(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ ಸ್ಪಾಟಿಫೈ ಆ್ಯಪ್)
ಮಾಧ್ಯಮದ ಮಂದಿ ಸಾಮಾನ್ಯವಾಗಿ ಯಾರನ್ನು ಮಾತಾಡಿಸ್ತಾರೆ? ಸುದ್ದಿಗಳಿಗೆ ಬೇಕಾದ ಮಾಹಿತಿ ಯಾರಿಂದ ಸಿಗುತ್ತೋ ಅವ್ರನ್ನು ಕಾದಿದ್ದು ಮಾತಾಡಿಸ್ತಾರೆ; ವಿವಾದಗಳಲ್ಲಿ ಸಿಕ್ಕಿಹಾಕಿಕೊಂಡಿರೋರನ್ನು ಬೆನ್ನತ್ತಿ ಹೋಗಿ ಮಾತಾಡಿಸ್ತಾರೆ; ಯಾರೆಲ್ಲ ಸಮಸ್ಯೆಗಳಿಗೆ ತುತ್ತಾಗಿರ್ತಾರೋ ಅಂಥವ್ರನ್ನು – ಅದೂ ತಮಗೆ ಅದು ಸಮಸ್ಯೆ ಅಂತ ಅನ್ನಿಸಿದರೆ ಮಾತ್ರ ಮಾತಾಡಿಸ್ತಾರೆ; ಇನ್ನು ಸೆಲೆಬ್ರಿಟಿಗಳನ್ನು ಎಲ್ಲಿ ಸಿಕ್ಕಿದ್ರೂ ಮಾತಾಡಿಸ್ತಾರೆ; ರಾಜಕಾರಣಿಗಳು ಎಲ್ಲೇ ಕಂಡ್ರೂ ಹಿಂದೆ ಹೋಗ್ತಾರೆ, ‘ಸಾಧಕರು’ ಅಂತ ಹಣೆಪಟ್ಟಿ ಹಚ್ಚಿಕೊಂಡವ್ರನ್ನು ಅದೊಂದೇ ಕಾರಣಕ್ಕೆ ಮಾತಾಡಿಸ್ತಾರೆ; ಎಲೆಕ್ಷನ್ ಟೈಮ್ ಬಂತು ಅಂದ್ರೆ ಅಭಿಪ್ರಾಯ ಸಂಗ್ರಹ ಮಾಡ್ಬೇಕಲ್ಲ ಅನ್ನೋ ಅನಿವಾರ್ಯತೆಯಿಂದಾಗಿ, ಅದ್ರಲ್ಲೂ ತಮಗೆ ಅನುಕೂಲ ಅನ್ನಿಸಿದ ಊರು-ಕೇರಿಗಳಲ್ಲಿ ಸಿಕ್ಕವ್ರನ್ನು ಹಿಡಿದು ಕೂರಿಸಿಕೊಂಡು ಮಾತಾಡಿಸ್ತಾರೆ…
ಇದೆಲ್ಲ ತಪ್ಪೋ ಸರಿಯೋ ಅನ್ನೋದು ಇಲ್ಲಿನ ಚರ್ಚೆ ಅಲ್ಲ. ಆದ್ರೆ, ಈಗ ನಾವು ನೆನಪಿಸಿಕೊಂಡ್ವಲ್ಲ – ಇದ್ರಲ್ಲಿ ಯಾವುದೇ ಗುಂಪಿಗೂ ಸೇರದ ಜನರೇ ಹೆಚ್ಚು ಅನ್ನೋದು ಸತ್ಯ. ಹಾಗಾದ್ರೆ, ಅವ್ರನ್ನೆಲ್ಲ ಮಾಧ್ಯಮಗಳು ಮಾತಾಡ್ಸೋದು ಬ್ಯಾಡ್ವಾ? ಬರೀ ತಮ್ಮ ಸುದ್ದಿಗೆ ಬೇಕಾದಾಗ ಮಾತ್ರ… ಅಂದ್ರೆ, ಲಾಭ ಇದ್ರಷ್ಟೇ ಮಾತಾಡ್ಸೋದಾ?
ಇಂಥದ್ದೊಂದು ಕೆಟ್ಟ ಸಂಪ್ರದಾಯಕ್ಕೆ ಬೆನ್ನು ಹಾಕ್ಬೇಕು ಅಂತಾನೇ ನಿಮ್ಮ ‘ಈದಿನ.ಕಾಮ್’ ಈ ವಿಶೇಷ ಆಡಿಯೊ ಸರಣಿ ಶುರುಮಾಡಿದೆ. ಕರ್ನಾಟಕದ ಎಲ್ಲ ಸೀಮೆಗಳ, ಎಲ್ಲ ಬಗೆಯ ಬದುಕನ್ನು ಬದುಕ್ತಿರೋ ನಿಜವಾದ ಜನಸಾಮಾನ್ಯರನ್ನು ಯಾವುದೇ ಉದ್ದೇಶ ಇಲ್ಲದೆ, ಆರಾಮ ಕುಂತು ಮಾತಾಡಿಸ್ತಾ ಹೋಗೋದು ‘ಜನಸಾಮಾನ್ಯರ ಜೊತೆ ಈದಿನ.ಕಾಮ್’ ಸರಣಿಯ ವಿಶೇಷ. ಇಲ್ಲಿ ತೆರೆದುಕೊಳ್ಳುವ ಬದುಕಿನ ಕತೆಗಳು ನಮ್ಮ ಕೇಳುಗರಿಗೆ ಒಂದಿಷ್ಟಾದರೂ ಚೈತನ್ಯ ತುಂಬಿದರೆ ನಮ್ಮ ಶ್ರಮ ಸಾರ್ಥಕ.
ಈದಿನ.ಕಾಮ್ ಆಡಿಯೊಗಳನ್ನು ಆಲಿಸಲು ಕ್ಲಿಕ್ ಮಾಡಿ:
ನುಡಿ ಹಲವು | ಅಂಕಣ | ವೈವಿಧ್ಯ