ಕೋಲಾರ | ಮುಸ್ಲಿಂ ಸಮುದಾಯದ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ರಾಘವೇಂದ್ರ ಬಂಧನ

Date:

ಬಂಗಾರಪೇಟೆ ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ದೂರು ನೀಡಿದ್ದು, ಅದರನ್ವಯ ಕೇಸ್ ದಾಖಲಿಸಿ ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ. ಇದೀಗ ಪೊಲೀಸ್‌ ವಶದಲ್ಲಿದ್ದಾನೆ. ಮಗುವಿಗೆ ಮುಂದಿನ ಚಿಕಿತ್ಸೆ ನೀಡಿ ಅಂತಿಮ ವರದಿ ಬರುತ್ತದೆ. ಅತ್ಯಾಚಾರ ನಡೆದಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಪೋಷಕರ ಮುಂದೆಯೇ ಮಗುವಿನ ಬಳಿ ನಾವು ಮಾಹಿತಿ ಪಡೆದಿದ್ದೇವೆ. ಆ ವೇಳೆ ಒಬ್ಬನೇ ಅತ್ಯಾಚಾರ ಎಸಗಿರುವುದು ತಿಳಿದುಬಂದಿದೆ. ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದೇವೆ. ಘಟನೆಯಲ್ಲಿ ಬೇರೆಯವರೂ ಭಾಗಿಯಾಗಿದ್ದರೆ ಅಂಥವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆಂದು ಎಸ್‌ಪಿ ಭರವಸೆ ನೀಡಿದ್ದಾರೆ.

ಕೊಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೋವಿನಗರದಲ್ಲಿ ಮುಸ್ಲಿಂ ಸಮುದಾಯದ 6 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಆರೋಪಿ ರಾಘವೇಂದ್ರ ಎಂಬಾತ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

- Advertisement -

ಸಂತ್ರಸ್ತ ಮಗುವಿಗೆ ಬಂಗಾರಪೇಟೆ ತಾಲೂಕು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೋವಿನಗರದಲ್ಲಿ 1ನೇ ತರಗತಿ ಓದುತ್ತಿರುವ ಸಂತ್ರಸ್ತ ಬಾಲಕಿ ಸೆಪ್ಟಂಬರ್‌ 1ರಂದು ಪೆನ್ಸಿಲ್‌ ತರಲೆಂದು ಚಿಲ್ಲರೆ ಅಂಗಡಿಗೆ ತೆರಳಿದಾಗ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿಯಾಂಡ್ ಬೆಂಗಳೂರು: ಡಿಜಿಟಲ್ ಆರ್ಥಿಕತೆಯಲ್ಲಿ ರಾಯಚೂರಿಗೆ ಸಿಗುವುದೇ ಪ್ರತ್ಯೇಕ...

ಕರ್ನಾಟಕದ ಅಭಿವೃದ್ಧಿ ಬೆಂಗಳೂರಿಗೆ ಮಾತ್ರ ಸೀಮಿತವಾಗದೆ ರಾಜ್ಯದ ವಿವಿಧ ನಗರಗಳಿಗೂ ತಲುಪಬೇಕು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (KDEM) ‘Beyond Bengaluru’ ಯೋಜನೆಯನ್ನು ಜಾರಿಗೊಳಿಸಿದೆ. ಐಟಿ, ಐಟಿಇಎಸ್,...

ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗು, ಬಂಡಾಯದ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಕೋಲಾರ ನಿವಾಸಿ ರಫಿ ಪಾಷ ಎಂಬುವವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, ”6 ವರ್ಷದ ಮಗು ಪೆನ್ಸಿಲ್‌ ತರಲು ಅಂಗಡಿಗೆ ಹೋದಾಗ ಅಂಗಡಿಯ ಮಾಲೀಕ ರಾಘವೇಂದ್ರ ಎಂಬಾತ ಮತ್ತು ಜೊತೆಗಿದ್ದವನು ಸೇರಿ ಮಗುವಿನ ಮೇಲೆ ಅತ್ಯಾಚಾರದ ಕ್ರೌರ್ಯ ಮೆರೆದಿದ್ದಾರೆ. ಮಗು ಎಲ್ಲರಿಗೂ ಮಗುವೇ ಅಲ್ಲವೇ? ಇಂಥ ಕ್ರೂರಿಗಳಿಂದ ಹೆಣ್ಣುಮಕ್ಕಳನ್ನು ರಕ್ಷಿಸಿಕೊಳ್ಳುವುದಾದರೂ ಹೇಗೆ?” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

“ಆರೋಪಿ ವಿರುದ್ಧ ಎಫ್‌ಐಆರ್‌ ಮಾಡಿದರಷ್ಟೇ ಸಾಲದು. ಸೂಕ್ತ ಕ್ರಮಗಳಾಗಬೇಕು. ನ್ಯಾಯಾಂಗ ತನಿಖೆಯಾಗಬೇಕು. ಆರೋಪಿಗೆ ಸೂಕ್ತ ಶಿಕ್ಷೆಯಾಗಬೇಕು. ಆತನ ಹಿಂದೆ ಪ್ರಭಾವಿಗಳಿದ್ದಾರೆಂಬ ಕಾರಣಕ್ಕೆ ಇಂತಹ ಕ್ರೂರಿಗಳನ್ನು ಬಚಾವ್‌ ಮಾಡುವ ಸಂಚುಗಳು ನಡೆಯಬಾರದು. ಇದರಲ್ಲಿ ಧರ್ಮ ರಾಜಕಾರಣ ಮಾಡಬಾರದು ತಪ್ಪು ಯಾರೇ ಮಾಡಿದರೂ ತಪ್ಪೇ… ಏನೂ ಅರಿಯದ 6 ವರ್ಷದ ಹಸುಗೂಸು ಸಂತ್ರಸ್ತ ಮಗುವಿಗೆ ನ್ಯಾಯ ದೊರೆಯಬೇಕು. ರಾಜೀ ಘಟನೆಗಳು ನಡೆದರೆ ನಾವು ರಾಜ್ಯಾದ್ಯಂತ ತೀವ್ರ ಹೋರಾಟಕ್ಕೆ ಸಿದ್ಧರಾಗುತ್ತೇವೆ” ಎಂದು ಎಚ್ಚರಿಕೆ ನೀಡಿದರು.

“ಯಾವುದೇ ಮಕ್ಕಳ ಮೇಲೆಯೂ ಈ ರೀತಿ ಆಗಬಾರದು. ಮಕ್ಕಳೆಲ್ಲರೂ ಒಂದೇ. ಹೆಣ್ಣುಮಕ್ಕಳು ಸಮಾಜದಲ್ಲಿ ನಿರ್ಭೀತಿಯಿಂದ ಬದುಕದಂತಾಗಿದೆ. ಶಾಸಕ ಕೊತ್ತೂರು ಮಂಜುನಾಥ್‌ ಅವರ ನೇತೃತ್ವದಲ್ಲಿ ನಾವೆಲ್ಲರೂ ಆಸ್ಪತ್ರೆಗೆ ತೆರಳಿ ಸಂತ್ರಸ್ತ ಮಗುವಿನ ಪೋಷಕರಿಗೆ ಧೈರ್ಯ ತುಂಬಿ, ಜೊತೆ ನಿಂತು ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದೇವೆ. ಆರೋಪಿಗೆ ಕಠಿಣ ಶಿಕ್ಷೆಯಾಗುವ ಮೂಲಕ ಮಗುವಿಗೆ ನ್ಯಾಯ ಸಿಗುವುದೆಂಬ ವಿಶ್ವಾಸವಿದೆ. ಯಾವುದೇ ಕಾರಣಕ್ಕೂ ಯಾರು ತಪ್ಪು ಮಾಡಿದ್ದಾರೆ ಅಂಥವರಿಗೆ ಶಿಕ್ಷೆಯಾಗಲೇಬೇಕೆಂದು ಶಾಸಕರು ಡಿಎಚ್‌ಒ ಅವರಿಗೂ ಸೂಚನೆ ನೀಡಿದ್ದಾರೆ” ಎಂದು ಹೇಳಿದರು.

ಬಂಗಾರಪೇಟೆ ನಿವಾಸಿಯೊಬ್ಬರು ಮಾತನಾಡಿ, “ಬಂಗಾರಪೇಟೆಯ ಬೋವಿನಗರದಲ್ಲಿ 6 ವರ್ಷದ ಮಗು ಸೆಪ್ಟೆಂಬರ್ 1ರಂದು ಬೆಳಿಗ್ಗೆ ಹಾಲು ತರಲು ಅಂಗಡಿಗೆ ಹೋದ ಸಂದರ್ಭದಲ್ಲಿ ರಾಘವೇಂದ್ರ ಎನ್ನುವ ವ್ಯಕ್ತಿ ಮಗುವನ್ನು ಒಳಗೆ ಎತ್ತಿಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಮತ್ತೆ ಅಂದೇ ಸಂಜೆ ಬಳಿಕ ಪೆನ್ಸಿಲ್‌ ತರಲೆಂದು ಹೋದಾಗಲೂ ಅತ್ಯಾಚಾರ ಎಸಗಿದ್ದಾನೆ. ಮಾರನೇ ದಿನ ಮಗು ಶಾಲೆಗೆ ಹೋದಾಗ ಅಲ್ಲಿ ಮಗುವಿಗೆ ಹೊಟ್ಟೆ ನೋವು ಬಂದು ಅಳುತ್ತಿದ್ದಾಗ ಶಾಲೆಯವರು ಪೋಷಕರಿಗೆ ಮಾಹಿತಿ ನೀಡಿದ್ದು, ನಂತರ ಬಂಗಾರಪೇಟೆ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದಾಗ ತಿಳಿದುಬಂದಿದೆ. ಬಳಿಕ ಮಗುವಿನ ತಾಯಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಮೊದಲಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ. ಕೊನೆಗೆ ಎಫ್‌ಐಆರ್‌ ಮಾಡಿದ್ದಾರೆ. ಅತ್ಯಾಚಾರ ಆರೋಪಿ ರಾಘವೇಂದ್ರನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.

ಮಗುವಿನ ತಾಯಿ ಪ್ರತಿಕ್ರಿಯೆ ನೀಡಿದ್ದು, “ಬಂಗಾರಪೇಟೆಗೆ ಕಂಪ್ಲೇಂಟ್‌ ನೀಡಲು ಹೋದಾಗ ಪೊಲೀಸರು ಸರಿಯಾದ ರೀತಿಯಲ್ಲಿ ನಮಗೆ ಸ್ಪಂದಿಸಲಿಲ್ಲ. ಸಣ್ಣ ಮಗುವಿನ ಮೇಲೆ ಕ್ರೌರ್ಯ ಮೆರೆದಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಮುಂದೆ ಬೇರೆ ಯಾವುದೇ ಮಕ್ಕಳ ಮೇಲೆಯೂ ಈ ರೀತಿ ಆಗಬಾರದು” ಎಂದು ನೊಂದುಕೊಂಡರು.

ಸಂತ್ರಸ್ತ ಬಾಲಕಿಯ ಮಾವ ಮಾತನಾಡಿ, “ನನ್ನ ತಂಗಿ ಮಗು ಭಾನುವಾರ ಅಂಗಡಿಗೆ ಹೋದಾಗ ಆಕೆಯ ಮೇಲೆ ಅತ್ಯಾಚಾರವಾಗಿದೆ. ಇದು ನಮಗೆ ತಿಳಿಯದೆ, ಮಾರನೆ ದಿನ ಶಾಲೆಗೆ ಕಳುಹಿಸಿದ್ದೆವು. ಶಾಲೆಯಲ್ಲಿ ಮಗು ಅಳುವುದನ್ನು ಕಂಡ ಶಿಕ್ಷಕರು ನಮ್ಮನ್ನು ಕರೆಸಿ ಮಗುವನ್ನು ಮನೆಗೆ ಕಳುಹಿಸಿಕೊಟ್ಟರು . ಏನಾಗಿದೆಯೆಂದು ನೋಡಿದಾಗ ಮಗುವಿನ ಮೇಲೆ ಅತ್ಯಾಚಾರವಾಗಿರುವುದು ಕಂಡುಬಂದಿದೆ. ಬಳಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಡ್ಮಿಟ್‌ ಮಾಡಿದ್ದೇವೆ. ಪೊಲೀಸ್‌ ಕಂಪ್ಲೇಂಟ್‌ ಮಾಡಿದ್ದೇವೆ. ಆದರೂ ಎಫ್‌ಐಆರ್‌ ಕೂಡ ಆಗಿರಲಿಲ್ಲ, ಡಾಕ್ಟರ್‌ ರಿಪೋರ್ಟ್‌ ಕೂಡ ನೀಡಿರಲಿಲ್ಲ. ನಾವೆಲ್ಲರೂ ಹೋಗಿ ಪಟ್ಟು ಹಿಡಿದ ಕೂತ ಮೇಲೆ ಒಬ್ಬನ ಮೇಲೆ ಎಫ್‌ಐಆರ್‌ ಆಗಿದೆ. ಇನ್ನೊಬ್ಬನ ಮೇಲೆ ಯಾವುದೇ ರೀತಿಯ ದೂರು ದಾಖಲಾಗಿಲ್ಲ. 6 ವರ್ಷದ ಮಕ್ಕಳ ಮೇಲೆ ಈ ರೀತಿ ಅತ್ಯಾಚಾರ ನಡೀತಿದ್ರೆ… ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂತ್ರಸ್ತ ಬಾಲಿಕಿಯ ತಂದೆ ಮಾತನಾಡಿ, “ನನಗೆ ನನ್ನ ಹೆಂಡತಿ, ಮಗುವಿನ ಬಗ್ಗೆ ಏನನ್ನೂ ತಿಳಿಸಿರಲಿಲ್ಲ. ಬೆಳಿಗ್ಗೆ ಒಂದು ಬಾರಿ ಅತ್ಯಾಚಾರವಾಗಿದೆ. ಮಗು ಸಂಜೆ ಪೆನ್ಸಿಲ್‌ ತರಲೆಂದು ಹೋದಾಗ ಮತ್ತೆ ಮಗುವಿನ ಮೇಲೆ ಅತ್ಯಾಚಾರವಾಗಿದೆ. ಇಡೀ ರಾತ್ರಿ ಇದು ನಮ್ಮ ಗಮನಕ್ಕೆ ಬಂದಿರಲಿಲ್ಲ. ನೋವಿನಿಂದ ಮಗು ಅಳುತ್ತಲೇ ಇದ್ದಾಗ, ನೋಡಿ ವಿಚಾರಿಸಿದಾಗ ಅತ್ಯಾಚಾರವಾಗಿರುವುದು ಕಂಡುಬಂದಿತು. ಬಳಿಕ ಅಂಗಡಿ ಬಳಿ ಹೋಗಿ ನೋಡಿದರೆ ಅಲ್ಲಿ ಯಾರೂ ಇರಲಿಲ್ಲ. ಅಂಗಡಿಯನ್ನು ಕ್ಲೋಸ್‌ ಮಾಡಿಕೊಂಡು ಹೋಗಿದ್ದಾರೆ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಇದನ್ನೂ ಓದಿದ್ದೀರಾ? ಸವಣೂರು | ರೋಗಿಗಳಿಂದಲೇ ಮಲದ ಗುಂಡಿ ಸ್ವಚ್ಛ: ವೈದ್ಯಾಧಿಕಾರಿ ಡಾ. ಶಂಕರ್ ಹಿರೇಗೌಡ್ರು, ನರ್ಸ್ ವನಿತಾ ಅಮಾನತು

6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಯನ್ನು ಬಂಧಿಸುವಂತೆ ಆಗ್ರಹಿಸಿ ಸ್ಥಳೀಯ ನಿವಾಸಿಗಳು ಬುಧವಾರ ರಾತ್ರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ನಂತರ ಆಸ್ಪತ್ರೆ ಹಾಗೂ ಪೊಲೀಸ್ ಠಾಣೆ ಎದುರು ಜಮಾಯಿಸಿದರು. ಸ್ಥಳಕ್ಕೆ KGF ಎಸ್‌ಪಿ ಶಿವಾಂಶು ರಜಪೂತ ಭೇಟಿ ನೀಡಿ, ಬಂಗಾರಪೇಟಿ ಪೊಲೀಸರಿಗೆ ಆದೇಶಿಸಿದ ನಂತರ ಆರೋಪಿಯನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದರು.

ಬಂಗಾರಪೇಟೆ ಪ್ರತಿಭಟನೆ
ಬಂಗಾರಪೇಟೆಯಲ್ಲಿ ಪ್ರತಿಭಟನೆ

ಕೆಜಿಎಫ್ ಎಸ್‌ಪಿ ಶಿವಾಂಶು ರಜಪೂತ್ ಈ ದಿನ.ಕಾಮ್‌ಗೆ ಪ್ರತಿಕ್ರಿಯೆ ನೀಡಿದ್ದು, “ಬಂಗಾರಪೇಟೆ ಘಟನೆಗೆ ಸಂಬಂಧಿಸಿದಂತೆ ಮಗುವಿನ ತಾಯಿ ದೂರು ನೀಡಿದ್ದು, ಅದರನ್ವಯ ಕೇಸ್ ದಾಖಲಿಸಿ ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ. ಇದೀಗ ಪೊಲೀಸ್‌ ವಶದಲ್ಲಿದ್ದಾನೆ. ಮಗುವಿಗೆ ಮುಂದಿನ ಚಿಕಿತ್ಸೆ ನೀಡಿ ಅಂತಿಮ ವರದಿ ಬರುತ್ತದೆ. ಅತ್ಯಾಚಾರ ನಡೆದಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಪೋಷಕರ ಮುಂದೆಯೇ ಮಗುವಿನ ಬಳಿ ನಾವು ಮಾಹಿತಿ ಪಡೆದಿದ್ದೇವೆ. ಆ ವೇಳೆ ಒಬ್ಬನೇ ಅತ್ಯಾಚಾರ ಎಸಗಿರುವುದು ತಿಳಿದುಬಂದಿದೆ. ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿದ್ದೇವೆ. ಘಟನೆಯಲ್ಲಿ ಬೇರೆಯವರೂ ಭಾಗಿಯಾಗಿದ್ದರೆ ಅಂಥವರ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿಜಯಪುರ | 22ನೇ ಶರಣ ತತ್ವ ಕಮ್ಮಟಕ್ಕೆ ಸಚಿವ ಎಂ.ಬಿ ಪಾಟೀಲರಿಗೆ ಆಹ್ವಾನ

ವಿಜಯಪುರದ ವೀರಶೈವ ಲಿಂಗಾಯತ ಸಾಂಸ್ಕೃತಿಕ ಭವನದಲ್ಲಿ ಅಕ್ಟೋಬರ್ 29ರಿಂದ ನವೆಂಬರ್ 1ರವರೆಗೆ...

ಬೀಳಗಿ | ಛಾಯಾಗ್ರಾಹಕರಿಗಾಗಿ ಆಕಾಡೆಮಿ ಸ್ಥಾಪಿಸಲು ವಿಠ್ಠಲ ಹಿರೇಮಠ ಆಗ್ರಹ

ಛಾಯಾಗ್ರಾಹಕರ ವೃತ್ತಿ ಭದ್ರತೆ, ಕುಟುಂಬದ ಕಲ್ಯಾಣ ಹಾಗೂ ಸರಕಾರದ ಸೌಲಭ್ಯಗಳನ್ನು ಒದಗಿಸಲು...

ಅಂದು ಬೆಂಬಲ, ಇಂದು ಪಶ್ಚಾತಾಪ: 2023ರ ಚುನಾವಣಾ ಆಯುಕ್ತರ ಕಾಯ್ದೆಗೆ ಬೆಂಬಲ ನೀಡಿ ತಪ್ಪು ಮಾಡಿದೆ ಎಂದ ಜಗನ್ ಮೋಹನ್ ರೆಡ್ಡಿ

ಆಂಧ್ರಪ್ರದೇಶದ ರಾಜಕಾರಣದಲ್ಲಿ ಮತ್ತೊಮ್ಮೆ ಭಾರೀ ಸಂಚಲನ ಮೂಡಿಸಿರುವ ಬೆಳವಣಿಗೆ ನಡೆದಿದೆ. ಮಾಜಿ...

ಯಾದಗಿರಿ | ಪ್ರಜಾಪ್ರಭುತ್ವದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ

ಯುವಜನರು ಪ್ರಜಾಪ್ರಭುತ್ವದ ಆಶಯಗಳು ಹಾಗೂ ಸಂವಿಧಾನದ ಮೌಲ್ಯಗಳನ್ನು ಅರಿತುಕೊಂಡು ಅವುಗಳನ್ನು ತಮ್ಮ...