ಸಾವರ್ಕರ್‌ ಜೊತೆ ಸುಭಾಶ್ಚಂದ್ರ ಬೋಸ್‌ಗೆ ಸಂಬಂಧ ಕಲ್ಪಿಸಬೇಡಿ: ಟ್ರೇಲರ್‌ಗೆ ಆಕ್ಷೇಪ ಎತ್ತಿದ ನೇತಾಜಿ ಮೊಮ್ಮಗ

Date:

Advertisements

ಲೋಕಸಭಾ ಚುನಾವಣೆ ಸಮೀಪದಲ್ಲಿರುವಾಗಲೇ ದೇಶದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಿವಾದಾತ್ಮಕ ಮುಖಂಡ ಹಾಗೂ ಬಲಪಂಥೀಯರ ನೆಚ್ಚಿನ ನಾಯಕನಾಗಿರುವ ಪ್ರಬಲ ಹಿಂದುತ್ವವಾದಿಯಾಗಿದ್ದ ಸಾವರ್ಕರ್‌ ಬಗೆಗಿನ ಹಿಂದಿ ಸಿನಿಮಾವೊಂದು ತಯಾರಾಗಿದ್ದು, ಮಾರ್ಚ್‌ 22ರಂದು ಬಿಡುಗಡೆಯಾಗಲಿದೆ.

ಬಾಲಿವುಡ್‌ನ ನಟ ರಣದೀಪ್‌ ಹೂಡಾ ನಿರ್ದೇಶನದ ಈ ಸಿನಿಮಾದಲ್ಲಿ ಸ್ವತಃ ಇವರೇ ಸಾವರ್ಕರ್‌ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್‌ ನಿನ್ನೆ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದೆ.

ಟ್ರೇಲರ್ ಬಿಡುಗಡೆಯ ಬೆನ್ನಲ್ಲೇ ಆಕ್ಷೇಪ ಎತ್ತಿರುವ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್, “ಸಾವರ್ಕರ್‌ರೊಂದಿಗೆ ಸುಭಾಶ್ಚಂದ್ರ ಬೋಸ್‌ನವರಿಗೆ ಸಂಬಂಧ ಕಲ್ಪಿಸಬೇಡಿ” ಎಂದು ಟ್ವೀಟ್ ಮಾಡಿದ್ದಾರೆ.

Advertisements

ಮಂಗಳವಾರ ಸಂಜೆ ಟ್ವೀಟ್ ಮಾಡಿರುವ ನೇತಾಜಿ ಮೊಮ್ಮಗ, “ನೀವು ಸಾವರ್ಕರ್ ಕುರಿತು ಚಲನಚಿತ್ರವನ್ನು ಮಾಡುತ್ತಿರುವುದನ್ನು ನಾನು ಪ್ರಶಂಸಿಸುವೆ. ಆದರೆ ನಿಜವಾದ ವ್ಯಕ್ತಿತ್ವವನ್ನು ಪ್ರದರ್ಶಿಸುವುದು ಮುಖ್ಯ” ಎಂದು ತಿಳಿಸಿದ್ದಾರೆ.

“ದಯವಿಟ್ಟು ಸಾವರ್ಕರ್ ಜೊತೆಗೆ ‘ನೇತಾಜಿ ಸುಭಾಷ್ ಚಂದ್ರ ಬೋಸ್’ ಅವರ ಹೆಸರನ್ನು ಲಿಂಕ್ ಮಾಡುವುದಕ್ಕೆ ನನ್ನ ವಿರೋಧವಿದೆ. ಎಲ್ಲ ಧರ್ಮೀಯರು ಕೂಡ ನೇತಾಜಿಯವರನ್ನು ಅಪ್ಪಟ ಜಾತ್ಯತೀತ ನಾಯಕ ಎಂದು ಒಪ್ಪಿಕೊಂಡಿದ್ದರು. ನೇತಾಜಿ ದೇಶಭಕ್ತರ ದೇಶಭಕ್ತರಾಗಿದ್ದರು” ಎಂದು ಟ್ರೇಲರ್‌ನಲ್ಲಿ ನೇತಾಜಿ ಸುಭಾಸ್‌ಚಂದ್ರ ಪಾತ್ರಧಾರಿಯು ಸಾವರ್ಕರ್ ಪಾತ್ರಧಾರಿಯಾದ ರಣದೀಪ್‌ ಹೂಡಾ ಅವರನ್ನು ಅಪ್ಪಿಕೊಳ್ಳುವ ದೃಶ್ಯಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನೇತಾಜಿ ಮೊಮ್ಮಗ ಚಂದ್ರಬೋಸ್ ಅವರು 2016ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬಳಿಕ 2016ರ ವಿಧಾನಸಭಾ ಚುನಾವಣೆಯಲ್ಲಿ ಮತ್ತು ನಂತರ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎರಡು ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು. ಆ ಬಳಿಕ 2023ರ ಸೆಪ್ಟೆಂಬರ್‌ನಲ್ಲಿ ರಾಜೀನಾಮೆ ನೀಡಿ, ಹೊರಬಂದಿದ್ದರು.

“ನಾನು ಬಿಜೆಪಿಗೆ ಸೇರಿದಾಗ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಶರತ್ ಚಂದ್ರ ಬೋಸ್ ಅವರ ಸಿದ್ಧಾಂತವನ್ನು ಪ್ರಚಾರ ಮಾಡಲು ನನಗೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಲಾಗಿತ್ತು. ಆದರೆ ಅದ್ಯಾವುದಕ್ಕೂ ಅವಕಾಶವೇ ನೀಡಿರಲಿಲ್ಲ” ಎಂದು ಚಂದ್ರ ಬೋಸ್ ರಾಜೀನಾಮೆ ವೇಳೆ ಹೇಳಿಕೆ ನೀಡಿದ್ದರು.

ಇದನ್ನು ಓದಿದ್ದೀರಾ? ಸಿಬಿಐನವರು ಈಗಲೂ ಏನೆಲ್ಲಾ ಮಾಡ್ತಿದ್ದಾರೆ ಅನ್ನೋದನ್ನು ಸದ್ಯದಲ್ಲೇ ಬಹಿರಂಗಪಡಿಸುವೆ: ಡಿ ಕೆ ಶಿವಕುಮಾರ್

ಕ್ರಾಂತಿಕಾರಿ ಚಟುವಟಿಕೆ ನಡೆಸಿದ್ದರಿಂದ ಸಾವರ್ಕರ್ ಅವರನ್ನು ಬ್ರಿಟಿಷರು ಬಂಧಿಸಿ, ಅಂಡಮಾನ್‌ನ ಜೈಲಿನಲ್ಲಿ ಇರಿಸಿದ್ದರು. ಆ ಬಳಿಕ ನಾಲ್ಕು ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದ ನಂತರ, ಅವರನ್ನು ಬ್ರಿಟೀಷರು ಜೈಲಿನಿಂದ ಬಿಡುಗಡೆ ಮಾಡಿದ್ದರು. ಕ್ಷಮಾಪಣಾ ಪತ್ರ ಬರೆದಿದ್ದ ಸಾವರ್ಕರ್, ಫೆಬ್ರವರಿ 26, 1966ರಂದು ನಿಧನರಾಗಿದ್ದರು. ಗಾಂಧೀಜಿ ಹತ್ಯೆ ಮಾಡುವ ಸಂಚಿನಲ್ಲೂ ಸಾವರ್ಕರ್ ಪಾತ್ರದ ಬಗ್ಗೆಯೂ ಚರ್ಚೆಯಾಗಿತ್ತು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

Download Eedina App Android / iOS

X