15 ವರ್ಷದ ಬಳಿಕ ರಾಜ್ಯದಲ್ಲಿ ವಿದ್ಯುತ್‌ ದರ ಇಳಿಕೆ: 100+ ಯೂನಿಟ್‌ ಬಳಸುವವರಿಗೆ ಲಾಭ

Date:

Advertisements

ಹದಿನೈದು ವರ್ಷಗಳ ಬಳಿಕ ರಾಜ್ಯದಲ್ಲಿ ಮೊದಲ ಬಾರಿಗೆ ವಿದ್ಯುತ್ ಬಳಕೆಯ ದರವನ್ನು ಕಡಿತ ಮಾಡಲಾಗಿದ್ದು, ಏಪ್ರಿಲ್ 1ರಿಂದಲೇ ಜಾರಿಗೆ ಬರಲಿದ್ದು, ಮೇ ತಿಂಗಳಿನಲ್ಲಿ ನೀಡಲಾಗುವ ಬಿಲ್‍ಗಳಿಗೆ ಅನ್ವಯವಾಗಲಿದೆ.

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‌ಸಿ) ಕಳೆದ ಜನವರಿ ಮತ್ತು ಫೆಬ್ರವರಿಯಲ್ಲಿ ವಾರ್ಷಿಕ ಪ್ರಕ್ರಿಯೆಗಳನ್ನು ನಡೆಸಿ ಎಸ್ಕಾಂಗಳ ಪ್ರತಿಪಾದನೆ, ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಿ ಫೆ.22ರಂದು ಹೊರಡಿಸಿರುವ ಆದೇಶದ ಪ್ರಕಾರ ಹಿಂದಿನಿಂದ ಗೃಹ ಬಳಕೆಯ ವಿದ್ಯುತ್ ಮೇಲೆ 1 ರೂ. 10 ಪೈಸೆ ಕಡಿತವಾಗಲಿದೆ.

electric

ಈ ಮೊದಲು 1ರಿಂದ 100 ರೂ. ಒಳಗಿನ ವಿದ್ಯುತ್ ದರಕ್ಕೆ 4 ರೂ.ಗಿಂತಲೂ ಹೆಚ್ಚಿನ ದರ ಇತ್ತು. 100 ರೂ. ಮೇಲ್ಪಟ್ಟ ವಿದ್ಯುತ್ ಬಳಕೆಗೆ ಶೂನ್ಯ ಯೂನಿಟ್‍ನಿಂದಲೇ 7 ರೂ. ಅನ್ವಯವಾಗುತ್ತಿತ್ತು. ಗೃಹ ಜ್ಯೋತಿ ಯೋಜನೆ ಜಾರಿಯಲ್ಲಿ ಇದ್ದುದ್ದರಿಂದ 200 ಯೂನಿಟ್ ಒಳಗಿನ ವಿದ್ಯುತ್ ಬಳಕೆಯ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಾಗಿರಲಿಲ್ಲ. ಆದರೆ ಗೃಹಜ್ಯೋತಿ ವ್ಯಾಪ್ತಿಯಿಂದ ಹೊರಗುಳಿದ ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯ ಬಿಸಿ ತಗುಲಿತ್ತು.

Advertisements

ಈ ಬಾರಿ ನಡೆದ ವಿಚಾರಣೆಯಲ್ಲಿ ಎಸ್ಕಾಂಗಳು 2024-25ನೇ ಸಾಲಿಗೆ 69,474.75 ಕೋಟಿ ರೂ.ಗಳ ವಾರ್ಷಿಕ ಕಂದಾಯದ ಅಗತ್ಯತೆಯನ್ನು ಪ್ರಸ್ತಾಪಿಸಿದರು. ಇದರಿಂದ 4,863.85 ಕೋಟಿ ರೂ.ಗಳ ಕಂದಾಯ ಕೊರತೆ ಕಂಡುಬಂದಿತ್ತು. ಇದನ್ನು ಸರಿದೂಗಿಸಲು ಪ್ರತಿ ಯೂನಿಟ್‍ಗೆ 49ರಿಂದ 163 ಪೈಸೆಗಳವರೆಗೆ ಸರಾಸರಿ 66 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳಕ್ಕೆ ಮನವಿ ಮಾಡಿದ್ದವು. ಆದರೆ ಕರ್ನಾಟಕ ವಿದ್ಯುಚ್ಛಕ್ತಿ ಆಯೋಗ 64,944.54 ಕೋಟಿ ಕಂದಾಯ ಅಗತ್ಯತೆಗೆ ಅನುಮೋದನೆ ನೀಡಿದೆ.

kerc

ಇದರಿಂದ 290.76 ಕೋಟಿ ರೂ. ಕಂದಾಯ ಹೆಚ್ಚಳ ಪ್ರಸ್ತಾಪವಾಗಿದೆ. ಇದರ ಆಧಾರದ ಮೇಲೆ ಗೃಹ ಬಳಕೆ, ವಾಣಿಜ್ಯ, ಕೈಗಾರಿಕೆ, ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು, ಏತನೀರಾವರಿ, ಅಪಾರ್ಟ್‍ಮೆಂಟ್‍ಗಳು, ಕೈಗಾರಿಕಾ ಸ್ಥಾವರಗಳಲ್ಲಿ ವಿದ್ಯುತ್ ಬಳಕೆಯಾಗುವ ವಿದ್ಯುತ್‍ನ ದರವನ್ನು ವಿವಿಧ ಹಂತಗಳಲ್ಲಿ ಕಡಿತಗೊಳಿಸಲಾಗಿದೆ.

ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಿಗೆ ದರ ಇಳಿಕೆಯಾಗಿರುವುದರಿಂದ ಪ್ರತಿ ಯೂನಿಟ್‍ಗೆ ನೀಡಲಾಗುತ್ತಿದ್ದ 50 ಪೈಸೆ ರಿಯಾಯಿತಿಯನ್ನು ಮುಂದುವರೆಸುವುದಿಲ್ಲ ಎಂದು ತಿಳಿಸಲಾಗಿದೆ. ನಗರ, ಗ್ರಾಮೀಣ ಪ್ರವರ್ಗಗಳನ್ನು ವಿಲೀನಗೊಳಿಸಿದ್ದ ನಿರ್ಧಾರವನ್ನು ಪರಿಷ್ಕರಿಸಲಾಗಿದ್ದು, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಮತ್ತು ಕೈಗಾರಿಕೆ, ಖಾಸಗಿ ಆಸ್ಪತ್ರೆ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪ್ರತಿ ಯೂನಿಟ್‍ಗೆ 30 ಪೈಸೆ ರಿಯಾಯಿತಿಯನ್ನು ಅನುಮೋದಿಸಲಾಗಿದೆ.

ನವೀಕರಿಸಬಹುದಾದ ಇಂಧನ ಮೂಲಗಳಿಂದ ಖರೀದಿಸುವ ವಿದ್ಯುತ್‍ನ ಪ್ರತಿ ಯೂನಿಟ್‍ಗೆ 50 ಪೈಸೆ ಹೆಚ್ಚಿನ ದರವನ್ನು ಮುಂದುವರೆಸಲಾಗಿದೆ ಎಂದು ಕೆಇಆರ್‌ಸಿ ತಿಳಿಸಿದೆ. ಏ.1ರಿಂದ ಪ್ರೀಪೇಮೆಂಟ್ ಮೀಟರ್ ಅನ್ನು ಅನುಮೋದಿಸಲು ಅಗತ್ಯವಾದ ವ್ಯವಸ್ಥೆಯನ್ನು ಸೂಚಿಸಬೇಕು. ಜೂ.1ರಿಂದ ಎಲ್‍ಟಿ ಗ್ರಾಹಕರಿಗೆ ಸ್ವಯಂ ಮಾಪಕ ಓದುವಿಕೆಯನ್ನು ಸಾಧ್ಯವಾಗಿಸಲು ಅಗತ್ಯ ಸಾಫ್ಟ್‍ವೇರ್ ಅಳವಡಿಸಿಕೊಳ್ಳಬೇಕೆಂದು ಸೂಚಿಸಲಾಗಿದೆ.

ಪ್ರತಿ ಯೂನಿಟ್‍ಗೆ ದರ ಇಳಿಕೆಯ ಪ್ರಮಾಣ:

  • ಎಲ್‍ಟಿ ಗೃಹ ಬಳಕೆ 1.10 ರೂ.
  • ಎಚ್‍ಪಿ ವಾಣಿಜ್ಯ 1.25 ರೂ.
  • ಎಚ್‍ಟಿ ಕೈಗಾರಿಕೆ 50 ಪೈಸೆ
  • ಎಚ್‍ಟಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು 40 ಪೈಸೆ
  • ಖಾಸಗಿ ಏತನೀರಾವರಿ 2 ರೂ.
  • ಖಾಸಗಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳು 50 ಪೈಸೆ
  • ಕೈಗಾರಿಕಾ ಸ್ಥಾವರಗಳು 1 ರೂ.
  • ವಾಣಿಜ್ಯ ಸ್ಥಾವರಗಳು 50 ಪೈಸೆ
  • ಅಪಾರ್ಟ್‍ಮೆಂಟ್‍ಗಳು ಸೇರಿದಂತೆ ವಾಣಿಜ್ಯ, ಕೈಗಾರಿಕೆ, ಖಾಸಗಿ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳ ಬೇಡಿಕೆ ಶುಲ್ಕವನ್ನು ಪ್ರತಿ ಕಿಲೋ ವ್ಯಾಟ್‍ಗೆ 10 ರೂ. ಇಳಿಸಲಾಗಿದೆ.

ನಾವು ಜನರ ಬದುಕು ಕಟ್ಟುವ ಸತತ ಯತ್ನ ಮಾಡುತ್ತಿದ್ದೇವೆ: ಡಿಸಿಎಂ ಡಿ ಕೆ ಶಿವಕುಮಾರ್

ವಿದ್ಯುತ್ ದರ ಇಳಿಕೆಯ ಬಗ್ಗೆ ಟ್ವೀಟ್ ಮಾಡಿರುವ ಡಿಸಿಎಂ ಡಿ ಕೆ ಶಿವಕುಮಾರ್, 15 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿದ್ಯುತ್‌ ದರ ಇಳಿಕೆ ಮಾಡಲಾಗಿದೆ. 100 ಯುನಿಟ್​ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡುವ ಗ್ರಾಹಕರಿಗೆ ಪ್ರತಿ ಯೂನಿಟ್​ಗೆ 1.10 ರೂ. ಕಡಿಮೆ ಮಾಡಲಾಗಿದೆ. ಇಂದಿನಿಂದಲೇ ಈ ದರ ಅನ್ವಯವಾಗಲಿದೆ. ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಸಾಧ್ಯವಾಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾವನೆಗಳ ಮೇಲೆ ಮಾಡುವ ರಾಜಕಾರಣ ಖಂಡಿತವಾಗಿಯೂ ಜನರ ಬದುಕಿನ ಗುಣಮಟ್ಟವನ್ನು ಬದಲಿಸುವುದಿಲ್ಲ. ನಾವು ಜನರ ಬದುಕು ಕಟ್ಟುವ ಸತತ ಯತ್ನ ಮಾಡುತ್ತಿದ್ದೇವೆ. ಆ ನಿಟ್ಟಿನಲ್ಲಿ ಒಂದೊಂದೇ ಹೆಜ್ಜೆಗಳನ್ನು ಇಡುತ್ತಿದ್ದೇವೆ” ಎಂದು ತಿಳಿಸಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

ಬಿಜೆಪಿ-ಆರ್‌ಎಸ್‌ಎಸ್‌ ಜತೆ ಕೈ ಜೋಡಿಸುವ ಪ್ರಶ್ನೆಯೇ ಇಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್

ನಾನು ಅಪ್ಪಟ ಕಾಂಗ್ರೆಸ್ಸಿಗ. ಹುಟ್ಟಿನಿಂದ ಕಾಂಗ್ರೆಸ್ಸಿಗ. ಜೀವ ಇರುವ ತನಕವೂ ಕಾಂಗ್ರೆಸ್ಸಿಗನಾಗಿಯೇ...

Download Eedina App Android / iOS

X