ʼದಹಾಡ್‌ʼ ವೆಬ್‌ ಸರಣಿಗೆ ಹಂತಕ ಸೈನೇಡ್ ಮೋಹನ್‌ ಕಥೆ ಸ್ಫೂರ್ತಿಯೇ?

Date:

Advertisements
  • ಸೈನೇಡ್ ಮೋಹನ್‌ ಕುಕೃತ್ಯಗಳನ್ನು ಹೋಲುವ ʼದಹಾಡ್‌ʼ ಕಥನ
  • ಹೋಲಿಕೆಯ ಕಾರಣಕ್ಕೇ ಹೆಚ್ಚು ಸದ್ದು ಮಾಡುತ್ತಿರುವ ʼದಹಾಡ್‌ʼ ಸರಣಿ

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಹಂತಕ ʼಸೈನೇಡ್ ಮೋಹನ್‌ʼ ಹೆಸರು ಭಾರೀ ಚರ್ಚೆಯಲ್ಲಿದೆ. ದಶಕದ ಹಿಂದೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಈ ನರಹಂತಕನ ಕುಕೃತ್ಯಗಳನ್ನು ಆಧರಿಸಿ ಇತ್ತೀಚೆಗೆ ಹಿಂದಿಯಲ್ಲಿ ʼದಹಾಡ್‌ʼ ಹೆಸರಿನ ವೆಬ್‌ ಸರಣಿ ಬಿಡುಗಡೆಯಾಗಿದೆ. ಆದರೆ, ಕರ್ನಾಟಕ ಮೂಲದ ʼಸೈನೇಡ್ ಮೋಹನ್‌ʼ ಕಥೆಯನ್ನು ಈ ಸರಣಿಯಲ್ಲಿ ರಾಜಸ್ತಾನದ್ದು ಎಂಬಂತೆ ಬಿಂಬಿಸಲಾಗಿದೆ.

ದಹಾಡ್‌ ವೆಬ್‌ ಸರಣಿ

ʼಕಾಲೇಜು ಪ್ರೊಫೆಸರ್‌ ಆನಂದ್‌ ಎಂಬಾತ ಅಮಾಯಕ ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ, ಅವರೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿ, ಕೊನೆಗೆ ಆ ಮಹಿಳೆಯರು ಗರ್ಭ ಧರಿಸಿದಾಗ ಸೈನೇಡ್ ಲೇಪಿತ ಗರ್ಭನಿರೋಧಕ ಮಾತ್ರೆಗಳನ್ನು ನೀಡಿ ಅವರನ್ನು ಕೊಲ್ಲುತ್ತಾನೆ. ಮೇಲ್ನೋಟಕ್ಕೆ ಆತ್ಮಹತ್ಯೆ ಎನ್ನಿಸಿದರೂ ಅನುಮಾನ ಹುಟ್ಟಿಸುವ ಈ ಸರಣಿ ಸಾವಿನ ಪ್ರಕರಣಗಳನ್ನು ಮಹಿಳಾ ಪೊಲೀಸ್‌ ಅಧಿಕಾರಿಯೊಬ್ಬರು ಹೇಗೆ ಭೇದಿಸುತ್ತಾರೆ ಎಂಬುದರ ಸುತ್ತ ಈ ವೆಬ್‌ ಸರಣಿ ಮೂಡಿಬಂದಿದೆ. ಇಡೀ ವೆಬ್‌ ಸರಣಿಯ ಕಥೆ ರಾಜಸ್ತಾನದ ಗ್ರಾಮೀಣ ಪ್ರದೇಶದಲ್ಲಿ ನಡೆಯುವಂಥದ್ದು.

Advertisements

ಸೈನೇಡ್ ಮೋಹನ್‌ ಕಥೆ

ʼದಹಾಡ್‌ʼ ವೆಬ್‌ ಸರಣಿಯನ್ನು ನೋಡಿದ ಪ್ರತಿಯೊಬ್ಬರು ಇದು ಕಾಮುಕ, ನರಹಂತಕ ಸೈನೇಡ್ ಮೋಹನನ ಕಥೆ ಎಂದೇ ಹೇಳುತ್ತಿದ್ದಾರೆ. ಕರ್ನಾಟಕದ ಕರಾವಳಿ ಮೂಲದ ಮೋಹನ್‌ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿದ್ದ. ಅಮಾಯಕ ಮಹಿಳೆಯರನ್ನು ಮದುವೆಯಾಗುವುದಾಗಿ ನಂಬಿಸಿ ಅವರೊಂದಿಗೆ ಲೈಂಗಿಕ ಸಂಪರ್ಕ ಸಾಧಿಸುತ್ತಿದ್ದ ಈತ, ಆ ಮಹಿಳೆಯರು ಗರ್ಭ ಧರಿಸುತ್ತಲೇ ಸೈನೇಡ್ ಲೇಪಿತ ಗರ್ಭ ನಿರೋಧಕ ಮಾತ್ರೆಗಳನ್ನು ನೀಡುತ್ತಿದ್ದ. ಗೌಪ್ಯತೆಯ ಕಾರಣಕ್ಕೆ ಸಾರ್ವಜನಿಕ ಶೌಚಾಲಯಗಳಲ್ಲಿ ಆ ಮಾತ್ರೆಗಳನ್ನು ಸೇವಿಸುತ್ತಿದ್ದ ಮಹಿಳೆಯರು ಕೊನೆಗೆ ಅದೇ ಶೌಚಾಲಯಗಳಲ್ಲಿ ಶವವಾಗಿ ಪತ್ತೆಯಾಗುತ್ತಿದ್ದರು. ಈ ರೀತಿ ಪ್ರತಿ ಮಹಿಳೆಯ ಶವ ಪತ್ತೆಯಾದಾಗಲೂ ಮೇಲ್ನೋಟಕ್ಕೆ ಆತ್ಮಹತ್ಯೆ ಎಂದೇ ಶಂಕೆ ವ್ಯಕ್ತವಾಗುತ್ತಿತ್ತು. ಆದರೆ, ಈ ಸರಣಿ ಕೊಲೆಗಳು ಆಕಸ್ಮಿಕವಲ್ಲ ಎಂದು ಅರಿತ ಪೊಲೀಸರು ತನಿಖೆ ನಡೆಸಿ 20 ಮಹಿಳೆಯರನ್ನು ಬಲಿ ಪಡೆದಿದ್ದ ಸೈನೇಡ್ ಮೋಹನನನ್ನು ಬಂಧಿಸುವಲ್ಲಿ ಯಶಸ್ವಿಯಾದರು. ನ್ಯಾಯಾಲಯದಲ್ಲಿ ಈತನ ಮೇಲಿನ ಎಲ್ಲ ಆಪಾದನೆಗಳು ಸಾಬೀತಾಗಿ ಸದ್ಯ ಮರಣ ದಂಡನೆ ಶಿಕ್ಷೆ ಅನುಭವಿಸುತ್ತಿದ್ದಾನೆ.

ʼದಹಾಡ್‌ʼ ವೆಬ್‌ ಸರಣಿ ʼಸೈನೇಡ್ ಮೋಹನ್‌ʼನ ಕುತೃತ್ಯಗಳ ಕಥೆಯನ್ನೇ ಹೋಲುವಂತಿದೆ. ಆದರೆ, ಇಡೀ ಕಥೆಯನ್ನು ರಾಜಸ್ತಾನದಲ್ಲಿ ನಡೆದದ್ದು ಎಂಬಂತೆ ತೋರಿಸಲಾಗಿದೆ. ಜೋಯಾ ಅಖ್ತರ್‌ ಈ ಸರಣಿಯ ಕಥೆಯನ್ನು ರಚಿಸಿದ್ದು, ಬಾಲಿವುಡ್‌ನ ಖ್ಯಾತ ನಿರ್ದೇಶಕಿ ರೀಮಾ ಕಾಗ್ತಿ ಮತ್ತು ರುಚಿಕಾ ಒಬೆರಾಯ್‌ ಜಂಟಿಯಾಗಿ ನಿರ್ದೇಶಿಸಿದ್ದಾರೆ. ವಿಜಯ್‌ ವರ್ಮಾ ಸರಣಿ ಹಂತಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬಾಲಿವುಡ್‌ನ ಖ್ಯಾತ ನಟಿ ಸೋನಾಕ್ಷಿ ಸಿನ್ಹಾ ಮಹಿಳಾ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಮಿಂಚಿದ್ದಾರೆ. ಕನ್ನಡಿಗ ಗುಲ್ಷನ್‌ ದೇವಯ್ಯ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ʼದಹಾಡ್‌ʼ ಚಿತ್ರಕಥೆಯ ಬಗ್ಗೆ ಹೋಲಿಕೆಯ ಮಾತುಗಳು ಕೇಳಿ ಬರುತ್ತಿವೆಯಾದರೂ ಚಿತ್ರತಂಡ ಮಾತ್ರ, ಕಾಲ್ಪನಿಕ ಕತೆ ಎಂದು ಹೇಳಿ, ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡದೆ ಸುಮ್ಮನಾಗಿದೆ.

c6d189e709d010a95cabcbe8c5246c21
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟ ,ನಿರ್ದೇಶಕ ಮುರಳಿ ಮೋಹನ್ ನಿಧನ; ಓಂ, ಶ್‌ ಸೇರಿ ಹಲವು ಚಿತ್ರಗಳಿಗೆ ಸಂಭಾಷಣೆ

ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಮುರಳಿ ಮೋಹನ್ ಅವರು ನಿಧನರಾಗಿದ್ದಾರೆ. ಹಲವು...

ನಾವು ಬಾಯಿ ಮುಚ್ಚಿಕೊಂಡಿದ್ದರೆ ಮತದಾನದ ಹಕ್ಕು ಕಸಿದುಕೊಳ್ಳುವ ದಿನ ದೂರವಿಲ್ಲ: ನಟ ಕಿಶೋರ್ ಕುಮಾರ್

ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಿದೆ ಎನ್ನಲಾದ ಮತಗಳ್ಳತನದ ಬಗ್ಗೆ ಲೋಕಸಭೆಯ ವಿಪಕ್ಷ...

ಹಣ ಪಡೆದು ವಂಚನೆ ಆರೋಪ: ನಟ ಧ್ರುವ ಸರ್ಜಾ ವಿರುದ್ಧ ಮಹಾರಾಷ್ಟ್ರದಲ್ಲಿ ಎಫ್‌ಐಆರ್‌ ದಾಖಲು

ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕ ರಾಘವೇಂದ್ರ ಹೆಗಡೆ ಅವರಿಗೆ ಕೋಟ್ಯಂತರ ರೂಪಾಯಿ...

Download Eedina App Android / iOS

X