ಎಸ್‌ಎಸ್‌ಎಲ್‌ಸಿ (ಹತ್ತನೇ ತರಗತಿ) ಪರೀಕ್ಷೆಯಲ್ಲಿ ಪಾಸ್ ಮಾಡುವಂತೆ ಮನವಿ ಮಾಡಿರುವ ಉತ್ತರ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಉತ್ತರ ಪತ್ರಿಕೆಗಳಲ್ಲಿ ದಯವಿಟ್ಟು ಪಾಸ್ ಮಾಡಿ ಎಂಬ ವಿನಂತಿ ಪತ್ರ, ಐನ್ನೂರು ರೂಪಾಯಿ ನೋಟುಗಳೂ ಕಾಣಿಸಿಕೊಂಡಿದೆ.
ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಉತ್ತರ ಪತ್ರಿಕೆಯಲ್ಲಿ ಶಿಕ್ಷಕರಿಗೆ ಈ ವಿನಂತಿ ಪತ್ರಗಳು ಕಂಡುಬಂದಿದೆ. ಆ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.
ಇದನ್ನು ಓದಿದ್ದೀರಾ? ಕೆಎಸ್‌ಒಯು ಪರೀಕ್ಷೆ ಬರೆಯಲು ಲಂಚ; ವಿದ್ಯಾರ್ಥಿಯ ಆಡಿಯೋ ವೈರಲ್
“ಪ್ಲೀಸ್ ಮಿಸ್ ಆಂಡ್ ಸರ್ ದಯವಿಟ್ಟು ಪ್ಲೀಸ್ ಪ್ಲೀಸ್ ನನ್ನನ್ನು ಪಾಸ್ ಮಾಡಿ ಪ್ಲೀಸ್, ನನ್ನನ್ನು ಪಾಸ್ ಮಾಡಿಲ್ಲ ಅಂದ್ರೆ ನನ್ನ ಮನೆಯಲ್ಲಿ ಮುಂದೆ ಶಾಲೆಗೆ ಕಳುಹಿಸುವುದಿಲ್ಲ. ನಾನು ಪಾಸ್ ಆಗಿಲ್ಲ ಅಂದ್ರೆ ನನ್ನನ್ನು ಕಾಲೇಜಿಗೆ ಸೇರಿಸುವುದಿಲ್ಲ. ದಯವಿಟ್ಟು ಪಾಸ್ ಮಾಡಿ” ಎಂದು ವಿದ್ಯಾರ್ಥಿಯೊಬ್ಬರು ಗೋಗರೆದು ಪತ್ರ ಬರೆದಿದ್ದಾರೆ.

ಇನ್ನೋರ್ವ ವಿದ್ಯಾರ್ಥಿ, “ಸರ್, ಮೇಡಂ ನಿಮ್ಮ ಕಾಲಿಗೆ ಬೀಳುತ್ತೇನೆ. ನನ್ನ ಲವ್ ನಿಮ್ಮ ಕೈಯಲ್ಲಿ ಇದೆ. ನಾನು ಪಾಸ್ ಆದರೆ ಮಾತ್ರ ಲವ್ ಮಾಡುತ್ತೀನಿ ಅಂತ ಹೇಳಿದ್ದಾಳೆ ನನ್ನ ಹುಡುಗಿ. ಈ ಐನ್ನೂರು ರೂಪಾಯಿಯಲ್ಲಿ ನೀವು ಚಹಾ ಕುಡಿಯಿರಿ ಸರ್. ನನ್ನ ಪಾಸ್ ಮಾಡಿ” ಎಂದು ಮನವಿ ಮಾಡಲಾಗಿದೆ.
ಇನ್ನೂ ಕೆಲವರು ಪಾಸ್ ಆಗಲು ಸಹಾಯ ಮಾಡಿದರೆ ಹೆಚ್ಚಿನ ಹಣ ನೀಡಲಾಗುವುದು ಎಂದು ಹೇಳಿದ್ದಾರೆ. ಇನ್ನೊಂದು ಪತ್ರಿಕೆಯಲ್ಲಿ, ಒಬ್ಬ ವಿದ್ಯಾರ್ಥಿ “ನೀವು ನನ್ನನ್ನು ಪಾಸ್ ಮಾಡಿದರೆ, ನಾನು ನಿಮಗೆ ಹಣ ನೀಡುತ್ತೇನೆ” ಎಂದು ಬರೆದಿದ್ದಾರೆ. ಸದ್ಯ ಈ ಉತ್ತರ ಪತ್ರಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಎಲ್ಲಿಯ ತನಕ ಈಗಿನ ವಿದ್ಯಾರ್ಥಿಗಳು ಬಂದು ಮುಟ್ಟಿದ್ದಾರೆ. ನಮ್ ಕಾಲದಲ್ಲಿ ಲವ್ ಮಾಡುವುದು ಬಿಟ್ಟು, ಲವ್ ಅಂದ್ರೆ ಏನು ಎಂದ್ದೇ ಗೊತ್ತಿರಲಿಲ್ಲ. 😊