ಅಶ್ಲೀಲ ವಿಡಿಯೋ ಪ್ರಸಾರ : 18 ಒಟಿಟಿ, 19 ವೆಬ್‌ಸೈಟ್‌ಗಳನ್ನು ನಿಷೇಧಿಸಿದ ಕೇಂದ್ರ

Date:

ಹಲವು ಎಚ್ಚರಿಕೆಗಳ ನಡುವೆಯೂ ಅಶ್ಲೀಲ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದ 18 ಒಟಿಟಿ ವೇದಿಕೆಗಳು ಹಾಗೂ 19 ವೆಬ್‌ಸೈಟ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.

19 ವೆಬ್‌ಸೈಟ್‌ಗಳಲ್ಲಿ 10 ಆಪ್‌ಗಳು 7 ಗೂಗಲ್‌ ಹಾಗೂ 3 ಆಪಲ್‌ ಆಪ್‌ ಸ್ಟೋರ್‌ನಿಂದ ನಿಷೇಧಿಸಲಾಗಿದೆ. 57 ಸಮಾಜಿಕ ಮಾಧ್ಯಮಗಳಿಗೆ ಸಂಬಂಧ ಹೊಂದಿದ ಈ ವೇದಿಕೆಗಳನ್ನು ನಿರ್ಬಂಧಗೊಳಿಸಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವಾಲಯ ತಿಳಿಸಿದೆ.

ಸೃಜನಶೀಲ ಅಭಿವ್ಯಕ್ತಿತ್ವದಡಿ ಅಶ್ಲೀಲ, ಅಸಭ್ಯತೆ ವಿಷಯಗಳನ್ನು ಪ್ರಸಾರ ಮಾಡಬಾರದೆಂದು ಈ ಆನ್‌ಲೈನ್‌ ವೇದಿಕೆಗಳಿಗೆ ಎಚ್ಚರಿಕೆ ನೀಡಿದ ನಂತರವೂ ಪ್ರಸಾರ ಮಾಡಿದ ಕಾರಣ ಈ ಬೆಳವಣಿಗೆ ನಡೆದಿದೆ. ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಆದ್ಯತೆಗಳಡಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾರ್ಚ್ ನಲ್ಲೇ ನೀರಿಗಾಗಿ ಹಾಹಾಕಾರ, ಮಿತ ಬಳಕೆಯ ಪಾಠ ಕಲಿಯಲು ಇದು ಸಕಾಲ

ಡ್ರೀಮ್‌ ಫಿಲ್ಮ್ಸ್‌, ವೋವಿ, ಯಸ್ಸಮಾ,  ಅನ್‌ಕಟ್‌ ಅಡ್ಡ, ಟ್ರಿ ಫ್ಲಿಕ್ಸ್, ಎಕ್ಸ್‌ ಪ್ರೈಮ್‌, ನಿಯೋನ್‌ ಎಕ್ಸ್‌ ವಿಐಪಿ, ಬೆಶರ್ಮಾಸ್, ಹಂಟರ್ಸ್, ರಾಬಿಟ್, ಎಕ್ಸ್‌ಟ್ರಾಮೂಡ್, ನ್ಯೂಫ್ಲಿಕ್ಸ್, ಮೂಡ್‌ಎಕ್ಸ್, ಮೋಜ್‌ಫ್ಲಿಕ್ಸ್‌, ಹಾಟ್‌ ಶಾಟ್ಸ್‌, ವಿಐಪಿ, ಫುಗಿ, ಚಿಕ್ಕೋಫ್ಲಿಕ್ಸ್‌ ಹಾಗೂ ಪ್ರೈಮ್‌ ಪ್ಲೇ  ನಿಷೇಧಗೊಂಡಿರುವ ಒಟಿಟಿಗಳು.

ದೃಶ್ಯ ಪ್ರಸಾರ ಮಾಡುವ ಸಂದರ್ಭದಲ್ಲಿ ಈ ಒಟಿಟಿಗಳು ಮಹಿಳೆಯರನ್ನು ಕೀಳಾಗಿ ಚಿತ್ರಿಸುತ್ತಿದ್ದವು. ಶಿಕ್ಷಕರು,ವಿದ್ಯಾರ್ಥಿಗಳು ಹಾಗೂ ಕುಟುಂಬ ಸಂಬಂಧಗಳ ಹಲವು ಅಸಮರ್ಪಕ ವಿಷಯಗಳಲ್ಲಿ ಬೆತ್ತಲೆ ಹಾಗೂ ಅಶ್ಲೀಲ ಚಿತ್ರಗಳನ್ನು ತೋರಿಸಲಾಗುತ್ತಿತ್ತು ಎಂದು ಕೇಂದ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಈ ಒಟಿಟಿ ಆಪ್‌ಗಳಲ್ಲಿ ಒಂದು ಆಪ್‌ ಒಂದು ಕೋಟಿಗೂ ಹೆಚ್ಚು ಡೌನ್‌ಲೋಡ್‌ಗಳಾಗಿದ್ದರೆ, ಇತರ ಎರಡು 50 ಲಕ್ಷ ಡೌನ್‌ಲೋಡ್‌ಗಳಾಗಿವೆ.  ಸಾಮಾಜಿಕ ಮಾಧ್ಯಮಗಳಲ್ಲಿ ಈ ಒಟಿಟಿ ವೇದಿಕೆಗಳು 32 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೊಲೀಸ್ ಭಾಷೆಯಲ್ಲಿ ದರ್ಶನ್ ವಿಚಾರಣೆ: ಕಾಲಿಗೆ ಬಿದ್ದು ಬೇಡಿಕೊಳ್ಳುತ್ತಿರುವ ಆರೋಪಿ ನಟ?

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಆರೋಪಿ ನಟ ದರ್ಶನ್...

ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ: ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಸುದೀಪ್ ಮಾತು

ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ನಟ ದರ್ಶನ್ ಹಾಗೂ ಆತನ ತಂಡ ಬರ್ಬರವಾಗಿ...

ಹ್ಯಾಕ್ ಆಗುವ ಸಾಧ್ಯತೆ; ವಿದ್ಯುನ್ಮಾನ ಮತಯಂತ್ರವನ್ನು ನಿಷೇಧಿಸಬೇಕು ಎಂದ ಎಲಾನ್‌ ಮಸ್ಕ್‌

ಸಾಮಾಜಿಕ ಮಾಧ್ಯಮ ‘ಎಕ್ಸ್‌’ನ ಮಾಲೀಕ ಎಲಾನ್‌ ಮಸ್ಕ್‌, ಕೃತಕ ಬುದ್ಧಿಮತ್ತೆ(ಎಐ) ಅಥವಾ...

ರೇಣುಕಾಸ್ವಾಮಿ ಕೊಲೆ ಪ್ರಕರಣ | ಮರಣೋತ್ತರ ಪರೀಕ್ಷೆಯಲ್ಲಿ ದೇಹದ 15 ಕಡೆಗಳಲ್ಲಿ ಗಾಯದ ಗುರುತು

ಬೆಂಗಳೂರಿನ ಆರ್ ಆರ್ ನಗರದಲ್ಲಿ ಚಿತ್ರನಟ ದರ್ಶನ್ ಮತ್ತು ತಂಡದಿಂದ ಇತ್ತೀಚೆಗೆ...