ಪ್ರಮುಖ ಸರ್ಕಾರಿ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) 2025ನೇ ಸಾಲಿಗೆ ಪ್ರೊಬೇಷನರಿ ಆಫೀಸರ್(Probationary Officer) ಹುದ್ದೆಗಳ ನೇಮಕಾತಿ ಕುರಿತ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಿದೆ. ಬ್ಯಾಂಕ್‌ನಲ್ಲಿ ಉದ್ಯೋಗ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಜುಲೈ 14ರೊಳಗೆ ಅರ್ಜಿ ಸಲ್ಲಿಸಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) 541 ಖಾಲಿ ಪ್ರೊಬೇಷನರಿ ಆಫೀಸರ್ (PO) ಹುದ್ದೆಗಳನ್ನು ಭರ್ತಿ ಮಾಡಲು ಜೂನ್ 24ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, 21 ವರ್ಷದಿಂದ 30 ವರ್ಷ ವಯಸ್ಸಿನ ಮತ್ತು ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ
SBI Bank ಹುದ್ದೆಗಳ ವಿವರ:
ಪದವಿಯ ಹೆಸರು: ಪ್ರೊಬೇಷನರಿ ಆಫೀಸರ್(PO)
ಒಟ್ಟು ಹುದ್ದೆಗಳು: 541
ಸ್ಥಳ: ಭಾರತದೆಲ್ಲೆಡೆ
ವೇತನ ಶ್ರೇಣಿ: ₹48,480 ರಿಂದ ₹85,920 (ತಿಂಗಳಿಗೆ)
ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪೂರೈಸಿರಬೇಕು.
ವಯೋಮಿತಿ (01-04-2025ರ ಪ್ರಕಾರ):
ಕನಿಷ್ಠ: 21 ವರ್ಷ
ಗರಿಷ್ಠ: 30 ವರ್ಷ
ವಯೋಮಿತಿ ಸಡಿಲಿಕೆ: ವರ್ಗ ಸಡಿಲಿಕೆ
OBC(NCL) ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.
SC/ST ಅಭ್ಯರ್ಥಿಗಳಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ.
PwBD(UR/EWS) ಮಾನದಂಡ ಅಂಗವೈಕಲ್ಯ ಹೊಂದಿರುವ ಆರ್ಥಿಕವಾಗಿ ಹಿಂದುಳಿದಿರುವ ವರ್ಗಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
PwBD(OBC) ಮಾನದಂಡ ಅಂಗವೈಕಲ್ಯ ಹೊಂದಿರುವ ಇತರೆ ಹಿಂದುಳಿದ ವರ್ಗಗಳಿಗೆ 13 ವರ್ಷ ವಯೋಮಿತಿ ಸಡಿಲಿಕೆ ಇದೆ.
PwBD (SC/ST) ಮಾನದಂಡ ಅಂಗವೈಕಲ್ಯ ಹೊಂದಿರುವ ಎಸ್‌ಸಿ/ಎಸ್‌ಟಿ ಸಮುದಾಯದ ಅಭ್ಯರ್ತಿಗಳಿಗೆ 15 ವರ್ಷ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ:
SC/ST/PwBD ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
UR/OBC/EWS ಅಭ್ಯರ್ಥಿಗಳಿಗೆ ₹750 ಅರ್ಜಿ ಶುಲ್ಕ ಇರುತ್ತದೆ.
ಪಾವತಿ ವಿಧಾನ: ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ನೆಟ್‌ಬ್ಯಾಂಕಿಂಗ್ ಮೂಲಕ ಅರ್ಜಿ ಶುಲ್ಕ ಪಾವತಿಸಬಹುದು.
SBI PO 2025- ಪರೀಕ್ಷಾ ಸಾರಾಂಶ
ಪ್ರೊಬೇಷನರಿ ಆಫೀಸರ್ ಆಯ್ಕೆ ವಿಧಾನವು ಮೂರು ಹಂತಗಳನ್ನು ಒಳಗೊಂಡಿದ್ದು, ಪ್ರಾಥಮಿಕ ಆನ್‌ಲೈನ್ ಪರೀಕ್ಷೆ(ಪ್ರಿಲಿಮ್ಸ್), ಮುಖ್ಯ ಪರೀಕ್ಷೆ ಮತ್ತು ಸಂದರ್ಶನದ ಮುಖಾಂತರ ಆಯ್ಕೆ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆಯ ಎಲ್ಲ ಹಂತಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ನೇಮಿಸಲಾಗುತ್ತದೆ. ₹48,480 ವೇತನ ಶ್ರೇಣಿ ಇರುತ್ತದೆ. ಭಾರತದ ಯಾವುದೇ ಸ್ಥಳದಲ್ಲಿಯಾದರೂ ನೇಮಕಾತಿಯಾಗಬಹುದು.
SBI Bank ಸಲ್ಲಿಸುವ ವಿಧಾನ:
ಅಧಿಕೃತ ವೆಬ್‌ಸೈಟ್: sbi.co.in
ಆನ್‌ಲೈನ್ ಫಾರ್ಮ್ ನವೀಕರಿಸಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ದಾಖಲಿಸಿ.
ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ಲೋಡ್ ಮಾಡಿ.
ಅರ್ಜಿ ಶುಲ್ಕ ಪಾವತಿಸಿ(ಅಗತ್ಯವಿದ್ದರೆ).
ಅಂತಿಮವಾಗಿ “Submit” ಕ್ಲಿಕ್ ಮಾಡಿ.
ಇದನ್ನೂ ಓದಿದ್ದೀರಾ? ಉದ್ಯೋಗ ಮಾಹಿತಿ | SSC CHSL ನೇಮಕಾತಿ; ಪಿಯುಸಿ ಪಾಸ್ ಆದವರು ಅರ್ಜಿ ಹಾಕಬಹುದು
ಮುಖ್ಯ ದಿನಾಂಕಗಳು:
ಅರ್ಜಿ ಆರಂಭವಾಗಿರುವ ದಿನಾಂಕ 24-06-2025, 14-07-2025 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಜುಲೈ 3ನೇ ಅಥವಾ 4ನೇ ವಾರ ಪ್ರಾಥಮಿಕ ಹಾಲ್ ಟಿಕೆಟ್ ಪಡೆಯಬಹುದು. ಜುಲೈ /ಆಗಸ್ಟ್ 2025ರಂದು ಪ್ರಾಥಮಿಕ ಪರೀಕ್ಷೆ ನಡೆಯುತ್ತದೆ. ಆಗಸ್ಟ್ / ಸೆಪ್ಟೆಂಬರ್ 2025 ರಂದು ಪ್ರಾಥಮಿಕ ಫಲಿತಾಂಶ ಪ್ರಕಟವಾಗುತ್ತದೆ.
ಪ್ರಾಥಮಿಕ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಗಳಿಗೆ ಸೆಪ್ಟೆಂಬರ್ 2025ರಂದು ಮುಖ್ಯ ಪರೀಕ್ಷೆ ನಡೆಯುತ್ತದೆ. ಬಳಿಕ ಅಕ್ಟೋಬರ್/ನವೆಂಬರ್ 2025ರಂದು ಅಂತಿಮ ಸಂದರ್ಶನ ನಡೆಯಲಿದೆ.
ಮೂರು ರೀತಿಯ ಪರೀಕ್ಷೆಗಳನ್ನು ಎದುರಿಸಿದ ಅಭ್ಯರ್ಥಿಗಳಿಗೆ ನವೆಂಬರ್/ಡಿಸೆಂಬರ್ 2025ರಂದು ಅಂತಿಮ ಫಲಿತಾಂಶ ಬರುತ್ತದೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ