ಅಣ್ಣನನ್ನು ಕಣದಿಂದ ತೆಗೆಸಿ ನೀನೂ ರಾಜೀನಾಮೆ ನೀಡು: ಏಕವಚನದಲ್ಲಿ ವಿಜಯೇಂದ್ರಗೆ ಈಶ್ವರಪ್ಪ ತಿರುಗೇಟು

Date:

Advertisements

‘ಕಾಲ ಮಿಂಚಿಲ್ಲ. ಪಕ್ಷಕ್ಕೆ ವಾಪಸ್ ಬನ್ನಿ. ಸಮಸ್ಯೆ ಇದ್ದರೆ ಹೈಕಮಾಂಡ್ ಜೊತೆ ಮಾತನಾಡಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ ವೈ ವಿಜಯೇಂದ್ರ ಮಾಡಿರುವ ಮನವಿಗೆ ಭಾನುವಾರ ಇಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ‘ನನಗೆ ಮನವಿ ಮಾಡಿಕೊಳ್ಳುವ ಬದಲು ನಿಮ್ಮ ಅಣ್ಣನಿಗೆ (ಬಿ. ವೈ . ರಾಘವೇಂದ್ರ) ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಣದಿಂದ ಹಿಂದೆ ಸರಿಯಲು ಹೇಳಿ. ನಿಮಗೆ ಧೈರ್ಯವಿದ್ದರೆ ವಾಪಸ್ ತೆಗೆಸಿ’ ಎಂದು ತಿರುಗೇಟು ನೀಡಿದ್ದಾರೆ.

ಶಿವಮೊಗ್ಗ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಈಶ್ವರಪ್ಪ ಗೆಲ್ಲಲಿ ಬಿಡು, ನೀನು ಸ್ಪರ್ಧೆ ಮಾಡಬೇಡ ಅಂತಾ ನಿಮ್ಮಣ್ಣ ರಾಘವೇಂದ್ರಗೆ ಹೇಳು. ನೀನು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡು ಎಂದು ಒತ್ತಾಯಿಸಿದರು.

ಕೇಂದ್ರದ ನಾಯಕರು ಈಶ್ವರಪ್ಪನವರ ಜೊತೆ ಮಾತಾಡುತ್ತಾರೆ ಎಂದು ಹೇಳಲು ನಿನಗೆ ಅಧಿಕಾರ ಕೊಟ್ಟವರು ಯಾರು? ಎಲ್ಲ ಅಧಿಕಾರ ಯಡಿಯೂರಪ್ಪ ಮತ್ತು ಮಕ್ಕಳ ಕೈಯಲ್ಲಿ ಇರಬೇಕಾ? ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ನೀನು ಬಿಟ್ಟುಕೊಡು. ಜನರ ದಾರಿ ತಪ್ಪಿಸುವ ಕೆಲಸ ಮಾಡಬೇಡ. ಎಲ್ಲರ ನೋವು ಪರಿಹಾರ ಆಗುತ್ತದೆ ಎಂದು ವಿಜಯೇಂದ್ರ ವಿರುದ್ಧ ಕೆ ಎಸ್ ಈಶ್ವರಪ್ಪ ಏಕವಚನದಲ್ಲಿ ಹರಿಹಾಯ್ದರು.

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮರೆಯಲಾರದ, ಮರೆಯಬಾರದ ಮನಮೋಹನ ಈ ಸಿಂಗ್

‘ಮೋದಿ ವಿಶ್ವ ನಾಯಕ. ಅವರ ಪೋಟೋ ಬಳಸಿಕೊಳ್ಳಬಾರದು ಎಂದು ಎಲ್ಲಿಯೂ ಇಲ್ಲ. ಮೋದಿ ನನ್ನ ಹೃದಯದಲ್ಲಿ ಇದ್ದಾರೆ. ಯಡಿಯೂರಪ್ಪನ ಮಕ್ಕಳು ಕೇಸು ಹಾಕಿಕೊಳ್ಳುತ್ತಾರೆಂದೇ ನಾನು ಕೇವಿಯೆಟ್ ಹಾಕಿದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸಹೋದರ ಬಿ ವೈ ರಾಘವೇಂದ್ರ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ’ ಎಂಬ ವಿಜಯೇಂದ್ರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕೆ ಎಸ್ ಈಶ್ವರಪ್ಪ, ‘ನಾನು ಈ ಬಾರಿ 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ. ಗೆದ್ದ ನಂತರ ಬಿಜೆಪಿಗೆ ಮತ್ತೆ ವಾಪಸ್ ಬರುತ್ತೇನೆ. ಮುಂಬರುವ ಮಹಾನಗರ ಪಾಲಿಕೆ ಚುನಾವಣೆಗೆ ಶಿವಮೊಗ್ಗದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ನಾನೇ ಟಿಕೆಟ್ ಕೊಡೋದು’ ಎಂದು ಹೇಳಿದರು.

‘ನಿಮ್ಮಣ್ಣ (ಬಿ.ವೈ. ರಾಘವೇಂ ದ್ರ) ಸೋಲುತ್ತಾನೆ ಅಂತಾ ಭಯನಾ? ಏನು ನೀವೇ ಗೂಟ ಹೊಡ್ಕೊಂಡು ಇರಬೇಕಾ? ಎಂದು ಪ್ರಶ್ನಿಸಿದ ಈಶ್ವರಪ್ಪ, ‘ನಾನು ಈಗಲೂ ಬಿಜೆಪಿಯವನು ಆದರೆ ಪಕ್ಷೇ ತರವಾಗಿ ಸ್ಪರ್ಧೆ ಮಾಡಲು ನಿರ್ಧರಿಸಿ ಆಗಿದೆ. ನಾನು ಸ್ಪರ್ಧೆ ಮಾಡಿದರೆ ಬಿಜೆಪಿಯವರು ಏನು ಮಾಡಬಹುದು? ಪಕ್ಷದಿಂದ ಉಚ್ಚಾಟನೆ ಮಾಡಬಹುದಾ. ಅಷ್ಟೇ ತಾನೇ ಇನ್ನೇನೂ ಮಾಡಲು ಸಾಧ್ಯ. ನಾನೇನು ಪಕ್ಷ ಬಿಟ್ಟು ಹೋಗಿದ್ದೇನಾ? ಯಡಿಯೂರಪ್ಪ ಬಿಜೆಪಿ ಬಿಟ್ಟು ಕೆಜೆಪಿಗೆ ಹೋಗಿರಲಿಲ್ಲವಾ? ಎಂದು ಪ್ರಶ್ನಿಸಿದರು.

ಜಗದೀಶ ಶೆಟ್ಟರ್ ಕಾಂಗ್ರೆಸ್‌ಗೆ ಹೋಗಿ ಮತ್ತೆ ಪಕ್ಷಕ್ಕೆ ವಾಪಸ್ ಬಂದು ಲೋಕಸಭೆ ಚುನಾವಣೆಗೆ ಟಿಕೆಟ್ ತೆಗೆದುಕೊಂಡಿದ್ದಾರೆ. ನಾನೇನು ಹಾಗೆ ಮಾಡಿದ್ದೇನಾ? ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡುತ್ತಿದ್ದೇನೆ. ‘ನಿಮಗೆ ಅನ್ಯಾಯ ಆಗಿದೆ, ಬಿಜೆಪಿ ಅಪ್ಪ ಮಕ್ಕಳ ಕೈಯಲ್ಲಿದೆ. ನಾವು ನಿಮಗೆ ಮತ ಕೊಡುತ್ತೇವೆ’ ಅಂತಾ ಮತದಾರರು ಹೇಳುತ್ತಿದ್ದಾರೆ’ ಎಂದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X