ಎಲ್ಲ ಸಮಸ್ಯೆಗೆ ಯೋಗವೊಂದೇ ಪರಿಹಾರ: ಆಲಸ್ಯ ಬಿಡಿ, ಯೋಗಕ್ಕೆ ಸಮಯ ಕೊಡಿ!

Date:

Advertisements

ಇಂದು ಬಹುತೇಕರದ್ದು ಒಂದು ರುಟೀನ್‌ ಹಾಗೂ ಮೆಕ್ಯಾನಿಕಲ್‌ ಬದುಕು. ಆಫೀಸಿನಲ್ಲಿ, ಎಸಿ ರೂಮಿನಲ್ಲಿ ಕೆಲಸ ಮಾಡುವವರೇ ಹೆಚ್ಚು. ಉದ್ಯೋಗದ ನಿಮಿತ್ತ ಊರು ಬಿಟ್ಟು ಪರವೂರು ಸೇರಿ, ಅಲ್ಲಿನ ಆಹಾರ ತಿನ್ನಲೂ ಆಗದೇ, ಬಿಡಲೂ ಆಗದೇ, ಆಗಾಗ್ಗೆ ಹೊರಗಿನ ಜಂಕ್‌ ಫೂಡ್‌, ಫಾಸ್ಟ್‌ ಫುಡ್‌ಗಳಿಗೇ ಮೊರೆ ಹೋಗುತ್ತಾರೆ. ಬಹುತೇಕರು ಮನೆತಿಂಡಿಗಳನ್ನು ತಿನ್ನುವುದೇ ಅಪರೂಪ.

ಸಂಜೆ ಕೆಲಸದಿಂದ ಮನೆಗೆ ವಾಪಾಸಾಗಿ ಅಡುಗೆ ಮಾಡಲು ಮನಸ್ಸಾಗದೇ ಅದೇ ಝೊಮ್ಯಾಟೋ, ಸ್ವಿಗಿಯಿಂದ ಯಾವುದೋ ತಿಂಡಿ ಆರ್ಡರ್‌ ಮಾಡಿ ತಿಂದುಬಿಡುತ್ತಾರೆ. ಇಡೀ ದಿನ ಎಸಿ ಗಾಳಿ, ರಾಸಾಯನಿಕಗಳು ಸೇರಿಸಿ ಮಾಡಿರೋ ಆಹಾರಗಳ ಸೇವನೆ, ವ್ಯಾಯಾಮ ರಹಿತ ಬದುಕು ಎಲ್ಲರ ಆರೋಗ್ಯವನ್ನು ಕೆಡಿಸುತ್ತಿದೆ.

ofc

ಅದಲ್ಲದೇ, ಮೊಬೈಲ್‌, ಲ್ಯಾಪ್ಟಾಪ್‌ ಗೀಳು. ಒಂದು ಹೊತ್ತಿನ ಊಟ ಬಿಟ್ಟರೂ ಬದುಕುವರು, ಆದರೆ ಒಂದು ಕ್ಷಣ ಮೊಬೈಲ್‌ ಬಿಟ್ಟಿರಲಾಗದ ಬದುಕು. ಇಡೀ ದಿನ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಇರುತ್ತಾರೆ. ನಂತರ‌ ಅಯ್ಯೋ ತಲೆನೋವು ಎಂದು ಅರಚುತ್ತಾರೆ. ಮೊಬೈಲ್, ಕಂಪ್ಯೂಟರ್‌ನಿಂದ ಬಹಳಷ್ಟು ರೇಡಿಯೇಷನ್ಸ್‌ಗಳು ಹೊರಬರುತ್ತದೆ. ಇದು ನಮ್ಮ ಕಣ್ಣಿಗೆ ಒತ್ತಡ ನೀಡಿ, ತಲೆನೋವು ಬರಲು ಕಾರಣವಾಗುತ್ತದೆ. ಈ ಸಮಸ್ಯೆಯಿಂದ ತರಗತಿಗಳಲ್ಲಿ ಗಮನಹರಿಸಲು ಇಂದು ವಿದ್ಯಾರ್ಥಿಗಳೂ ಕಷ್ಟ ಪಡುತ್ತಾರೆ.

Advertisements

ಇಂತಹ ಎಲ್ಲ ಸಮಸ್ಯೆಗಳು ತುರ್ತಾಗಿ ಗುಣಮುಖವಾಗಲಿ ಎಂದು ಡಾಕ್ಟರ್‌ ಮೊರೆ ಹೋಗುತ್ತಾರೆ; ಮಾತ್ರೆ, ಸಿರಪ್‌ ನಲ್ಲೇ ದಿನದೂಡುತ್ತಾರೆ. ಹೀಗಿದ್ದರೂ, ಇವೆಲ್ಲದಕ್ಕೂ ಇರುವ ಒಂದು ಪರಿಹಾರ ಯೋಗ ಎಂದು ತಿಳಿದರೂ, ಅದನ್ನು ಬೇಡವೆಂದೇ ನಿರಾಕರಿಸುತ್ತಾರೆ. ಉತ್ತಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಯೋಗವೇ ಪರಿಹಾರ ಎಂದು ಇಂದು ಇಡೀ ಜಗತ್ತೇ ಒಪ್ಪಿಕೊಳ್ಳುತ್ತಿದೆ.

Yoga 1

2014ರಿಂದ ಜೂನ್ 21ನೇ ತಾರೀಖನ್ನು ಜಗತ್ತಿನಾದ್ಯಂತ ವಿಶ್ವ ಯೋಗ ದಿನವನ್ನಾಗಿ ಆಚರಿಸಲ್ಪಡುತ್ತಿದೆ. ಯೋಗ ಸಾವಿರಾರು ವರ್ಷಗಳ ಇತಿಹಾಸ ಇರುವ ಒಂದು ಪ್ರಾಚೀನ ಕಲೆಯಾಗಿದೆ. ಸಿಂಧೂ ಕಣಿವೆ ನಾಗರಿಕತೆಯಲ್ಲಿ ಕಂಡುಬರುವ ಪುರಾವೆಗಳು, ಯೋಗವು ಕ್ರಿ.ಪೂ. 3000 ರಲ್ಲಿ ಪ್ರಾರಂಭವಾಯಿತು ಎಂದು ತಿಳಿಸುತ್ತದೆ. ಯೋಗದ ಆರಂಭಿಕ ಉಲ್ಲೇಖಗಳು ವೇದಗಳಲ್ಲಿ ಕಂಡುಬಂದಿದ್ದು, ಬಳಿಕ ಉಪನಿಷತ್ತುಗಳು ಮತ್ತು ಭಗವದ್ಗೀತೆಯಂತಹ ಪಠ್ಯಗಳು ಯೋಗದ ಬಗ್ಗೆ ಹೆಚ್ಚಿನ ವಿಚಾರಗಳನ್ನು ಸೇರಿಸಿದವು.

ಕ್ರಿಸ್ತ ಶಕ 200ನೇ ಇಸವಿಯಲ್ಲಿ ಪತಂಜಲಿ ಎಂಬ ಋಷಿಯು ಯೋಗದ ಸೂತ್ರಗಳನ್ನು ಬರೆದು ಅದಕ್ಕೊಂದು ರೂಪವನ್ನು ಕೊಟ್ಟರು. ಇದು ಯೋಗವನ್ನು ಎಂಟು ಹಂತದ ಮಾರ್ಗವಾಗಿ (ಅಷ್ಟಮಾರ್ಗ) ವಿಭಜಿಸಿದವು. ನಂತರದ ದಿನಗಳಲ್ಲಿ ಪ್ರಪಂಚದಾದ್ಯಂತ ಯೋಗಾಸನದ ಉಪಯೋಗಗಳು ಪರಿಚಯಿಸಲ್ಪಟ್ಟವು. ಅದರೊಂದಿಗೆ ಯೋಗದಿಂದ ಆರೋಗ್ಯ ಮೇಲೆ ಬೀರುವ ಪರಿಣಾಮದ ಬಗ್ಗೆ ಮಾಹಿತಿ ಹಂಚಲ್ಪಟ್ಟಿತು. ಇಂದು ಜಗತ್ತಿನಾದ್ಯಂತದ ಜನರು ಉತ್ತಮ ಆರೋಗ್ಯಕ್ಕಾಗಿ ಯೋಗಾಭ್ಯಾಸವನ್ನು ಮಾಡುತ್ತಿದ್ದಾರೆ.

ಮಾನವನ ದೇಹದ ಉತ್ತಮ ಯೋಗ ಕ್ಷೇಮಕ್ಕಾಗಿ ಇರುವ ದೈಹಿಕ ಆಸನ ಕ್ರಿಯೆಗಳೇ ಯೋಗಾಸನ. ಅದರೊಂದಿಗೆ ಪ್ರಾಣಾಯಾಮಗಳು, ಧ್ಯಾನ ಮತ್ತು ನೈತಿಕ ತತ್ವಗಳನ್ನು ಸಂಯೋಜಿಸಲ್ಪಟ್ಟಿವೆ. ಈ ಅಭ್ಯಾಸವು ದೀರ್ಘಕಾಲದ ದೈಹಿಕ ನೋವನ್ನು ನಿವಾರಿಸುವ ಕೌಶಲ್ಯಗಳನ್ನೂ ಒಳಗೊಂಡಿವೆ.

yoga 3

ಧ್ಯಾನ ಮತ್ತು ಪ್ರಾಣಾಯಾಮ, ಮಾನಸಿಕ ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುವ ಮೂಲಕ ಮಾನಸಿಕ ಆರೋಗ್ಯಕ್ಕೆ ಪ್ರಯೋಜನವನ್ನು ನೀಡುತ್ತದೆ. ಪ್ರತಿಯೊಂದು ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಸಮತೋಲನವನ್ನು ಸಾಧಿಸಲು ವಿಶಿಷ್ಟವಾದ ವಿಧಾನಗಳನ್ನು ಯೋಗ ನೀಡುತ್ತದೆ.

ಯೋಗದ ದೈಹಿಕ ಮತ್ತು ಮಾನಸಿಕ ಉಪಯೋಗವೂ ವಿಶ್ವದಾದ್ಯಂತ ಪಸರಿಸಿದ ಬೆನ್ನಲ್ಲೇ, ಜನರು ತಮ್ಮ ದಿನ ನಿತ್ಯದ ಸಮಯಗಳಲ್ಲಿ ಯೋಗಕ್ಕೆ ಒಂದಿಷ್ಟು ಸಮಯವನ್ನು ಮುಡಿಪಾಗಿಟ್ಟಿದ್ದಾರೆ. ಯೋಗಾಸನವನ್ನು ಅಭ್ಯಾಸ ಮಾಡುವ ಜನರು ಹೆಚ್ಚಾಗಿರುವುದನ್ನು ಗಮನಿಸಿ ಇಂದು ಬಹಳಷ್ಟು ಕಡೆಗಳಲ್ಲಿ ಯೋಗ ತರಬೇತಿ ಕೇಂದ್ರಗಳೂ ತೆರೆದುಕೊಂಡಿವೆ.

ವರ್ಷದಲ್ಲಿ ಒಂದು ದಿನ ಯೋಗದ ಮಹತ್ವವನ್ನು ಸಾರಲು ಯೋಗ ದಿನವನ್ನು ಆಚರಿಸಲಾಗುತ್ತದೆ. ಯೋಗಾಸನದ ಮಹತ್ವ ತಿಳಿದು ಎಲ್ಲರೂ ಅದನ್ನು ವರ್ಷವಿಡೀ ಅಭ್ಯಾಸ ಮಾಡುತ್ತಾರೆ ಎಂಬುವುದು ಒಂದು ಭ್ರಮೆ. ಯೋಗಾಸನದ ಧನಾತ್ಮಕ ಪರಿಣಾಮವನ್ನು ದೈಹಿಕ ಮತ್ತು ಮಾನಸಿಕ ವಿಷಯಗಳಲ್ಲಿ ಕಾಣಬೇಕೆಂದರೆ ಬರೀ ಒಂದು ದಿನದ ಅಭ್ಯಾಸದಲ್ಲಿ ಸಾಧ್ಯವಿಲ್ಲ. ಪ್ರತಿದಿನ ನಿಯಮಿತವಾಗಿ ಆಸನಗಳನ್ನು ಪ್ರಯೋಗ ಮಾಡುವ ಮೂಲಕ ಯೋಗದ ಪ್ರಯೋಜನವನ್ನು ಕಾಣಬಹುದು.

ಯೋಗಾಸನ ಭಾರತದಲ್ಲಿ ಸಾವಿರಾರು ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ ಕಲೆಯಾದರೂ, ಭಾರತದ ಜನರೇ ದಿನನಿತ್ಯದ ಸಮಯಗಳಲ್ಲಿ ಅದನ್ನು ಅಭ್ಯಾಸ ಮಾಡುವುದಿಲ್ಲ. ಆದರೆ ವಿದೇಶದಲ್ಲಿ ಇಂದು ಯೋಗ ತರಬೇತುದಾರರಿಗೆ ಭಾರೀ ಬೇಡಿಕೆ ಇರುವುದು ಸುಳ್ಳಲ್ಲ.

ಕೆಲವು ಆಸನಗಳು

• ಕೆಟ್ಟ ಕೊಲೆಸ್ಟ್ರಾಲ್ ಜಾಸ್ತಿಯಾಗಿ ಹೃದಯದ ಸಮಸ್ಯೆ ಹೆಚ್ಚಾಗಿದ್ದಲ್ಲಿ ಭುಜಂಗಾಸನದ ಸಹಾಯದಿಂದ ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಭುಜಂಗಾಸನ ಮಾಡುವಾಗ ಎದೆಯ ಭಾಗ ಸ್ಟ್ರೆಚ್ ಆಗುವುದರಿಂದ ಹೃದಯಕ್ಕೆ ರಕ್ತದ ಚಲನವಲನವನ್ನು ಉತ್ತಮಪಡಿಸುತ್ತದೆ.

• ಸೂರ್ಯ ನಮಸ್ಕಾರವನ್ನು ದಿನನಿತ್ಯ ಅಭ್ಯಾಸ ಮಾಡುವುದರಿಂದ ಕೊಲೆಸ್ಟ್ರಾಲ್‌ ಮತ್ತು ಡಯಾಬಿಟಿಸ್ ವಿರುದ್ಧ ಹೋರಾಡಲು ಬೆನ್ನೆಲುಬಾಗಿ ನಿಲ್ಲುತ್ತದೆ.

• ಮೊಬೈಲ್ ನೋಡಿ ಜಾಸ್ತಿ ತಲೆ ನೋವಾದರೆ ಮಾತ್ರೆಗಳನ್ನು ಸೇವಿಸುವುದರ ಬದಲು ಶಿರಾಸನವನ್ನು ಮಾಡಬೇಕು. ಈ ಆಸನ ಮೆದುಳಿಗೆ ಆಮ್ಲಜನಕದ ಹರಿಯುವಿಕೆಯನ್ನು ಹೆಚ್ಚಿಸುತ್ತದೆ.

• ಅನುಲೋಮ ವಿಲೋಮ ಪ್ರಾಣಾಯಾಮವು ಡಿಪ್ರೆಶನ್ ಮತ್ತ ಆತಂಕವನ್ನು ಹೋಗಲಾಡಿಸುವಲ್ಲಿ ಮಹತ್ವದ್ದಾಗಿದೆ. ದೀರ್ಘ ಶ್ವಾಸ ಹಾಗೂ ಉಸಿರಾಟದಿಂದ ಹೃದಯದ ಬಡಿತವು ನಿಯಂತ್ರಣದಲ್ಲಿ ಇರುತ್ತದೆ.

• ಆಫೀಸಿನಲ್ಲಿ ಕೂತು ಕೂತು ಮೈಕೈ ನೋವಾದಾಗ ತಾಡಾಸನದ ಸಹಾಯದಿಂದ ನೋವಿಗೆ ಗುಡ್ ಬೈ ಹೇಳಬಹುದು.

ಇಷ್ಟು ದಿನ ಯೋಗಾಸನವನ್ನು ಅಭ್ಯಾಸ ಮಾಡದೆ ಇದ್ದವರು ಈಗ ಪಶ್ಚಾತಾಪ ಪಡುವುದನ್ನು ಬಿಟ್ಟು, ವಿಶ್ವ ಯೋಗ ದಿನ ಅಂದರೆ ಇಂದಿನಿಂದಲೇ ಯೋಗಾಸನದ ಅಭ್ಯಾಸವನ್ನು ಮಾಡಿ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

ತರುಣ್‌ ಎಸ್‌.
ಬಿವೋಕ್‌ ವಿದ್ಯಾರ್ಥಿ
ಎಸ್‌ಡಿಎಂ ಕಾಲೇಜು, ಉಜಿರೆ, ಧರ್ಮಸ್ಥಳ

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರೋನಾ ಸಮಯದಲ್ಲಿ ತಬ್ಲಿಘಿ ಸಭೆ: 70 ಜನರ ವಿರುದ್ಧದ FIR ರದ್ದು; ಕೋರ್ಟ್‌ ಆದೇಶ

ದೇಶದಲ್ಲಿ ಕೊರೋನಾ ಆಕ್ರಮಣ ಆರಂಭವಾಗಿದ್ದ ಸಮಯ 2020ರ ಮಾರ್ಚ್‌ನಲ್ಲಿ ದೆಹಲಿಯಲ್ಲಿ ತಬ್ಲಿಘಿ...

ದಾವಣಗೆರೆ | ಹೃದಯಾಘಾತಕ್ಕೆ ಯುವಕ ಬಲಿ

ದಾವಣಗೆರೆಯ ಉದ್ಯಮಿಯೊಬ್ಬರ ಪುತ್ರ ಕಾಲೇಜು ವಿದ್ಯಾರ್ಥಿ ಹೃದಯಾಘಾತದಿಂದ (Heart Attack) ಕುಸಿದು...

ಮಹಿಳೆಯರನ್ನು ಗರ್ಭಕೋಶ ಕ್ಯಾನ್ಸರ್‌ನಿಂದ ರಕ್ಷಿಸಲು ಎಚ್‌ಪಿವಿ ಲಸಿಕೆ ಅತ್ಯಗತ್ಯ: ಡಾ. ಮಂಗಳ

ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಯಿಂದ ರಕ್ಷಣೆ ಪಡೆಯಲು...

ಕೋವಿಡ್ ಲಸಿಕೆಗೂ ಹಠಾತ್ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ: ಆರೋಗ್ಯ ಸಚಿವಾಲಯ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ...

Download Eedina App Android / iOS

X