ಧಾರವಾಡ | ಸ್ಪೀಡ್ ಪೋಸ್ಟ್, ಇತರ ಪತ್ರ, ಪಾರ್ಸೆಲ್‍ಗಳ ಬುಕ್ಕಿಂಗ್ ಅವಧಿ ವಿಸ್ತರಣೆ

Date:

ಸಾರ್ವಜನಿಕರ ಅನುಕೂಲಕ್ಕಾಗಿ, ಭಾರತೀಯ ಅಂಚೆ ಇಲಾಖೆಯ ವತಿಯಿಂದ ಎಲ್ಲಾ ಇಲಾಖಾ ಅಂಚೆ ಕಚೇರಿಗಳಲ್ಲಿ ಕಚೇರಿ ಕಾರ್ಯ ಸಮಯ ಮುಕ್ತಾಯವಾಗುವ ಮೊದಲು ಕೊನೆಯ 30 ನಿಮಿಷಗಳವರೆಗೆ ಅಂಚೆ ವಸ್ತುಗಳನ್ನು ಬುಕ್ ಮಾಡುವ ಸೌಲಭ್ಯವನ್ನು ಒದಗಿಸಲಾಗುತ್ತಿದೆ ಎಂಬುದನ್ನು ಸಾರ್ವಜನಿಕರಿಗೆ ಪ್ರಕಟಣೆ ಮೂಲಕ ತಿಳಿಸಲಾಗಿದೆ.

- Advertisement -

ಈ ವ್ಯವಸ್ಥೆಯಡಿ, ಕಾರ್ಯದಿನಗಳಲ್ಲಿ ಇಲಾಖಾ ಅಂಚೆ ಕಚೇರಿಗಳ ನಿಗದಿತ ಕಾರ್ಯಾವಧಿ ಮುಕ್ತಾಯಕ್ಕೆ ಮುಂಚಿತವಾಗಿ 30 ನಿಮಿಷಗಳವರೆಗೆ ಸ್ಪೀಡ್ ಪೋಸ್ಟ್, ಪಾರ್ಸೆಲ್ ಹಾಗೂ ಅಂತರರಾಷ್ಟ್ರೀಯ ಸ್ಪೀಡ್ ಪೋಸ್ಟ್, ಪಾರ್ಸೆಲ್‍ಗಳನ್ನು ಬುಕ್ ಮಾಡಬಹುದಾಗಿದೆ. ಇದರಿಂದ ಕಚೇರಿ ಸಮಯದ ಅಂತ್ಯದಲ್ಲಿ ಅಂಚೆ ಕಚೇರಿಗೆ ಬರುವ ಗ್ರಾಹಕರಿಗೂ ತಮ್ಮ ಅಂಚೆ ವಸ್ತುಗಳನ್ನು ಸುಲಭವಾಗಿ ಬುಕ್ ಮಾಡುವ ಅವಕಾಶ ದೊರೆಯುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಗಡುಸಾದ ದನಿಯೊಳಗಿನ ಮೃದು ಮನಸ್ಸು: ʼನಾನಾ ಪಾಟೇಕರ್ʼ ಎಂಬ...

ಅವರ ಗಡುಸಾದ ದನಿಯಲ್ಲಿ ಸಾಮಾನ್ಯ ಮನುಷ್ಯನ ಆಕ್ರೋಶವಿತ್ತು; ಅವರ ತೀಕ್ಷ್ಣ ನೋಟದಲ್ಲಿ ಬದುಕಿನ ಕಹಿ ಸತ್ಯಗಳಿದ್ದವು. ‘ಕ್ರಾಂತಿವೀರ್’ನಲ್ಲಿ ಅನ್ಯಾಯದ ವಿರುದ್ಧ ಸಿಡಿದವರು, ‘ಖಾಮೋಶಿ’ಯಲ್ಲಿ ಮಾತಿಲ್ಲದೆ ಮನಸ್ಸು ತಟ್ಟಿದವರು, ‘ವೆಲ್‌ಕಮ್’ನಲ್ಲಿ ನಗುವಿನ ಹೊಳೆ ಹರಿಸಿದವರು...

ಕೂಲಿಕಾರ್ಮಿಕರ ಮೊಮ್ಮಗಳ ವಿಶ್ವ ವಿಜಯ: ಭಾರತೀಯ ಮೂಲದ ನವಿ...

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮಾಜಿ ಮುಖ್ಯಸ್ಥೆ ಹಾಗೂ ಪ್ರಸ್ತುತ ಅಂತಾರಾಷ್ಟ್ರೀಯ ನ್ಯಾಯಾಲಯದ (ICJ) ನ್ಯಾಯಾಧೀಶರಾಗಿರುವ ದಕ್ಷಿಣ ಆಫ್ರಿಕಾ ಮತ್ತು ಭಾರತೀಯ ಮೂಲದ ನವನೀತಮ್ 'ನವಿ' ಪಿಳ್ಳೈ (85) ಅವರಿಗೆ 2026ನೇ ಸಾಲಿನ...

ಉತ್ತರ ಕನ್ನಡ | ಗ್ರಾಮೀಣ ಮಹಿಳೆಯರ ಸಬಲೀಕರಣಕ್ಕೆ ‘ಅಕ್ಕ...

ಉತ್ತರ ಕನ್ನಡ ಜಿಲ್ಲೆಯಲ್ಲಿ 'ಅಕ್ಕ ಕೆಫೆ' ಯೋಜನೆ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಗ್ರಾಮೀಣ ಮಹಿಳೆಯರು ಸ್ವಂತ ಉದ್ಯಮ ನಡೆಸಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಮತ್ತು ಉದ್ಯಮಿಗಳಾಗಿ ಹೊರಹೊಮ್ಮಲು ಇದು ದಾರಿಮಾಡಿಕೊಟ್ಟಿದೆ. ಸಂಜೀವಿನಿ ಎನ್‌ಆರ್‌ಎಲ್‌ಎಂ ಯೋಜನೆಯಡಿ...

ಮನೆಯಲ್ಲಿಯೇ ಕುಳಿತು ಪತ್ರ, ಪಾರ್ಸೆಲ್‍ಗಳ ಬುಕ್ಕಿಂಗ್ ಸೌಲಭ್ಯ (Customer Self Service Portal):  ಸಾರ್ವಜನಿಕರ ಸೌಕರ್ಯಕ್ಕಾಗಿ ಭಾರತೀಯ ಅಂಚೆ ಇಲಾಖೆಯ ಗ್ರಾಹಕ ಸ್ವಯಂ ಸೇವಾ ಪೋರ್ಟಲ್ (Customer Self Service https://app.indiapost.gov.in/customer-selfservice/login) ಲಭ್ಯವಿದ್ದು, ಇದರ ಮೂಲಕ ಅಂಚೆ ವಸ್ತುಗಳ ಬುಕ್ಕಿಂಗ್, ಟ್ರ್ಯಾಕಿಂಗ್, ದೂರು ಸಲ್ಲಿಕೆ, ಸೇವೆಗಳ ವಿವರಗಳು ಹಾಗೂ ಇತರೆ ಅನೇಕ ಸೇವೆಗಳನ್ನು ಆನ್‍ಲೈನ್‍ನಲ್ಲೇ ಪಡೆಯಬಹುದು. ಸಾರ್ವಜನಿಕರು ಈ ಡಿಜಿಟಲ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದು.

ಡಾಕ್ ಸೇವಾ ಆಪ್: ಅಂಚೆ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ಪಡೆಯುವ ಉದ್ದೇಶದಿಂದ ಭಾರತೀಯ ಅಂಚೆ ಇಲಾಖೆ ಡಾಕ್ ಸೇವಾ ಆಪ್ ಅನ್ನು ಬಿಡುಗಡೆ ಮಾಡಿದೆ. ಈ ಮೊಬೈಲ್ ಆಪ್ ಮೂಲಕ ಅಂಚೆ ವಸ್ತುಗಳ ಬುಕ್ಕಿಂಗ್, ಟ್ರ್ಯಾಕಿಂಗ್, ದೂರು ನೋಂದಣಿ, ಸೇವಾ ಮಾಹಿತಿ ಸೇರಿದಂತೆ ವಿವಿಧ ಗ್ರಾಹಕ ಸೇವೆಗಳು ಮೊಬೈಲ್‍ನಲ್ಲೇ ಲಭ್ಯವಿರುತ್ತವೆ.

ಇದನ್ನೂ ಓದಿ ಧಾರವಾಡ | ಜಿಲ್ಲೆಯ ಅಭಿವೃದ್ಧಿ, ಗೌರವ ಹೆಚ್ಚಿಸಲು ಕೂಡಿ ಕೆಲಸ ಮಾಡೋಣ: ಜಿಲ್ಲಾಧಿಕಾರಿ ಸ್ನೇಹಲ್. ಆರ್

ಸಾರ್ವಜನಿಕರು ಈ ಆಪ್ ಅನ್ನು ಡೌನ್‍ಲೋಡ್ ಮಾಡಿಕೊಂಡು ಬಳಸಬಹುದು. ಡೌನ್‍ಲೋಡ್ ಮಾಡಲು ಅಗತ್ಯವಾದ ಕ್ಯೂಆರ್ ಕೋಡ್ ಭಾರತೀಯ ಅಂಚೆ ಇಲಾಖೆಯ ವೆಬ್‍ಸೈಟ್‍ನಲ್ಲಿ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ಇಲಾಖಾ ಅಂಚೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

WhatsApp Image 2024 09 06 at 11.32.31 a95e9ba6
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ದರಏರಿಕೆಯ ಮೂಲಕ ರೈಲ್ವೇ ಖಾಸಗೀಕರಣ ಪರ ಮೋದಿ: ಕಾರ್ಮಿಕ ಮುಖಂಡ ಮಂಜುನಾಥ ಕೈದಾಳೆ

"ಕೇಂದ್ರ ಸರ್ಕಾರ ಜನವಿರೋಧಿಯಾಗಿದ್ದು ಬಂಡವಾಳಶಾಹಿಗಳ ಪರ ನಿಂತಿದ್ದು ಮೋದಿ ಅವರು ಅಧಿಕಾರಕ್ಕೆ...

ದಾವಣಗೆರೆ | ಶಾಂತಿ ಪರಮಾಣು ಮಸೂದೆ: ಎಐಪಿಎಫ್ ನೇತೃತ್ವದಲ್ಲಿ ವಿದ್ಯುತ್ ನೌಕರರ ವಿರೋಧ

ಕೇಂದ್ರ ಸರ್ಕಾರವು ಲೋಕಸಭೆಯಲ್ಲಿ ಸುಸ್ಥಿರ ಬಳಕೆ ಮತ್ತು ಪರಿವರ್ತನೆಗಾಗಿ ಪರಮಾಣು ಶಕ್ತಿಯ...

ಚಿತ್ರದುರ್ಗ | ಎಸ್ಐಆರ್ ಎಂದರೆ ಎನ್ಆರ್ಸಿ, ಮತದಾನ ಹಕ್ಕುಗಳ ಪೌರತ್ವ ನಿರಾಕರಣೆ: ಚಿಂತಕ ಶಿವಸುಂದರ್

"ಚುನಾವಣಾ ಆಯೋಗ ತನ್ನ ನಿಷ್ಪಕ್ಷಪಾತತೆ ಕಳೆದುಕೊಂಡು ಸರ್ಕಾರದ ಪರವಾಗಿ ನಡೆದುಕೊಳ್ಳುತ್ತಿದೆ.ಎಸ್ಐಆರ್ ಮೂಲಕ...

ದಾವಣಗೆರೆ | ಅಂಬೇಡ್ಕರ್ ಪ್ರತಿಮೆ ಮುಂದೆ ದಸಂಸ ಹಾಗೂ ವಿದ್ಯಾರ್ಥಿಗಳಿಂದ ಸಂವಿಧಾನ ದಿನಾಚರಣೆ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹಿರೇಗಂಗೂರು ಗ್ರಾಮದಲ್ಲಿರುವ ಸಂವಿಧಾನ ಶಿಲ್ಪಿ ಡಾ....