ಬೆಂಗಳೂರು | ಏ. 6ರಂದು ವಿಶ್ವವಿಖ್ಯಾತಿ ಕರಗ ಶಕ್ತ್ಯೋತ್ಸವ

Date:

  • ಮಾರ್ಚ್‌ 29ರಿಂದ ಆರಂಭವಾಗಲಿರುವ ಕರಗ ಉತ್ಸವ
  • ಕರಗ ಹೊರಲಿರುವ ತಿಗಳ ಸಮುದಾಯದ ಅರ್ಚಕ ಜ್ಞಾನೇಂದ್ರ

ರಾಜಧಾನಿ ಬೆಂಗಳೂರಿನ ವಿಶ್ವವಿಖ್ಯಾತಿ ಕರಗ ಶಕ್ತ್ಯೋತ್ಸವ ಏಪ್ರಿಲ್ 6ರ ಚೈತ್ರ ಪೂರ್ಣಿಮೆ ಹುಣ್ಣಿಮೆಯಂದು ನಡೆಯಲಿದೆ.

ಈ ವರ್ಷದ ಕರಗ ಉತ್ಸವವೂ ಮಾರ್ಚ್‌ 29ರಿಂದ ಆರಂಭವಾಗಿ, ಏಪ್ರಿಲ್ 8ರವರೆಗೆ ನಡೆಯಲಿದೆ. ಈ ಉತ್ಸವವೂ ಸತತ 11 ದಿನಗಳ ಕಾಲ ನಾನಾ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.

ಈ ಬಾರಿ ಶ್ರೀ ಧರ್ಮರಾಯಸ್ವಾಮಿ ಕರಗ ವಿಜೃಂಭಣೆಯಿಂದ ನಡೆಯಲಿದ್ದು, ವೀರಕುಮಾರರು, ತಿಗಳ ಸಮುದಾಯದ ಕೆಲ ಭಕ್ತರು ಕರಗ ನಡೆಯುವ 11 ದಿನಗಳ ಕಾಲ ಉಪವಾಸ ಇರುತ್ತಾರೆ. ಈ ಬಾರಿ ತಿಗಳ ಸಮುದಾಯದ ಅರ್ಚಕ ವಿ. ಜ್ಞಾನೇಂದ್ರ ಅವರು ಕರಗವನ್ನು ಹೊರಲಿದ್ದಾರೆ. ಇವರು ಕಳೆದ 12 ವರ್ಷಗಳಿಂದ ಕರಗ ಹೊರುತ್ತಿದ್ದಾರೆ. ಏ. 6ರ ರಾತ್ರಿ 12 ಗಂಟೆಗೆ ಕರಗ ನಗರ ಪ್ರದಕ್ಷಿಣೆಗೆ ಹೊರಡಲಿದೆ.

ಕರಗದ ವೇಳಾಪಟ್ಟಿ

  • ಮಾ. 29ರಂದು ಧ್ವಜಾರೋಹಣ
  • ಮಾ.​ 29 ರಿಂದ ಏ.​ 8ರವರೆಗೆ ನಿತ್ಯ ಬೆಳಗ್ಗೆ ಮತ್ತು ಸಂಜೆ ನಾನಾ ಧಾರ್ಮಿಕ ಕಾರ್ಯಕ್ರಮಗಳು
  • ಏ. 3ರಂದು ಆರತಿ
  • ಏ.​​ 4 ರಂದು ಹಸಿಕರಗ
  • ಏ.​ 5 ರಂದು ಪೊಂಗಲ್
  • ಏ. 6ರಂದು ಕರಗ ಉತ್ಸವ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಜನಪ್ರಿಯ

ಈ ರೀತಿಯ ಹೆಚ್ಚು
Related

ಬೆಂಗಳೂರು | ಸಚಿವ ನಾರಾಯಣಗೌಡ ಭಾವಚಿತ್ರವಿರುವ ಬ್ಯಾಗ್‌ಗಳು ವಶ; ಎಫ್‌ಐಆರ್‌ ದಾಖಲು

ಸಚಿವ ಕೆ.ಸಿ ನಾರಾಯಣಗೌಡ ಭಾವಚಿತ್ರ ಮತ್ತು ಬಿಜೆಪಿ ಚಿಹ್ನೆ ಇರುವ ಬ್ಯಾಗ್‌ಗಳು...

ಎಸ್‌ಸಿ/ಎಸ್‌ಟಿ ಗುತ್ತಿಗೆ ಮೀಸಲು ಮೊತ್ತ ₹50 ಲಕ್ಷ ದಿಂದ ₹1 ಕೋಟಿಗೆ ಹೆಚ್ಚಿಸಿ ರಾಜ್ಯ ಸರ್ಕಾರ ಆದೇಶ

2023ರ ಫೆಬ್ರವರಿ 17ರಂದು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಸಿಎಂ ₹1 ಕೋಟಿ ಮೊತ್ತದ...

ಬೀದರ್‌ | 30 ಕ್ಷೇತ್ರಗಳಲ್ಲಿ ಆರ್‌ಪಿಐ ಅಭ್ಯರ್ಥಿಗಳು ಸ್ಪರ್ಧೆ: ಮಹೇಶ ಗೋರನಾಳಕರ್

ಆರ್‌ಪಿಐ ಡಾ.ಬಿ ಆರ್ ಅಂಬೇಡ್ಕರ್ ಸ್ಥಾಪನೆ ಮಾಡಿದ ಪಕ್ಷ 'ಆರ್‌ಪಿಐಗೆ ಪಕ್ಷಕ್ಕೆ ಬೆಂಬಲ...

ಬೆಂಗಳೂರು | 1.1 ಲಕ್ಷ ದಾಟಿದ ಯುವ ಮತದಾರರ ಸಂಖ್ಯೆ

ಬೆಂಗಳೂರಿನಲ್ಲಿ ಈ ಹಿಂದೆ ಯುವ ಮತದಾರರ ಸಂಖ್ಯೆ 54,000 ಇತ್ತು ಮತದಾನದ...