‘ನುಡಿಯು ಸಿರಿಯಲ್ಲ ಬದುಕು’ ಎಂಬ ಆಶಯದೊಂದಿಗೆ ‘ಜನ ನುಡಿ – 2026’ ಎರಡು ದಿನಗಳ ಕಾರ್ಯಕ್ರಮವು ಇದೇ ನವೆಂಬರ್ 28 ಮತ್ತು 29, 2026 ರಂದು ಮಂಗಳೂರಿನ ಬಲ್ಮಠದಲ್ಲಿರುವ ಕೆ ಟಿ ಸಿ ಕ್ಯಾಂಪಸ್‌ನ ಬಿಷಪ್ ಜತ್ತನ್ನ ಸಭಾಂಗಣದಲ್ಲಿ ನಡೆಯಲಿದೆ. ‘ಯುವಜನ ರಾಜಕಾರಣ: ದಿಕ್ಕು – ಭವಿಷ್ಯ – ಸವಾಲು’ ಎಂಬ ಪ್ರಮುಖ ವಿಷಯದಡಿ ನಡೆಯುವ ಈ ಕಾರ್ಯಕ್ರಮವನ್ನು ಅಭಿಮತ, ಮಂಗಳೂರು ಮತ್ತು ಭಗತ್ ಸಿಂಗ್ ಮೆಮೊರಿಯಲ್ ಕಲ್ಬರಲ್ ಟ್ರಸ್ಟ್ ಆಯೋಜಿಸಿವೆ.
ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿದೆ. ಯುವಜನರು ಮತ್ತು ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಹೆಚ್ಚಿಸುವ ದೃಷ್ಟಿಯಿಂದ ವಿವಿಧ ಗೋಷ್ಠಿಗಳಲ್ಲಿ ‘ಜೆನ್-ಝಿ ಪ್ರತಿಕ್ರಿಯೆ’ ವಿಭಾಗಗಳು ಮತ್ತು ದೆಹಲಿ ವಿದ್ಯಾರ್ಥಿ ಚಳವಳಿಯ ಪ್ರತಿನಿಧಿಗಳೊಂದಿಗೆ ವಿಶೇಷ ಸಂವಾದಗಳನ್ನು ಏರ್ಪಡಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಲೇಖಕರು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು, ಹೋರಾಟಗಾರರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ನವೆಂಬರ್ 28ರಂದು ಬೆಳಿಗ್ಗೆ 9ರಂದು ಪುಸ್ತಕ ಮೇಳದ ಉದ್ಘಾಟನೆ ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ ಪ್ರಗತಿಪರ ಚಿಂತಕ, ಸಾಹಿತಿ, ಪ್ರಕಾಶಕ ಬಸವರಾಜ ಸೂಳಿಭಾವಿ (ಬಸೂ) ಉದ್ಘಾಟಕರಾಗಿ ಭಾಗವಹಿಸಲಿದ್ದು, ಪತ್ರಕರ್ತ, ಬರಹಗಾರ ಅನಿಲ್ ಹೊಸಮನಿ ವಿಶೇಷ ಮಾತುಗಳನ್ನಾಡಲಿದ್ದಾರೆ. ಜಾನಪದ ವಿದ್ವಾಂಸರು, ಸಾಹಿತಿ, ಶಿಕ್ಷಣ ತಜ್ಞರು ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಲಿದ್ದು, ಇದೇ ವೇಳೆ ಪುಸ್ತಕ ಮೇಳವೂ ನಡೆಯಲಿದೆ.
ಇದನ್ನೂ ಓದಿ: ನುಡಿಜಾತ್ರೆಯ ಮರೆತು ಸಿ.ಟಿ.ರವಿ ರಕ್ಷಣೆಗೆ ಧಾವಿಸಿದ ಮಾಧ್ಯಮಗಳು; ಜನಾಕ್ರೋಶ
ಬೆಳಿಗ್ಗೆ 10.00 ರಿಂದ 12.30ರ ನಡುವೆ ಜನ ನುಡಿ ಉದ್ಘಾಟನಾ ಗೋಷ್ಠಿ ನಡೆಯಲಿದೆ. ಯುವ ನಾಯಕಿ ಲವಿತ್ರ ವಸ್ತ್ರದ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಲೇಖಕ ಪ್ರೊ. ರಹಮತ್ ತರೀಕೆರೆ, ದೆಹಲಿ ವಿದ್ಯಾರ್ಥಿ ಚಳವಳಿಯ ಪ್ರತಿನಿಧಿ ಶರಣ್ಯ ವರ್ಮ, ನಿವೃತ್ತ ಐಎಎಸ್ ಅಧಿಕಾರಿ ಎ ಬಿ ಇಬ್ರಾಹಿಂ, ವಿಚಾರವಾದಿ ಪ್ರೊ ನರೇಂದ್ರ ನಾಯಕ್, ಸಾಮಾಜಿಕ ಕಾರ್ಯಕರ್ತ ಡಾ. ರಮೇಶ್ ಬೆಲ್ಲಂಕೊಂಡ ಮತ್ತು ಜನಪರ ಹೋರಾಟಗಾರ ವಾಸುದೇವ ಉಚ್ಚಿಲ ವಿಷಯ ಮಂಡನೆ ಮಾಡಲಿದ್ದಾರೆ. ಡಾ. ಅಮರ್ ಕುಮಾರ್ ಗೌರವ ಉಪಸ್ಥಿತರಿರಲಿದ್ದು, ದಲಿತ ಸಾಹಿತ್ಯ ಚಳುವಳಿಯ ಮೊದಲ ತಲೆಮಾರಿನ ಬರಹಗಾರ ಮೂಡ್ನಾಕೂಡು ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸುವರು. ಯುವ ನಾಯಕ, ವಕೀಲ ಮನೋಜ್ ವಾಮಂಜೂರು ನಿರೂಪಿಸುವರು.
ನವೆಂಬರ್ 28ರ ಗೋಷ್ಠಿಗಳು
ಮಧ್ಯಾಹ್ನ 1.30 ರಿಂದ 3.00ರ ನಡುವೆ ಎರಡನೇ ಗೋಷ್ಠಿ ನಡೆಯಲಿದೆ.
ವಿಷಯ: ಭವಿಷ್ಯದ ಭಾರತ; ಆರ್ಥಿಕತೆ ಮತ್ತು ಜೀವನೋಪಾಯ
ವಿಷಯ ಮಂಡನೆ : ಹಿರಿಯ ಚಿಂತಕ, ಬರಹಗಾರ ಶಿವಸುಂದರ್
ಪ್ರತಿಕ್ರಿಯೆ : ಅಂಕಣಕಾರರು ನಂದ ಕುಮಾರ್ ಕುಂಬ್ರಿ ಉಬ್ಬು
ಜೆನ್ ಝಿ ಪ್ರತಿಕ್ರಿಯೆ : ಕಾನೂನು ವಿದ್ಯಾರ್ಥಿ ಅಶ್ಚಕ್ ಎಮ್ ಜಿ ಕೊಪ್ಪಳ
ಅಧ್ಯಕ್ಷತೆ : ಲೇಖಕಿ, ಕವಿ, ವಿಮರ್ಶಕಿ ಡಾ. ಸಬಿತಾ ಬನ್ನಾಡಿ
ನಿರೂಪಣೆ : ಯುವ ನಾಯಕ ರಿಜ್ವಾನ್ ಹರೇಕಳ
ಮಧ್ಯಾಹ್ನ 3.00 ರಿಂದ 3.30ರ ನಡುವೆ ಮೂರನೇ ಗೋಷ್ಠಿ ನಡೆಯಲಿದೆ.
ವಿಷಯ: ಅಸಮಾನತೆಯ ಹಾಡು-ಪಾಡು
ವಿಷಯ ಮಂಡನೆ : ರಂಗಭೂಮಿ ಕಲಾವಿದ, ಸಂಗೀತಗಾರ ಭರತ್ ಡಿಂಗ್ರಿ
ನಿರೂಪಣೆ : ಸಾಮಾಜಿಕ ಕಾರ್ಯಕರ್ತೆ, ದಲಿತ ಹಕ್ಕುಗಳ ಹೋರಾಟಗಾರ್ತಿ ಈಶ್ವರಿ ಪದ್ಮುಂಜ
3.45 ರಿಂದ 5.15ರ ನಡುವೆ ನಾಲ್ಕನೇ ಗೋಷ್ಠಿ ನಡೆಯಲಿದೆ.
ವಿಷಯ: ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ
ವಿಷಯ ಮಂಡನೆ : ಶಿಕ್ಷಣ ತಜ್ಞ ಬಿ. ಶ್ರೀಪಾದ ಭಟ್ | ಲೇಖಕ ವಿಕಾಸ್ ಮೌರ್ಯ
ಜೆನ್ ಝಿ ಪ್ರತಿಕ್ರಿಯೆ : ಡಾ. ಶಭಾನ ಮೈಸೂರು
ಅಧ್ಯಕ್ಷತೆ : ಕವಿ, ಬರಹಗಾರ ಚಂದ್ರಶೇಖರ ಗೊರೆಬಾಳ್
ನಿರೂಪಣೆ : ಯುವ ನಾಯಕ ವಿಕಾಸ್ ಪೂಜಾರಿ
5 : 5.30 ರಿಂದ 6.30ರ ನಡುವೆ ಐದನೇ ಗೋಷ್ಠಿ ನಡೆಯಲಿದೆ.
ವಿಷಯ: ಮಾತುಕತೆ
ಬಹುಭಾಷ ನಟ ಪ್ರಕಾಶ್ ರೈ ಜೊತೆಗೆ
ನಡೆಸಿಕೊಡುವವರು : ಡಾ. ನಾಗೇಗೌಡ ಕೆ ಎಸ್
ನಿರೂಪಣೆ : ಯುವ ನಾಯಕ, ವಕೀಲ ಚರಣ್ ಶೆಟ್ಟಿ
6 : 6.30 – 8.30ರ ನಡುವೆ ಆರನೇ ಗೋಷ್ಠಿ ನಡೆಯಲಿದೆ.
ವಿಷಯ: ಸಾಂಸ್ಕೃತಿಕ ಕಾರ್ಯಕ್ರಮ
ಚಾಲನೆ : ಸಾಮಾಜಿಕ ಕಾರ್ಯಕರ್ತ, ಕೊಂಕಣಿ ಸಾಹಿತ್ಯ-ಸಂಸ್ಕೃತಿ ತಜ್ಞ ಪ್ರಕಾಶ್ ನೊರೊನ್ಹಾ | ರಂಗಕರ್ಮಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂತೋಷ್ ಶೆಟ್ಟಿ ಹಿರಿಯಡ್ಕ | ರಂಗಭೂಮಿ ನಿರ್ದೇಶಕ, ನಟ ಮತ್ತು ನಟನಾ ತರಬೇತುದಾರ ವಿದ್ದು ಉಚ್ಚಿಲ
ನಿರೂಪಣೆ : ಬರಹಗಾರ, ಪತ್ರಕರ್ತ ಚರಣ್ ಐವರ್ನಾಡು
ಸಾಂಸ್ಕೃತಿಕ ತಂಡ : ಭರತ್ ಡಿಂಗ್ರಿ ಅವರ ‘ಹಲ್ಲಿ ನಾದ’ ತಂಡ ಮತ್ತು ಕರಾವಳಿಯ ನಿರ್ದಿಗಂತ
ಇದನ್ನೂ ಓದಿ: ನುಡಿ ನಮನ | ಜನರ ನಡುವಿನ ಪರಿಸರ ವಿಜ್ಞಾನಿ ‘ಮಾಧವ ಗಾಡ್ಗೀಳ್’
ನವೆಂಬರ್ 29ರ ಗೋಷ್ಠಿಗಳು
ಬೆಳಿಗ್ಗೆ 9 ರಿಂದ 10.15ರ ನಡುವೆ 7ನೇ ಗೋಷ್ಠಿ ನಡೆಯಲಿದೆ.
ವಿಷಯ: ಪ್ರತಿರೋಧದ ಕವಿತೆ ಕವಿಗೋಷ್ಟಿ
ಅಧ್ಯಕ್ಷತೆ : ಕವಿ, ಬರಹಗಾರ ಮತ್ತು ಗೀತರಚನೆಕಾರ ವಿಲ್ಸನ್ ಕಟೀಲ್
ಆಶಯ ಮಾತು : ಕವಿ, ಅನುವಾದಕ ಶಂಕರ ಕೆಂಚನೂರು
ಕವಿಗಳು : ರೇಣುಕಾ ನಿಡಗುಂದಿ | ಚಲಂ ಹಾಡ್ಲಹಳ್ಳಿ | ಚಾಂದ್ ಪಾಷ | ಫಾತಿಮಾ ರಲಿಯಾ | ಸ್ಟಾನಿ ಬೇಳ | ಚಂಸು ಪಾಟೀಲ | ರೇಷ್ಮಾ ಬಾರಿಗ | ಸಿರಾಜ್ ಬಿಸರಳ್ಳಿ-ಕೊಪ್ಪಳ | ಮಲ್ಲಮ್ಮ ಯಾಟಗಲ್ | ದೀಪ ಬುದ್ದೆ | ರಮ್ಯ ಮೂರ್ನಾಡು | ಅಂಜಲಿ ಬೆಳಗಲ್-ಹೊಸಪೇಟೆ | ಸವಿರಾಜ್ ಆನಂದೂರು
ನಿರೂಪಣೆ : ಕವಿ ಮತ್ತು ಲೇಖಕ ಸಚಿನ್ ಅಂಕೋಲಾ
10.30 ರಿಂದ 11.45ರ ನಡುವೆ 8ನೇ ಗೋಷ್ಠಿ ನಡೆಯಲಿದೆ.
ವಿಷಯ: ರಾಷ್ಟ್ರೀಯತೆ, ಅಸ್ಮಿತೆ ಮತ್ತು ಡಿಜಿಟಲ್ ರಾಜಕಾರಣ
ವಿಷಯ ಮಂಡನೆ : ಬರಹಗಾರ ಜಿ. ವಿಷ್ಣು, ಉಡುಪಿ | ವಸಂತ ಕಲಾಲ್, ಸಂಶೋಧನಾ ವಿದ್ಯಾರ್ಥಿ, JNU, ದೆಹಲಿ
ಜೆನ್ ಝಿ ಪ್ರತಿಕ್ರಿಯೆ : ಶಾಲಿಕಾ ಎಕ್ಕಾರು
ಅಧ್ಯಕ್ಷತೆ : ಹಿರಿಯ ಪತ್ರಕರ್ತ, ಅಂಕಣಕಾರ ಮತ್ತು ಬರಹಗಾರ ಪ್ರೊ. ಎ ಎಂ ಇಸ್ಮಾಯಿಲ್
ನಿರೂಪಣೆ : ಸುಜಾತ ವೈ
12.00 ರಿಂದ 1.30ರ ನಡುವೆ 9ನೇ ಗೋಷ್ಠಿ ನಡೆಯಲಿದೆ.
ವಿಷಯ: ಕೋಮುವಾದ – ಕ್ರೋನಿ ಕ್ಯಾಪಿಟಲಿಸಂ ಮೈತ್ರಿ – ಸವಾಲು
ವಿಷಯ ಮಂಡನೆ : ಹಿರಿಯ ಸಾಹಿತಿ, ಸಂಶೋಧಕಿ ಡಾ ಮೀನಾಕ್ಷಿ ಬಾಳಿ | ಶಿಕ್ಷಣ ತಜ್ಞ, ಚಿಂತಕ ಡಾ. ಎ ನಾರಾಯಣ | ಚಲನಚಿತ್ರ ನಿರ್ದೇಶಕ, ನಿರ್ಮಾಪಕ ಬಿ ಸುರೇಶ್
ಸಮನ್ವಯ : ಶಿಕ್ಷಣ ತಜ್ಞ, ಬರಹಗಾರ ಡಾ. ಕಿರಣ್ ಗಾಜನೂರು
ನಿರೂಪಣೆ : ಅಬ್ಬಾಸ್ ಕಿಗ್ಗ
ವಿಶೇಷ ಅತಿಥಿ ಜೊತೆ ಮಾತುಕತೆ : 2.15 – 2.50
ಶರಣ್ಯ ವರ್ಮ, ದೆಹಲಿ ವಿದ್ಯಾರ್ಥಿ ಚಳವಳಿ ಪ್ರತಿನಿಧಿ
ನಡೆಸಿಕೊಡುವವರು : ಬರಹಗಾರರು ಡಾ. ಸಂಜ್ಯೋತಿ ವಿ ಕೆ
ನಿರೂಪಣೆ : ವಿದ್ಯಾರ್ಥಿ ನಾಯಕ ಗಣೇಶ್ ರಾಠೋಡ್
3.00 – 04.45 ನಡುವೆ 10ನೇ ಗೋಷ್ಠಿ ನಡೆಯಲಿದೆ.
ವಿಷಯ: ಪ್ರಜಾಪ್ರಭುತ್ವದ ಅಳಿವು, ಉಳಿವು – ಸಿದ್ದಾಂತಗಳ ಪಾತ್ರ
ವಿಷಯ ಮಂಡನೆ : ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ | ಸಿಪಿಐಎಂ ರಾಜ್ಯ ಕಾರ್ಯದರ್ಶಿ ಡಾ ಕೆ ಪ್ರಕಾಶ್ | ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್
ಅಧ್ಯಕ್ಷತೆ : ಬರಹಗಾರ ಮತ್ತು ಚಳವಳಿಗಾರ ಡಾ. ಬಿ ಆರ್ ಮಂಜುನಾಥ್
ನಿರೂಪಣೆ : ಪತ್ರಕರ್ತೆ ಧನಲಕ್ಷ್ಮಿ ದೇವರಾಜ್
5.15 ರಿಂದ 7.00 ನಡುವೆ 11ನೇ ಗೋಷ್ಠಿ ನಡೆಯಲಿದೆ.
ಸಮಾರೋಪ ಸಮಾರಂಭ: ‘ಫ್ಯಾಸಿಸಂ ವಿರುದ್ಧ ಭಾರತ’
ಅಧ್ಯಕ್ಷತೆ : ಬಹುಭಾಷ ನಟ ಪ್ರಕಾಶ್ ರೈ
ಸಮಾರೋಪ ಮಾತು : ಸ್ತ್ರೀಪರ ಹಾಗೂ ಬಡ ಜನರಪರ ಹೋರಾಟಗಾರ್ತಿ, ಬರಹಗಾರ್ತಿ ಕೆ ನೀಲಾ | ವೈದ್ಯೆ, ಲೇಖಕಿ, ಕವಯತ್ರಿ ಡಾ. ಹೆಚ್ ಎಸ್ ಅನುಪಮಾ
ಅತಿಥಿಗಳು : ಕವಿ, ರಂಗಕರ್ಮಿ ಸುಬ್ಬು ಹೊಲೆಯಾರ್ | ಲೇಖಕ ಮಂಜುನಾಥ ಅದ್ದೆ | ಡಾ ಇಸ್ಮಾಯಿಲ್
ನಿರೂಪಣೆ : ಪ್ರಾಧ್ಯಾಪಕ ಡಾ. ಜೀವನ್ ರಾಜ್ ಕುತ್ತಾರ್



