ಬೆಂಗಳೂರಿನ ಕ್ರೈಸ್ಟ್ ಕಾಲೇಜು (ಈಗ ಯುನಿವರ್ಸಿಟಿ) ಅಂದಾಕ್ಷಣ ನೆನಪಾಗೋದು ಅಲ್ಲಿನ ಕನ್ನಡ ಸಂಘ. ಈ ಕನ್ನಡ ಸಂಘದ ಹೆಗ್ಗಳಿಕೆ ಏನಂದ್ರೆ, ಇಡೀ ರಾಜ್ಯಕ್ಕೆ ಕ್ರೈಸ್ಟ್ ಕಾಲೇಜನ್ನು ಪರಿಚಯಿಸಿದ್ದು. ಈಗಲೂ ಬಹಳಷ್ಟು ಜನಕ್ಕೆ ಕ್ರೈಸ್ಟ್ ಕಾಲೇಜು ಅಥವಾ ಯುನಿವರ್ಸಿಟಿ ಗೊತ್ತಿರೋದೇ ಕನ್ನಡ ಸಂಘದ ಮೂಲಕ. ಇದಕ್ಕೆ ಬಹಳ ದೊಡ್ಡ ಅಡಿಪಾಯ ಹಾಕಿದವರು ಮೇಷ್ಟ್ರು ಚಿ ಶ್ರೀನಿವಾಸರಾಜು.
ಕನ್ನಡ ಸಂಘವು ಪ್ರತೀ ವರ್ಷ ನಡೆಸುವ ಕವಿತೆ ಮತ್ತು ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದ ಬಹುತೇಕ ವಿದ್ಯಾರ್ಥಿಗಳು ಈಗ ಚಿರಪರಿಚಿತ ಬರಹಗಾರರಾಗಿದ್ದಾರೆ. ಆ ಸ್ಪರ್ಧೆಗಳ ಪ್ರಾಮಾಣಿಕತೆ, ಅಚ್ಚುಕಟ್ಟುತನ, ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಿಗುವ ಪ್ರೀತಿ ಮತ್ತು ಪ್ರೋತ್ಸಾಹ ನಿಜಕ್ಕೂ ಬೆಲೆ ಕಟ್ಟಲಾಗದ್ದು.
ಇಂತಹ ಅತ್ಯಪರೂಪದ ಸಂಘವನ್ನು ಕಳೆದ ಹದಿನೈದು ವರ್ಷದಿಂದ ಮುನ್ನಡೆಸುತ್ತ ಬರುತ್ತಿರುವವರು ಕನ್ನಡ ಪ್ರಾಧ್ಯಾಪಕರಾದ ಎಂ ಟಿ ರತಿ. ಕೊಡಗಿನ ಗ್ರಾಮೀಣ ಪ್ರದೇಶವರಾದ ಇವರು, ಬೆಂಗಳೂರನ್ನು ತಮ್ಮದಾಗಿಸಿಕೊಂಡ ಬಗೆ ಮತ್ತು ಅದೇ ಹೊತ್ತಿಗೆ ಕನ್ನಡ ಸಂಘದ ಹಿರಿಮೆಯನ್ನು ಕಾಪಾಡಿದ ರೀತಿ ಮೆಚ್ಚುವಂಥದ್ದು.
ಈ ಆಡಿಯೊ ಸಂದರ್ಶನದಲ್ಲಿ ಅವರು, ಶ್ರೀನಿವಾಸರಾಜು ಅವರ ನಂತರ ಕನ್ನಡ ಸಂಘ ಮುನ್ನಡೆಸುವಾಗ ಎದುರಾದ ಸವಾಲುಗಳು, ತಮ್ಮ ನೆಚ್ಚಿನ ನೆಲವಾದ ಕೊಡಗಿನ ಜನಜೀವನವು ಸಹಜ ಬದುಕನ್ನು ಕಳೆದುಕೊಂಡ ಸ್ಥಿತ್ಯಂತರ, ಬೆಂಗಳೂರು ವಿವಿಯ ಕನ್ನಡ ವಿಭಾಗದ ಗತವೈಭವ, ತಮ್ಮ ಜೊತೆ ವಾಗ್ವಾದ ಮಾಡಿಕೊಂಡ ವಿದ್ಯಾರ್ಥಿಯೊಬ್ಬ ಕಟ್ಟಿದ ಕ್ರಾಂತಿಕಾರಿ ತಂಡ… ಮತ್ತಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಬರಹಗಳನ್ನು ಆಲಿಸಲು ಕ್ಲಿಕ್ ಮಾಡಿ – ಈದಿನ.ಕಾಮ್ ಕೇಳುದಾಣ