ಸೋಲು ಖಾತರಿಯಾಗಿರುವ ಪ್ರೀತಂ ಗೌಡರಿಂದ ದೇವೇಗೌಡರ ಜಪ; ಜೆಡಿಎಸ್ ವ್ಯಂಗ್ಯ

Date:

  • ಚುನಾವಣಾ ಜೀವಿಯ ತಂತ್ರ ಫಲಿಸದು
  • ಜೆಡಿಎಸ್‌ 123 ಕ್ಷೇತ್ರಗಳಲ್ಲಿ ಗೆಲ್ಲಲಿದೆ

ಹಾಸನ ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಅವರು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ಬಗ್ಗೆ ಅಪಾರ ಗೌರವ ಇರುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್‌, ‘ಗುಜರಾತಿನ ಚುನಾವಣಾ ಕುತಂತ್ರಿಗಳಿಂದ ಲಾಭವಿಲ್ಲವೆಂದು ದೊಡ್ಡಗೌಡರ ಹೆಸರು ಹೇಳುತ್ತದ್ದಾರೆ’ ಎಂದು ಕುಟುಕಿದೆ.

“ದೇವೇಗೌಡರ ಬಗ್ಗೆ ನನಗೆ ಇರುವಷ್ಟು ಗೌರವ ಅವರ ಮನೆಯವರಿಗೆ ಇಲ್ಲ. ಕುಟುಂಬದವರ ಸ್ವಾರ್ಥಕ್ಕಾಗಿ ದೇವೇಗೌಡರನ್ನು ಕೊನೆ ಚುನಾವಣೆಯಲ್ಲಿ ತುಮಕೂರಿಗೆ ಕಳಿಸಿದರು” ಎಂದು ಪ್ರೀತಂ ಗೌಡ ಹೇಳಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, “ಸೋಲು ಖಾತರಿಯಾಗುತ್ತಿದ್ದಂತೆ ಪ್ರೀತಂ ಗೌಡ, ದೇವೇಗೌಡರ ಹೆಸರಿನಲ್ಲಿ ಮತಯಾಚಿಸುತ್ತಿದ್ದಾರೆ” ಎಂದು ವ್ಯಂಗ್ಯವಾಡಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನು ಉಲ್ಲೇಖಿಸದೇ, “ಗುಜರಾತಿನ ಚುನಾವಣಾ ಕುತಂತ್ರಿಯನ್ನು ಕ್ಷೇತ್ರಕ್ಕೆ ಕರೆಸಿದರೂ ಓಟ್ ಬೀಳುವುದಿಲ್ಲ ಎಂದು ತಿಳಿದ ಬಳಿಕ ಹೊಸ ಕುತಂತ್ರಕ್ಕೆ ಕೈ ಹಾಕಿದ್ದಾರೆ. ಹಾಸನದ ಪ್ರಬುದ್ಧ ಮತದಾರರು ಯಾವುದೇ ಅಪಪ್ರಚಾರಕ್ಕೂ ಕಿವಿಗೊಡಬಾರದು” ಎಂದು ಹೇಳಿದೆ.

“ಗೌರವಾನ್ವಿತ ದೇವೇಗೌಡರ ಹೆಸರಿನಲ್ಲಿ ಪ್ರೀತಂ ಗೌಡ ಸುಳ್ಳು ಹೇಳಿ ಮತಬೇಟೆಗೆ ಇಳಿದಿದ್ದು ಹತಾಶೆಯ ಲಕ್ಷಣ” ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

“ಇಡೀ ಬಿಜೆಪಿ ಸುಳ್ಳು, ದ್ವೇಷ ಮತ್ತು ಒಡೆದು ಆಳುವ ಮೂಲಕ ಮಾತ್ರವೆ ಚುನಾವಣೆಗೆ ಸಜ್ಜಾಗಿದೆ. ಜೆಡಿಎಸ್‌ ಈ ಬಾರಿ ‘123’ ಸ್ಥಾನ ಪಡೆದು ಸ್ವತಂತ್ರವಾಗಿ ಸರ್ಕಾರ ರಚಿಸಲಿದೆ.ಯಾವುದೆ ಚುನಾವಣಾ ಜೀವಿಯ ಸಹಾಯ ಜೆಡಿಎಸ್‌ಗೆ ಬೇಕಾಗಿಲ್ಲ” ಎಂದು ಮೋದಿ ಅವರ ವಿರುದ್ಧವೂ ವ್ಯಂಗ್ಯವಾಡಿದೆ.

ಈ ಸುದ್ದಿ ಓದಿದ್ದೀರಾ? ರೈತ ಯುವಕರನ್ನು ಮದುವೆಯಾದರೆ ₹2 ಲಕ್ಷ ಪ್ರೋತ್ಸಾಹ ಧನ; ಜೆಡಿಎಸ್ ಪ್ರಣಾಳಿಕೆ ಬಿಡುಗಡೆ

“ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಜೆಡಿಎಸ್‌ಗೆ ಮತ ನೀಡಿದರೆ ಕನ್ನಡ, ನಂದಿನಿ, ಕರ್ನಾಟಕ, ಪ್ರಾದೇಶಿಕತೆ, ಸೌಹಾರ್ದತೆ, ಸ್ವಾಭಿಮಾನದ ಪರವಾಗಿ ಮತ ನೀಡಿದಂತೆ. ಬಿಜೆಪಿಗೆ ಮತ ನೀಡಿದರೆ, ಹಿಂದಿ ಹೇರಿಕೆ, ಗುಜರಾತಿ ಗುಲಾಮಿತನ, ದೆಹಲಿ ಹೈಕಮಾಂಡ್‌ಗೆ ಮತ ನೀಡಿದಂತೆ” ಎಂದು ಹೇಳಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಬ್ಬಳ್ಳಿಯ ನೇಹಾ ಹಿರೇಮಠ್ ಅವರ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ: ಕುಟುಂಬಕ್ಕೆ ಸಾಂತ್ವನ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚಿಗೆ ಅನಾಗರಿಕ ವಿಕೃತ ದುಷ್ಕರ್ಮಿಯಿಂದ ಕೊಲೆಯಾದ ಹುಬ್ಬಳ್ಳಿಯ...

ಚುನಾವಣೆ ಬಂದಾಗ ಮಾತ್ರ ಮೋದಿಯವರಿಗೆ ಕನ್ನಡಿಗರ ನೆನಪಾಗುತ್ತದೆ: ಸಿಎಂ ಸಿದ್ದರಾಮಯ್ಯ ಕಿಡಿ

"ಕನ್ನಡ ನಾಡಿನ ಜನರ ಸಂಕಷ್ಟಗಳಿಗೆ ಸ್ಪಂದಿಸದ ನರೇಂದ್ರ ಮೋದಿಯವರಿಗೆ ಲೋಕಸಭಾ ಚುನಾವಣೆ...

ಪೆನ್‌ಡ್ರೈವ್ ಕಾಮಕೃತ್ಯ | ಹಾಸನಕ್ಕೆ ಸೀಮಿತವಾ? ರಾಜ್ಯ ಮತದಾರರ ಕರ್ತವ್ಯವೇನು?

ರಾಯಕೀಯ ಯುವ ನಾಯಕನೊಬ್ಬರ ಕಾಮಕೃತ್ಯಗಳ ಪೆನ್‌ಡ್ರೈನ್‌ ಹಾಸನ ಜಿಲ್ಲೆಯಲ್ಲಿ ಅಂತಕ ಸೃಷ್ಟಿಸಿದೆ....

ಮುಸ್ಲಿಂ ಮೀಸಲಾತಿ | ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ: ರವಿವರ್ಮ ಕುಮಾರ್

ಮುಸ್ಲಿಂರನ್ನು ಹಿಂದುಳಿದ ಪಟ್ಟಿಗೆ ಸೇರಿಸಿದ್ದಾರೆ ಅಂತ ಹೇಳಲಾಗುತ್ತಿದೆ. ಹಿಂದುಳಿದ ಮೀಸಲಾತಿ ಮುಸ್ಲಿಂರಿಗೆ...