ತಿರುಮಲ ತಿರುಪತಿ ದೇಗುಲಕ್ಕೆ ₹207 ಕೋಟಿ ಮೌಲ್ಯದ 121 ಕೆಜಿ ಚಿನ್ನಾಭರಣ ಕಾಣಿಕೆ ನೀಡಿದ ಚೆನ್ನೈ ದಂಪತಿ!

Date:

ಚೆನ್ನೈ ಮೂಲದ ಖ್ಯಾತ ಉದ್ಯಮಿ ವರ್ಧಮಾನ್ ಜೈನ್ ಮತ್ತು ಅವರ ಪತ್ನಿ ರಾಧಿಕಾ ಜೈನ್ ಅವರು ಗುರುವಾರ ತಿರುಮಲ ತಿರುಪತಿ ದೇವಸ್ಥಾನಕ್ಕೆ (ಟಿಟಿಡಿ) ಬರೋಬ್ಬರಿ 121 ಕೆಜಿ ತೂಕದ ಚಿನ್ನಾಭರಣಗಳನ್ನು ಕಾಣಿಕೆಯಾಗಿ ಸಮರ್ಪಿಸಿದ್ದಾರೆ. ಅಂದಾಜು ₹207.6 ಕೋಟಿ ಮೌಲ್ಯದ ಈ ಬೃಹತ್ ಸ್ವರ್ಣ ಕಾಣಿಕೆಯನ್ನು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಸಮ್ಮುಖದಲ್ಲಿ ದೇವಸ್ಥಾನದ ರಂಗನಾಯಕುಲ ಮಂಟಪದಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿಗೆ ಅರ್ಪಿಸಲಾಯಿತು. ಟಿಟಿಡಿ ಇತಿಹಾಸದಲ್ಲೇ ವೈಯಕ್ತಿಕ ಭಕ್ತರೊಬ್ಬರು ನೀಡಿದ ಅತಿ ದೊಡ್ಡ ಕಾಣಿಕೆ ಇದಾಗಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ.

- Advertisement -

ಈ ಬೃಹತ್ ದೇಣಿಗೆಯಲ್ಲಿ ಒಟ್ಟು 46 ಬಗೆಯ ವಿವಿಧ ಚಿನ್ನಾಭರಣಗಳು ಸೇರಿವೆ. ಇದರಲ್ಲಿ 106 ಕೆಜಿ ತೂಕದ ಆಭರಣಗಳನ್ನು ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಗಾಗಿ ಮತ್ತು 15 ಕೆಜಿ ತೂಕದ ಚಿನ್ನದ ವಸ್ತ್ರವನ್ನು ಪದ್ಮಾವತಿ ಅಮ್ಮನವರಿಗಾಗಿ ವಿಶೇಷವಾಗಿ ಸಿದ್ಧಪಡಿಸಲಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪಂಜಾಬ್ ಚುನಾವಣೆ  | ‘ಎಎಪಿ’ಗೆ ಅಳಿವು-ಉಳಿವಿನ ಕದನ; ಹಳೆಯ...

ಮುಂದಿನ ವರ್ಷದ ಆರಂಭದಲ್ಲಿ, ಅಂದರೆ 2027ರ ಫೆಬ್ರವರಿಯಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಯು ಆಡಳಿತಾರೂಢ ಆಮ್ ಆದ್ಮಿ ಪಕ್ಷದ (ಎಎಪಿ ) ಪಾಲಿಗೆ ಅಕ್ಷರಶಃ 'ಸಾವು-ಬದುಕಿನ' ಪ್ರಶ್ನೆಯಾಗಿ ಪರಿಣಮಿಸಿದೆ. ರಾಷ್ಟ್ರ ರಾಜಕಾರಣದಲ್ಲಿ ತನ್ನ...

‘ಬಿಸ್ಲೆರಿ’ ವಿರುದ್ಧದ ಕ್ರಮಕ್ಕೂ ನೀರು ಮಾರುಕಟ್ಟಗೆ ‘ಅಂಬಾನಿ’ ಪ್ರವೇಶಕ್ಕೂ...

ಭಾರತದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾರುಕಟ್ಟೆಯಲ್ಲಿ ಸುಮಾರು 35ರಿಂದ 36%ರಷ್ಟು ಮಾರುಕಟ್ಟೆ ಪಾಲನ್ನು ಬಿಸ್ಲೆರಿ ಹೊಂದಿದೆ. ಬಿಸ್ಲೆರಿ ನೀರಿನ ಸಂಸ್ಥೆ ‘ಬಿಸ್ಲೆರಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್’ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು...

ಸಂವಿಧಾನ ದಿನ | ಸಂವಿಧಾನಕ್ಕೆ ಮೋದಿ ಸರ್ಕಾರ ಮತ್ತು...

ಭಾರತವು ಸಂವಿಧಾನ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಸಂವಿಧಾನದ ಮೂಲ ಆಶಯಗಳು ಅಭೂತಪೂರ್ವ ಬಿಕ್ಕಟ್ಟಿಗೆ ಸಿಲುಕಿವೆ. 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ...

ಸ್ವಾಮಿಯ ಕಿರೀಟ, ಪದ್ಮಪಾದಗಳು, ಶಂಖ-ಚಕ್ರ, ಕಿರಿಪು ಮುಖಾಭರಣ ಹಾಗೂ ಶ್ರೀವತ್ಸಂ ಪದಕ ಇದರಲ್ಲಿ ಪ್ರಮುಖವಾಗಿವೆ. ವಿಶೇಷವೆಂದರೆ, ಈ ಆಭರಣಗಳಿಗೆ 2,427 ಕ್ಯಾರೆಟ್ ತೂಕದ ನೀಲಮಣಿ, ಪುಷ್ಯರಾಗ, ಮಾಣಿಕ್ಯ, ಪಚ್ಚೆ ಮತ್ತು 238.2 ಕ್ಯಾರೆಟ್ ವಜ್ರಗಳನ್ನು ಜೋಡಿಸಲಾಗಿದೆ.

ಇದನ್ನೂ ಓದಿ: ತಿರುಪತಿ ಲಡ್ಡು ಕಲಬೆರಕೆ ಹಗರಣ: ಪಾಮ್ ಆಯಿಲ್ ಪೂರೈಸುತ್ತಿದ್ದ ಉದ್ಯಮಿ ಇ.ಡಿ ವಶಕ್ಕೆ

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಜೈನ್ ದಂಪತಿಯ ಈ ನಿಸ್ವಾರ್ಥ ಭಕ್ತಿ ಮತ್ತು ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಹಿಂದಿನ ಕಾಲದಲ್ಲಿ ಪಲ್ಲವರು, ಚೋಳರು, ಚೇರರು, ಪಾಂಡ್ಯರು ಮತ್ತು ಮೈಸೂರು ಹಾಗೂ ಮರಾಠಾ ಅರಸರು ತಿರುಮಲ ದೇಗುಲಕ್ಕೆ ಅಪಾರ ಸಂಪತ್ತನ್ನು ಅರ್ಪಿಸಿದ್ದನ್ನು ಸ್ಮರಿಸಿದ ಸಿಎಂ, ಇಂದಿನ ಕಾಲದಲ್ಲೂ ಶ್ರೀಮಂತರು ತಮ್ಮ ಸಂಪತ್ತನ್ನು ಆಧ್ಯಾತ್ಮಿಕ ಮತ್ತು ಸಮಾಜಮುಖಿ ಕಾರ್ಯಗಳಿಗೆ ವಿನಿಯೋಗಿಸಬೇಕು ಎಂದು ಕರೆ ನೀಡಿದರು.

ಚೆನ್ನೈ ಮೂಲದ ‘ಆಕ್ಸೆಸ್ ಹೆಲ್ತ್‌ಕೇರ್’ ಸಂಸ್ಥೆಯ ಸಂಸ್ಥಾಪಕ ಮತ್ತು ಉಪಾಧ್ಯಕ್ಷರಾಗಿರುವ ವರ್ಧಮಾನ್ ಜೈನ್ ಅವರು 2019ರಿಂದಲೂ ಟಿಟಿಡಿಗೆ ನಿರಂತರವಾಗಿ ದೇಣಿಗೆ ನೀಡುತ್ತಾ ಬಂದಿದ್ದಾರೆ. ಈ ಹಿಂದೆ ಅವರು ಟಿಟಿಡಿ ಗೋಶಾಲೆಯಲ್ಲಿ ₹5 ಕೋಟಿ ವೆಚ್ಚದ ಪಶು ಆಹಾರ ಘಟಕ, ಹುಂಡಿ ನಾಣ್ಯ ಎಣಿಸುವ ₹1 ಕೋಟಿ ಮೌಲ್ಯದ ಯಂತ್ರ, ಎಲೆಕ್ಟ್ರಿಕ್ ಬಸ್‌ಗಳು ಮತ್ತು ಎಸ್‌ವಿಬಿಸಿ ವಾಹಿನಿಗೆ ₹7 ಕೋಟಿ ದೇಣಿಗೆಯನ್ನು ನೀಡಿದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಶುಸಂಗೋಪನೆ ಸಾಲ ವಿತರಣೆ ವಿಳಂಬಕ್ಕೆ ರೈತರ ಆಕ್ರೋಶ: 15 ದಿನಗಳ ಗಡುವು

ಪಶುಸಂಗೋಪನೆ ಸಾಲ ವಿತರಣೆಯಲ್ಲಿ ಎದುರಾಗಿರುವ ತಾಂತ್ರಿಕ ಗೊಂದಲ ಹಾಗೂ ವಿಳಂಬ ನೀತಿಯನ್ನು...

ಭದ್ರಾವತಿ | ಬಾಲ್ಯವಿವಾಹ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಘಟಿತ ಪ್ರಯತ್ನ ಅಗತ್ಯ: ಗಣ್ಯರ ಅಭಿಮತ

ಆಶ್ರಿತ ಸಂಸ್ಥೆ, ಶಿವಮೊಗ್ಗ ಹಾಗೂ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಮತ್ತು...

ಬೀದರ್‌ | ನ.28, 29ರಂದು 47ನೇ ಶರಣ ಕಮ್ಮಟ, ಅನುಭವ ಮಂಟಪ ಉತ್ಸವ

ವಿಶ್ವಗುರು ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದ ಅನುಭವ ಮಂಟಪದ ಆವರಣದಲ್ಲಿ ನವೆಂಬರ್ 28...