ಬಿಜೆಪಿ-ಅಕಾಲಿದಳ ಮೈತ್ರಿ: ‘ಅಧಿಕಾರ ದಾಹಕ್ಕಾಗಿ ಹಳೆಯ ಮಾದಕವಸ್ತು ದಂಧೆಕೋರರ ಪುನರ್ಮಿಲನ’: ಕೇಜ್ರಿವಾಲ್

Date:

2027ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಶಿರೋಮಣಿ ಅಕಾಲಿದಳ (ಎಸ್‌ಎಡಿ) ಆರು ವರ್ಷಗಳ ಸುದೀರ್ಘ ವಿರಾಮದ ನಂತರ ಮತ್ತೆ ಕೈಜೋಡಿಸಿರುವುದು ಪಂಜಾಬ್ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಗುರುನಾನಕ್ ಜಯಂತಿಯ ದಿನದಂದೇ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಮತ್ತು ಅಕಾಲಿದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಜಂಟಿ ಸುದ್ದಿಗೋಷ್ಠಿ ನಡೆಸಿ ಮೈತ್ರಿಯನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಾಯಕರು ಈ ಮೈತ್ರಿಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

- Advertisement -

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಅಧಿಕಾರದ ದಾಹಕ್ಕಾಗಿ ಕೇಸರಿ ಪಕ್ಷ ಯಾರೊಂದಿಗೆ ಬೇಕಾದರೂ ಕೈಜೋಡಿಸುತ್ತದೆ ಎಂದು ಕಿಡಿಕಾರಿದರು. “ಬಿಜೆಪಿ ಮತ್ತು ಅಕಾಲಿದಳ ತಮ್ಮ ರಾಜಕೀಯ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಪದೇ ಪದೇ ಒಂದಾಗುವುದು ಮತ್ತು ಬೇರ್ಪಡುವುದನ್ನು ಮಾಡುತ್ತಲೇ ಬಂದಿವೆ. ಆದರೆ, ಎಎಪಿಯ ಮೈತ್ರಿ ಇರುವುದು ಪಂಜಾಬ್‌ನ ಮಹಿಳೆಯರು, ಪರಿಶಿಷ್ಟ ಜಾತಿ ಸಮುದಾಯ, ರೈತರು ಮತ್ತು ವ್ಯಾಪಾರಿಗಳೊಂದಿಗೆ. ನಾವು ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಅವರು ಪ್ರತಿಪಾದಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಧಿಕೃತ ಕೆಲಸಕ್ಕೆ WHATSAPP ವೆಬ್ ಅಪಾಯಕಾರಿ ಏಕೆ? ಗೃಹ...

ಕಚೇರಿ, ಸಾರ್ವಜನಿಕ ಅಥವಾ ಹಲವರು ಹಂಚಿಕೊಂಡು ಬಳಸುವ ಕಂಪ್ಯೂಟರ್‌ಗಳಲ್ಲಿ WHATSAPP ವೆಬ್ ಬಳಸುವವರಿಗೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಭದ್ರತಾ ಎಚ್ಚರಿಕೆ ನೀಡಿದೆ. ಸಚಿವಾಲಯದ ಅಧೀನದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ...

ಆನೆ ಓಡಿಸಲು ಜೇನುನೊಣ ಸಾಕು! ಏನಿದು ತಂತ್ರ?

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಕೃಷಿಕರು ಆನೆ ಹಾವಳಿ ತಡೆಗೆ ಸರಳ ಮತ್ತು ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ. ಆನೆ ಬರುವ ದಾರಿಯಲ್ಲಿ ಜೇನು ಪೆಟ್ಟಿಗೆಗಳನ್ನಿಟ್ಟು ಗಜಪಡೆಯನ್ನು ಹಿಮ್ಮೆಟ್ಟಿಸುವ ಮಾರ್ಗವಿದು. ಆನೆಗಳ ಸೊಂಡಿಲಿನ ಒಳಭಾಗ...

ವೈದ್ಯರಿಲ್ಲ, ಔಷಧವೂ ಇಲ್ಲ! ದಶಕ ಕಳೆದರೂ ಚೇತರಿಸದ ಗಜೇಂದ್ರಗಡ...

ಗಜೇಂದ್ರಗಡ ತಾಲೂಕು ಘೋಷಣೆಯಾಗಿ ದಶಕ ಕಳೆದರೂ ಇಂದಿಗೂ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿಲ್ಲ. ವೈದ್ಯರ ಕೊರತೆ, ಅಗತ್ಯ ಔಷಧಿಗಳ ಕೊರತೆ, ಸಿಬ್ಬಂದಿಗಳ ಕೊರತೆ ಇರುವುದರಿಂದ, ಇಲ್ಲಿಗೆ ಬರುವ ರೋಗಿಗಳಿಗೆ ಸರಿಯಾದ ಚಿಕತ್ಸೆ,...

2020ರ ರೈತರ ಪ್ರತಿಭಟನೆಯನ್ನು ನೆನಪಿಸಿದ ಕೇಜ್ರಿವಾಲ್, “ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ 700ಕ್ಕೂ ಹೆಚ್ಚು ರೈತರು ಪ್ರಾಣ ಕಳೆದುಕೊಂಡಿದ್ದನ್ನು ಪಂಜಾಬ್ ಜನತೆ ಇನ್ನೂ ಮರೆತಿಲ್ಲ. ಕಳೆದ ಐದು ವರ್ಷಗಳಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ನೇತೃತ್ವದ ಎಎಪಿ ಸರ್ಕಾರ ದಶಕಗಳಿಂದ ರಾಜ್ಯವನ್ನು ಕಾಡುತ್ತಿದ್ದ ಸಮಸ್ಯೆಗಳನ್ನು ಬಗೆಹರಿಸುತ್ತಿರುವುದನ್ನು ಜನ ನೋಡಿದ್ದಾರೆ” ಎಂದರು. ಇದೇ ವೇಳೆ, ಅಕಾಲಿದಳದ ಆಡಳಿತಾವಧಿಯಲ್ಲಿ ನಡೆದ ಪವಿತ್ರ ಗ್ರಂಥದ ಅಪಮಾನ ಪ್ರಕರಣಗಳು ಹಾಗೂ ಪಂಜಾಬ್ ಅನ್ನು ಮಾದಕವಸ್ತುಗಳ ವ್ಯಸನಕ್ಕೆ ತಳ್ಳಿದ ಕರಾಳ ದಿನಗಳನ್ನು ಕೇಜ್ರಿವಾಲ್ ಉಲ್ಲೇಖಿಸಿದರು.

ಮೈತ್ರಿ ಘೋಷಣೆಯ ವೇಳೆ ಅಮಿತ್ ಶಾ ಪಂಜಾಬ್‌ನಲ್ಲಿ ಅಕಾಲಿದಳವೇ “ದೊಡ್ಡಣ್ಣ” ಮತ್ತು ಆ ಪಕ್ಷದ ನಾಯಕರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಘೋಷಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ದೆಹಲಿ ಎಎಪಿ ಘಟಕದ ಅಧ್ಯಕ್ಷ ಸೌರಭ್ ಭಾರದ್ವಾಜ್, “ಮೈತ್ರಿ ಪಕ್ಷಗಳಿಗೆ ‘ದೊಡ್ಡಣ್ಣ’ನ ಪಟ್ಟ ಕಟ್ಟಿ, ನಂತರ ಆ ಪಕ್ಷವನ್ನೇ ರಾಜಕೀಯವಾಗಿ ಮುಗಿಸುವುದು ಬಿಜೆಪಿಯ ಹಳೆಯ ಚಾಳಿ. ಒಡಿಶಾದಲ್ಲಿ ಬಿಜು ಜನತಾ ದಳ (ಬಿಜೆಡಿ) ಮತ್ತು ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಪಕ್ಷವನ್ನು ದುರ್ಬಲಗೊಳಿಸಿದಂತೆಯೇ, ಈಗ ಪಂಜಾಬ್‌ನಲ್ಲಿ ಅಕಾಲಿದಳವನ್ನು ದೊಡ್ಡ ಪಾಲುದಾರನನ್ನಾಗಿ ಮಾಡಿ ಅದರ ರಾಜಕೀಯ ಅಸ್ತಿತ್ವವನ್ನೇ ಬಿಜೆಪಿ ಮುಗಿಸಲಿದೆ” ಎಂದು ಭವಿಷ್ಯ ನುಡಿದರು.

“ಈ ಮೈತ್ರಿಯು ಪಂಜಾಬ್‌ನಲ್ಲಿ ಡ್ರಗ್ಸ್ ದಂಧೆಯೊಂದಿಗೆ ನಂಟು ಹೊಂದಿದ್ದ ನಾಯಕರನ್ನು ಮತ್ತೆ ಒಟ್ಟುಗೂಡಿಸಿದೆ. ಈ ಹಿಂದೆ ಪಂಜಾಬ್ ಯುವಜನತೆಯನ್ನು ಮಾದಕವಸ್ತುಗಳ ವ್ಯಸನಕ್ಕೆ ತಳ್ಳಿದವರೇ ಇವರು. ಈಗ ಬಿಜೆಪಿ-ಅಕಾಲಿದಳ ಒಂದಾಗುತ್ತಿವೆಯೋ ಅಥವಾ ಹಳೆಯ ಡ್ರಗ್ಸ್ ಸ್ಮಗ್ಲರ್‌ಗಳು ಮತ್ತೆ ಕೈಜೋಡಿಸುತ್ತಿದ್ದಾರೋ ಎಂಬುದು ರಾಜ್ಯದ ಜನತೆಗೆ ಚೆನ್ನಾಗಿ ತಿಳಿದಿದೆ” ಎಂದು ಎಎಪಿ ನಾಯಕ ಮನೀಶ್ ಸಿಸೋಡಿಯಾ ವಾಗ್ದಾಳಿ ನಡೆಸಿದರು.

ಈ ಮೈತ್ರಿಯು ಪಂಜಾಬ್ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದ ಎಎಪಿ ಶಾಸಕ ಜರ್ನೈಲ್ ಸಿಂಗ್, “ಎರಡು ಸೊನ್ನೆಗಳು ಸೇರಿದರೆ ಫಲಿತಾಂಶ ಸೊನ್ನೆಯೇ ಆಗಿರುತ್ತದೆ” ಎಂದು ಲೇವಡಿ ಮಾಡಿದರು. ಕೆಲಸದ ಆಧಾರದ ಮೇಲೆ ಮತ ಕೇಳುವ ಏಕೈಕ ಪಕ್ಷ ಎಎಪಿ ಎಂದು ಅವರು ಹೇಳಿದರು.

ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಪಿಸಿಸಿ) ಅಧ್ಯಕ್ಷ ಪರ್ಗತ್ ಸಿಂಗ್ ಸೇರಿದಂತೆ ಕಾಂಗ್ರೆಸ್ ನಾಯಕರು ಈ ಮೈತ್ರಿಯನ್ನು “ಶತಮಾನದ ದೊಡ್ಡ ಸುಳ್ಳು” ಮತ್ತು ದೌರ್ಬಲ್ಯದ ಸಂಕೇತ ಎಂದು ಟೀಕಿಸಿದ್ದಾರೆ. “ಗುರುಪರ್ವದ ಪವಿತ್ರ ದಿನದಂದು ಗುರುನಾನಕ್ ಅವರ ತತ್ವಗಳಿಗೆ ವಿರುದ್ಧವಾಗಿ ಈ ಎರಡು ಪಕ್ಷಗಳು ಕೇವಲ ಅಧಿಕಾರದ ದಾಹಕ್ಕಾಗಿ ಒಂದಾಗಿವೆ. ಅವರಿಗೆ ರಾಜ್ಯದ ಅಭಿವೃದ್ಧಿಯ ಯಾವುದೇ ನೀಲನಕ್ಷೆಯಿಲ್ಲ, ಮುಂದಿನ ಸರ್ಕಾರ ರಚಿಸುವ ಕನಿಷ್ಠ ಅವಕಾಶವೂ ಇವರಿಗಿಲ್ಲ” ಎಂದು ಕಾಂಗ್ರೆಸ್ ಕಿಡಿಕಾರಿದೆ.

1997ರಿಂದ 2002 ಮತ್ತು 2007ರಿಂದ 2017ರವರೆಗೆ ಒಟ್ಟು 15 ವರ್ಷಗಳ ಕಾಲ ಪಂಜಾಬ್ ಆಳಿದ್ದ ಬಿಜೆಪಿ-ಅಕಾಲಿದಳ ಮೈತ್ರಿಕೂಟ, 2020ರ ಸೆಪ್ಟೆಂಬರ್‌ನಲ್ಲಿ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಮುರಿದುಬಿದ್ದಿತ್ತು. ಅಂದು ಕೇಂದ್ರ ಸಚಿವೆಯಾಗಿದ್ದ ಹರ್‌ಸಿಮ್ರತ್ ಕೌರ್ ಬಾದಲ್ ರಾಜೀನಾಮೆ ನೀಡಿ ಎನ್‌ಡಿಎಯಿಂದ ಹೊರನಡೆದಿದ್ದರು.

2022ರ ವಿಧಾನಸಭಾ ಚುನಾವಣೆಯಲ್ಲಿ ಎಎಪಿ 117 ಸ್ಥಾನಗಳ ಪೈಕಿ 92 ಸ್ಥಾನಗಳನ್ನು ಗೆದ್ದು ಐತಿಹಾಸಿಕ ಜಯ ಸಾಧಿಸಿದರೆ, ಕಾಂಗ್ರೆಸ್ 18, ಅಕಾಲಿದಳ 3 ಮತ್ತು ಬಿಜೆಪಿ ಕೇವಲ 2 ಸ್ಥಾನಗಳಿಗೆ ಸೀಮಿತವಾಗಿದ್ದವು. 2024ರ ಲೋಕಸಭಾ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಬಿಜೆಪಿ ಶೇ. 18.56 ಮತ್ತು ಅಕಾಲಿದಳ ಶೇ. 13.42 ರಷ್ಟು ಮತಗಳನ್ನು ಪಡೆದಿದ್ದವು. ಮತ ವಿಭಜನೆಯನ್ನು ತಪ್ಪಿಸಿ ಎಎಪಿ ಮತ್ತು ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿ ನೀಡುವ ಉದ್ದೇಶದಿಂದ ಈಗ ಎಲ್ಲಾ 117 ಕ್ಷೇತ್ರಗಳಲ್ಲಿ ಒಟ್ಟಾಗಿ ಸ್ಪರ್ಧಿಸಲು ಎರಡೂ ಪಕ್ಷಗಳು ನಿರ್ಧರಿಸಿವೆ. ಆದರೆ, ರೈತ ಸಂಘಟನೆಗಳ ವಿರೋಧ ಮತ್ತು ಹಿಂದಿನ ಆಡಳಿತದ ಕಳಂಕಗಳನ್ನು ಈ ಮೈತ್ರಿ ಹೇಗೆ ನಿಭಾಯಿಸಲಿದೆ ಎಂಬುದು 2027ರ ಚುನಾವಣೆಯ ಕುತೂಹಲಕಾರಿ ಅಂಶವಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಒಂದೇ ದಿನದಲ್ಲಿ ₹8.17 ಕೋಟಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಕುಡಚಿ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಿರುವ ಕಾಂಗ್ರೆಸ್ ಶಾಸಕ...

ದೀಪತೂಣ್  ವಿವಾದ: ತಮಿಳುನಾಡು ಬಿಜೆಪಿ ಅಧ್ಯಕ್ಷ ನೈನಾರ್ ನಾಗೇಂದ್ರನ್, ಎಲ್. ಮುರುಗನ್ ಪೊಲೀಸ್ ವಶಕ್ಕೆ!

ಕಾರ್ತಿಕ ದೀಪೋತ್ಸವದ ಅಂಗವಾಗಿ ಮದುರೈನ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ಕಲ್ಲಿನ ಸ್ತಂಭದ...

ಬಿಜ್ಜಳನ ಆಸ್ಥಾನದಲ್ಲಿದ್ದ ಕೊಂಡಿ ಮಂಚಣ್ಣ ಯಾರು? ಆತ ‘ಬಸವ’ ವಿರೋಧಿ ಆಗಿದ್ದು ಯಾಕೆ?

ಬಸವಣ್ಣನವರ ವಿರೋಧಿಯಾಗಿ ಇತಿಹಾಸದಲ್ಲಿ ಗುರುತಿಸಿಕೊಂಡಿರುವ ‘ಕೊಂಡಿ ಮಂಚಣ್ಣ’ ಈಗ ಮತ್ತೆ ಕರ್ನಾಟಕದ...

ರಾಹುಲ್ ವಿರುದ್ಧ ಮೊಕದ್ದಮೆ, ಸೋನಿಯಾಗೆ ಕಾನೂನು ನೋಟಿಸ್: ಸಾವರ್ಕರ್–ಗೋಡ್ಸೆ ಕುಟುಂಬದ ಸಾತ್ಯಕಿ ಯಾರು?

ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆಯ ಮೂಲಕ ವಿವಾದ ಸೃಷ್ಟಿಸಿದ್ದ ಪುಣೆಯ...