ಚುನಾವಣಾ ಬಿಸಿಯಲ್ಲಿದ್ದ ಕಾರ್ಯಕರ್ತರಿಗೆ ಪೊಲೀಸರ ಚಾಟಿ : 22 ಕೋಟಿ ದಂಡ

Date:

  • ಪ್ರಚಾರದ ವೇಳೆ ನಿಯಮ ಉಲ್ಲಂಘಿಸಿದ ಕಾರ್ಯಕರ್ತರಿಗೆ ಬಿಸಿ
  • ಕ್ಯಾಮರಾ ಕಣ್ಗಾವಲ್ಲಿ ಸೆರೆಯಾದ ಲಕ್ಷ ಲಕ್ಷ ಟ್ರಾಫಿಕ್ ಪ್ರಕರಣಗಳು

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜಕೀಯ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ಎಲ್ಲ ಪಕ್ಷಗಳ ಕಾರ್ಯಕರ್ತರಿಗೆ ಬೆಂಗಳೂರು ಟ್ರಾಫಿಕ್ ಪೊಲೀಸರು ಚೆನ್ನಾಗಿ ಬಿಸಿ ಮುಟ್ಟಿಸಿದ್ದಾರೆ.

ರೋಡ್ ಶೋ, ಬಹಿರಂಗ ಪ್ರಚಾರಗಳಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳು, ಮತ್ತವರ ಬೆಂಬಲಿಗರ ಟ್ರಾಫಿಕ್ ವೈಲೇಷನ್‌ಗಳನ್ನು ದಾಖಲಿಸಿರುವ ಪೊಲೀಸರು ನಾಲ್ಕು ಲಕ್ಷಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಿ, 22.89 ಕೋಟಿ ದಂಡ ಹಾಕಿದ್ದಾರೆ.

ಹೌದು ಪ್ರಚಾರದ ಭರಾಟೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ಎಲ್ಲ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ಪೊಲೀಸರು ದಂಡದ ನೋಟಿಸ್ ಕಳುಹಿಸಿದ್ದಾರೆ. ನೀತಿ ಸಂಹಿತೆ ಜಾರಿ ಬಳಿಕ ನಿಯಮ ಮೀರಿ ಹೆಚ್ಚುವರಿ ವಾಹನ ಬಳಕೆ ಮಾಡಿರುವ ಪ್ರಕರಣಗಳೇ ಇವುಗಳಲ್ಲಿ ಜಾಸ್ತಿ ಇದ್ದು ಇವುಗಳೆ ಹೆಚ್ಚಿನ ದಂಡಕ್ಕೆ ಕಾರಣವಾಗಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ?:ರಾಜ್ಯದ 34 ಕಡೆ ಮತ ಎಣಿಕೆ : ಕೌಂಟಿಂಗ್…

ಬೆಂಗಳೂರು ನಗರದವೊಂದರಲ್ಲೇ 25 ದಿನದಲ್ಲಿ 4.12 ಲಕ್ಷ ಪ್ರಕರಣ ದಾಖಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಚುನಾವಣೆ ಪ್ರಚಾರದ ವಾಹನಗಳ ಮೇಲೆ ಬರೋಬ್ಬರಿ 22.89 ಕೋಟಿ ದಂಡ ಬಿದ್ದಿದೆ. ಇವುಗಳಲ್ಲಿ ಅತಿ ವೇಗದ ಚಾಲನೆ, ಸಿಗ್ನಲ್ ಜಂಪ್, ಜೀಬ್ರಾ ಕ್ರಾಸಿಂಗ್, ಹೆಲ್ಮೆಟ್ ರಹಿತ ಚಾಲನೆ, ಚಾಲನೆ ವೇಳೆ ಮೊಬೈಲ್ ಬಳಕೆ, ತ್ರಿಬಲ್ ರೇಡಿಂಗ್ ಸೇರಿದಂತೆ ಕೇಸ್‌ಗಳು ದಾಖಲಾಗಿವೆ.

ಗಮನಾರ್ಹ ವಿಚಾರ ಏನೆಂದರೆ ನಿಯಮ ಉಲ್ಲಂಘನೆಯ ಈ ಪ್ರಕರಣಗಳು ಹೆಚಾಗಿ ದಾಖಲಾಗಿರುವುದು ಸ್ಮಾರ್ಟ್ ಟ್ರಾಫಿಕ್ ಮೇಂಟೆನೆನ್ಸ್ ನ ಕ್ಯಾಮರಾಗಳಿಂದ ಎನ್ನುವುದು.

ನಗರದಾದ್ಯಂತ ಇರುವ 250 ಐಟಿಎಂಎಸ್ ಕ್ಯಾಮರಾಗಳ ದಾಖಲೆಗಳೊಂದಿಗೆ ಈ ಫೈನ್ ಹಾಕಲಾಗಿದೆ. ಇದರ ಜೊತೆಗೆ ನಿರ್ಭಯಾ ಫಂಡ್ ಅಡಿ ಹಾಕಲಾದ ನೇತ್ರ ಕ್ಯಾಮೆರಾಗಳನ್ನು ದಂಡ ವಿಧಿಸಲು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಇದರ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದೆನ್ನುವುದು ಇಲಾಖೆ ಮೂಲಗಳ ಮಾಹಿತಿ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮುಸ್ಲಿಂ ಮೀಸಲಾತಿ ರದ್ದು ನಿರ್ಧಾರಕ್ಕೆ ನಾವು ಬದ್ದರಾಗಿದ್ದೇವೆ: ಮಾಜಿ ಸಿಎಂ ಬೊಮ್ಮಾಯಿ

ಮುಸ್ಲಿಮರಿಗೆ ನೀಡಿರುವ ಮೀಸಲಾತಿ ರದ್ದು ಮಾಡಿರುವ ವಿಚಾರದಲ್ಲಿ ನಾವು ತೆಗೆದುಕೊಂಡ ನಿರ್ಧಾರಕ್ಕೆ...

ಚಿಕ್ಕಬಳ್ಳಾಪುರ | ಏಕಕಾಲದಲ್ಲಿ ಒಂದೇ ಕುಟುಂಬದ 85 ಮಂದಿ ಮತದಾನ

ಲೋಕಸಭಾ ಚುನಾವಣೆ ಹಿನ್ನೆಲೆ, ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನದ ಪ್ರಕ್ರಿಯೆ ಬಿರುಸಿನಿಂದ...

ಹಿಂದಿಗಿಂತ ಈಗ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ನನಗಿದೆ: ಡಿ ಕೆ ಸುರೇಶ್

ನಾನು ಕಳೆದ ಮೂರು ಚುನಾವಣೆಗಳಿಗಿಂತ ಈ ಬಾರಿ ಅತಿ ಹೆಚ್ಚಿನ ಮತಗಳ...

ಏ.29 ರಿಂದ ರಾಜ್ಯದ 11ಕ್ಕೂ ಅಧಿಕ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ : ಹವಾಮಾನ ಇಲಾಖೆ

ಏಪ್ರಿಲ್ 29ರಿಂದ ರಾಜ್ಯದ 11ಕ್ಕೂ ಅಧಿಕ ಜಿಲ್ಲೆಗಳಲ್ಲಿ ನಾಲ್ಕು ದಿನಗಳ ಕಾಲ...