‘ನನ್ನ ಲವ್ ನಿಮ್ಮ ಕೈಯಲ್ಲಿದೆ, ದಯವಿಟ್ಟು ಪಾಸ್‌ ಮಾಡಿ’ 10ನೇ ತರಗತಿ ವಿದ್ಯಾರ್ಥಿಯ ಉತ್ತರ ಪತ್ರಿಕೆ ವೈರಲ್

Date:

ಎಸ್‌ಎಸ್‌ಎಲ್‌ಸಿ (ಹತ್ತನೇ ತರಗತಿ) ಪರೀಕ್ಷೆಯಲ್ಲಿ ಪಾಸ್ ಮಾಡುವಂತೆ ಮನವಿ ಮಾಡಿರುವ ಉತ್ತರ ಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಉತ್ತರ ಪತ್ರಿಕೆಗಳಲ್ಲಿ ದಯವಿಟ್ಟು ಪಾಸ್‌ ಮಾಡಿ ಎಂಬ ವಿನಂತಿ ಪತ್ರ, ಐನ್ನೂರು ರೂಪಾಯಿ ನೋಟುಗಳೂ ಕಾಣಿಸಿಕೊಂಡಿದೆ.

- Advertisement -

ಕರ್ನಾಟಕದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಉತ್ತರ ಪತ್ರಿಕೆಯಲ್ಲಿ ಶಿಕ್ಷಕರಿಗೆ ಈ ವಿನಂತಿ ಪತ್ರಗಳು ಕಂಡುಬಂದಿದೆ. ಆ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಇದನ್ನು ಓದಿದ್ದೀರಾ? ಕೆಎಸ್‌ಒಯು ಪರೀಕ್ಷೆ ಬರೆಯಲು ಲಂಚ; ವಿದ್ಯಾರ್ಥಿಯ ಆಡಿಯೋ ವೈರಲ್

“ಪ್ಲೀಸ್‌ ಮಿಸ್‌ ಆಂಡ್ ಸರ್ ದಯವಿಟ್ಟು ಪ್ಲೀಸ್‌ ಪ್ಲೀಸ್‌ ನನ್ನನ್ನು ಪಾಸ್ ಮಾಡಿ ಪ್ಲೀಸ್, ನನ್ನನ್ನು ಪಾಸ್ ಮಾಡಿಲ್ಲ ಅಂದ್ರೆ ನನ್ನ ಮನೆಯಲ್ಲಿ ಮುಂದೆ ಶಾಲೆಗೆ ಕಳುಹಿಸುವುದಿಲ್ಲ. ನಾನು ಪಾಸ್ ಆಗಿಲ್ಲ ಅಂದ್ರೆ ನನ್ನನ್ನು ಕಾಲೇಜಿಗೆ ಸೇರಿಸುವುದಿಲ್ಲ. ದಯವಿಟ್ಟು ಪಾಸ್ ಮಾಡಿ” ಎಂದು ವಿದ್ಯಾರ್ಥಿಯೊಬ್ಬರು ಗೋಗರೆದು ಪತ್ರ ಬರೆದಿದ್ದಾರೆ.

ಉತ್ತರ ಪತ್ರಿಕೆ

ಇನ್ನೋರ್ವ ವಿದ್ಯಾರ್ಥಿ, “ಸರ್‌, ಮೇಡಂ ನಿಮ್ಮ ಕಾಲಿಗೆ ಬೀಳುತ್ತೇನೆ. ನನ್ನ ಲವ್ ನಿಮ್ಮ ಕೈಯಲ್ಲಿ ಇದೆ. ನಾನು ಪಾಸ್ ಆದರೆ ಮಾತ್ರ ಲವ್ ಮಾಡುತ್ತೀನಿ ಅಂತ ಹೇಳಿದ್ದಾಳೆ ನನ್ನ ಹುಡುಗಿ. ಈ ಐನ್ನೂರು ರೂಪಾಯಿಯಲ್ಲಿ ನೀವು ಚಹಾ ಕುಡಿಯಿರಿ ಸರ್‌. ನನ್ನ ಪಾಸ್ ಮಾಡಿ” ಎಂದು ಮನವಿ ಮಾಡಲಾಗಿದೆ.

ಇನ್ನೂ ಕೆಲವರು ಪಾಸ್ ಆಗಲು ಸಹಾಯ ಮಾಡಿದರೆ ಹೆಚ್ಚಿನ ಹಣ ನೀಡಲಾಗುವುದು ಎಂದು ಹೇಳಿದ್ದಾರೆ. ಇನ್ನೊಂದು ಪತ್ರಿಕೆಯಲ್ಲಿ, ಒಬ್ಬ ವಿದ್ಯಾರ್ಥಿ “ನೀವು ನನ್ನನ್ನು ಪಾಸ್ ಮಾಡಿದರೆ, ನಾನು ನಿಮಗೆ ಹಣ ನೀಡುತ್ತೇನೆ” ಎಂದು ಬರೆದಿದ್ದಾರೆ. ಸದ್ಯ ಈ ಉತ್ತರ ಪತ್ರಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಶಸ್ವಿಯಾಗಿ ನಡೆದ ʼಕೊಂದವರು ಯಾರು?ʼ ಆಂದೋಲನ ಆಯೋಜಿಸಿದ್ದ ರಾಷ್ಟ್ರೀಯ ವಿಚಾರಸಂಕಿರಣ

ಕೊಂದವರು ಯಾರು? ಆಂದೋಲನ ಆಯೋಜಿಸಿದ್ದ “ನಂಬಿಕೆಯೊಂದಿಗೆ ಸಂವಾದ: ಅಧಿಕಾರ, ಪಿತೃಪ್ರಧಾನತೆ, ಧರ್ಮ...

ಗಾಂಧೀಜಿ ಹೆಸರು, ವಿಚಾರಧಾರೆ ಅಳಿಸಲು ಯಾರಿಂದಲೂ ಸಾಧ್ಯವಿಲ್ಲ: ಡಿ.ಕೆ. ಶಿವಕುಮಾರ್

"ಮಹಾತ್ಮ ಗಾಂಧೀಜಿ ಭಾರತದ ಆತ್ಮವಿದ್ದಂತೆ. ಅವರ ಹೆಸರು ಹಾಗೂ ವಿಚಾರಧಾರೆಯನ್ನು ಅಳಿಸಿಹಾಕಲು...

ಧರ್ಮಸ್ಥಳದ ಸಾವಿನ ಪ್ರಮಾಣದಲ್ಲಿ ವ್ಯತ್ಯಾಸ; ನಿಜ ಪತ್ತೆಗೆ ಎಸ್‌ಐಟಿಗೆ ಸರ್ಕಾರದಿಂದ ಪೂರಕ ಬೆಂಬಲ ಅಗತ್ಯ: ಮಹಿಳಾ ಆಯೋಗದ ಅಧ್ಯಕ್ಷೆ

ಧರ್ಮಸ್ಥಳ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಾವುಗಳು...

ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು, ಪಿತೃಪ್ರಧಾನತೆಯ ಭೀತಿ ಮೀರಿ, ಲಕ್ಷ್ಮಣ ರೇಖೆ ದಾಟಿ: ಆರ್ ಸುನಂದಮ್ಮ

ಮಹಿಳೆಯರು ನಮ್ಮ ಕಾಲಿನ ಮುಳ್ಳನ್ನು ನಾವೇ ತೆಗೆಯಬೇಕು. ಪಿತೃಪ್ರಧಾನತೆಯ ಭೀತಿ ಮೀರಿ,...