ʼವಿರಾಟಪುರ ವಿರಾಗಿʼಯನ್ನು ಬಹುವಾಗಿ ಮೆಚ್ಚಿಕೊಂಡ ದತ್ತಣ್ಣ

Date:

ಹಾನಗಲ್‌ ಶ್ರೀ ಕುಮಾರಸ್ವಾಮಿಗಳ ಬದುಕಿನ ಕಥೆ ಆಧರಿಸಿದ ಚಿತ್ರ

ಜನವರಿ 13ರಂದು ಬಿಡುಗಡೆಯಾಗಿದ್ದ ʼವಿರಾಟಪುರ ವಿರಾಗಿʼ

ಹಾನಗಲ್‌ ಶ್ರೀ ಕುಮಾರಸ್ವಾಮಿಗಳ ಬದುಕಿನ ಕಥೆಯನ್ನು ಆಧರಿಸಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಬಿ.ಎಸ್‌ ಲಿಂಗದೇವರು ನಿರ್ದೇಶಿಸಿರುವ ʼವಿರಾಟಪುರ ವಿರಾಗಿʼ ಚಿತ್ರ ಕಳೆದ ಜನವರಿಯಲ್ಲಿ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಂಡಿತ್ತು. ಇತ್ತೀಚೆಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಪ್ರದರ್ಶನ ಕಂಡಿದ್ದ ಈ ಚಿತ್ರಕ್ಕೆ ಕನ್ನಡದ ಹಿರಿಯ ನಟ ದತ್ತಣ್ಣ ಮೆಚ್ಚುಗೆ ವ್ಯಕ್ತಡಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

12ನೇ ಶತಮಾನದ ಕಥಾಹಂದರವುಳ್ಳ ʼವಿರಾಟಪುರ ವಿರಾಗಿʼ ಚಿತ್ರವನ್ನು ವೀಕ್ಷಿಸಿರುವ ದತ್ತಣ್ಣ ಚಿತ್ರಕಥೆ ಸೇರಿದಂತೆ ಹಲವು ಅಂಶಗಳನ್ನು ಮೆಚ್ಚಿ ಚಿತ್ರತಂಡಕ್ಕೆ ದೀರ್ಘವಾದ ಪ್ರಶಂಸನೀಯ ಪತ್ರವನ್ನು ಬರೆದಿದ್ದಾರೆ.

ʼವಿರಾಟಪುರ ವಿರಾಗಿʼ ಚಿತ್ರತಂಡಕ್ಕೆ ದತ್ತಣ್ಣ ಬರೆದ ಪತ್ರದ ಸಾರಾಂಶ

ʼವಿರಾಟಪುರ ವಿರಾಗಿʼ ಕನ್ನಡ ಚಲನಚಿತ್ರ ಮಾರ್ಚ್ 30ರಂದು 14ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದ ಏಷ್ಯನ್ ಸ್ಪರ್ಧಾ ವಿಭಾಗದಲ್ಲಿ ಪ್ರಶಸ್ತಿ ಪಡೆದ ವಿಷಯ ಕೇಳಿದ್ದೆ. ಆ ಚಿತ್ರವನ್ನು ನೊಡಲಾಗಿರಲಿಲ್ಲ. ಇತ್ತೀಚೆಗಷ್ಟೆ ಲ್ಯಾಪ್‌ಟಾಪ್‌ನಲ್ಲಿ ನೋಡಿದೆ. ನೋಡುವ ಸಮಯದಲ್ಲಿ ಈ ಚಿತ್ರ ನನ್ನನ್ನು ಬೇರೊಂದು ಆಧ್ಯಾತ್ಮಿಕ ಲೋಕದಲ್ಲಿ ತೇಲಿಸಿಬಿಟ್ಟಿತ್ತು. ನಂತರದ ದಿನಗಳಲ್ಲೂ ಈ ಚಿತ್ರದ ಸನ್ನಿವೇಶಗಳು ಮತ್ತೆ ಮತ್ತೆ ನನ್ನ  ಆಂತರ್ಯದಲ್ಲಿ ಮರುಕಳುಹಿತ್ತಿದ್ದರಿಂದ ಅದಕ್ಕೆ ಕಾರಣಗಳನ್ನು ಹುಡುಕತೊಡಗಿದೆ. ನಾನು ವಿಮರ್ಶಕನಲ್ಲವಾದ್ದರಿಂದ ವಿಮರ್ಶೆಯ ಪದಪುಂಜಗಳಲ್ಲಿ ಆ ಅನುಭವವನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಆದರೂ ಈ ರೀತಿಯ ಬಯೋಪಿಕ್‌ಗಳನ್ನು ನೋಡಿದ ಹಿನ್ನೆಲೆಯಲ್ಲಿ ಒಬ್ಬ ಪ್ರೇಕ್ಷಕನಾಗಿ ನನ್ನ ಅನುಭವವನ್ನು ನನಗೇ ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದಾಗ ನನಗೆ  ಅನಿಸಿದ್ದನ್ನು ಇಲ್ಲಿ ದಾಖಲು ಮಾಡಿದ್ದೇನೆ.

  1. ಇದು ಒಂದು ಬಾರಿ ನೋಡಿ ಮರೆತುಬಿಡಬಹುದಾದ ಚಿತ್ರವಲ್ಲ. ಪದೇ ಪದೇ ನೋಡಬಹುದಾದ, ನೋಡಬೇಕಾದ, ನೋಡಿದ ಅನುಭವವನ್ನು ಮೆಲಕು ಹಾಕುತ್ತಾ ಅದರ ವಸ್ತುವಿಷೇಶವನ್ನು ವಿಶ್ಲೇಷಣೆಗೆ ಒಳಗಾಗಿಸಿ ಅದರ ರಸಸ್ವಾದನೆಯನ್ನು ಹಿಗ್ಗಿಸಿಕೊಳ್ಳಬಹುದಾದ ಚಿತ್ರ.
  2. ವೀರಶೈವ ಲಿಂಗಾಯತ ಪಂಥದಲ್ಲಿ ಪ್ರತಿಪಾದಿಸಿರುವ ಸಾರ್ವಕಾಲಿಕ ಸತ್ಯ, ಜ್ಞಾನ ದಾಸೋಹ, ಅಕ್ಷರ ದಾಸೋಹ, ಅನ್ನ ದಾಸೋಹ, ಸಾಮಾಜಿಕ ಕಳಕಳಿ ಇಂತಹ ಪ್ರಯೋಗಗಳ ಮೂಲಕ ಆ ಪಂಥದ ಹಿರಿಯರು ಸಮಾಜದ ಹಿತಕ್ಕಾಗಿ ಹಾಕಿಕೊಟ್ಟ ಬಲವಾದ ತಳಹದಿ ಈ ಚಿತ್ರದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ನಿರೂಪಿತವಾಗಿದೆ. ನಿಷ್ಠೆಯಿಂದ ಕಾರ್ಯ ಪ್ರವೃತ್ತರಾಗುವಂತೆ  ಪ್ರೇರೇಪಿಸುವ ಶಕ್ತಿ ಹೊಂದಿವೆ.
  3. ಯಾವುದೇ ಚಿತ್ರ ಎಷ್ಟೇ ಒಳ್ಳೆಯ ಕಥಾ ವಸ್ತುವನ್ನು ಹೊಂದಿದ್ದರೂ, ಅದನ್ನು ತೆರೆಮೇಲೆ ತರುವಾಗ ಸಿನಿಮೀಯ ಗುಣಗಳು ಪೂರಕವಾಗಿ ಕೆಲಸ ಮಾಡಿದ್ದರಷ್ಟೇ ಆ ಚಿತ್ರದ ಸಂಪೂರ್ಣ ಅನುಭವವನ್ನು ಕಟ್ಟಿಕೊಡಲು ಸಾಧ್ಯ. ಈ ನಿಟ್ಟಿನಲ್ಲಿ ನೋಡಿದಾಗಲೂ ಈ ಚಿತ್ರ ಗೆದ್ದಿದೆ ಎನ್ನಬಹುದು. ಚಿತ್ರಕಥೆ, ಪಾತ್ರವರ್ಗದ ಆಯ್ಕೆ, ಭಾಷೆಯ ಸೊಗಡು, ಎಡಿಟಿಂಗ್, ಕ್ಯಾಮೆರಾ ವರ್ಕ್, ಕಾಸ್ಟ್ಯೂಮ್, ಮೇಕಪ್,ಆರ್ಟ್ ಡೈರೆಕ್ಷನ್ ಎಲ್ಲವೂ ಔಚಿತ್ಯಪೂರ್ಣವಾಗಿದೆ. ಸಂಗೀತ ಇಡೀ ಚಿತ್ರವನ್ನು ಮೇಲ್ಮಟ್ಟಕ್ಕೆ ಎತ್ತಿದೆ.
  4. ನಾನೂ ನಟನಾಗಿರುವುದರಿಂದ ನಟನೆಯ ಬಗ್ಗೆ ನನ್ನ ನೋಟ ಸ್ವಲ್ಪ ತೀಕ್ಷ್ಣವಾಗಿರುವುದು ಸಹಜ. ಇಂದಿನ ಕೆಲವು  ಮಠಾಧೀಶರನ್ನೂ ಒಳಗೊಂಡಂತೆ ಹೆಚ್ಚಿನ ನಟ, ನಟಿಯರು ಮೊದಲ ಬಾರಿಗೆ ಕ್ಯಾಮೆರಾ ಮುಂದೆ ಬಂದಿದ್ದರೂ ತಮ್ಮ ಪಾತ್ರಗಳನ್ನು ಅನುಭವಿಸಿದ್ದಾರೆ. ಮಠಾದೀಶರ ಪಾಂಡಿತ್ಯ ಮತ್ತು ಮಾತಿನ ಶೈಲಿಯಿಂದಾಗಿ ಅವರ ಸಂಭಾಷಣೆಗಳು ಅಥೆಂಟಿಕ್‌ ಆಗಿ ಮೂಡಿಬಂದಿವೆ. ಪ್ರಧಾನ ಪಾತ್ರದಲ್ಲಿ ಸುಚೇಂದ್ರ ಪ್ರಸಾದರ ಪರಕಾಯ ಪ್ರವೇಶದಿಂದಾಗಿ ಸಾತ್ವಿಕ ನಟನೆಯ ಅನಾವರಣವಾಗಿದೆ. ಪ್ರಬುದ್ಧ ಪ್ರೇಕ್ಷಕರಿಗೆ ಇದೊಂದು ರಸದೌತಣ.
  5. ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಚಿತ್ರದಲ್ಲಿ ನಿರ್ದೇಶಕ ಲಿಂಗದೇವರು ಅವರ ತನ್ಮಯತೆ, ಶ್ರದ್ಧೆ, ಪರಿಶ್ರಮ, ತಯಾರಿ,ಜಾಣ್ಮೆ ಎದ್ದು ಕಂಡಿವೆ.

– ದತ್ತಾತ್ರೇಯ(ದತ್ತಣ್ಣ)

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಕ್ಷೇಪಾರ್ಹ ದೃಶ್ಯಗಳಿದ್ದರೆ ಬಿಗ್‌ಬಾಸ್‌ ಪ್ರಸಾರ ನಿಲ್ಲಿಸಿ: ಕೇಂದ್ರಕ್ಕೆ ಕೇರಳ ಹೈಕೋರ್ಟ್ ನಿರ್ದೇಶನ

ಮಲಯಾಳಂ ರಿಯಾಲಿಟಿ ಶೋ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಪ್ರಸಾರದ ನಿಯಮಾವಳಿಗಳನ್ನು ಉಲ್ಲಂಘಿಸುವ ಆಕ್ಷೇಪಾರ್ಹ...

ಹೆಣ್ಣುಮಕ್ಕಳ ಬಗ್ಗೆ ನಾಲಿಗೆ ಹರಿಬಿಟ್ಟ ಎಚ್‌ಡಿಕೆ ‘ದಾರಿತಪ್ಪಿದ ಮಗ’: ಪ್ರಕಾಶ್ ರಾಜ್

ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಮತ್ತು ಅವಹೇಳನಕಾರಿಯಾಗಿ ಮಾತನಾಡಿರುವ...

ಖ್ಯಾತ ಕನ್ನಡ ಸಿನಿಮಾ ನಿರ್ಮಾಪಕ ಸೌಂದರ್ಯ ಜಗದೀಶ್​ ಆತ್ಮಹತ್ಯೆ!

ಬೆಂಗಳೂರಿನ ಜೆಟ್​ಲಾಗ್​ ಪಬ್ ಮಾಲೀಕ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ...