದ ಮಾಡಲಾಗಿರುವ ಸಂಶೋಧನೆಗಳು ಯುವಜನರ ಸುತ್ತ ಸಾಕಷ್ಟು ಒಳನೋಟಗಳನ್ನು ನೀಡುವಂತಹ ಅಂಶಗಳನ್ನು ಒಳಗೊಂಡಿದೆ. ತಳಸಮುದಾಯಗಳ ಯುವಜನರ ಇವತ್ತಿನ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳಲು ಈ ಸಂಶೋಧನೆಗಳು ಸಹಕರಿಸುತ್ತವೆ” ಎಂದು ತಿಳಿಸಿದೆ.

ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ‘ಲೈಫ್ ಸ್ಕಿಲ್ಸ್’ ಸಂಶೋಧಕಿ ಡಾ. ಮೈತ್ರೇಯಿ ಆರ್, ಸಂವಾದದ ಸಂಸ್ಥಾಪಕಿ ಅನಿತಾ ರತ್ನಂ ಹಾಗೂ ಬೆಂಗಳೂರಿನ ಮಣಿಪಾಲ್ ಉನ್ನತ ಶಿಕ್ಷಣ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಭೋದಕಿ ಸುಮತಿ ನಾಗೇಶ್ ಅವರು ಭಾಗವಹಿಸಲಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಸರ್ಕಾರಿ ಶಾಲೆ ಮುಚ್ಚುವಿಕೆ ವಿರೋಧಿಸಿ ಎಐಡಿಎಸ್‍ಒ 50 ಲಕ್ಷ ಸಹಿ ಸಂಗ್ರಹ; ಮುಖ್ಯಮಂತ್ರಿಗಳಿಗೆ ಸಲ್ಲಿಕೆ

ಕರ್ನಾಟಕ ರಾಜ್ಯ ಸರ್ಕಾರವು 6,200 ಸರ್ಕಾರಿ ಶಾಲೆಗಳನ್ನು "ವಿಲೀನ"ಗೊಳಿಸುವ ಹೆಸರಿನಲ್ಲಿ ಮುಚ್ಚಲು...

ದಾವಣಗೆರೆ | ಸರ್ಕಾರಿ ಶಾಲೆ ಮಕ್ಕಳಿಗೆ ಸುಸಜ್ಜಿತ ವ್ಯವಸ್ಥೆ ಸಿಕ್ಕರೆ ಅತ್ಯುನ್ನತ ಸಾಧನೆ, ಸಾಮರ್ಥ್ಯ ಅನಾವರಣ

"ಖಾಸಗಿ ಶಾಲೆಗಳಲ್ಲಿ ಓದುವ ಮಕ್ಕಳಿಗಿಂತ ಸರ್ಕಾರಿ ಶಾಲೆಗಳ ಮಕ್ಕಳು ಯಾವುದರಲ್ಲಿಯೂ ಕಡಿಮೆ...

ದಾವಣಗೆರೆ | ಭಾರತದ ಗ್ರಂಥಾಲಯ ಪಿತಾಮಹ ರಂಗನಾಥ್ ಜನ್ಮದಿನ; ವಿವಿಯಲ್ಲಿ ಗ್ರಂಥಾಲಯ ಕಾರ್ಯಾಗಾರ

ಭಾರತದ ಗ್ರಂಥಾಲಯ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಅವರ 133ನೇ ಜನ್ಮದಿನದ ಅಂಗವಾಗಿ...

ರಾಜ್ಯ ಶಿಕ್ಷಣ ನೀತಿ ಆಯೋಗದಿಂದ ವರದಿ ಸಲ್ಲಿಕೆ, ದ್ವಿಭಾಷಾ ನೀತಿ ಅನುಷ್ಠಾನ ಸೇರಿ ಹಲವು ಶಿಫಾರಸು

ರಾಜ್ಯ ಶಿಕ್ಷಣ ನೀತಿ ಆಯೋಗವು ಶುಕ್ರವಾರ ರಾಜ್ಯ ಸರ್ಕಾರಕ್ಕೆ ತನ್ನ ಅಂತಿಮ...

Download Eedina App Android / iOS

X