ವೇಶ್ಯಾವಾಟಿಕೆ ದಂಧೆ | ಪುನೀತ್ ಕೆರೆಹಳ್ಳಿ ಜೊತೆ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಸಿಕ್ಕ ಯುವತಿ ಹೇಳಿದ್ದೇನು ?

Date:

Advertisements
ಗಾರ್ಮೆಂಟ್ ಫ್ಯಾಕ್ಟರಿಗೆ ಹೋಗುವ ಬಡ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದ ತಂಡದಲ್ಲಿ ಪುನೀತ್‌ ಕೆರೆಹಳ್ಳಿ ಕೂಡ ಇದ್ದ. ಅವರ ಬಡತನವನ್ನೇ ಬಳಸಿಕೊಂಡು ವೇಶ್ಯಾವಾಟಿಕೆಗೆ ದೂಡುತ್ತಿದ್ದರು. ಈ ಬಗ್ಗೆ ವೇಶ್ಯಾವಾಟಿಕೆಯಿಂದ ರಕ್ಷಣೆಗೊಳಗಾದ ಯುವತಿಯೇ ನ್ಯಾಯಾಲಯಕ್ಕೆ ಲಿಖಿತ ಹೇಳಿಕೆ ನೀಡಿದ್ದಾಳೆ.

ವೇಶ್ಯಾವಾಟಿಕೆಯ ಅಡ್ಡೆಯಲ್ಲಿ ಬಂಧಿಯಾಗಿ ಪುನೀತ್ ಕೆರೆಹಳ್ಳಿಯ ಕಪಿಮುಷ್ಠಿಯಲ್ಲಿದ್ದ ಯುವತಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಲಿಖಿತ ಹೇಳಿಕೆಯ ಯಥಾವತ್ತು ಇಲ್ಲಿದೆ.

ನಾನು ಶ್ರೀಮತಿ ಪ್ರೇಮ (ಗೌಪ್ಯತೆಗಾಗಿ ಹೆಸರು ಬದಲಿಸಲಾಗಿದೆ) ಗಂಡ ಲೇಟ್ ರಮೇಶ, 36 ವರ್ಷ, ಬಸ್ ನಿಲ್ದಾಣದ ಹತ್ತಿರ, ಮನೋರಾಯನ ಪಾಳ್ಯ, ಆರ್ ಟಿ ನಗರ ಅಂಚೆ, ಬೆಂಗಳೂರು ನಗರ 32. ಸ್ವಂತ ವಿಳಾಸ ಭಾರತಿ ನಗರ, ಹಾವಡಿ ಚೆನ್ನೈ, ತಮಿಳುನಾಡು. ನಾನು ಹೊಟ್ಟೆಪಾಡಿಗಾಗಿ ಬೆಂಗಳೂರಿನ ಕನಕನಗರದ ಗಾಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದೇನೆ.

ನನಗೆ ಇತ್ತೀಚಿಗೆ ಶ್ರೀಮತಿ ಮಂಜುಳ ಮತ್ತು ಮದನ್ ಮೋಹನ್‌ರವರು ಪರಿಚಯವಾಗಿದ್ದು, ನನ್ನನ್ನು ಅವರು ವಾಸವಿದ್ದ ಕೆ ಬಿ ಸಂದ್ರ, ಗುರುಕೃಪ ಹೋಟೆಲ್ ಹತ್ತಿರ, ರಾಜಾರಾಮಣ್ಣ ರಸ್ತೆ, ಅನ್ಸಿಆಲ್ಫಾ ಅಪಾರ್ಟ್‌ಮೆಂಟ್, ನಂ ಸಿ 17[12] ಕ್ಕೆ ಕರೆದುಕೊಂಡು ಹೋಗುತ್ತಿದ್ದರು. ನಾನು ಅವರ ಮನೆಗೆ ಹೋದಾಗ ಹಣದ ಆಸೆ ತೋರಿಸಿ ವೇಶ್ಯಾವಾಟಿಕೆಗೆ ತೊಡಗುವಂತೆ ಬಲವಂತ ಮಾಡುತ್ತಿದ್ದರು. ನಾನು ಬೇಡವೆಂದು ಹೇಳಿದರೂ ಪುಸಲಾಯಿಸಿ ಹೊರಗಡೆಯಿಂದ ಗಿರಾಕಿಗಳನ್ನು ಕರೆದುಕೊಂಡು ಬಂದು ವೇಶ್ಯಾವಾಟಿಕೆಯಲ್ಲಿ ತೊಡಗಿಸುತ್ತಿದ್ದರು. ನಂತರ ಗಿರಾಕಿಗಳಿಂದ ಹೆಚ್ಚಿನ ಹಣ ಪಡೆದು ನನಗೆ ಕಡಿಮೆ ಹಣ ಕೊಡುತ್ತಿದ್ದರು.

Advertisements

ನನ್ನಂತೆಯೆ ಕೇವಲ 19 ವರ್ಷ ವಯಸ್ಸಿನ ನೇಹಾ, 33 ವರ್ಷ ವಯಸ್ಸಿನ ಶಿಲ್ಪಾ, 33 ವರ್ಷ ವಯಸ್ಸಿನ ತಾಹೀರಾ ಭಾನು (ಎಲ್ಲರ ಹೆಸರುಗಳನ್ನು ಈ ಲೇಖನಕ್ಕಾಗಿ ಬದಲಿಸಲಾಗಿದೆ) ಎಂಬುವರು ಮಂಜುಳಾರವರ ಮನೆಗೆ ಬಂದಿದ್ದು ಅವರುಗಳಿಗೂ ಸಹ ಹಣದ ಆಸೆ ತೋರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದರು.

ದಿನಾಂಕ 21/03/2013ರಂದು ಮಧ್ಯರಾತ್ರಿ ಸುಮಾರು 3.00 ಗಂಟೆಯ ಸಮಯದಲ್ಲಿ ಡಿಜೆ ಹಳ್ಳಿ ಪೊಲೀಸರು ನಾವುಗಳು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಮಂಜುಳಾ, ಮದನ್ ಮೋಹನ್‌ರವರು ಬಾಡಿಗೆಗೆ ಪಡೆದು ವಾಸವಿದ್ದ ಮನೆಯ ಮೇಲೆ ದಾಳಿ ಮಾಡಿದ್ದು, ನಮ್ಮನ್ನು ಹಿಡಿದುಕೊಂಡರು. ನಂತರ ಪೊಲೀಸರು ನಮ್ಮನ್ನು ಘಟನೆಯ ಬಗ್ಗೆ ವಿಚಾರಣೆ ಮಾಡಿದಾಗ ಮಂಜುಳಾರವರು ಹಣದ ಆಸೆ ತೋರಿಸಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿರುವುದಾಗಿ ಒಪ್ಪಿಕೊಂಡೆವು.

ಪೊಲೀಸರು ದಾಳಿ ಮಾಡಿದಾಗ ಮನೆಯಲ್ಲಿ ಮಂಜುಳಾ, ಮದನ್‌ಮೋಹನ್, ಸಿ ರವಿ, ಕೆರೆಹಳ್ಳಿಯ ಪುನೀತ್ ಕುಮಾರ್, ಭರತ್, ಹೆಚ್ ಡಿ ಚಂದ್ರಶೇಖರ್, ಜಿ ಎಸ್ ಪುನಿತ್ ಕುಮಾರ್ ರವರು ಇದ್ದು ಅವರನ್ನು ವಶಕ್ಕೆ ತೆಗೆದುಕೊಂಡರು.

ಮನೆಯಲ್ಲಿ ವೇಶ್ಯಾವಾಟಿಕೆಗೆ ಬಳಸುತ್ತಿದ್ದ ನಿರೋದ್ ಪ್ಯಾಕೆಟ್‌ಗಳು, ಮೊಬೈಲ್‌ಗಳು, ಮದ್ಯದ ಬಾಟೆಲ್‌ಗಳು, ಮೋಟಾರ್ ಬೈಕನ್ನು ವಶಕ್ಕೆ ತೆಗೆದುಕೊಂಡರು. ನಂತರ ಎಲ್ಲರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದರು.

ನಮಗೆ ಹಣದ ಆಸೆ ತೋರಿಸಿ ಪುಸಲಾಯಿಸಿ ಬಲವಂತವಾಗಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿದ್ದು, ಮಂಜುಳಾ ಮತ್ತು ಮದನ್ ಮೋಹನ್ ಹಾಗು ಅವರ ಮನೆಯಲ್ಲಿ ವೇಶ್ಯಾಟಿಕೆಯಲ್ಲಿ ತೊಡಗಿದ್ದ ಸಿ ರವಿ, ಪುನೀತ್ ಕುಮಾರ್, ಭರತ್, ಹೆಚ್ ಡಿ ಚಂದ್ರಶೇಖರ್, ಜಿ ಎಸ್ ಪುನಿತ್‌ ಕುಮಾರ್‌ರವರನ್ನು ನೋಡಿದ್ದು ಮತ್ತೆ ನೋಡಿದರೆ ಗುರುತಿಸುತ್ತೇನೆ.

ನನ್ನ ಸಮಕ್ಷಮ
ಓದಿಸಿ ಕೇಳಿದೆ, ಹೇಳಿದಂತೆ ಸರಿಯಿದೆ.

(ಚಾರ್ಜ್‌ಶೀಟ್‌ನಲ್ಲಿರುವ ನೊಂದ ಯುವತಿಯ ಹೇಳಿಕೆಯ ಯಥಾವತ್ತನ್ನು ಅರ್ಥ ವ್ಯತ್ಯಾಸವಾಗದಂತೆ, ಆದರೆ ಕಾನೂನು ಭಾಷೆಯು ಜನಸಾಮಾನ್ಯರಿಗೆ ಅರ್ಥವಾಗುವಂತೆ ಬದಲಾವಣೆ ಮಾಡಿಕೊಂಡು ಅಕ್ಷರ ರೂಪಕ್ಕೆ ಇಳಿಸಲಾಗಿದೆ)

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಹಿತ್ಯ ಸಮ್ಮೇಳನ | ಈ ಬಾರಿ ಅಲ್ಪಸಂಖ್ಯಾತ ಸಾಹಿತಿ ಅಧ್ಯಕ್ಷರಾಗಲಿ

ಇದುವರೆಗೆ ಒಟ್ಟು ನಾಲ್ವರು ಮಹಿಳೆಯರು ಅಧ್ಯಕ್ಷರಾಗಿದ್ದಾರೆ. 2022ರ ತನಕ ಅಧ್ಯಕ್ಷರಾದವರಲ್ಲಿ ಪರಿಶಿಷ್ಟ...

ಸಾಹಿತ್ಯ ಸಮ್ಮೇಳನ | ಗೋಷ್ಠಿಗಳಲ್ಲೂ ಮಹಿಳಾ ಪ್ರಾತಿನಿಧ್ಯವಿರಲಿ; ರಾಜಕಾರಣಿಗಳು ಕೇಳುಗರಾಗಲಿ

ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದ ಜನರ ಮಾತುಗಳನ್ನು, ಭ್ರಷ್ಟರ ಭಾಷಣವನ್ನು ಸಾಹಿತ್ಯ ಸಮ್ಮೇಳನದ...

ಮಂಡ್ಯ| ಸ್ವಾಮೀಜಿಗಳು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದರೆ ಸಮಾಜವನ್ನು ಹಿಂದಕ್ಕೆಳೆದಂತೆ

ಸಮ್ಮೇಳನದ ಅಧ್ಯಕ್ಷಗಿರಿಯನ್ನು ಮಠಾಧೀಶರಿಗೆ ನೀಡಿದರೆ ಬಲಿಷ್ಠ ಜಾತಿಯವರಿಗೆ ಮಾತ್ರ ಅವಕಾಶ ಸಿಗುತ್ತದೆ....

ಮಸೀದಿಯೊಳಗೆ ಜೈ ಶ್ರೀರಾಮ್‌ ಘೋಷಣೆ ಓಕೆ; ಇದೆಂಥಾ ತೀರ್ಪು!

ಕರ್ನಾಟಕ ಹೈಕೋರ್ಟ್ ನೀಡಿದ ಈ ತೀರ್ಪು ನಕಾರಾತ್ಮಕವಾದ ಬಹಳಷ್ಟು ದೂರಗಾಮಿ ಪರಿಣಾಮಗಳಿಗೆ...

Download Eedina App Android / iOS

X