ರೈತ ಹೋರಾಟ | ರೈತರ ಮೇಲೆ ಕೇಂದ್ರದ ದೌರ್ಜನ್ಯ ಖಂಡಿಸಿ ಫೆ.16ರಂದು ಪ್ರತಿಭಟನೆ; ಡಿವೈಎಫ್‌ಐ ಬೆಂಬಲ

Date:

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವುದಾಗಿ ಮತ್ತು ರೈತರ ಸಾಲ ಮನ್ನಾ ಮಾಡುವದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಮಾತು ತಪ್ಪಿದೆ. ಸರ್ಕಾರ ತನ್ನ ಭರವಸೆಗಳನ್ನು ಈಡೇರಿಸಬೇಕೆಂದು ರೈತರು ದೆಹಲಿ ಚಲೋಗೆ ಕರೆ ಕೊಟ್ಟು, ದೆಹಲಿಯತ್ತ ಹೊರಟಿದ್ದಾರೆ. ಆದರೆ, ರೈತರನ್ನು ತಡೆಯಲು ಕೇಂದ್ರ ಮತ್ತು ಬಿಜೆಪಿ ಆಡಳಿತದ ಹರಿಯಾಣ ಸರ್ಕಾರಗಳು ರೈತರ ಮೇಲೆ ದೌರ್ಜನ್ಯ ಎಸಗುತ್ತಿವೆ. ಬಿಜೆಪಿ ಸರ್ಕಾರಗಳ ದೌರ್ಜನ್ಯವನ್ನು ಖಂಡಿಸಿ ಫೆಬ್ರವರಿ 16ರಂದು ಕರ್ನಾಟಕದಲ್ಲಿ ರಾಜ್ಯಾದ್ಯಂತ ಪ್ರತಿಭಟನೆಗೆ ಸಂಯುಕ್ತ ಹೋರಾಟ ಕರ್ನಾಟಕ ಕರೆ ಕೊಟ್ಟಿದೆ. ಪ್ರತಿಭಟನೆಗೆ ಡಿವೈಎಫ್‌ಐ ಬೆಂಬಲ ನೀಡಿದೆ.

ಪ್ರತಿಭಟನೆ ಬೆಂಬಲಿಸಿ ಡಿವೈಎಫ್‌ಐ ಅಧ್ಯಕ್ಷ ಮುನೀರ್ ಕಾಟಿಪಳ್ಳ ಪತ್ರಿಕಾ ಹೇಳಿಕೆ ನೀಡಿದ್ದಾರೆ. “ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುವುದು ದೇಶದ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕಾಗಿದೆ. ರೈತರ ಶಾಂತಿಯುತ ಹೋರಾಟದ ಮೇಲೆ ಪೊಲೀಸ್ ಹಾಗೂ ಸಶಸ್ತ್ರ ಭದ್ರತಾ ಪಡೆಗಳನ್ನು ಛೂ ಬಿಟ್ಟಿರುವುದಲ್ಲದೇ, ಲಾಠಿ ಪ್ರಹಾರ, ರಬ್ಬರ್ ಬುಲೆಟ್, ಆಶ್ರುವಾಯು ಸಿಡಿತದಂತಹ ಪೈಶಾಚಿಕ ದೌರ್ಜನ್ಯವನ್ನು ರೈತರ ಮೇಲೆ ಎಸಗಿರುವುದನ್ನು ಡಿವೈಎಫ್ಐ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ” ಎಂದಿದ್ದಾರೆ.

“ದೆಹಲಿಯಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆಯನ್ನು ತಡೆಯಲ್ಪಟ್ಟ ಸ್ಥಳದಲ್ಲೇ ಠಿಕಾಣಿ ಹೂಡಿ ಮಧ್ಯ ರಾತ್ರಿ ರೈತರು ನಿದ್ರಿಸುತ್ತಿದ್ದ ಸಮಯದಲ್ಲಿ ರೈತರ ಮೇಲೆ ಡ್ರೋನ್ ಬಳಸಿ ಅಶ್ರುವಾಯು ಶೆಲ್ ಗಳ ಸುರಿಮಳೆ ನಡೆಸಿರುವುದು ಅತ್ಯಂತ ಅಘಾತಕಾರಿಯಾದ ಘಟನೆಯಾಗಿದೆ. ದೇಶದ ಅನ್ನದಾತರನ್ನು ಸರ್ಕಾರದ ಅಥವಾ ದೇಶದ ಶತೃಗಳು ಎಂಬಂತೆ ನರೇಂದ್ರ ಮೋದಿ ಸರ್ಕಾರವು ಬ್ರಿಟಿಷರಿಗಿಂತ ಕ್ರೂರವಾಗಿ ನಡೆಸಿಕೊಂಡಿದೆ. ತಮ್ಮ ಜ್ವಲಂತ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟಿಸಲೇಬೇಕಾದ ಆನಿವಾರ್ಯತೆಗೆ ಒಳಗಾದ ರೈತರ ಹೋರಾಟವನ್ನು ಕ್ರೂರವಾಗಿ ದಮನಿಸುವುದು ಪ್ಯಾಸಿಸ್ಟ್ ಸರ್ವಾಧಿಕಾರವಾಗಿದೆ ಎಂದು ಡಿವೈಎಫ್ಐ ರಾಜ್ಯ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ” ಎಂದು ಹೇಳಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ದೆಹಲಿ ಚಲೋ ಪ್ರತಿಭಟನೆಯನ್ನು ನಡೆಸುವ ರೈತರ ಹಕ್ಕನ್ನು ರಕ್ಷಿಸಬೇಕು, ಕೂಡಲೇ ರೈತರ ಪ್ರತಿಭಟನೆ ಹತ್ತಿಕ್ಕಲು ಜಮೆ ಮಾಡಿರುವ ಎಲ್ಲಾ ಪಡೆಗಳನ್ನು ವಾಪಸ್ಸು ಕರೆಸಿಕೊಳ್ಳಬೇಕು ಮತ್ತು ರೈತರ ಹಾಗೂ ಕಾರ್ಮಿಕರ ಹೋರಾಟವನ್ನು ಹಾಗೂ ಅವರ ನ್ಯಾಯಯುತ ಆಗ್ರಹಗಳನ್ನು ಮಾತುಕತೆಯ ಮೂಲಕ ಇತ್ಯರ್ಥ ಪಡಿಸಬೇಕು ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ)ಕರ್ನಾಟಕ ರಾಜ್ಯ ಸಮಿತಿಯು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತದೆ” ಎಂದು ತಿಳಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ಪ್ರಧಾನಿ ಮೋದಿಗೆ ಗುಜರಾತ್‌ನಲ್ಲಿ ಮುಸ್ಲಿಂ ಒಬಿಸಿ ಮೀಸಲಾತಿ ಓಕೆ, ಇತರೆಡೆ ಮಾತ್ರ ಬೇಡ’

ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮುಸ್ಲಿಂ ಒಬಿಸಿ ಮೀಸಲಾತಿ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ....

ಪೆನ್‌ಡ್ರೈವ್‌ ಪ್ರಕರಣ; ಅಪ್ಪ- ಮಗ ಇಬ್ಬರಿಂದಲೂ ಲೈಂಗಿಕ ಕಿರುಕುಳ- ಸಂತ್ರಸ್ತೆ ದೂರು

ಹಾಸನದ ಪ್ರಭಾವಿ ರಾಜಕೀಯ ಕುಟುಂಬಕ್ಕೆ ಸಂಬಂಧಿಸಿದ ಲೈಂಗಿಕ ಹಗರಣ ಹಲವು ತಿರುವುಗಳನ್ನು...

ಛಲಬಿಡದೆ ಬರಪರಿಹಾರ ತಂದ ಕಾಂಗ್ರೆಸ್‌ಗೆ ಜನ ಮೆಚ್ಚುಗೆ; ಯಾರು ಏನಂದರು?

ಬಿಜೆಪಿ ನಾಯಕರು ಎಷ್ಟೇ ಸುಳ್ಳು ಹೇಳಿದರೂ ಕುಗ್ಗದೆ, ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ...