ಕಣ್ಣಾಲಿ ಒದ್ದೆ ಮಾಡುವ ʼಗುರುತ್ವಾಕರ್ಷಣೆʼಯ ʼಅವ್ವ ಅವ್ವʼ ಹಾಡು; ಮೆಹಬೂಬ್‌ ಸಾಬ್‌ ಧ್ವನಿಗೆ ಸಲಾಂ ಎಂದ ಸಂಗೀತ ಪ್ರಿಯರು

Date:

ಚಿತ್ರರಂಗದಲ್ಲಿ ಸದ್ಯ ಪ್ಯಾನ್ ಇಂಡಿಯಾ ಮತ್ತು ಬಿಗ್ ಬಜೆಟ್ ಸಿನಿಮಾಗಳದ್ದೇ ಅಬ್ಬರ. ಇಂತಹ ಸಂದರ್ಭದಲ್ಲಿ ತಾಯಿಯ ಸೆಂಟಿಮೆಂಟ್ ಮತ್ತು ದೇಸಿ ಸೊಗಡನ್ನು ಹೊತ್ತು ‘ಗುರುತ್ವಾಕರ್ಷಣೆ’ ಎಂಬ ಸಣ್ಣ ಬಜೆಟ್‌ನ, ಅಷ್ಟೇ ದೊಡ್ಡ ಮಟ್ಟದ ಭರವಸೆಯ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

- Advertisement -

ಏ.15ರಂದು ಚಿತ್ರದ ʼಅವ್ವ ಅವ್ವ ನನ್ನ ಬಿಟ್ಟೋದ್ಯಲ್ಲೇʼ ಹಾಡಿನ ಲಿರಿಕಲ್‌ ವಿಡಿಯೋ ರಿಲೀಸ್‌ ಆಗಿದ್ದು, ಲಕ್ಷಾಂತರ ವೀಕ್ಷಣೆ ಪಡೆದು ಮುನ್ನುಗ್ಗುತ್ತಿದೆ. ಸರಿಗಮಪ ಖ್ಯಾತಿಯ ಮೆಹಬೂಬ್‌ ಸಾಬ್‌ ಹಾಡಿಗೆ ಧ್ವನಿಯಾಗಿದ್ದಾರೆ. ನೀತು ನಿನಾದ್‌ ಪಿ ಅವರ ಸಂಗೀತ ಸಂಯೋಜನೆ, ಮನೋಜ್‌ ಸೌಗಂದ್‌ ಅವರ ಸಾಹಿತ್ಯ ಭರವಸೆ ಮೂಡಿಸುತ್ತಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

‘ಕೈಮುಗಿದು ಕಾಲಿಗೆ ಬೀಳುವೆ…’ ಪ್ರಜಾಪ್ರಭುತ್ವ ಕುಸಿತಕ್ಕೆ ಮುನ್ನುಡಿಯೇ?

ಜಾತಿ ಅಸಮಾನತೆ, ಸಾಮಾಜಿಕ ಶೋಷಣೆ ಮತ್ತು ರಾಜಕೀಯ ಪ್ರಭಾವದ ಮುಂದೆ ಜನಪ್ರತಿನಿಧಿಗಳೇ ಕೈಮುಗಿದು ನಿಲ್ಲುವ ದುಸ್ಥಿತಿ ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತಿದೆ. ಸಂವಿಧಾನ ಸಾರಿದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವ ಕೇವಲ ಕಾಗದಕ್ಕೆ ಸೀಮಿತವಾಗುತ್ತಿದೆಯೇ...

JNU ವಿದ್ಯಾರ್ಥಿ ‘ನಜೀಬ್’ ನಾಪತ್ತೆಗೆ 10 ವರ್ಷಗಳು: ಉತ್ತರ...

ತನಿಖಾ ಸಂಸ್ಥೆಗಳು ಕಡತವನ್ನು ಮುಚ್ಚಿದ ಮಾತ್ರಕ್ಕೆ ಒಬ್ಬ ತಾಯಿಯ ಹುಡುಕಾಟವನ್ನಾಗಲಿ ಅಥವಾ ಅಮಾಯಕ ವಿದ್ಯಾರ್ಥಿಯೊಬ್ಬನ ನಾಪತ್ತೆ ಕುರಿತ ಪ್ರಶ್ನೆಗಳನ್ನಾಗಲಿ ಅಳಿಸಿಹಾಕಲು ಸಾಧ್ಯವಿಲ್ಲ. ನಜೀಬ್ ಅಹ್ಮದ್ ಅವರನ್ನು ಕೇವಲ ಒಂದು ಪ್ರತಿಭಟನೆಯ ಸಂಕೇತವಾಗಿ ನೆನೆಯುವ...

ಜಯಂತ್‌ ದೊರೆ ನಾಯಕನಾಗಿ ಮತ್ತು ಸುಕೃತಿ ಪ್ರಭಾಕರ್‌ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ದಿವ್ಯಕುಮಾರ್ ಸತ್ಯಗಾಲ, ಮಮತಾ ತುರುವೇಕೆರೆ, ವಿಜಯ್‌ ಕಿರಣ್‌, ಮಂಡ್ಯ ಸಿದ್ದು ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳು ಚಿತ್ರದಲ್ಲಿದ್ದಾರೆ.

ನಿರ್ದೇಶಕ ಮಹೇಂದರ್‌ ಎಸ್‌ ಮನ್ಸೂರ್‌ ಆಕ್ಷನ್ ಕಟ್ ಅಷ್ಟೇ ಅಲ್ಲದೆ, ನಿರ್ಮಾಣ, ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ನಿರ್ಮಾಣದಲ್ಲಿ ಪ್ರಿಯಾ ಜಿ ಅವರು ಸಾಥ್ ನೀಡಿದ್ದಾರೆ.

WhatsApp Image 2026 04 18 at 3.13.49 PM

“ಇದು ನನ್ನದೇ ಕತೆ. ನನ್ನ ತಾಯಿ ಅಗಲಿ 5 ವರ್ಷಗಳಾಗಿವೆ. ಅವರು ತಮ್ಮ ಕೊನೆಯ ಕ್ಷಣದಲ್ಲಿ ನೀಡಿದ ಒಂದು ಭಾಷೆ ಈ ಸಿನಿಮಾ ನಿರ್ಮಿಸಲು ಪ್ರೇರಣೆಯಾಗಿದೆ. ‘ಮದರ್ ಪ್ರಾಮೀಸ್ ಟಾಕೀಸ್’ ಬ್ಯಾನರ್ ಅಡಿಯಲ್ಲಿ ಚಿತ್ರ ತಯಾರಿಸಿದ್ದೇನೆ. ತಾಯಿಯ ಸೆಂಟಿಮೆಂಟ್‌ ಇಂದ ಬಂದ ಚಿತ್ರಗಳು ಸೋತಿರುವುದು ತೀರಾ ಕಡಿಮೆ. ಅದೇ ಭರವಸೆಯಲ್ಲಿ ಕಡಿಮೆ ಬಜೆಟ್‌ನಲ್ಲೇ ಚಿತ್ರ ರೆಡಿ ಮಾಡಿದ್ದೇನೆ. ಒಳ್ಳೆಯ ಕತೆ ಇರುವ ಚಿತ್ರವನ್ನು ಕನ್ನಡ ಪ್ರೇಕಕರು ಕೈಬಿಡಲ್ಲ ಎನ್ನುವ ನಂಬಿಕೆ ಇದೆ. ಚಿತ್ರವನ್ನು ಮುಂದಿನ ತಿಂಗಳು ರಿಲೀಸ್‌ ಮಾಡುವ ಪ್ಲ್ಯಾನ್‌ ಇತ್ತು. ಆದರೆ ಸದ್ಯ ಸೆನ್ಸಾರ್‌ಶಿಪ್‌ ಪ್ರಕ್ರಿಯೆ ನಡೆಯುತ್ತಿದೆ. ಅದು ಮುಗಿದ ಕೂಡಲೇ ರಿಲೀಸ್‌ ಡೇಟ್‌ ತಿಳಿಸಲಾಗುವುದು. ಎಲ್ಲರೂ ಚಿತ್ರ ನೋಡಿ ಹಾರೈಸಿ, ಗೆಲ್ಲಿಸಿ, ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಿ” ಎಂದರು ನಿರ್ದೇಶಕ ಮಹೇಂದರ್‌ ಸಿ.

ಇದನ್ನೂ ಓದಿ: ಸಂಗೀತಪ್ರೇಮಿಗಳ ಎದೆತಣಿಸಿದ ಅಸಲಿ ಪ್ರತಿಭೆ ಆಶಾ ಭೋಸ್ಲೆ

“ಕಡಿಮೆ ಬಜೆಟ್‌ನಲ್ಲಿ ತಯಾರಾಗಿದ್ದರೂ, ಇದು ಇಡೀ ಕುಟುಂಬ ಕುಳಿತು ನೋಡುವಂತಹ ಸುಂದರ ಸಿನಿಮಾ. ತಾಯಿಯನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಈ ಸಿನಿಮಾ ಇಷ್ಟವಾಗಲಿದೆ” ಎನ್ನುವುದು ತಂಡದ ವಿಶ್ವಾಸ.

ಸರಳ ಕಥೆ, ದೇಸಿ ಸೊಗಡು ಮತ್ತು ತಾಯಿಯ ಮಮಕಾರದ ಈ ಸಿನಿಮಾವನ್ನು ನೋಡಿ ಹಾರೈಸುವ ಜವಾಬ್ದಾರಿ ಈಗ ಪ್ರೇಕ್ಷಕರ ಮೇಲಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಭಾರತ & ಚೀನಾದ H-1B ಉದ್ಯೋಗಿಗಳಿಂದ ಅಮೆರಿಕನ್ನರ ಉದ್ಯೋಗಕ್ಕೆ ಕುತ್ತು; ಸಂಸದ ರಿಲೆ ಮೂರ್ ಆರೋಪ

ಅಮೆರಿಕದ ಕಂಪ್ಯೂಟರ್‌ ಸೈನ್ಸ್‌ ಪದವೀಧರರ ಉದ್ಯೋಗಾವಕಾಶಗಳನ್ನು ಭಾರತ ಮತ್ತು ಚೀನಾದಿಂದ ಬರುವ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ; ಸುಪ್ರೀಂನದ್ದು ದ್ವಂದ್ವ ನಿಲುವಲ್ಲವೇ?

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ...

ದೇಶ ತೊರೆಯುವಂತೆ ನೋಟಿಸ್‌; ಹೈಕೋರ್ಟ್ ಮೆಟ್ಟಿಲೇರಿದ ನಟ ಇಮ್ರಾನ್ ಖಾನ್

ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆದ...

ಅವಧಿ ಮೀರಿದ ಆಹಾರ ಮರುಮಾರಾಟ ಆರೋಪ: ರಿಲಯನ್ಸ್‌, ಬ್ಲಿಂಕಿಟ್‌ ಘಟಕಗಳ ವಿರುದ್ಧ ತನಿಖೆ

ಅವಧಿ ಮೀರಿದ, ಹಾಳಾದ ಹಾಗೂ ಗ್ರಾಹಕರು ತಿರಸ್ಕರಿಸಿದ ಆಹಾರ ಪದಾರ್ಥಗಳನ್ನು ನಾಶಪಡಿಸುವ...