ತಾವು ಮೊದಲ ಸಲ ಮುಖ್ಯಮಂತ್ರಿಯಾಗಿದ್ದಾಗ ಕಳಸಾ-ಬಂಡೂರಿ ಅನುಷ್ಠಾನಕ್ಕೆ ಕರ್ನಾಟಕದ ರೈತರು ಪ್ರತಿಭಟನೆ ಮಾಡಿದ್ದಾಗ ತಮ್ಮ ಸರ್ಕಾರ ಪೊಲೀಸರನ್ನು ಹಳ್ಳಿ ಹಳ್ಳಿಗೆ ಕಳಿಸಿ ರೈತರ ಮೇಲೆ ಲಾಠಿ ಬೀಸಿದ್ದನ್ನು ರಾಜ್ಯದ ಜನ ಮರೆತಿಲ್ಲ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಅಶೋಕ್, ಬೆಳಗಾವಿಯಲ್ಲಿ ವಿಠಲ್ ಅರಬಾವಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಾಗ, ಕುಡಿದು ಸತ್ತ ಎಂದು ವ್ಯಂಗ್ಯವಾಡಿದ್ದನ್ನ ಮರೆತಿಲ್ಲ. ಇತ್ತೀಚೆಗೆ ತಮ್ಮ ಮಂತ್ರಿಗಳು, ಪರಿಹಾರಕ್ಕೋಸ್ಕರ, ಸಾಲ ಮನ್ನಾ ಆಗುತ್ತದೆ ಎನ್ನುವ ಆಸೆಯಿಂದ ಬರ ಬರಲಿ ಎಂದು ಆಶಿಸುತ್ತಾರೆ ಎಂದು ಅನ್ನದಾತರನ್ನು ಅವಮಾನಿಸಿದ್ದನ್ನು ಜನ ಮರೆತಿಲ್ಲ ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತು ತಪ್ಪಿದ ಮೋದಿ; ಮತ್ತೆ ಎದ್ದು ನಿಂತ ಅನ್ನದಾತರು
“ತಮ್ಮ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ‘ಸ್ವಂತಕ್ಕೆ ಆತ್ಮಹತ್ಯೆ ಮಾಡಿಕೊಂಡವರನ್ನೆಲ್ಲ ರೈತರು ಎನ್ನಲಾಗುತ್ತದೆಯೇ?’ ಎಂದು ನಿಂದಿಸಿದ್ದನ್ನೂ ಜನ ಮರೆತಿಲ್ಲ” ಎಂದು ಅಶೋಕ್ ಹೇಳಿದ್ದಾರೆ.
ಈಗ ಚುನಾವಣೆ ಹೊಸ್ತಿಲಲ್ಲಿರುವಾಗ ದಿಢೀರನೆ ರೈತರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ತಮ್ಮ ನಾಟಕವನ್ನು ಕರ್ನಾಟಕದ ರೈತರು ನಂಬುತ್ತರೆಯೇ? ನಿಮ್ಮ ನಾಟಕ ಸಾಕು ಮಾಡಿ ಮೊದಲು ರೈತರಿಗೆ ಬರ ಪರಿಹಾರ ಕೊಡುವತ್ತ ಗಮನ ಹರಿಸಿ ಎಂದು ಆಗ್ರಹಿಸಿದ್ದಾರೆ.
ಸಿಎಂ @siddaramaiah ಅವರೇ,
ತಾವು ಮೊದಲ ಸಲ ಮುಖ್ಯಮಂತ್ರಿಯಾಗಿದ್ದಾಗ ಕಳಸಾ-ಬಂಡೂರಿ ಅನುಷ್ಠಾನಕ್ಕೆ ಕರ್ನಾಟಕದ ರೈತರು ಪ್ರತಿಭಟನೆ ಮಾಡಿದ್ದಾಗ ತಮ್ಮ ಸರ್ಕಾರ ಪೊಲೀಸರನ್ನು ಹಳ್ಳಿ ಹಳ್ಳಿಗೆ ಕಳಿಸಿ ರೈತರ ಮೇಲೆ ಲಾಠಿ ಬೀಸಿದ್ದನ್ನು ರಾಜ್ಯದ ಜನ ಮರೆತಿಲ್ಲ.
ಬೆಳಗಾವಿಯಲ್ಲಿ ವಿಠಲ್ ಅರಬಾವಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಾಗ, ಕುಡಿದು ಸತ್ತ… https://t.co/h6HJa7YneG pic.twitter.com/KDCivHZidX
— R. Ashoka (ಆರ್. ಅಶೋಕ) (@RAshokaBJP) February 13, 2024
ತಮ್ಮ ಹಕ್ಕಿಗಾಗಿ ರಸ್ತೆಯಲ್ಲಿ ವರ್ಷವಿಡೀ ಹೋರಾಟ ಮಾಡಿ ಜೀವ ಬಿಟ್ಟ ರೈತರ ಮೇಲೆ ಜೀಪು ಓಡಿಸಿದ ಗೂಂಡಾಗಳು ಯಾರ ಪಕ್ಷದವರು ಮಾಜಿಗಳೆ,,, ಕೃಷಿಯನ್ನು ಆಪ್ತ ಬಂಡವಾಳಿಗರ ನಿಯಂತ್ರಣಕ್ಕೆ ನೀಡುವ ದುರಾಲೋಚನೆ ಯಾವ ಮೆದುಳಿನ ಪ್ರಾಡಕ್ಟ್,,, ನಿಮಗೆ ರೈತರು ಕೂಲಿ ಕಾರ್ಮಿಕರ ಬಗ್ಗೆ ಮಾತಾಡುವ ನೈತಿಕತೆ ಇದೆಯಾ,,, ನಿಮಗೆ ಹಂಗೂ ತಾಕತ್ತು ಇದ್ದರೆ ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇದೆ,,ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ