ಮೀಡಿಯಾ ತೋರಿಸುತ್ತಿರುವುದೊಂದು, FIR ನಲ್ಲಿರುವುದು ಇನ್ನೊಂದು: ನಾಸಿಕ್‌ TCS ಕೇಸ್‌ನ ಅಸಲಿಯತ್ತೇನು?

Date:

ಈ ಇಡೀ ವಿವಾದದ ಕಿಡಿ ಹೊತ್ತಿಕೊಂಡಿದ್ದು ಇಬ್ಬರು ವ್ಯಕ್ತಿಗಳ ನಡುವಿನ ವೈಯಕ್ತಿಕ ಸಂಬಂಧ ಮತ್ತು ಹದಗೆಟ್ಟ ಸ್ನೇಹದಿಂದ. ಕಾಲೇಜು ಸ್ನೇಹಿತನಾಗಿದ್ದ ದಾನಿಷ್ ಶೇಖ್ ಎಂಬಾತ ತನಗೆ ಕೆಲಸ ಕೊಡಿಸಿದ್ದ ಮತ್ತು ನಂತರ ಇಬ್ಬರ ನಡುವೆ ಸಂಬಂಧವಿತ್ತು ಎಂದು ಸ್ವತಃ ದೂರುದಾರ ಮಹಿಳೆಯೇ ಒಪ್ಪಿಕೊಂಡಿದ್ದಾರೆ.

- Advertisement -

ವೈಯಕ್ತಿಕ ವಿವಾದಕ್ಕೆ ಧರ್ಮದ ಲೇಪನ ಮಾಡಿ ʼಕಾರ್ಪೊರೇಟ್ ಜಿಹಾದ್ʼ, ʼಬಲವಂತದ ಮತಾಂತರʼ ಎಂಬ ಗಂಭೀರ ಆರೋಪಗಳನ್ನು ಮಾಡಿ ಸಮಾಜವನ್ನು ದಿಕ್ಕುತಪ್ಪಿಸುವ ವ್ಯವಸ್ಥಿತ ಪ್ರಯತ್ನ ನಾಸಿಕ್‌ನ TCS ಘಟಕದ ಪ್ರಕರಣದಲ್ಲಿ ಬಯಲಾಗಿದೆ. ಟಿವಿ ಪರದೆಗಳ ಮೇಲೆ ಅಬ್ಬರಿಸುವ ‘ಜಿಹಾದ್’ ಕಥೆಗಳಿಗೂ, ಪೊಲೀಸ್ FIRನಲ್ಲಿ ದಾಖಲಾಗಿರುವ ಅಂಶಗಳಿಗೂ ಸಂಬಂಧವೇ ಇಲ್ಲ ಎಂಬುದನ್ನು ಕೆಲವು ಸತ್ಯ ಶೋಧ ವರದಿಗಳು ಬಯಲು ಮಾಡಿವೆ. ಸಮಾಜದಲ್ಲಿ ಕೋಮು ವಿಷಬೀಜ ಬಿತ್ತಲು ಮಾಧ್ಯಮಗಳು ಹೇಗೆ ಈ ಪ್ರಕರಣವನ್ನು ದಾಳವಾಗಿ ಬಳಸಿಕೊಳ್ಳುತ್ತಿವೆ ಎಂಬುದು ಸದ್ಯ ಸಾರ್ವಜನಿಕ ಚರ್ಚೆಯ ಕೇಂದ್ರಬಿಂದುವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ಮಹಾರಾಷ್ಟ್ರದ ನಾಸಿಕ್‌ನ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (TCS) ಘಟಕದಲ್ಲಿ ನಡೆದಿದೆ ಎನ್ನಲಾದ ಘಟನೆಗಳ ಸುತ್ತ ಇಂದು ದೇಶದಲ್ಲಿ ಸೃಷ್ಟಿಯಾಗಿರುವ ಚರ್ಚೆಗಳು, ಸತ್ಯಕ್ಕಿಂತಲೂ ಹೆಚ್ಚಾಗಿ ಸುಳ್ಳಿನ ಅಬ್ಬರಕ್ಕೆ ಹೇಗೆ ಬಲಿಯಾಗುತ್ತಿವೆ ಎಂಬುದನ್ನು ‘ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್’ (APCR) ತಂಡದ ಸತ್ಯಶೋಧನಾ ವರದಿಯು ತೆರೆದಿಟ್ಟಿದೆ. ಹಸಿಹಸಿ ಸುಳ್ಳುಗಳನ್ನು ಸತ್ಯವೆಂಬಂತೆ ಬಿಂಬಿಸುತ್ತಿರುವ ಶಕ್ತಿಗಳ ಅಸಲಿ ಮುಖವಾಡವನ್ನು ಈ ವರದಿಯ ಅಂಶಗಳು ಬಯಲುಗೊಳಿಸಿವೆ.

WhatsApp Image 2026 04 24 at 5.58.34 PM

ಏನಿದು ಪ್ರಕರಣ?

ಈ ಇಡೀ ವಿವಾದದ ಕಿಡಿ ಹೊತ್ತಿಕೊಂಡಿದ್ದು ಇಬ್ಬರು ವ್ಯಕ್ತಿಗಳ ನಡುವಿನ ವೈಯಕ್ತಿಕ ಸಂಬಂಧ ಮತ್ತು ಹದಗೆಟ್ಟ ಸ್ನೇಹದಿಂದ. ಕಾಲೇಜು ಸ್ನೇಹಿತನಾಗಿದ್ದ ದಾನಿಷ್ ಶೇಖ್ ಎಂಬಾತ ತನಗೆ ಕೆಲಸ ಕೊಡಿಸಿದ್ದ ಮತ್ತು ನಂತರ ಇಬ್ಬರ ನಡುವೆ ಸಂಬಂಧವಿತ್ತು ಎಂದು ಸ್ವತಃ ದೂರುದಾರ ಮಹಿಳೆಯೇ ಒಪ್ಪಿಕೊಂಡಿದ್ದಾರೆ. ಫೆಬ್ರವರಿ 2022ರಿಂದ ಮಾರ್ಚ್ 2026ರ ನಡುವೆ ನಡೆದಿದೆ ಎನ್ನಲಾದ ಈ ವೈಯಕ್ತಿಕ ವಿವಾದವು ನಂತರ ಅತ್ಯಾಚಾರದ ಆರೋಪದೊಂದಿಗೆ ಕ್ರಿಮಿನಲ್ ಪ್ರಕರಣವಾಗಿ ಮಾರ್ಪಟ್ಟಿತು. ಆದರೆ, ಮಾರ್ಚ್ 26ರಂದು ದಾಖಲಾದ ಮೊದಲ FIR ನಂತರದ ಕೆಲವೇ ದಿನಗಳಲ್ಲಿ ಸಾಲು ಸಾಲು ದೂರುಗಳು ದಾಖಲಾದ ವೇಗ ಮತ್ತು ಅವುಗಳಿಗೆ ನೀಡಲಾದ ಧಾರ್ಮಿಕ ಬಣ್ಣವು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ತನಿಖೆ ವಿಸ್ತಾರವಾಗುತ್ತಿದ್ದಂತೆ 7 ಮಹಿಳೆಯರು ಹಿರಿಯ ಸಹೋದ್ಯೋಗಿಗಳಿಂದ ಮಾನಸಿಕ ಮತ್ತು ಲೈಂಗಿಕ ಕಿರುಕುಳ ನಡೆದಿದೆ ಎಂದು ಪೊಲೀಸರ ಮುಂದೆ ದೂರಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಈವರೆಗೆ 7 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ದಾನಿಷ್ ಶೇಖ್, ತೌಸಿಫ್ ಅತ್ತರ್, ರಜಾ ರಫೀಕ್ ಮೆಮನ್, ಶಾರುಖ್ ಖುರೇಷಿ, ಶಫಿ ಶೇಖ್, ಆಸಿಫ್ ಅಫ್ತಾಬ್ ಅನ್ಸಾರಿ ಮಾತ್ರವಲ್ಲದೆ, ದೂರುಗಳನ್ನು ನಿರ್ಲಕ್ಷಿಸಿದ ಆರೋಪದ ಮೇಲೆ ಮಾನವ ಸಂಪನ್ಮೂಲ ಮುಖ್ಯಸ್ಥೆ (HR Head) ಅಶ್ವಿನಿ ಚೈನಾನಿ ಅವರನ್ನೂ ಬಂಧಿಸಲಾಗಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಬಂಧಿತರಲ್ಲಿ ಹಿಂದೂ ಮತ್ತು ಮುಸ್ಲಿಂ ಉಭಯ ಸಮುದಾಯದವರೂ ಇದ್ದಾರೆ. ಹೀಗಿದ್ದರೂ, ಮಾಧ್ಯಮಗಳು ಇದನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸಿ ‘ಜಿಹಾದ್’ ಬಣ್ಣ ಹಚ್ಚಲು ಪ್ರಯತ್ನಿಸುತ್ತಿವೆ ಎನ್ನಲಾಗುತ್ತಿದೆ.

ಬಲಪಂಥೀಯ ಒಲವುಳ್ಳ ಕೆಲವು ಮಾಧ್ಯಮಗಳು ನಿದಾ ಖಾನ್ ಎಂಬಾಕೆಯನ್ನು ಈ ‘ಜಿಹಾದ್’ನ ಮಾಸ್ಟರ್ ಮೈಂಡ್ ಮತ್ತು ಕಂಪನಿಯ HR ಮ್ಯಾನೇಜರ್ ಎಂದು ಬಣ್ಣಿಸಿ ಮಾನಸಿಕ ಚಿತ್ರಹಿಂಸೆ ನೀಡಿದವು. ಆದರೆ ಕಂಪನಿಯ ಅಧಿಕೃತ ಸ್ಪಷ್ಟೀಕರಣದ ಪ್ರಕಾರ, ನಿದಾ ಖಾನ್ ಅಂತಹ ಯಾವುದೇ ಅಧಿಕಾರಪೂರ್ಣ ಹುದ್ದೆಯಲ್ಲೇ ಇರಲಿಲ್ಲ ಮತ್ತು HR ಮುಖ್ಯಸ್ಥೆಯಾಗಿ ಕೆಲಸ ಮಾಡುತ್ತಿದ್ದವರು ಅಶ್ವಿನಿ ಚೈನಾನಿ. ತನಿಖಾ ಹಂತದಲ್ಲಿರುವ ವಿಷಯಗಳನ್ನು ಹಿಡಿದುಕೊಂಡು ನಿರ್ಣಾಯಕ ತೀರ್ಪುಗಳನ್ನು ನೀಡುತ್ತಿರುವ ಗೋದಿ ಮೀಡಿಯಾಗಳು, ಧಾರ್ಮಿಕ ಮತಾಂತರದ ಸಂಘಟಿತ ಪ್ರಯತ್ನಗಳಿಗೆ ಯಾವುದೇ ಸಾಕ್ಷ್ಯಗಳಿಲ್ಲದಿದ್ದರೂ ಸಾರ್ವಜನಿಕವಾಗಿ ವಿಷ ಕಾರುತ್ತಿವೆ.

image 2026 04 24T175924.458

ಜನತೆಯ ಕಣ್ಣಿಗೆ ಮಣ್ಣೆರಚುತ್ತಿರುವ ಈ ಶಕ್ತಿಗಳ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಕೆಲಸದ ಸ್ಥಳದಲ್ಲಿ ನಡೆಯುವ ಆಡಳಿತ ಮಂಡಳಿಯ ವೈಫಲ್ಯಗಳನ್ನು ‘ಕೋಮು ದಳ್ಳುರಿ’ಯಾಗಿ ಪರಿವರ್ತಿಸುವುದು. ಕಂಪನಿಯ ಒಳಗೆ ದೂರು ನಿವಾರಣಾ ವ್ಯವಸ್ಥೆಯ ಲೋಪಗಳಿದ್ದರೂ, ಅದನ್ನು ಸರಿಪಡಿಸುವ ಬದಲು ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದೆ.

ಯಾವ ಸಂಸ್ಥೆಯಲ್ಲೇ ಆಗಲಿ, ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ನಡೆದಿದೆ ಎಂದರೆ ಅದು ಇಡೀ ಸಮಾಜ ತಲೆತಗ್ಗಿಸಬೇಕಾದ ವಿಚಾರ. ಅಂತಹ ಅಪರಾಧ ಎಸಗಿದವರು ಯಾರೇ ಆಗಿರಲಿ, ಅವರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗಲೇಬೇಕು. ಅವ ಯಾವ ಅಧಿಕಾರದಲ್ಲಿದ್ದರೂ ಸರಿ ಅಥವಾ ಧರ್ಮ ಯಾವುದಾದರೂ ಸರಿ. ಆದರೆ, ಇಂತಹ ಗಂಭೀರ ಮತ್ತು ಸಂವೇದನಾಶೀಲ ಪ್ರಕರಣವನ್ನು ಮಾಧ್ಯಮಗಳು ನಡೆಸಿಕೊಳ್ಳುತ್ತಿರುವ ರೀತಿ ಅತ್ಯಂತ ವಿಷಾದನೀಯ.

ವಿಚಾರಣೆ ಇನ್ನೂ ಪ್ರಾಥಮಿಕ ಹಂತದಲ್ಲಿರುವಾಗಲೇ, ನ್ಯಾಯಾಲಯದ ಪೀಠದ ಮೇಲೆ ಕುಳಿತು ತಾವೇ ತೀರ್ಪು ಬರೆಯುತ್ತಿದ್ದೀವೇನೋ ಎನ್ನುವಂತೆ ವರ್ತಿಸುವ ಗೋದಿ ಮೀಡಿಯಾಗಳ ಈ ಕುಟಿಲ ಪ್ರವೃತ್ತಿಗೆ ನೀರೆರೆಯುತ್ತಿರುವವರು ಯಾರೆಂದು ಸಮಾಜ ಗ್ರಹಿಸಬೇಕಾಗಿರುವುದು ಅಗತ್ಯ. ಲೈಂಗಿಕ ದೌರ್ಜನ್ಯದಂತಹ ಕ್ರೂರ ಅಪರಾಧವನ್ನೂ ಕೋಮು ದ್ವೇಷದ ಕನ್ನಡಕದ ಮೂಲಕ ನೋಡುವುದು ಎಂದರೆ, ಆ ಸಂತ್ರಸ್ತ ಮಹಿಳೆಯರಿಗೆ ಸಿಗಬೇಕಾದ ನೈಜ ನ್ಯಾಯದ ದಾರಿಯನ್ನು ಮುಚ್ಚಿದಂತೆ. ಈ ಮಾಧ್ಯಮಗಳಿಗೆ ಬೇಕಿರುವುದು ಮಹಿಳೆಯರ ಸುರಕ್ಷತೆಯಲ್ಲ, ತಮ್ಮ ಚಾನೆಲ್‌ನ ಟಿಆರ್‌ಪಿ (TRP) ಹೆಚ್ಚಿಸಿಕೊಳ್ಳಲು ಬೇಕಾದ ‘ಮಸಾಲೆಯುಕ್ತ’ ವೆರೈಟಿ ಕಥೆಗಳಷ್ಟೇ.

ಇದನ್ನೂ ಓದಿ: ‌ವ್ಯಕ್ತಿಚಿತ್ರ | ’31 ದಿನಗಳ ದೊರೆ’ ನಾದೆಂಡ್ಲ ಭಾಸ್ಕರ್‌ ರಾವ್!

ಸಮಾಜವನ್ನು ಸರಿಯಾದ ಹಾದಿಯಲ್ಲಿ ನಡೆಸಬೇಕಾದ ಮಾಧ್ಯಮಗಳು, ಜನರಲ್ಲಿ ಆಕ್ರೋಶ ಮತ್ತು ಭೀತಿಯನ್ನು ಬಿತ್ತುವ ಮೂಲಕ ತನಿಖಾ ಸಂಸ್ಥೆಗಳ ಮೇಲೆ ಅನಗತ್ಯ ಒತ್ತಡ ಸೃಷ್ಟಿಸುತ್ತಿವೆ. ಒಂದು ವ್ಯವಸ್ಥಿತ ಸುಳ್ಳನ್ನು ವೈಭವೀಕರಿಸುವ ಮೂಲಕ ನೈಜ ತಪ್ಪುಗಳನ್ನು ಮರೆಮಾಚಲಾಗುತ್ತಿದೆ. ಅಪರಾಧ ನಡೆದಾಗ ನಮಗೆ ಆ ವ್ಯಕ್ತಿಯ ಧರ್ಮ ಮತ್ತು ಹೆಸರು ಮುಖ್ಯವಾಗಬಾರದು, ಬದಲಾಗಿ ಆ ಕೃತ್ಯದ ತೀವ್ರತೆ ಮತ್ತು ಸಂತ್ರಸ್ತರ ನೋವು ಮುಖ್ಯವಾಗಬೇಕು. ಮಾಧ್ಯಮಗಳು ತನಿಖೆ ಪಾರದರ್ಶಕವಾಗಿ ನಡೆಯುವಂತೆ ಒತ್ತಡ ಹೇರಿದಾಗ ಮಾತ್ರ ಸಂತ್ರಸ್ತೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಸಾಧ್ಯ. ಅದು ಬಿಟ್ಟು ಇಲ್ಲಸಲ್ಲದ ಜಿಹಾದ್ ಬಣ್ಣ ಹಚ್ಚುವುದು ನ್ಯಾಯದ ಕತ್ತು ಹಿಸುಕಿದಂತೆ. ಮಾಧ್ಯಮಗಳ ಈ ಹಾದಿತಪ್ಪಿಸುವ ಪ್ರವೃತ್ತಿಯನ್ನು ನಿಯಂತ್ರಿಸಲು ಜವಾಬ್ದಾರಿಯುತ ನಾಗರಿಕರಾದ ನಾವೂ ಜಾಗೃತರಾಗಬೇಕಿದೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಂಧ್ರಪ್ರದೇಶ | ರಸ್ತೆ ಕಾಮಗಾರಿ ವೇಳೆ ಜೆಲಾಟಿನ್ ಸ್ಫೋಟ; ಶಾಲಾ ಶಿಕ್ಷಕಿ ಸೇರಿದಂತೆ ಹಲವರ ಸಾವು

ರಸ್ತೆ ಕಾಮಗಾರಿಗಾಗಿ ಬಳಸಲಾಗುತ್ತಿದ್ದ ಜೆಲಾಟಿನ್ ಸ್ಟಿಕ್‌ಗಳು ಅನಿರೀಕ್ಷಿತವಾಗಿ ಸ್ಫೋಟಗೊಂಡು, ಶಾಲಾ ಶಿಕ್ಷಕಿಯೊಬ್ಬರು...

ಬಸವಕಲ್ಯಾಣ ಅನುಭವ ಮಂಟಪ ನಿರ್ಮಾಣ ಕಾರ್ಯ ವರ್ಷದೊಳಗೆ ಪೂರ್ಣ : ಸಚಿವ ಈಶ್ವರ ಖಂಡ್ರೆ

ವಿಶ್ವಕ್ಕೆ ಸಮಾನತೆ, ಕಾಯಕ ಮತ್ತು ದಾಸೋಹದ ಪರಿಕಲ್ಪನೆಗಳನ್ನು ನೀಡಿದ ಬಸವಣ್ಣನವರು ಮನುಕುಲದ...

ಮಕ್ಕಳಿಗೆ ಇಂಟರ್ನೆಟ್‌ ನಿರ್ಬಂಧ | ಸ್ವಾತಂತ್ರ್ಯಕ್ಕೆ ಕಡಿವಾಣವಲ್ಲ, ಡಿಜಿಟಲ್ ಜಗತ್ತಿಗೆ ಹೊಣೆಗಾರಿಕೆಯ ಚೌಕಟ್ಟು ಅಗತ್ಯ

ಇಂಟರ್ನೆಟ್ ಪ್ರವೇಶವನ್ನು ಕೇವಲ ತಾಂತ್ರಿಕ ಸೌಲಭ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಇದೇ ಡಿಜಿಟಲ್...

ಬೀದರ್ | ನ.7ಕ್ಕೆ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನ

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ...