ಅವಧಿ ಮೀರಿದ ಆಹಾರಕ್ಕೆ ನಕಲಿ ಲೇಬಲ್‌; Amazon, Instamartಗೆ ಸೇರಿದ ₹3 ಕೋಟಿ ಮೌಲ್ಯದ ವಸ್ತು ಜಪ್ತಿ

Date:

ಅವಧಿ ಮೀರಿದ ಆಹಾರ ಉತ್ಪನ್ನಗಳ ಮೇಲೆ ನಕಲಿ ಅವಧಿ ದಿನಾಂಕದ ಲೇಬಲ್‌ ಅಂಟಿಸಿ ಮರುಮಾರಾಟ ಮಾಡುತ್ತಿದ್ದ ಜಾಲವನ್ನು ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ ಇಲಾಖೆ (KSFDA) ಪತ್ತೆಹಚ್ಚಿದೆ. ಬೆಂಗಳೂರು ನಗರದಲ್ಲಿ ಒಂದು ವಾರದ ಅವಧಿಯಲ್ಲಿ ನಡೆಸಿದ ದಾಳಿಗಳಲ್ಲಿ Amazon, Instamart ಸೇರಿದಂತೆ ವಿವಿಧ ಸ್ಥಳಗಳಿಂದ ಒಟ್ಟು ಸುಮಾರು ₹3 ಕೋಟಿ ಮೌಲ್ಯದ ಅವಧಿ ಮೀರಿದ ಹಾಗೂ ಸರಿಯಾಗಿ ಲೇಬಲ್‌ ಮಾಡದ ಆಹಾರ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಯು ಟಿ ಖಾದರ್‌ ತಿಳಿಸಿದ್ದಾರೆ.

- Advertisement -

ಬೆಂಗಳೂರಿನಲ್ಲಿ ನಿಯಮ ಪಾಲಿಸದ ಕಾರಣ ‘ಪೆಪ್ಟೈಡ್ ಪಾರ್ಟಿ’ಯೊಂದನ್ನು ರದ್ದುಗೊಳಿಸಿದ ಬಳಿಕ ಈ ಅಕ್ರಮ ಜಾಲ ಪತ್ತೆಯಾಗಿದೆ. ಕಾರ್ಯಕ್ರಮಕ್ಕೆ ಅಗತ್ಯ ವಸ್ತುಗಳನ್ನು ಎಲ್ಲಿಂದ ಖರೀದಿಸಲಾಗಿತ್ತು ಎಂಬುದರ ಕುರಿತು ಮಾಹಿತಿ ಪಡೆದಾಗ, ಅಮೆಜಾನ್‌ನ ಡಾರ್ಕ್‌ ಸ್ಟೋರ್‌ನಿಂದ ಆಹಾರ ಉತ್ಪನ್ನಗಳನ್ನು ಖರೀದಿಸಿರುವುದು ತಿಳಿದುಬಂದಿದೆ ಎಂದು ಖಾದರ್‌ ಹೇಳಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಈ ಮಾಹಿತಿ ಆಧರಿಸಿ ದೇವನಹಳ್ಳಿಯಲ್ಲಿರುವ Amazon BLR6 ಸಂಗ್ರಹ ಘಟಕದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲಿ ತಪ್ಪು ಅಥವಾ ಅಪೂರ್ಣ ಲೇಬಲ್‌ ಹೊಂದಿದ್ದ ₹14 ಲಕ್ಷ ಮೌಲ್ಯದ ಆಹಾರ ಉತ್ಪನ್ನಗಳು, ₹10 ಲಕ್ಷ ಮೌಲ್ಯದ ಅವಧಿ ಮೀರಿದ ಉತ್ಪನ್ನಗಳು ಹಾಗೂ ಪರವಾನಗಿ ಇಲ್ಲದೆ ಸಂಗ್ರಹಿಸಿದ್ದ ₹2.45 ಲಕ್ಷ ಮೌಲ್ಯದ ಔಷಧಗಳನ್ನು ಜಪ್ತಿ ಮಾಡಲಾಗಿದೆ.

ಮಡಿವಾಳದಲ್ಲಿರುವ Amazon BLR7 ಘಟಕದಲ್ಲೂ ₹19 ಲಕ್ಷ ಮೌಲ್ಯದ ತಪ್ಪು ಲೇಬಲ್‌ ಹೊಂದಿದ್ದ ಆಹಾರ ಉತ್ಪನ್ನಗಳು ಮತ್ತು ₹13 ಲಕ್ಷ ಮೌಲ್ಯದ ಅವಧಿ ಮೀರಿದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಜತೆಗೆ ₹1.57 ಲಕ್ಷ ಮೌಲ್ಯದ ಪರವಾನಗಿ ಇಲ್ಲದ ಔಷಧಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಲಿಂಗರಾಜಪುರಂನ ಶೆಡ್‌ವೊಂದರಲ್ಲಿ ನಡೆಯುತ್ತಿದ್ದ Leo 7 Enterprises ಎಂಬ ಸಂಸ್ಥೆಯ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿ ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ಖರೀದಿಸಿ, ಅವುಗಳ ಅವಧಿ ದಿನಾಂಕವನ್ನು ನಕಲಿಯಾಗಿ ಬದಲಿಸಿ ಮಾರಾಟಕ್ಕೆ ಸಿದ್ಧಪಡಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿದ್ದ ಅವಧಿ ಮೀರಿದ ಮತ್ತು ಮರುಲೇಬಲ್‌ ಮಾಡಲಾದ ಉತ್ಪನ್ನಗಳ ಮೌಲ್ಯ ಸುಮಾರು ₹57 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಘಟಕವನ್ನು ಬಳಿಕ ಮುಚ್ಚಲಾಗಿದೆ.

ಹೊಸಕೋಟೆಯಲ್ಲಿರುವ Instamart ಘಟಕದ ಮೇಲೂ ದಾಳಿ ನಡೆಸಿ ₹42 ಲಕ್ಷ ಮೌಲ್ಯದ ಅವಧಿ ಮೀರಿದ ಆಹಾರ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ. ಇಲ್ಲಿ ತನಿಖೆ ಮುಂದುವರಿದಿದ್ದು, ಮರುಲೇಬಲ್‌ ಮಾಡಲಾದ ಮತ್ತು ಅವಧಿ ಮೀರಿದ ಉತ್ಪನ್ನಗಳ ಒಟ್ಟು ಮೌಲ್ಯ ಸುಮಾರು ₹1 ಕೋಟಿ ಇರಬಹುದು ಎಂದು ಇಲಾಖೆ ಅಂದಾಜಿಸಿದೆ.

ದೂರು ಆಧರಿಸಿ ಎಚ್‌ಬಿಆರ್‌ ಲೇಔಟ್‌ನ ಸಪ್ತ ಬಜಾರ್‌ ಮೇಲೂ ದಾಳಿ ನಡೆಸಲಾಗಿದೆ. ಅವಧಿ ಮೀರಿದ ಗೋಡಂಬಿ ಬಿಸ್ಕತ್‌, ರಾಗಿ ಹಿಟ್ಟು, ಚಿಕನ್‌ ಪ್ಯಾಟೀಸ್‌, ಪನೀರ್‌, ಕುಕೀಸ್‌, ನಟ್ಸ್‌, ಮೊಟ್ಟೆ ಮತ್ತು ಹಿಟ್ಟು ಸೇರಿದಂತೆ ಸುಮಾರು ₹10,000 ಮೌಲ್ಯದ ಆಹಾರ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: CJPಗೆ ರಾಜಕೀಯ ಪಕ್ಷದ ಹಣೆಪಟ್ಟಿ ಬೇಡ; ತಟಸ್ಥ ಒತ್ತಡ ಗುಂಪಾಗಿರಲಿ: ವಾಂಗ್‌ಚುಕ್

ಅವಧಿ ಮೀರಿದ ಆಹಾರವನ್ನು ಮರುಲೇಬಲ್‌ ಮಾಡಿ ಮಾರಾಟ ಮಾಡುವುದನ್ನು ಕೇವಲ ದಂಡ ವಿಧಿಸುವ ಪ್ರಕರಣವಾಗಿ ಪರಿಗಣಿಸದೆ, ಕ್ರಿಮಿನಲ್‌ ಅಪರಾಧವನ್ನಾಗಿ ಮಾಡಲು ಕಾನೂನು ರೂಪಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಖಾದರ್‌ ಹೇಳಿದ್ದಾರೆ. ಈ ಕುರಿತು ಕಾನೂನು ಇಲಾಖೆಗೆ ಹಾಗೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತಿದೆ. ಸದ್ಯ ಇಂತಹ ಪ್ರಕರಣಗಳಲ್ಲಿ ಸಂಸ್ಥೆಗಳ ಮಾಲೀಕರಿಗೆ ದಂಡ ವಿಧಿಸಿ ಅವರು ತಪ್ಪಿಸಿಕೊಳ್ಳುವ ಪರಿಸ್ಥಿತಿ ಇದೆ. ಆದರೆ ಇಂತಹ ಕೃತ್ಯವನ್ನು ಕ್ರಿಮಿನಲ್‌ ಅಪರಾಧವನ್ನಾಗಿ ಪರಿಗಣಿಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಆಹಾರ ಸುರಕ್ಷತೆಗೆ ಸಂಬಂಧಿಸಿದ ಉಲ್ಲಂಘನೆಗಳ ಕುರಿತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ದೂರು ನೀಡಬೇಕು. ಇದರಿಂದ ಇಂತಹ ಅಕ್ರಮಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಖಾದರ್‌ ಮನವಿ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಪಾವಳಿ ಸೀಸನ್‌ನಲ್ಲಿ ನಷ್ಟದ ಆತಂಕ: ‘ಇಂಡಿಯಾ’ ಒಕ್ಕೂಟದ ರ‍್ಯಾಲಿ ಮುಂದೂಡಲು ರಾಹುಲ್ ಗಾಂಧಿಗೆ ವರ್ತಕರ ಮನವಿ!

ದೀಪಾವಳಿ, ಧನತ್ರಯೋದಶಿ ಹಬ್ಬಗಳ ಸೀಸನ್‌ನಲ್ಲಿ ರಾಜಧಾನಿ ದೆಹಲಿಯಲ್ಲಿ ಭಾರಿ ಪ್ರಮಾಣದ ಶೃಂಗಾರ...

ಶಿವಮೊಗ್ಗ | ಜಿಲ್ಲಾ ಶೋಟೊಕಾನ್ ಕರಾಟೆ ಪಟುಗಳು ರಾಜ್ಯಮಟ್ಟಕ್ಕೆ ಆಯ್ಕೆ

ಶಿವಮೊಗ್ಗ ನಗರದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು...

ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಬೇಕಾಬಿಟ್ಟಿ FIR ಹಾಕುವಂತಿಲ್ಲ, ಬಂಧಿಸುವಂತಿಲ್ಲ: ಪೊಲೀಸರಿಗೆ ಹೈಕೋರ್ಟ್ ಮಾರ್ಗಸೂಚಿಗಳೇನು?

ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಪೋಸ್ಟ್‌ಗಳು, ಅಭಿಪ್ರಾಯಗಳು...