ಕೆಲವು ನ್ಯಾಯಾಲಯಗಳ ವಿಡಿಯೋ ಕಾನ್ಫರೆನ್ಸ್ನಲ್ಲಿ ಅನುಚಿತ ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಇನ್ನು ಮುಂದೆ ಲೈವ್ ಸ್ಟ್ರೀಮಿಂಗ್ಗೆ ನಿರ್ಬಂಧ ವಿಧಿಸಿದೆ.
ತಂತ್ರಜ್ಞಾನ ದುರುಪಯೋಗವಾಗುತ್ತಿದೆ. ಜೊತೆಗೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಅನುಚಿತ ಪ್ರಕರಣಗಳು ವರದಿಯಾಗಿದೆ. ಹೀಗಾಗಿ ಲೈವ್ ಸ್ಟ್ರೀಮಿಂಗ್ ಮತ್ತು ವಿಡಿಯೋ ಕಾನ್ಫರೆನ್ಸ್ಗೆ ಇನ್ನು ಮುಂದೆ ನಿರ್ಬಂಧಿಸುವುದಾಗಿ ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ತಿಳಿಸಿರುವುದಾಗಿ ‘ಲೈವ್ ಲಾ’ ವರದಿ ಮಾಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ, ಇದು ದುರದೃಷ್ಟಕರ ಸಂಗತಿ. ನಾವು ಲೈವ್ ಸ್ಟ್ರೀಮಿಂಗ್ ಮತ್ತು ವೀಡಿಯೊ ಕಾನ್ಫರೆನ್ಸಿಂಗ್ ಅನ್ನು ನಿಲ್ಲಿಸುತ್ತಿದ್ದೇವೆ. ಕೆಲವು ಕಿಡಿಗೇಡಿಗಳು ಇದನ್ನು ದುರುಪಯೋಗಪಡಿಸುತ್ತಿದ್ದಾರೆ. ಹಾಗಾಗಿ, ನಾವು ಇನ್ನು ಮುಂದೆ ಯಾವುದೇ ವೀಡಿಯೊ ಕಾನ್ಫರೆನ್ಸಿಂಗ್ ಸೌಲಭ್ಯವನ್ನು ಅನುಮತಿಸುತ್ತಿಲ್ಲ ಎಂದು ತಿಳಿಸಿದರು.
BREAKING : Karnataka High Court Chief Justice Prasanna B. Varale decides to stop all live streaming due to “mischief being played”. pic.twitter.com/fwylhEOyJo
— Live Law (@LiveLawIndia) December 5, 2023
‘ಈ ರೀತಿಯ ಬೆಳವಣಿಗೆಗಳಾಗದಿದ್ದರೆ ಕರ್ನಾಟಕ ಹೈಕೋರ್ಟ್ ಈ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ. ನ್ಯಾಯಾಲಯವು ಯಾವಾಗಲೂ ಸಾರ್ವಜನಿಕರಿಗೆ ಮತ್ತು ವಕೀಲರು, ಸಲಹೆಗಾರರಿಗೆ ಉತ್ತಮ ಸೇವೆಗಳಿಗೆ ತಂತ್ರಜ್ಞಾನವನ್ನು ಬಳಸುವುದರ ಪರವಾಗಿಯೇ ನಿಂತಿದೆ. ಮಾಧ್ಯಮದವರಿಗೆ ನಮ್ಮ ಈ ನಿರ್ಧಾರದಿಂದ ತೊಂದರೆಯಾಗಬಹುದು. ಆದರೂ, ಇದೊಂದು ಅನಿರೀಕ್ಷಿತ ಬೆಳವಣಿಗೆ. ನ್ಯಾಯಾಲಯ ವ್ಯವಸ್ಥೆಯ ಹಿತಾಸಕ್ತಿಗಾಗಿ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ. ನಮ್ಮೊಂದಿಗೆ ಸಹಕರಿಸಬೇಕು’ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ವಿನಂತಿಸಿದರು.
ಕರ್ನಾಟಕ ಹೈಕೋರ್ಟ್ನ ಕೆಲವು ಕೋರ್ಟ್ಗಳ ವಿಡಿಯೊ ಕಾನ್ಫರೆನ್ಸ್ನಲ್ಲಿ ಅನುಚಿತ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಲೈವ್ ಸ್ಟ್ರೀಮಿಂಗ್ ಮತ್ತು ವಿಡಿಯೊ ಕಾನ್ಫರೆನ್ಸ್ ನಿರ್ಬಂಧಿಸುವುದಾಗಿ ತಿಳಿಸಿದ ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಅವರು.#KarnatakaHighCourt #VideoConference #livestreaming pic.twitter.com/Le71aHZkuw
— ಬಾರ್ & ಬೆಂಚ್ – Kannada Bar & Bench (@Kbarandbench) December 5, 2023
ಸೈಬರ್ ಭದ್ರತಾ ಕಾರಣಗಳಿಗಾಗಿ ಕರ್ನಾಟಕ ಹೈಕೋರ್ಟ್ನ ಬೆಂಗಳುರು, ಧಾರವಾಡ, ಕಲಬುರ್ಗಿ ಪೀಠಗಳಲ್ಲಿ ಸದ್ಯಕ್ಕೆ ವಿಡಿಯೊ ಕಾನ್ಫರೆನ್ಸ್ ಅಮಾನತುಗೊಳಿಸಲಾಗಿದೆ ಎಂದು ರಿಜಿಸ್ಟ್ರಾರ್ ಜನರಲ್ ಭರತ್ ಕುಮಾರ್ ತಿಳಿಸಿದ್ದಾರೆ. ಹೀಗಾಗಿ, ವಿಡಿಯೊ ಕಾನ್ಫರೆನ್ಸ್ ಮತ್ತು ಲೈವ್ ಸ್ಟ್ರೀಮಿಂಗ್ ನಿಲ್ಲಿಸಲಾಗಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.