ಸಭಾಧ್ಯಕ್ಷ ಸ್ಥಾನ ಎಂಬುದು ಮಸೀದಿಯ ಮೌಲ್ವಿಯ ಹುದ್ದೆಯಲ್ಲ: ಸಿ ಟಿ ರವಿ

Date:

  • ‘ಸ್ಪೀಕರ್​ಗೆ ಸಿಗುವ ಗೌರವ ಜಾಮಿಯಾ ಮಸೀದಿ ಮುಲ್ಲಾನಿಗೆ ಸಿಗುವ ಗೌರವ ಅಲ್ಲ’
  • ಸಚಿವ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ನಾಲಿಗೆ ಹರಿಬಿಟ್ಟ ಸಿ ಟಿ ರವಿ 

ವಿಧಾನಸಭೆಯ ಸಭಾಧ್ಯಕ್ಷ ಸ್ಥಾನ ಎಂಬುದು ಮಸೀದಿಯ ಮೌಲ್ವಿಯ ಹುದ್ದೆಯಲ್ಲ. ಸ್ಪೀಕರ್​ಗೆ ಸಿಗುವ ಗೌರವ ಜಾಮಿಯಾ ಮಸೀದಿ ಮುಲ್ಲಾನಿಗೆ ಸಿಗುವ ಗೌರವ ಅಲ್ಲ ಎಂದು ಬಿಜೆಪಿ ನಾಯಕ ಸಿ ಟಿ ರವಿ ಹೇಳಿದ್ದಾರೆ.

ಸಚಿವ ಜಮೀರ್ ಅಹ್ಮದ್ ಹೇಳಿಕೆ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಅವರು, “ಸ್ಪೀಕರ್ ಸ್ಥಾನ ಎಂಬುದು ಸಾಂವಿಧಾನಿಕ ಹುದ್ದೆ. ಆ ಹುದ್ದೆಯ ಗೌರವ ಕೆಳಗೆ ಇಳಿಸುವ ಕೆಲಸ ಮಾಡಬೇಡಿ” ಎಂದರು.

”ಸ್ಪೀಕರ್ ಯು ಟಿ ಖಾದರ್ ಅವರ ಘನತೆಯನ್ನು ಹಾಳು ಮಾಡಬೇಡಿ. ನಾವು ಮುಲ್ಲಾಗೆ ಸಲಾಂ ಹೊಡೆಯುತ್ತಿಲ್ಲ. ಸಂವಿಧಾನದ ಬಗ್ಗೆ ಅರ್ಥ ಆಗದ ನಿಮ್ಮಂತವರು ಸಚಿವರಾದರೆ ಹೀಗೆಯೇ ಆಗುವುದು” ಎಂದು ಹರಿಗಾಯ್ದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆರ್‌ ಅಶೋಕ್‌ ವಿಚಾರವಾಗಿ ಮಾತನಾಡಿದ ಅವರು, “ರಾಜ್ಯ ಬಿಜೆಪಿಗೆ ನಾಯಕನನ್ನು ಆಯ್ಕೆ ಮಾಡಲಾಗಿದೆ. ಅಶೋಕ ಸಮರ್ಥ ವಿಪಕ್ಷ ನಾಯಕನಾಗಿ ಎಲ್ಲ ಟೀಕೆಗೆ ಉತ್ತರಿಸುತ್ತಾರೆ. ನಾಯಕರಾದ ನಿರ್ಮಲಾ ಸೀತಾರಾಮನ್, ದುಷ್ಯಂತ್ ಜೊತೆ ನಮ್ಮೆಲ್ಲರ ಅಭಿಪ್ರಾಯ ಸಂಗ್ರಹಿಸಲಾಗಿದೆ. ನಮ್ಮೆಲ್ಲ ಶಾಸಕರ ಜೊತೆ ಮಾತನಾಡಿ ನಿರ್ಣಯವಾಗಿದೆ” ಎಂದರು.

ಈ ಸುದ್ದಿ ಓದಿದ್ದೀರಾ? ವಿಜಯೇಂದ್ರ ನೇಮಕಕ್ಕೆ ಬಿಜೆಪಿ ನಾಯಕರಲ್ಲೇ ತೀವ್ರ ಅಸಮಾಧಾನ: ಸಿದ್ದರಾಮಯ್ಯ

ಬಿಜೆಪಿಯಿಂದ ಉತ್ತರ ಕರ್ನಾಟಕ ನಿರ್ಲಕ್ಷ ಮಾಡಲಾಗುತ್ತಿದೆ ಎಂಬ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಆರೋಪದ ವಿಚಾರವಾಗಿ ಪ್ರತಿಕ್ರಿಯಿಸಿ, “ನಾಯಕರ ಆಯ್ಕೆಯಲ್ಲಿ ಯಾವ ಭಾಗ ಎಂಬುದು ಬರಲ್ಲ. ಉತ್ತರ ಕರ್ನಾಟಕದವರಾದ ಬೊಮ್ಮಯಿ ಎರಡು ವರ್ಷ ಸಿಎಂ ಆಗಿದ್ದರು. ವಿಪಕ್ಷ ನಾಯಕನ, ರಾಜ್ಯಧ್ಯಕ್ಷರ ಆಯ್ಕೆ ಸಮಗ್ರ ಕರ್ನಾಟಕಕ್ಕೆ ನಡೆದ ಆಯ್ಕೆಯಾಗಿದೆ” ಎಂದು ಪಕ್ಷದ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಬಿ ವೈ ವಿಜಯೇಂದ್ರ ನೇಮಕ ವಿಚಾರವಾಗಿ ಪ್ರತಿಕ್ರಿಯಿಸಿ, “ನಾನು ರೇಸ್​ನಲ್ಲಿ ಇಲ್ಲ ಎಂದು ಮೂರು ತಿಂಗಳ ಹಿಂದೆಯೇ ಸ್ಪಷ್ಟಪಡಿಸಿದ್ದೆ. ರೇಸಲ್ಲೇ ಇಲ್ಲ ಅಂದಮೇಲೆ ಬೇಸರದ ಪ್ರಶ್ನೆ ಬರಲ್ಲ. ಜವಾಬ್ದಾರಿ ಯಾವಾಗ ಯಾರಿಗೆ ಕೊಡಬೇಕು ಎಂದು ವರಿಷ್ಠರು ತೀರ್ಮಾನಿಸುತ್ತಾರೆ. ನಾವು ತಂಡವಾಗಿ ಕೆಲಸ ಮಾಡುತ್ತೇವೆ, ಚರ್ಚೆ ಮಾಡಲು ಬಯಸಲ್ಲ” ಎಂದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ನೀವು ಟಿಕೆಟ್ ಆಕಾಂಕ್ಷಿಯಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು 1994 ರ ನಂತರ ಯಾವುದೇ ಸ್ಥಾನ ಕೇಳಿ ಪಡೆದಿಲ್ಲ. ನಾನು ಆಕಾಂಕ್ಷಿಯಲ್ಲ, ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಪಕ್ಷದ ಗೆಲುವಿಗೆ ಶಕ್ತಿಮೀರಿ ಶ್ರಮ ಹಾಕುತ್ತೇನೆ ಎಂದು ಹೇಳಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

2 COMMENTS

  1. ಮಸೀದಿಯ ಮೌಲವಿ ಯ ಸ್ಥಾನದ ಬಗ್ಗೆ ಅಷ್ಟು ತಾತ್ಸರ ಬೇಡ. ರಾಜಕೀಯದಲ್ಲಿ ಸ್ಪೀಕರ್ ಯಾರೂ ಆಗಬಹುದು. ಆದರೆ ಮಸೀದಿಯ ಮೌಲ್ವಿ ಆಗಲು ಎಲ್ಲರಿಗೂ ಸಾಧ್ಯವಿಲ್ಲ.

  2. ಲೇ ಗೂಬೆ ಮೌಲ್ವಿ ಅಂದ್ರೇ ಸುಮ್ಮನೆ ಅಂತ ತಿಳಿದ್ದಿದಿಯಾ, ಮಂದಿರದಲ್ಲಿ ಗಂಟೆ ಬಾರಿಸುವ ಹಾಗೆ ಅಂತ ಭಾವಿಸಿದ್ದರೆ ತಪ್ಪು, ಬರೀಲಿಕ್ಕೆ ಬಹಳ ಇದೆ ಆದರೆ ನಿನ್ನಂತವರಿಗೆ ಹೇಳಿ ಉಪಯೋಗವಿಲ್ಲ, ಝಮೀರ್ ಹೇಳಿದ ಅಂತ ನೀನೂ ಥು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾವುದೇ ಪುರಾವೆ ಇಲ್ಲ; ರಾಜಕೀಯದ ಷಡ್ಯಂತ್ರದಿಂದ ಬಂಧನ: ಎಚ್ ಡಿ ರೇವಣ್ಣ

ಮಹಿಳೆಯ ಅಪಹರಣ ಪ್ರಕರಣದಲ್ಲಿ ಶನಿವಾರ ಸಂಜೆ ಎಸ್‌ಐಟಿ ತಂಡದಿಂದ ಬಂಧನಕ್ಕೊಳಗಾಗಿರುವ ಮಾಜಿ...

ಬಿಜೆಪಿ ಆತಂಕ ಹುಟ್ಟಿಸಿದೆ ಮಹಾರಾಷ್ಟ್ರ; ಪದೇ-ಪದೇ ದೌಡಾಯಿಸುತ್ತಿರುವ ಮೋದಿ

ಮಹಾರಾಷ್ಟ್ರದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಬಗ್ಗೆ ಬಿಜೆಪಿ ಭಾರೀ ಭಯಭೀತವಾಗಿದೆ. ಮಹಾರಾಷ್ಟ್ರಕ್ಕೆ...

ಅಭಿವೃದ್ಧಿ ಪ್ರಚಾರದಿಂದ ಕೋಮು ಧೃವೀಕರಣಕ್ಕೆ ಮೋದಿ ಬದಲಾಗಿದ್ದೇಕೆ? ಗೆಲ್ಲುವುದಾ ದ್ವೇಷ ಭಾಷಣ?

ಲೋಕಸಭಾ ಚುನಾವಣೆ ಘೋಷಣೆಯಾದಾಗ ಪ್ರಧಾನಿ ನರೇಂದ್ರ ಮೋದಿ ಅವರು ‘ಮೋದಿ ಕಿ...

ಅತ್ಯಾಚಾರ ಪ್ರಕರಣ | ಯಾವುದೇ ಕ್ಷಣದಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಬಂಧನ ಸಾಧ್ಯತೆ

ಅತ್ಯಾಚಾರ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಜೆಡಿಎಸ್‌ ಶಾಸಕ ಹೆಚ್‌ ಡಿ ರೇವಣ್ಣ...