SIR ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಕೊಲ್ಲುವ ಷಡ್ಯಂತ್ರ: ಜನಪರ ಸಂಘಟನೆಗಳಿಂದ ಪ್ರತಿರೋಧ ಸಮಾವೇಶ

Date:

ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ SIR ವಿರುದ್ಧವಾಗಿ ರಾಜ್ಯದ ಜನಪರ ಸಂಘಟನೆಗಳು ಹಾಗೂ ಜಾತ್ಯತೀತ ಪಕ್ಷಗಳು ಏಪ್ರಿಲ್ 23ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರತಿರೋಧ ಸಮಾವೇಶ ನಡೆಸಿದೆ. ಈ ಸಮಾವೇಶದಲ್ಲಿ ‘ ಪ್ರಶ್ಚಿಮ ಬಂಗಾಳದ ಜತೆಗೆ ಕರ್ನಾಟಕ’ ಎಂಬ ಘೋಷಣೆಗಳನ್ನು ಕೂಗಲಾಗಿದೆ.

- Advertisement -

“ಎಸ್‌ಐಆರ್ ಎಂಬುದು ನಮ್ಮ ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಕೊಲ್ಲಲು ಸಂವಿಧಾನ ವಿರೋಧಿ ಶಕ್ತಿಗಳು ರೂಪಿಸಿರುವ ಷಡ್ಯಂತ್ರದ ಒಂದು ಮುಖ್ಯ ಅಸ್ತ್ರವಾಗಿದೆ” ಎಂದು ಹೇಳಿದ ಪ್ರತಿಭಟನಾಕಾರರು SIR ತೊಲಗಲಿ – ಪ್ರಜಾತಂತ್ರ ಉಳಿಯಲಿ ಎಂದು ಘೋಷಣೆ ಕೂಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ಇದನ್ನು ಓದಿದ್ದೀರಾ? ಎಸ್.ಐ.ಆರ್: ಮೌನವಾಗಿ ಬೆನ್ನಿಗೆ ಇರಿದ ಸರ್ಕಾರ: ಚಿಂತಕ ಶಿವಸುಂದರ್

“SIR ಸಂಚನ್ನು ಬಳಸಿ ಬಿಜೆಪಿ ಬಿಹಾರವನ್ನು ವಶಪಡಿಸಿಕೊಂಡಿತು. ಅಲ್ಲಿನ ಚುನಾವಣೆಗಳ ಮುನ್ನ ಮತಗಳವು ಬಗ್ಗೆ ಸಾಕಷ್ಟು ದನಿ ಎತ್ತಿದ ವಿರೋಧ ಪಕ್ಷಗಳು, ಫಲಿತಾಂಶ ಬಂದ ನಂತರ ‘ಮತ ದರೋಡೆ’ ಬಗ್ಗೆ ಮಾತನಾಡದೆ ಮೌನವಹಿಸಿದವು. ಈ ಮೌನ ಇಡೀ SIR ವಿರೋಧಿ ಹೋರಾಟಕ್ಕೆ ದೊಡ್ಡ ಹಿನ್ನೆಡೆ ಉಂಟು ಮಾಡಿದೆ. ಈ ತಪ್ಪನ್ನು ಕರ್ನಾಟಕದಲ್ಲೂ ಪುನರಾವರ್ತನೆ ಮಾಡಬಾರದು” ಎಂದು ಸಮಾನ ಮನಸ್ಕ ಸಂಘಟನೆಗಳು ಒತ್ತಾಯಿಸಿದೆ.

SIR1

“SIR ಹೆಬ್ಬಾವು ಬಂಗಾಳವನ್ನು ನುಂಗಲು ಇಂದು ಬಾಯಿತೆರೆದು ಕುಳಿತಿದೆ. ರಾಜ್ಯದ 91 ಲಕ್ಷ ಜನರನ್ನು ಮತಪಟ್ಟಿಯಿಂದ ಹೊರದಬ್ಬಲಾಗಿದೆ. ಇದನ್ನು ವಿರೋಧಿಸಿ ಬಂಗಾಳದ ಜನ SIR ವಿರುದ್ಧ ವೀರೋಚಿತ ಹೋರಾಟ ನಡೆಸಿದ್ದಾರೆ. ಅಲ್ಪಾವಧಿಯಲ್ಲಿ 34 ಲಕ್ಷ ಜನ ʼಟ್ರಿಬ್ಯೂನಲ್”‌ ಮುಂದೆ ಲಿಖಿತ ಅರ್ಜಿ ದಾಖಲಿಸಿದ್ದಾರೆ. “ನೀವು ಮುಂದಿನ ಚುನಾವಣೆಯಲ್ಲಿ ಓಟು ಹಾಕಿ” ಎಂದು ಅವರನ್ನೆಲ್ಲಾ ಪಕ್ಕಕ್ಕೆ ತಳ್ಳಿ ಮತದಾನವನ್ನು ಇಂದು ನಡೆಸಲಾಗುತ್ತಿದೆ. ಪ್ರಜಾತಂತ್ರದ ಈ ನಗ್ನ ಕಗ್ಗೊಲೆಯನ್ನು ಈ ಸಮಾವೇಶ ತೀವ್ರ ನೋವು ಮತ್ತು ಆಕ್ರೋಶದ ಜೊತೆ ಖಂಡಿಸುತ್ತದೆ. ಬಂಗಾಳದ ಜೊತೆ ಕರ್ನಾಟಕ ಇದೆ” ಹೋರಾಟಗಾರರು ಹೇಳಿದ್ದಾರೆ.

“SIR ಪ್ರಕ್ರಿಯೆ ಈಗಾಗಲೇ 13 ರಾಜ್ಯಗಳ 6.5 ಕೋಟಿ ಜನರ ಮತದಾನದ ಹಕ್ಕನ್ನು ಕಸಿದುಕೊಂಡಿದೆ. ಕರ್ನಾಟಕವನ್ನೂ ಒಳಗೊಂಡಂತೆ ಮಿಕ್ಕ ರಾಜ್ಯಗಳಲ್ಲಿ SIR ಪ್ರಕ್ರಿಯೆಯನ್ನು ಪ್ರಾರಂಭಿಸಲು ಹೊರಟಿದೆ. ಇದುವರೆಗೆ ನಡೆದಿರುವ ಪ್ರಕ್ರಿಯೆಯಲ್ಲಿ SIR ಮಾಡಿರುವ ಅನಾಹುತಗಳ ಸಮಗ್ರ ಅವಲೋಕನವಾಗದೆ, ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆ ಮುಕ್ತಾಯಗೊಳ್ಳದೆ ಕರ್ನಾಟಕ ಮತ್ತು ಇತರೆ ರಾಜ್ಯಗಳಲ್ಲಿ SIR ಅನ್ನು ಜಾರಿಗೆ ತರಬಾರದು” ಎಂದು ಆಗ್ರಹಿಸಿದ್ದಾರೆ.

fire 16

ಇದನ್ನು ಓದಿದ್ದೀರಾ? SIR | ನಾಗರಿಕರ ಪ್ರಶ್ನೆಗಳಿಗೆ ತಬ್ಬಿಬ್ಬಾದ ಚುನಾವಣಾ ಆಯುಕ್ತ

“SIR ಅನ್ನು ಬಲವಂತವಾಗಿ ಕರ್ನಾಟಕದ ಮೇಲೆ ಹೇರಲು ಬಂದರೆ ಕರ್ನಾಟಕ ಸಹಿಸುವುದಿಲ್ಲ. ಅಂಬೇಡ್ಕರ್‌ ಮತ್ತು ಸಂವಿಧಾನ ನೀಡಿದ “ಸಾರ್ವತ್ರಿಕ ಮತದಾನ”ದ ಹಕ್ಕನ್ನು ಕಸಿದುಕೊಳ್ಳಲು ಬಿಡುವುದಿಲ್ಲ. ಕರ್ನಾಟದಲ್ಲಿ ಒಬ್ಬ ಅರ್ಹ ಮತದಾರರನ್ನೂ ಮತಪಟ್ಟಿಯಿಂದ ತೆಗೆಯಲು ನಿಮಗೆ ಅವಕಾಶ ನೀಡುವುದಿಲ್ಲ. ರಾಜ್ಯದಲ್ಲಿ ಎಷ್ಟು ಜನ ವಯಸ್ಕ ಮತದಾರರಿದ್ದಾರೋ ಅಷ್ಟೂ ಜನರು ಮತದಾರರ ಪಟ್ಟಿಯಲ್ಲಿ ಇರಬೇಕು. ಇಲ್ಲವೇ ಹೊರಗುಳಿದವರು ʼನುಸುಳುಕೋರರುʼ ಎಂಬುದನ್ನು ನೀವು ಸಾಬೀತುಪಡಿಸಬೇಕು” ಎಂದು ಹೇಳಿದರು.

ಹಾಗೆಯೇ ರಾಜ್ಯ ಸರ್ಕಾರ ಈ ಕೆಳಗಿನ ಆರು ಕ್ರಮಗಳಿಗೆ ಮುಂದಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

  1. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳು ದೂರವಿರುವುದರಿಂದ ಕರ್ನಾಟಕದಲ್ಲಿ ಗಡಿಬಿಡಿಯ SIR ನಡೆಸಬಾರದು. 3 ತಿಂಗಳ ಅವಧಿಯ ಬದಲು ಪ್ರಕ್ರಿಯೆಯ ಅವಧಿಯನ್ನು 6 ತಿಂಗಳಿಗೆ ವಿಸ್ತರಿಸಬೇಕು. ಅಪೀಲ್‌ ಹೋಗುವ ಸಮಯವನ್ನೂ 6 ತಿಂಗಳಿಗೆ ವಿಸ್ತರಿಸಬೇಕು ಎಂದು ನ್ಯಾಯಾಂಗಕ್ಕೆ ಅಪೀಲ್‌ ಸಲ್ಲಿಸಬೇಕು.
  2. ಈ ಸಂಕೀರ್ಣ ಪ್ರಕ್ರಿಯೆಯಲ್ಲಿ ಜನರಿಗೆ ನೆರವಾಗಲು ಎಲ್ಲಾ ಗ್ರಾಮ ಪಂಚಾಯಿತಿ ಮತ್ತು ವಾರ್ಡ್‌ಗಳಲ್ಲಿ “ಮತದಾರ ನೆರವು ಕೇಂದ್ರ”ಗಳನ್ನು ಸ್ಥಾಪಿಸಬೇಕು.
  3. ಜನರ ಬಳಿ ಸೂಕ್ತ ದಾಖಲೆಗಳು ಇಲ್ಲದಿದ್ದಲ್ಲಿ “ವಾಸ ಧೃಡೀಕರಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರ”ಗಳನ್ನು ತ್ವರಿತವಾಗಿ, ಜನರನ್ನು ಕಾಡಿಸದೆ, ನೀಡುವಂತೆ ಎಲ್ಲಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು.
  4. ಕೇಂದ್ರ ತಯಾರಿಸುವ SIR ಪರಿಷ್ಕೃತ ಮತಪಟ್ಟಿಯ ಮೇಲೆ ಅವಲಂಬಿಸದೆ [ಸ್ಥಳೀಯ ಚುನಾವಣೆಗಳು ಸಹ ಬರುತ್ತಿರುವುದರಿಂದ] ಸ್ವತಂತ್ರವಾಗಿ ಮತಪಟ್ಟಿಯ ಪರಿಷ್ಕರಣೆ ನಡೆಸಿ “ರಾಜ್ಯದ ಮತದಾರರ ಪಟ್ಟಿಯನ್ನು” ಸೂಕ್ತ ವಿಧಾನಗಳ ಮೂಲಕ ಸಮರ್ಥ ರೀತಿಯಲ್ಲಿ ಸಿದ್ಧಪಡಿಸುವಂತೆ ರಾಜ್ಯ ಸರ್ಕಾರ “ರಾಜ್ಯ ಚುನಾವಣಾ ಆಯೋಗ”ವನ್ನು ಕೋರಬೇಕು.
  5. ಕೊನೆಯದಾಗಿ ಮತ್ತು ಬಹಳ ಮುಖ್ಯವಾಗಿ ಚುನಾವಣಾ ಆಯೋಗದ ಮ್ಯಾನ್ಯುಯಲ್‌ನಲ್ಲೆ ಇರುವಂತೆ “ಕರಡು ಪಟ್ಟಿ ತಯಾರಾದ ನಂತರ ಗ್ರಾಮ ಸಭೆ ಹಾಗೂ ವಾರ್ಡ್‌ ಸಭೆಗಳನ್ನು ಕರೆದು ಅದನ್ನು ಎಲ್ಲರ ಸಮ್ಮುಖದಲ್ಲಿ ಮಂಡಿಸಿ ಸಾರ್ವಜನಿಕವಾಗಿ ತಿದ್ದುಪಡಿಗಳ ಪರಿಶೀಲನೆ ನಡೆಸಿ ಪಟ್ಟಿಯನ್ನು ಅಂತಿಮಗೊಳಿಸಬೇಕು”. [[The ECI’s ‘Manual on Electoral Rolls’ (December 2023) – Para 11.2.4(vi) and Para 24.1.2] ಎಂದು ಕೇಂದ್ರ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗ ಎರಡನ್ನೂ ಬಲವಾಗಿ ಒತ್ತಾಯಿಸಬೇಕು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್ | ನ.7ಕ್ಕೆ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನ

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ...

ಕೇಂದ್ರದ ಆಡಳಿತ ಕರಡು ತಿರಸ್ಕರಿಸಿದ ಲಡಾಖ್ ನಾಯಕರು: ‘ಏಕಪಕ್ಷೀಯ’ ನಿರ್ಧಾರ ಖಂಡಿಸಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಲಡಾಖ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಿದ್ಧಪಡಿಸಿರುವ ನೂತನ ಆಡಳಿತಾತ್ಮಕ ಕರಡನ್ನು ಪ್ರಮುಖ...

ಬೀದರ್‌ | 125 ಎಕರೆಯಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ : ಸಚಿವ ಈಶ್ವರ ಖಂಡ್ರೆ

ಬೀದರ್ ನಗರದ ಸಮೀಪ 125 ಎಕರೆ ಪ್ರದೇಶದಲ್ಲಿ ಸುಸಜ್ಜಿತ ಜಿಲ್ಲಾ ಕ್ರೀಡಾಂಗಣ...