ತುಮಕೂರು | 21 ನಾಮಪತ್ರಗಳು ತಿರಸ್ಕೃತ, ಯಾವ ಪಕ್ಷದಿಂದ ಯಾರು ಸ್ಪರ್ಧಿ?

Date:

  • ಏಪ್ರಿಲ್ 13 ರಿಂದ 20ರವರೆಗೆ 167 ಅಭ್ಯರ್ಥಿಗಳಿಂದ 258 ನಾಮಪತ್ರಗಳು ಸಲ್ಲಿಕೆಯಾಗಿದ್ದವು
  • 149 ಪುರುಷ ಅಭ್ಯರ್ಥಿಗಳು, ಐವರು ಮಹಿಳಾ ಅಭ್ಯರ್ಥಿಗಳ 137 ಉಮೇದುವಾರಿಕೆ ಪುರಸ್ಕೃತ

ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 13 ರಿಂದ
20ರವರೆಗೆ 167 ಅಭ್ಯರ್ಥಿಗಳಿಂದ 258 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಎಲ್ಲ ನಾಮಪತ್ರಗಳನ್ನು ಏಪ್ರಿಲ್ 21ರಂದು
ಆಯಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸಿದ್ದು, ಪರಿಶೀಲನೆ ನಂತರ 154 ನಾಮಪತ್ರಗಳು ಕ್ರಮಬದ್ಧವಾಗಿದ್ದು, 21 ನಾಮಪತ್ರಗಳು ತಿರಸ್ಕೃತವಾಗಿವೆ.

149 ಪುರುಷ ಅಭ್ಯರ್ಥಿಗಳು, ಐವರು ಮಹಿಳಾ ಅಭ್ಯರ್ಥಿಗಳ 137 ಉಮೇದುವಾರಿಕೆಗಳು ಪುರಸ್ಕೃತ ಗೊಂಡಿದ್ದು, ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಅಮ್ ಆದ್ಮಿ ಪಕ್ಷದ ತಲಾ ಹನ್ನೊಂದು ಮಂದಿ ಅಭ್ಯರ್ಥಿಗಳು, ಬಿಎಸ್‌ಪಿ 7, ಇತರೆ ಪಕ್ಷಗಳ 38 ಹಾಗೂ ಸ್ವತಂತ್ರ ಅಭ್ಯರ್ಥಿಗಳ 65 ನಾಮಪತ್ರಗಳು ಊರ್ಜಿತವಾಗಿವೆ.

ಚಿಕ್ಕನಾಯಕನಹಳ್ಳಿ ಕ್ಷೇತ್ರ:

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾಂಗ್ರೆಸ್ ಅಭ್ಯರ್ಥಿ ಕೆ.ಎಸ್ ಕಿರಣ್ ಕುಮಾರ್, ಆಮ್ ಆದ್ಮಿ ಪಕ್ಷದ ನಿಂಗರಾಜು ಎಸ್‌.ಸಿ, ಬಿಜೆಪಿಯ ಜೆ.ಸಿ ಮಾಧುಸ್ವಾಮಿ, ಜೆಡಿಎಸ್‌ನಿಂದ ಸಿ.ಬಿ ಸುರೇಶ್ ಬಾಬು, ಉತ್ತಮ ಪ್ರಜಾಕೀಯ ಪಕ್ಷದ ಜಯರಾಮ್ ಎಚ್.ಆರ್, ಭಾರತೀಯ ಬಹುಜನ ಕ್ರಾಂತಿ ದಳದ ಎಚ್.ಟಿ ನಾಗರಾಜು, ಆಲ್ ಇಂಡಿಯಾ ಮಹಿಳಾ ಎಂಪವರೆಂಟ್ ಪಕ್ಷದ ಎಂ.ಕೆ ಪಾಷ, ಕರ್ನಾಟಕ ರಾಷ್ಟ್ರ ಸಮಿತಿಯ ಮಲ್ಲಿಕಾರ್ಜುನಯ್ಯ ಬಿ.ಎಸ್, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಹನುಮಂತ ರಾಮ ನಾಯ್ಕ ಎಂ.ಬಿ, ಪಕ್ಷೇತರರಾದ ಕ್ಯಾಪ್ಟನ್ ಸೋಮಶೇಖರ್, ಗಂಗಾಧರಯ್ಯ, ಗಿರೀಶ್ ಆರ್., ನಾಸೀರ್ ಬೇಗ್ ಎಂ ಸೇರಿದಂತೆ 13 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ತಿಪಟೂರು ಕ್ಷೇತ್ರ

ಆಮ್ ಆದ್ಮಿ ಪಕ್ಷದ ಟಿ.ಎಸ್ ಚಂದ್ರಶೇಖರ್, ಬಿಜೆಪಿಯ ಬಿ ಸಿ ನಾಗೇಶ್, ಜೆಡಿಎಸ್‌ ಅಭ್ಯರ್ಥಿ ಕೆ ಟಿ ಶಾಂತಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಕೆ ಷಡಾಕ್ಷರಿ, ಕನ್ನಡ ದೇಶದ ಪಕ್ಷದ ಅರುಣ್ ಲಿಂಗ, ಉತ್ತಮ ಪ್ರಜಾಕೀಯ ಪಕ್ಷದ ಗಿರೀಶ ಎಸ್ ಬಿ., ಕರ್ನಾಟಕ ರಾಷ್ಟ್ರ ಸಮಿತಿಯ ಗಂಗಾಧರಯ್ಯ ಕೆ ಎಸ್‌, ಭಾರತೀಯ ಬಹುಜನ ಕ್ರಾಂತಿ ದಳದ ಆರ್ ಎಂ ಮಲ್ಲಿಕಾರ್ಜುನಸ್ವಾಮಿ, ಪಕ್ಷೇತರರಾದ ಅನಂತಶಯನ ಎ ಟಿ., ಟಿ ಎನ್ ಕುಮಾರಸ್ವಾಮಿ, ಭರತ್‌ ಬಿ ಎಸ್, ಎಂ ರವಿ, ಬಿ ಎನ್ ವಿಜಯಕುಮಾರ್, ಹರೀಶ್ ಟಿ ಎನ್ ಸೇರಿದಂತೆ 14 ಅಭ್ಯರ್ಥಿಗಳ ನಾಮಪತ್ರಗಳು ಸಿಂಧುವಾಗಿವೆ.

ತುರುವೇಕೆರೆ ಕ್ಷೇತ್ರ

ಕಾಂಗ್ರೆಸ್‌ ಅಭ್ಯರ್ಥಿ ಕಾಂತರಾಜ್ ಬಿ ಎಂ., ಜೆಡಿಎಸ್‌ನ ಎಂ ಟಿ ಕೃಷ್ಣಪ್ಪ, ಬಿಜೆಪಿಯ ಜಯರಾಮ್ ಎ ಎಸ್., ಆಮ್ ಆದ್ಮಿ ಪಾರ್ಟಿಯ ಜಯರಾಮ್ ಜಿ ಸಿ, ಬಿಎಸ್‌ಪಿ ಶ್ರೀನಿವಾಸ ಎಂ ಸಿ, ಭಾರತೀಯ ಬಹುಜನ ಕ್ರಾಂತಿ ದಳದ ಎಚ್ ಬಿ ಪುಟ್ಟಪ್ಪ, ಉತ್ತಮ ಪ್ರಜಾಕೀಯ ಪಕ್ಷದ ಭರತ್ ಎಸ್, ಕರ್ನಾಟಕ ರಾಷ್ಟ್ರ ಸಮಿತಿಯ ರಾಮ್ ಪ್ರಸಾದ್, ಆಪಿಐ ಹಟ್ಟಯ್ಯ ಎನ್, ಪಕ್ಷೇತರರಾದ ಕಪನಿಗೌಡ, ನಾರಾಯಣ, ಎಂ ಕೆ ವರದರಾಜು ಸೇರಿದಂತೆ 12 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ಕುಣಿಗಲ್ ಕ್ಷೇತ್ರ

ಬಿಜೆಪಿ ಅಭ್ಯರ್ಥಿ ಡಿ ಕೃಷ್ಣಕುಮಾರ್, ಆಮ್ ಆದ್ಮಿ ಪಾರ್ಟಿಯ ಎಚ್ ಎ ಜಯರಾಮಯ್ಯ, ಜೆಡಿಎಸ್‌ನ ಡಾ. ರವಿ ಬಿ ಎನ್, ಕಾಂಗ್ರೆಸ್‌ನ ರಂಗನಾಥ್ ಎಚ್ ಡಿ, ಕೆಆರ್‌ಎಸ್‌ನ ರಘು ಜೆ ಎಸ್, ರಾಷ್ಟ್ರೀಯ ಜನಹಿತ ಪಕ್ಷದ ರಮೇಶ್ ಎಸ್ ಬಿ ಹಾಗೂ ಸ್ವತಂತ್ರ ಅಭ್ಯರ್ಥಿಗಳಾದ ಬಿ ಟಿ ತಿರುಮಲೇಗೌಡ, ಎಚ್ ಡಿ ರಾಜೇಶ್, ಬಿ ಬಿ ರಾಮಸ್ವಾಮಿಗೌಡ, ಸುಮಾರಂಗನಾಥ್ ಸೇರಿದಂತೆ 10 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ತುಮಕೂರು ನಗರ ಕ್ಷೇತ್ರ

ಕಾಂಗ್ರೆಸ್‌ನ ಅಭ್ಯರ್ಥಿ ಇಕ್ಬಾಲ್‌ ಅಹ್ಮದ್, ಜೆಡಿಎಸ್‌ನ ಎನ್ ಗೋವಿಂದರಾಜು, ಬಿಜೆಪಿಯ ಜಿ ಬಿ ಜ್ಯೋತಿಗಣೇಶ್, ಬಿಎಸ್‌ಪಿಯ ಕೆ ಬಿ ದಿನೇಶ್ ಬಾಬು, ಆಮ್ ಆದ್ಮಿ ಪಾರ್ಟಿಯ ಮೊಹಮ್ಮದ್ ಗೌಸ್ ಪೀರ, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ಎಂ ವಿ ಕಲ್ಯಾಣಿ, ಕರ್ನಾಟಕ ರಾಷ್ಟ್ರ ಸಮಿತಿಯ ಗಜೇಂದ್ರ ಕುಮಾರ್ ಕೆ ಎಸ್, ಉತ್ತಮ ಪ್ರಜಾಕೀಯ ಪಕ್ಷದ ಟಿ ಎನ್ ರಾಜೇಶ್, ಪಕ್ಷೇತರರಾದ ಕುಮಾರ್ ಎಸ್, ಗುರುರಾಜ, ಗೋವಿಂದರಾಜು, ದಾದಾಪೀರ್, ನರಸೇಗೌಡ, ಪುಕಾಶ್ ಆರ್ ಎ ಜೈನ್, ಜಿ ಮನುಪುಸಾದ್, ವೀರೇಶ ಪ್ರಸಾದ್ ಆರ್, ಎಸ್ ಶಿವಣ್ಣ, ಶ್ರೀನಿವಾಸ್‌ ಜಿ ಕೆ ಸೇರಿದಂತೆ 18 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ತುಮಕೂರು ಗ್ರಾಮಾಂತರ ಕ್ಷೇತ್ರ

ಜೆಡಿಎಸ್‌ ಅಭ್ಯರ್ಥಿ ಡಿ ಸಿ ಗೌರಿಶಂಕರ್ ಸ್ವಾಮಿ, ಆಮ್ ಆದ್ಮಿ ಪಾರ್ಟಿಯ ದಿನೇಶ್ ಕುಮಾರ್ ಬಿ, ಕಾಂಗ್ರೆಸ್‌ನ ಜಿ ಎಚ್ ಷಣ್ಮುಖಪ್ಪ, ಬಿಜೆಪಿಯ ಬಿ ಸುರೇಶ್ ಗೌಡ, ಕೆಆರ್‌ಎಸ್‌ನ ವಿ ಎ ಆನಂದ್‌, ಸೋಶಿಯಾಲಿಸ್ಟ್ ಪಾರ್ಟಿ(ಇಂಡಿಯಾ)ಯ ಡಿ ಗೋಪಾಲಕ್ರಿಷ್ಣ, ಉತ್ತಮ ಪ್ರಜಾಕೀಯ ಪಕ್ಷದ ದಿನೇಶ್ ಟಿ ಎನ್, ಇಂಡಿಯನ್ ಮೂವ್‌ಮೆಂಟ್ ಪಕ್ಷದ ನಿಸ್ಸಾರ ಅಹಮ್ಮದ್, ಪಕ್ಷೇತರರಾದ ಅಶೋಕ ಕೆ ಎಸ್, ಎಸ್ ಟಿ ಗೋವಿಂದಯ್ಯ, ಯೋಗನರಸಿಂಹ ಮೂರ್ತಿ ಟಿ ಎಚ್, ಕೆ ವಿ ಶ್ರೀನಿವಾಸ್ ಕಲ್ಕೆರೆ, ಸಿದ್ಧರಾಮೇಗೌಡ ಸೇರಿದಂತೆ 13 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ಕೊರಟಗೆರೆ ವಿಧಾನಸಭಾ ಕ್ಷೇತ್ರ

ಜೆಡಿಎಸ್‌ ಅಭ್ಯರ್ಥಿ ಪಿ ಆರ್ ಸುಧಾಕರ್‌ ಲಾಲ್‌, ಬಿಜೆಪಿಯ ಬಿ ಎಚ್‌ ಅನಿಲ್‌ ಕುಮಾರ್‌, ಕಾಂಗ್ರೆಸ್‌ನ ಡಾ. ಜಿ ಪರಮೇಶ್ವರ್‌, ಆಮ್ ಆದ್ಮಿ ಪಾರ್ಟಿಯ ಡಿ ಹನುಮಂತರಾಯಪ್ಪ, ಬಿಎಸ್‌ಪಿಯ ಎಸ್ ಜಿ ಮಂಜುನಾಥ, ಕೆಆರ್‌ಎಸ್‌ನ ರವಿಕುಮಾರ್ ಕೆ ಸಿ, ಉತ್ತಮ ಪ್ರಜಾಕೀಯ ಪಕ್ಷದ ನಾಗೇಂದ್ರ ಟಿ ಎನ್, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾದ ಹನುಮಯ್ಯ ಎನ್, ಪಕ್ಷೇತರರಾದ ಆರ್ ನಾರಾಯಣಪ್ಪ, ಮುನಿಯಪ್ಪ, ಕೆ ಎಂ, ಬಿ ಎನ್ ವಿಜಯಲಕ್ಷ್ಮಿ, ವಿ ಶಾಂತಕುಮಾರ್, ಹನುಮಂತರಾಯಪ್ಪ, ಅನಿಲ್ ಕುಮಾರ್ ಟಿ ಎಚ್ ಸೇರಿದಂತೆ 14 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ಗುಬ್ಬಿ ವಿಧಾನಸಭಾ ಕ್ಷೇತ್ರ

ಬಿಜೆಪಿಯ ಎಸ್ ಡಿ ದಿಲೀಪ್ ಕುಮಾರ್, ಜೆಡಿಎಸ್‌ನ ನಾಗರಾಜು ಬಿ ಎಸ್, ಆಮ್ ಆದ್ಮಿ ಪಾರ್ಟಿ ಪ್ರಭುಸ್ವಾಮಿ ಬಿ ಎಸ್, ಬಿಎಸ್‌ಪಿಯ ಶಿವಣ್ಣ, ಕಾಂಗ್ರೆಸ್‌ನ ಎಸ್ ಆರ್ ಶ್ರೀನಿವಾಸ್, ಕೆಆರ್‌ಎಸ್‌ನ ಪ್ರವೀಣ ಎಸ್ ಆರ್, ಪಕ್ಷೇತರರಾದ ಎಚ್‌ ಎಚ್‌ ಗಿರಿಯಪ್ಪ, ದಿಲೀಪ್ ಸಿಂಗ್, ಎ ನಂಜುಂಡಯ್ಯ, ಡಾ. ಭಾವನಾ ಆರ್ ಗಿರಿಧರ್, ವೀರೇಶ್ ಪ್ರಸಾದ್‌ ಆರ್. ಶಿವಕುಮಾರ, ಟಿ ವಿ ಶ್ರೀನಿವಾಸ್ ಸೇರಿದಂತೆ 13 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ಈ ಸುದ್ದಿ ಓದಿದ್ದೀರಾ? ನಮ್ಮ ಕುಟುಂಬ ಯಾವತ್ತೂ ಪ್ರಚಾರಕ್ಕೆ ಬಂದಿಲ್ಲ, ನಮಗೆ ಸೋಲಿನ ಭಯವಿಲ್ಲ: ಯತೀಂದ್ರ

ಶಿರಾ ವಿಧಾನಸಭಾ ಕ್ಷೇತ್ರ

ಜೆಡಿಎಸ್‌ನ ಆರ್ ಉಗ್ರೇಶ್, ಕಾಂಗ್ರೆಸ್‌ನ ಟಿ ಬಿ ಜಯಚಂದ್ರ, ಬಿಎಸ್‌ಪಿಯ ನಟರಾಜು ಎನ್ ಕೆ, ಬಿಜೆಪಿಯ ಸಿ ಎಂ ರಾಜೇಶ್ ಗೌಡ, ಆಮ್‌ ಆದ್ಮಿ ಪಾರ್ಟಿಯ ಶಶಿಕುಮಾರ್ ಆರ್, ಉತ್ತಮ ಪ್ರಜಾಕೀಯ ಪಕ್ಷದ ಅಶೋಕ, ಡಾ. ಅಂಬೇಡ್ಕರ್ ಪೀಪಲ್ಸ್ ಪಕ್ಷದ ಎನ್ ಕುಮಾರ್, ಭಾರತೀಯ ಬೆಳಕು ಪಕ್ಷದ ಆರ್ ಕಂಬಣ್ಣ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ ಗಿರೀಶ್, ಸ್ವಯಂ ಕೃಷಿ ಪಕ್ಷದ ಕೆ ಟಿ ಗುಂಡರಾಜ್, ಕೆಆರ್‌ಎಸ್‌ನ ಪ್ರದೀಪ್‌ ಕುಮಾರ್, ಸ್ವತಂತ್ರ ಅಭ್ಯರ್ಥಿಗಳಾದ ಎಸ್‌ ಎನ್ ಕಾಂತರಾಜು, ಬಂಡಿ ರಂಗನಾಥ ವೈ ಆರ್, ಬಿ ಎ ಮಂಜುನಾಥ, ಜೆ ಎನ್ ರಾಜಸಿಂಹ, ರಂಗನಾಥ, ರಂಗನಾಥಯ್ಯ, ವೈ ಜಿ, ಲಲಿತಮ್ಮ ಆರ್, ಸಾದಿಕ್ ಪಾಷ ಸೇರಿದಂತೆ ಒಟ್ಟು 19 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ಪಾವಗಡ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್‌ನ ಎಚ್ ವಿ ವೆಂಕಟೇಶ್, ಜೆಡಿಎಸ್‌ನ ಕೆ ಎಂ ತಿಮ್ಮರಾಯಪ್ಪ, ಬಿಜೆಪಿಯ ಕೃಷ್ಣನಾಯಕ, ಬಿಎಸ್‌ಪಿಯ ಟಿ ಹನುಮಂತರಾಯ, ಆಮ್ ಆದ್ಮಿ ಪಾರ್ಟಿಯ ಎನ್ ರಾಮಾಂಜಿನಪ್ಪ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಗೇಂದ್ರ ಕುಮಾರ್, ಭಾರತೀಯ ಬಹುಜನ ಕ್ರಾಂತಿ ದಳದ ಬಿ ಟಿ ರಾಮಸುಬ್ಬಯ್ಯ, ಕೆಆರ್‌ಎಸ್‌ನ ನರಸಿಂಹರಾಜು ಸಿ ಎನ್, ಪಕ್ಷೇತರರಾದ ಗೋವಿಂದಪ್ಪ ವಿ, ಶ್ರೀನಿವಾಸ ಎಸ್ ಎಚ್, ಹನುಮಂತರಾಯಪ್ಪ, ನಾಗರಾಜಪ್ಪ, ಕೃಷ್ಣಮೂರ್ತಿ ಜೆ ಎನ್, ಎಸ್ ಟಿ ಮಹೇಶ್, ಹನುಮಂತರಾಯ ಓ, ಕೆಂಚಪ್ಪ ಸೇರಿದಂತೆ 16 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ಮಧುಗಿರಿ ವಿಧಾನಸಭಾ ಕ್ಷೇತ್ರ

ಕಾಂಗ್ರೆಸ್‌ನ ಕ್ಯಾತ್ಸಂದ್ರ ಎನ್ ರಾಜಣ್ಣ, ಬಿಜೆಪಿಯ ಎಲ್ ಸಿ ನಾಗರಾಜ, ಜೆಡಿಎಸ್‌ನ ಎಂ ವಿ ವೀರಭದ್ರಯ್ಯ, ಬಿಎಸ್‌ಪಿಯ ಎನ್ ಮಧು, ಆಮ್ ಆದ್ಮಿ ಪಾರ್ಟಿಯ ಸೈಯದ್ ಮುಜಾಮಿಲ್ ಪಾಷ, ಕೆಆರ್‌ಎಸ್‌ನ ಜಯಂತ್, ಉತ್ತಮ ಪ್ರಜಾಕೀಯ ಪಕ್ಷದ ಮುದ್ದುರಾಜು ಜಿ, ಪುಜಾಕೀಯ, ಲೋಕಶಕ್ತಿ ಪಕ್ಷದ ರಂಗನಾಥ ಆರ್ ಎಸ್‌, ಜೈ ಮಹಾಭಾರತ್ ಪಕ್ಷದ ವೆಂಕಟೇಶ, ಪಕ್ಷೇತರರಾದ ಧನುಷ್ ಕುಮಾರ್ ಬಿ ಕೆ, ಜಿ ಎಚ್ ಮಾರುತಿ, ಲಕ್ಷ್ಮಿ ನಾರಾಯಣಪ್ಪ ಸೇರಿದಂತೆ ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ 12 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ; ಮತದಾನ ಮಾಡಲು ಬಂದ ವೈದ್ಯನಿಂದ ಜೀವ ರಕ್ಷಣೆ

ಬೆಂಗಳೂರಿನ ಜೆ ಪಿ ನಗರದಲ್ಲಿರುವ ಜಂಬೂ ಸವಾರಿ ದಿನ್ನೆ ಮತಗಟ್ಟೆಯಲ್ಲಿ ಮತದಾನ...

ಚಿತ್ರದುರ್ಗ | ಲೋಕಸಭಾ ಚುನಾವಣೆ; ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಸಾವು

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ...

ಶಿವಮೊಗ್ಗ | ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ; ತಿಮ್ಲಾಪುರದ ಮಹಿಳೆಯರು ಸಂತಸ

"ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ" ಯಾವ ಸರ್ಕಾರ ಏನೇ ಮಾಡಿದರೂ 32...

ಕೋಲಾರ | ಮೂಲಭೂತ ಸೌಕರ್ಯ ಕೊರತೆ : ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ದೇಶದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದರೇ, ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ...