2025ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ಭಾರತವನ್ನು ಪ್ರತಿನಿಧಿಸುವ ಸಿನಿಮಾವಾಗಿ ಕಿರಣ್ ರಾವ್ ಅವರ ನಿರ್ದೇಶನದ ‘ಲಾಪತಾ ಲೇಡೀಸ್’ ಅನ್ನು ಆಯ್ಕೆ ಮಾಡಲಾಗಿದೆ. ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ (ಎಫ್‌ಎಫ್‌ಐ) ಆಸ್ಕರ್ 2025ಕ್ಕೆ ‘ಲಾಪತಾ ಲೇಡೀಸ್’ ಸಿನಿಮಾವನ್ನು ಆಯ್ಕೆ ಮಾಡಿದೆ.
ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಎಫ್‌ಎಫ್‌ಐ ಸದಸ್ಯರು ಲಾಪತಾ ಲೇಡೀಸ್ ಅನ್ನು ಅಕಾಡೆಮಿ ಪ್ರಶಸ್ತಿಗೆ ಅಧಿಕೃತವಾಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದ್ದಾರೆ.
ಇದನ್ನು ಓದಿದ್ದೀರಾ? ಕಾರಿನಲ್ಲಿ ಪತ್ತೆಯಾದ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರದ ನಟ ಲೀ ಸನ್ ಕ್ಯುನ್ ಶವ
ಈ ಸಿನಿಮಾವನ್ನು ಕಿರಣ್ ರಾವ್ ನಿರ್ದೇಶಿಸಿದ್ದು ಅಮೀರ್ ಖಾನ್ ನಿರ್ಮಿಸಿದ್ದಾರೆ. ಪ್ರತಿಭಾ ರಂತ, ಸ್ಪರ್ಶ ಶ್ರೀವಾಸ್ತವ ಮತ್ತು ನಿತಾಂಶಿ ಗೋಯೆಲ್ ಈ ಸಿನಿಮಾದಲ್ಲಿ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಒಟ್ಟು 29 ಸಿನಿಮಾಗಳು ಆಸ್ಕರ್ 2025ಕ್ಕೆ ಆಯ್ಕೆ ಮಾಡಲು ಪಟ್ಟಿಯಾಗಿತ್ತು. ರಣಬೀರ್ ಕಪೂರ್ ಅವರ ಅನಿಮಲ್, ಕಾರ್ತಿಕ್ ಆರ್ಯನ್ ಅವರ ಚಂದು ಚಾಂಪಿಯನ್, ಪ್ರಭಾಸ್ ಅವರ ಕಲ್ಕಿ 2898 ಎಡಿ, ರಾಷ್ಟ್ರ ಪ್ರಶಸ್ತಿ ಗಳಿಸಿದ ಮಲಯಾಳಂ ಚಿತ್ರ ಆಟಮ್, ರಾಜ್‌ಕುಮಾರ್ ರಾವ್ ಅವರ ಶ್ರೀಕಾಂತ್ ಮತ್ತು ವಿಕ್ಕಿ ಕೌಶಲ್ ಅವರ ಸ್ಯಾಮ್ ಬಹದ್ದೂರ್ ಮುಂತಾದ ಸಿನಿಮಾಗಳಲ್ಲಿ ಆಸ್ಕರ್‌ಗೆ ಲಾಪತಾ ಲೇಡೀಸ್ ಆಯ್ಕೆಗೊಂಡಿದೆ.
Kiran Rao's 'Laapataa Ladies' picked for Oscars from list of 29 films, including ‘Animal’ and 'Aattam', by Jahnu Barua-led selection committee
— Press Trust of India (@PTI_News) September 23, 2024
