ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ನಟ ದರ್ಶನ್ ಹಾಗೂ ಆತನ ತಂಡ ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸುದೀಪ್ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ.
ಸ್ನೇಹ ಬೇರೆ ನ್ಯಾಯ ಬೇರೆ ಎಂದಿರುವ ಸುದೀಪ್, ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲೇಬೇಕು. ಯಾರು ತಪ್ಪಿಸ್ಥರಿದ್ದರೂ ಅವರಿಗೆ ಶಿಕ್ಷೆಯಾಗಲಿ ಎಂದು ಸುದೀಪ್ ಹೇಳಿದರು.
ಊರು ಯಾವುದೇ ಆಗಲಿ ಅನ್ಯಾಯ ಆದವರಿಗೆ ನ್ಯಾಯ ಸಿಗುವುದು ಮುಖ್ಯ. ಪೊಲೀಸರು ಹಾಗೂ ಮಾಧ್ಯಮಗಳು ಸತ್ಯ ಹೊರತರುವ ಕೆಲಸ ಮಾಡುತ್ತಿವೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ದರ್ಶನ್ ಆರೋಪಿಯಾಗಿರುವ ಕೊಲೆ ಪ್ರಕರಣ: ಹತ್ಯೆಯ ಸಮರ್ಥನೆಗಿಳಿದ ಅಭಿಮಾನಿಗಳು
ಸ್ನೇಹಿತ ಅಥವಾ ಯಾರೇ ಇರಲಿ ಚಿತ್ರರಂಗಕ್ಕೆ ಕೆಟ್ಟ ಹೆಸರು ತರಬಾರದು ಬಾಳಿ, ಬದುಕಬೇಕಿದ್ದ ರೇಣುಕಾ ಸ್ವಾಮಿಯ ಕೊಲೆ ಆಗಿದೆ. ಆ ಕುಟುಂಬಕ್ಕೆ ನ್ಯಾಯ ಸಿಗಬೇಕಿದೆ. ನಿಷೇಧ ಮಾಡುವುದಕ್ಕಿಂತ ರೇಣುಕಾಸ್ವಾಮಿ ಕೊಲೆಗೆ ನ್ಯಾಯ ಸಿಗೋದು ಮುಖ್ಯ ಎಂದು ಸುದೀಪ್ ತಿಳಿಸಿದರು.
ಈಗ ನಡೆಯುತ್ತಿರುವುದು ಯಾವುದು ಸರಿಯಿಲ್ಲ. ಇಂತಹ ಬೆಳವಣಿಗೆಯನ್ನು ನೋಡಿದರೆ ಚಿತ್ರರಂಗಕ್ಕೆ ನ್ಯಾಯ ಸಿಗಬೇಕಿದೆ ಎನಿಸುತ್ತಿದೆ. ಯಾರು ಏನೇ ಮಾಡಿದರೂ ಚಿತ್ರರಂಗ ಹೆಸರು ಕೇಳಿ ಬರುತ್ತಿದೆ. ಈ ಪ್ರಕರಣದಲ್ಲಿ ತಪ್ಪಿಸ್ಥರಿಗೆ ಶಿಕ್ಷೆ ಆಗುವ ಮೂಲಕ ಚಿತ್ರರಂಗಕ್ಕೆ ಕ್ಲೀನ್ ಚಿಟ್ ಸಿಗಬೇಕಿದೆ ಎಂದು ಸುದೀಪ್ ತಿಳಿಸಿದರು.
