ಒಟಿಟಿಯಲ್ಲಿ ಹೊಸ ದಾಖಲೆ ಸೃಷ್ಟಿಸಿದ ʼಹೊಂದಿಸಿ ಬರೆಯಿರಿʼ

Date:

ಯುವ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್‌ ನಿರ್ದೇಶನದ ಚಿತ್ರ

ಚಿತ್ರಮಂದಿರಗಳಲ್ಲೂ ಯಶಸ್ವಿ ಪ್ರದರ್ಶನ ಕಂಡಿದ್ದ ʼಹೊಂದಿಸಿ ಬರೆಯಿರಿʼ

ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡು ಇತ್ತೀಚೆಗೆ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದ್ದ ʼಹೊಂದಿಸಿ ಬರೆಯಿರಿʼ ಸಿನಿಮಾ ಒಟಿಟಿಯಲ್ಲೂ ಹೊಸ ದಾಖಲೆಯನ್ನು ಸೃಷ್ಟಿಸಿದೆ.

ʼಹೊಂದಿಸಿ ಬರೆಯಿರಿʼ ಸಿನಿಮಾ ಕಳೆದ ಫೆಬ್ರವರಿಯಲ್ಲಿ ತೆರೆಕಂಡಿತ್ತು. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಗಿಟ್ಟಿಸಿಕೊಂಡಿದ್ದ ಈ ಸಿನಿಮಾ 50 ದಿನಗಳನ್ನು ಪೂರೈಸಿದ ಬಳಿಕ ʼಅಮೆಜಾನ್‌ ಪ್ರೈಂʼ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿತ್ತು. ಸದ್ಯ ಒಟಿಟಿಯಲ್ಲಿ ಸದ್ದು ಮಾಡುತ್ತಿರುವ ʼಹೊಂದಿಸಿ ಬರೆಯಿರಿʼ ಬರೋಬ್ಬರಿ 50 ಮಿಲಿಯನ್‌ ನಿಮಿಷಗಳಷ್ಟು ವೀಕ್ಷಣೆಯನ್ನು ಪಡೆದಿದ್ದು, ಈ ವರ್ಷ ಒಟಿಟಿ ವೇದಿಕೆಯಲ್ಲಿ ಅತಿಹೆಚ್ಚು ವೀಕ್ಷಣೆ ಪಡೆದ ಕನ್ನಡದ ಚಿತ್ರ ಎಂಬ ದಾಖಲೆಯನ್ನು ಸೃಷ್ಟಿಸಿದೆ. ಇನ್ನುಮುಂದೆ ಈ ಚಿತ್ರ ಅಮೆರಿಕಾ ಮತ್ತು ಲಂಡನ್‌ನಲ್ಲಿಯೂ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

ಯುವ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್‌ ನಿರ್ದೇಶನದ ʼಹೊಂದಿಸಿ ಬರೆಯಿರಿʼ ಸಿನಿಮಾ, ಕಾಲೇಜು ದಿನಗಳ ಸ್ನೇಹ, ಪ್ರೀತಿ, ಬದುಕಿನ ಅನಿಶ್ಚಿತತೆಯ ಸುತ್ತ ಮೂಡಿ ಬಂದಿದೆ. ಭಾವನಾತ್ಮಕ ಕಥಾಹಂದರವುಳ್ಳ ಈ ಚಿತ್ರ ʼಬದುಕು ಬಂದಂತೆ ಸ್ವೀಕರಿಸಿʼ ಎಂಬ ಸಂದೇಶದೊಂದಿಗೆ ಪ್ರೇಕ್ಷಕರಿಗೆ ಹತ್ತಿರವಾಗಿತ್ತು. ಈ ಬಾರಿಯ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಈ ಚಿತ್ರ ಪ್ರದರ್ಶನ ಕಂಡಿರುವುದು ಗಮನಾರ್ಹ.

ನಿರ್ದೇಶಕ ಜಗನ್ನಾಥ್‌, ತಮ್ಮ ಸ್ನೇಹಿತರ ನೆರವಿನೊಂದಿಗೆ ನಿರ್ಮಿಸಿರುವ ಈ ಚಿತ್ರದಲ್ಲಿ ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀ ಮಹದೇವ್, ಅನಿರುದ್ದ್ ಆಚಾರ್ಯ, ಭಾವನಾ ರಾವ್, ಐಶಾನಿ ಶೆಟ್ಟಿ, ಸಂಯುಕ್ತ ಹೊರ್ನಾಡ್, ಅರ್ಚನಾ ಜೋಯಿಸ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರೈಲು ದುರಂತಕ್ಕೆ ಸರ್ಕಾರ ಹೊಣೆಯಲ್ಲವೇ? ನಟ ಕಿಶೋರ್‌ ಪ್ರಶ್ನೆ

ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕಿಶೋರ್‌ ಆಗ್ರಹ ಹಳ್ಳಿ ತಪ್ಪಿರುವುದು...

ʻಅಜ್ಮೀರ್ 92’ ಚಲನಚಿತ್ರ ನಿಷೇಧಕ್ಕೆ ಜಮೀಯತ್ ಉಲಮಾ ಹಿಂದ್ ಆಗ್ರಹ

ʻದಿ ಕೇರಳ ಸ್ಟೋರಿʼ ಬಳಿಕ ಮುಸ್ಲಿಮ್‌ ಸಮುದಾಯವನ್ನು ಕೆಟ್ಟದಾಗಿ ಚಿತ್ರೀಕರಿಸಿರುವ ಮತ್ತೊಂದು...

ಸುಮ್ಮನಿದ್ದರೆ ಐನ್‌ಸ್ಟೈನ್‌ ಪಠ್ಯವನ್ನೂ ಕಿತ್ತೆಸೆಯುತ್ತಾರೆ ; ʼಎನ್‌ಸಿಆರ್‌ಟಿʼ ನಡೆಗೆ ನಾಸೀರುದ್ದೀನ್‌ ಶಾ ಆಕ್ರೋಶ

10ನೇ ತರಗತಿಯ ಪಠ್ಯಕ್ರಮದಿಂದ ಪ್ರಮುಖ ವಿಷಯಗಳನ್ನು ತೆಗೆದು ಹಾಕಿರುವ ಕೇಂದ್ರ ಸರ್ಕಾರದ...

ಕೋಟಿ ಭುಜಗಳ ಶಕ್ತಿ ಸೂಲಿಬೆಲೆ ಬೆನ್ನಿಗಿದೆ : ನಟ ಜಗ್ಗೇಶ್‌

ಎಚ್ಚರಿಕೆ ನೀಡಿದ ಬಳಿಕವೂ ವಿವಾದಾತ್ಮಕ ಹೇಳಿಕೆ ನೀಡಿದ ಸೂಲಿಬೆಲೆ ಸಿಎಂ ಸಿದ್ದರಾಮಯ್ಯ ಹಿಟ್ಲರ್‌...