‘ಬಿಜೆಪಿ ಹೇರಿದ ನಿರುದ್ಯೋಗ’ ಲೋಕಸಭೆ ಚುನಾವಣೆಯ ದೊಡ್ಡ ಸಮಸ್ಯೆ ಎಂದು ಜಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಯುವಕರು ಉದ್ಯೋಗ ಹುಡುಕಲು ಹೆಣಗಾಡುತ್ತಿದ್ದಾರೆ ಎಂದಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ (ಟ್ವಿಟ್ಟರ್) ಪೋಸ್ಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಅವರು ‘ಯುವ ನ್ಯಾಯ’ ಅಡಿಯಲ್ಲಿ ಕಾಂಗ್ರೆಸ್ ‘ಉದ್ಯೋಗ ಖಾತರಿ’ ಗ್ಯಾರಂಟಿಯು ಈ ಅಡೆತಡೆಗಳನ್ನು ತೆಗೆದುಹಾಕುತ್ತದೆ. ಆ ಮೂಲಕ ಉದ್ಯೋಗ ಬೆಳವಣಿಗೆಗೆ ಹೊಸ ಮಾರ್ಗ ತೆರೆಯುತ್ತದೆ ಎಂದು ಹೇಳಿದರು.
The biggest issue in these Lok Sabha elections is Unemployment, imposed by the BJP.
Our Youth are struggling to find jobs, and we are staring at a demographic nightmare.
Take the case of India’s Premier Institutes – IITs and IIMs
🔻Across 12 IITs, around 30% of our students… pic.twitter.com/l8jCp2NI3X
— Mallikarjun Kharge (@kharge) April 7, 2024
“ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೇರಿದ ನಿರುದ್ಯೋಗವೇ ದೊಡ್ಡ ಸಮಸ್ಯೆಯಾಗಿದೆ. ನಮ್ಮ ಯುವಕರು ಉದ್ಯೋಗಗಳನ್ನು ಹುಡುಕಲು ಹೆಣಗಾಡುತ್ತಿದ್ದಾರೆ ಮತ್ತು ನಾವು ಜನಸಂಖ್ಯಾ ದುಃಸ್ವಪ್ನವನ್ನು ನೋಡುತ್ತಿದ್ದೇವೆ” ಎಂದು ಅಭಿಪ್ರಾಯಿಸಿದರು.
ಇದನ್ನು ಓದಿದ್ದೀರಾ? ಪ್ರಣಾಳಿಕೆ ಬಿಡುಗಡೆ | ‘ಐದು ನ್ಯಾಯ, 25 ಗ್ಯಾರಂಟಿ’ಗಳು ಚುನಾವಣೆಯ ಗೇಮ್‌ಚೇಂಜರ್ ಎಂದ ಕಾಂಗ್ರೆಸ್
ಭಾರತದ ಪ್ರಮುಖ ಸಂಸ್ಥೆಗಳಾದ ಐಐಟಿಗಳು ಮತ್ತು ಐಐಎಂಗಳ ಪ್ರಕರಣವನ್ನು ಉಲ್ಲೇಖಿಸಿದ ಖರ್ಗೆ ಅವರು, “12 ಐಐಟಿಗಳಲ್ಲಿ ಸುಮಾರು ಶೇಕಡ 30ರಷ್ಟು ವಿದ್ಯಾರ್ಥಿಗಳು ನಿಯಮಿತ ಉದ್ಯೋಗಗಳನ್ನು ಪಡೆಯುತ್ತಿಲ್ಲ. 21 ಐಐಎಂಗಳಲ್ಲಿ ಕೇವಲ ಶೇಕಡ 20ರಷ್ಟು ಮಾತ್ರ ಇದುವರೆಗೆ ಬೇಸಿಗೆ ನಿಯೋಜನೆಗಳನ್ನು (ಸಮ್ಮರ್ ಪ್ಲೇಸ್‌ಮೆಂಟ್) ಪೂರ್ಣಗೊಳಿಸಲು ಸಾಧ್ಯವಾಯಿತು” ಎಂದಿದ್ದಾರೆ.
ಇನ್ನು “ಐಐಟಿ ಮತ್ತು ಐಐಎಂಗಳ ಪರಿಸ್ಥಿತಿ ಹೀಗಾದರೆ, ಬಿಜೆಪಿಯು ದೇಶಾದ್ಯಂತ ನಮ್ಮ ಯುವಜನರ ಭವಿಷ್ಯವನ್ನು ಹೇಗೆ ನಾಶ ಮಾಡಿದೆ ಎಂಬುದನ್ನು ಯಾರಾದರೂ ಕೂಡಾ ಊಹಿಸಬಹುದು” ಎಂದು ಖರ್ಗೆ ಹೇಳಿದ್ದಾರೆ.
“ಮೋದಿ ಸರ್ಕಾರದ ಅಡಿಯಲ್ಲಿ ಯುವ ನಿರುದ್ಯೋಗ ದರವು 2014 ರಿಂದ ಮೂರು ಪಟ್ಟು ಹೆಚ್ಚಾಗಿದೆ” ಎಂದಿರುವ ಮಲ್ಲಿಕಾರ್ಜುನ ಖರ್ಗೆ ಅವರು ಐಎಲ್‌ಒನ ಇತ್ತೀಚಿನ ಭಾರತ ಉದ್ಯೋಗ ವರದಿಯನ್ನು ಉಲ್ಲೇಖಿಸಿದರು.
ಇದನ್ನು ಓದಿದ್ದೀರಾ? ಆರ್‌ಎಸ್‌ಎಸ್-ಬಿಜೆಪಿ ವಿಷದಂತೆ, ವಿಪಕ್ಷಗಳು ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು: ಮಲ್ಲಿಕಾರ್ಜುನ ಖರ್ಗೆ
“ಐಎಲ್‌ಒನ ಇತ್ತೀಚಿನ ಭಾರತ ಉದ್ಯೋಗ ವರದಿಯು ಪ್ರತಿ ವರ್ಷ, ಭಾರತವು ಸುಮಾರು 70-80 ಲಕ್ಷ ಯುವಕರನ್ನು ಕಾರ್ಮಿಕ ಬಲಕ್ಕೆ ಸೇರಿಸುತ್ತದೆ ಎಂದು ಹೇಳುತ್ತದೆ. ಆದರೆ 012 ಮತ್ತು 2019 ರ ನಡುವೆ ಉದ್ಯೋಗದಲ್ಲಿ ಬಹುತೇಕ ಶೂನ್ಯ ಬೆಳವಣಿಗೆ ಕಂಡುಬಂದಿದೆ. ಕೇವಲ ಶೇಕಡ 0.01 ಬೆಳವಣಿಗೆ ಕಂಡುಬಂದಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ಮಾಹಿತಿ ನೀಡಿದರು.
” 2 ಕೋಟಿ ಉದ್ಯೋಗಗಳನ್ನು ಒದಗಿಸುವ ‘ಮೋದಿ ಕಿ ಗ್ಯಾರಂಟಿ’ ನಮ್ಮ ಯುವಕರ ಹೃದಯ ಮತ್ತು ಮನಸ್ಸಿನಲ್ಲಿ ಕೆಟ್ಟ ಕನಸಾಗಿ ಪ್ರತಿಧ್ವನಿಸುತ್ತಿದೆ. ಆದ್ದರಿಂದ, ಕಾಂಗ್ರೆಸ್ ಪಕ್ಷವು ‘ಮೊದಲು ಉದ್ಯೋಗ ಖಾತರಿ’ ಅನ್ನು ಯುವನ್ಯಾಯದಡಿಯಲ್ಲಿ ತಂದಿದೆ” ಎಂದು ಕಾಂಗ್ರೆಸ್ ಮುಖಂಡ ತಿಳಿಸಿದರು.
“25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಡಿಪ್ಲೊಮಾ ಅಥವಾ ಪದವಿ ಹೊಂದಿರುವವರು ಈಗ ಉದ್ಯೋಗವನ್ನು ಪಡೆಯುವ ಕಾನೂನುಬದ್ಧ ಹಕ್ಕನ್ನು ಹೊಂದಿರುತ್ತಾರೆ ಮತ್ತು ವರ್ಷಕ್ಕೆ ಕನಿಷ್ಠ 1 ಲಕ್ಷ ರೂಪಾಯಿ ಪಡೆಯುವ ಅರ್ಹತೆ ಹೊಂದಿರುತ್ತಾರೆ. ಇದು ಕೆಲಸ ಮತ್ತು ಕಲಿಕೆಯನ್ನು ಪ್ರತ್ಯೇಕಿಸುವ ಅಡೆತಡೆಗಳನ್ನು ತೆಗೆದುಹಾಕುತ್ತದೆ. ಇದರಿಂದಾಗಿ ವೃತ್ತಿ ಬೆಳವಣಿಗೆ ಆಗುತ್ತದೆ” ಎಂದು ಅಭಿಪ್ರಾಯಿಸಿದರು.
ಕಾಂಗ್ರೆಸ್ ಪಕ್ಷವು ಐದು ನ್ಯಾಯ ಗ್ಯಾರಂಟಿಗಳನ್ನು ಘೋಷಿಸಿದೆ. ಭಾಗಿಧಾರಿ ನ್ಯಾಯ, ಕಿಸಾನ್ ನ್ಯಾಯ, ನಾರಿ ನ್ಯಾಯ, ಶ್ರಮಿಕ ನ್ಯಾಯ ಮತ್ತು ಯುವ ನ್ಯಾಯ ಎಂಬ ಐದು ಗ್ಯಾರಂಟಿ ಅಡಿಯಲ್ಲಿ ತಲಾ ಐದು ಗ್ಯಾರಂಟಿಗಳಂತೆ ಜೊತೆಯಾಗಿ 25 ಗ್ಯಾರಂಟಿಗಳನ್ನು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಘೋಷಿಸಿದ್ದಾರೆ.