ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ ನಿಲುವಿನಲ್ಲಿ ರಾಜಿ ಇಲ್ಲ: ಎಂ ಕೆ ಸ್ಟಾಲಿನ್

Date:

ಕೇಂದ್ರ ಸರ್ಕಾರದ ಉದ್ದೇಶಿತ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಡಿಎಂಕೆ ಬೆಂಬಲ ನೀಡಲಿದೆ ಎಂಬ ಎಲ್ಲ ಊಹಾಪೋಹಗಳಿಗೆ ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ತೆರೆ ಎಳೆದಿದ್ದಾರೆ. ಮಸೂದೆಯ ವಿಚಾರದಲ್ಲಿ ಪಕ್ಷವು ತನ್ನ ಎರಡು ಪ್ರಮುಖ ಬೇಡಿಕೆಗಳಿಂದ ಹಿಂದೆ ಸರಿಯುವ ಅಥವಾ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಅವರು ಶುಕ್ರವಾರ ಸ್ಪಷ್ಟಪಡಿಸಿದ್ದಾರೆ.

- Advertisement -

​ಕೇಂದ್ರದ ಮಸೂದೆಯ ವಿಚಾರದಲ್ಲಿ ಬಿಜೆಪಿ ಜತೆ ಕೈಜೋಡಿಸಲು ಡಿಎಂಕೆ ಸಿದ್ಧತೆ ನಡೆಸಿದೆ ಎಂದು ಆಡಳಿತಾರೂಢ, ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಇದೇ ದಿನ ಬೆಳಿಗ್ಗೆ ಸುಳಿವು ನೀಡಿತ್ತು. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಸ್ಟಾಲಿನ್, ಮಹಿಳಾ ಮೀಸಲಾತಿಗೆ ತಳುಕು ಹಾಕಿರುವ ಕೇಂದ್ರದ ಕ್ಷೇತ್ರ ಪುನರ್‌ವಿಂಗಡಣೆ ಮಸೂದೆಗೆ ಡಿಎಂಕೆ ಬೆಂಬಲಿಸಲಿದೆ ಎಂಬ ವದಂತಿಗಳನ್ನು ತಳ್ಳಿಹಾಕಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ನೀರಿಲ್ಲದೆ ಒಣಗುತ್ತಿವೆ ಅಡಿಕೆ ತೋಟಗಳು: ರೈತರ...

ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಪಾಲಿಗೆ ನಾಲೆಗಳ ನೀರು ಕೇವಲ ಕೃಷಿಗೆ ಪೂರಕವಾದ ವ್ಯವಸ್ಥೆಯಲ್ಲ. ಅದು ಅವರ ವಾರ್ಷಿಕ ಆದಾಯ, ಕುಟುಂಬದ ನಿರ್ವಹಣೆ, ಕೃಷಿ ಸಾಲದ ಮರುಪಾವತಿ ಹಾಗೂ ಮುಂದಿನ ಬದುಕಿನ ಭರವಸೆಯಾಗಿದೆ....

ಯುದ್ಧದ ನೆಪ, ಬೆಲೆ ಏರಿಕೆಯ ತಾಪ: ಅಸಲಿ ಕಾರಣಗಳೇನು?

ದೇಶವು ಚಿನ್ನ-ಬೆಳ್ಳಿಯಂತಹ ಲೋಹಗಳಿಗೆ ಆಮದನ್ನೇ ಹೆಚ್ಚಾಗಿ ನಂಬಿಕೊಂಡಿದೆ. ಒಂದೆಡೆ ಕಚ್ಚಾ ತೈಲ, ಇನ್ನೊಂದೆಡೆ ಬೆಲೆಬಾಳುವ ಲೋಹಗಳು- ಹೀಗೆ ಎರಡೂ ಕಡೆಯಿಂದ ಬೆಲೆ ಏರಿಕೆಯ ಒತ್ತಡ ಶುರುವಾಗಿದೆ. ಹಿಂದಿನ ರಷ್ಯಾ-ಉಕ್ರೇನ್ ಯುದ್ಧದ ಕಾಲಕ್ಕಿಂತ ಈಗಿನ...

ಸಮಾಜಕ್ಕೆ ಪ್ರಕೃತಿಯ ಸಮಾನತೆಯ ಪಾಠ ಹೇಳಿದ ಕನಕದಾಸರು ಮತ್ತವರ...

ಜನ್ಮದ ಆಧಾರದ ಮೇಲೆ ಮನುಷ್ಯನನ್ನು ತೂಗುವ ಸಮಾಜಕ್ಕೆ ಪ್ರಕೃತಿಯ ಸಮಾನತೆಯ ಪಾಠ ಹೇಳುತ್ತ, ಮನುಷ್ಯನ ವ್ಯಕ್ತಿಗತ ಅಹಂಕಾರವೇ ಸಮಸ್ತ ಅಧರ್ಮದ ಮೂಲವೆಂದು ಎಚ್ಚರಿಸುವ ಕನಕದಾಸರು, 'ಕುಲಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?'...

ಪಕ್ಷದ ನಿಲುವನ್ನು ಪುನರುಚ್ಚರಿಸಿದ ಸ್ಟಾಲಿನ್, ಲೋಕಸಭೆಯಲ್ಲಿ ಒಟ್ಟು ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾದರೂ ತಮಿಳುನಾಡಿನ ಹಾಲಿ ಶೇ 7.18ರಷ್ಟು ಸ್ಥಾನಗಳ ಪಾಲು ಕಡಿಮೆಯಾಗಬಾರದು ಎಂದು ಆಗ್ರಹಿಸಿದರು. ಜತೆಗೆ, 1971ರ ಜನಗಣತಿಯ ಆಧಾರದಲ್ಲಿ ರಾಜ್ಯಗಳ ನಡುವೆ ನಿಗದಿಯಾಗಿರುವ ಹಾಲಿ ಸಂಸದೀಯ ಪ್ರಾತಿನಿಧ್ಯದ ಅನುಪಾತವನ್ನು ಇನ್ನೂ 25 ವರ್ಷಗಳ ಕಾಲ ಯಥಾಸ್ಥಿತಿಯಲ್ಲಿ ಉಳಿಸಬೇಕು ಎಂದು ಒತ್ತಾಯಿಸಿದರು.

​‘ಈ ಎರಡು ಬೇಡಿಕೆಗಳಿಗೆ ಡಿಎಂಕೆ ಬದ್ಧವಾಗಿದೆ ಮತ್ತು ಮುಂದೆಯೂ ಬದ್ಧವಾಗಿರಲಿದೆ. ನಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ; ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದು ಅವರು ಖಚಿತಪಡಿಸಿದರು.

​ಕ್ಷೇತ್ರ ಪುನರ್‌ವಿಂಗಡಣೆಯ ಸಂಭಾವ್ಯ ಪರಿಣಾಮಗಳ ಬಗ್ಗೆ ಮೊದಲು ಕಳವಳ ವ್ಯಕ್ತಪಡಿಸಿದ ಪಕ್ಷವೇ ಡಿಎಂಕೆ ಎಂದು ಒತ್ತಿ ಹೇಳಿದ ಸ್ಟಾಲಿನ್, ‘ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಊಹಾಪೋಹಗಳಾಗಲಿ, ಬೆನ್ನಿಗೆ ಚೂರಿ ಹಾಕಿದವರ ಗೋಳಾಟವಾಗಲಿ ನಮ್ಮ ದೃಢಸಂಕಲ್ಪವನ್ನು ಅಲುಗಾಡಿಸಲಾರದು. ಅಧಿಕಾರಕ್ಕಾಗಿ ಸಿದ್ಧಾಂತಗಳನ್ನು ತ್ಯಜಿಸಿದ ನಾಚಿಕೆಗೇಡಿಗಳು ಮತ್ತು ಕೃತಘ್ನರು ಇದನ್ನು ಅರಿತುಕೊಳ್ಳಬೇಕು’ ಎಂದು ಕಿಡಿಕಾರಿದರು.

ನವೆಂಬರ್ 30ರಿಂದ ಸಂಸತ್ತಿನ ಸಂಕ್ಷಿಪ್ತ ಅಧಿವೇಶನ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿರುವ ಬೆನ್ನಲ್ಲೇ ಲೋಕಸಭಾ ಕ್ಷೇತ್ರಗಳ ಪುನರ್‌ವಿಂಗಡಣೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ. 2029ರಿಂದ ಮಹಿಳಾ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರುವ ಉದ್ದೇಶದಿಂದ ಎನ್‌ಡಿಎ ಸರ್ಕಾರ ಈ ಮಸೂದೆಯನ್ನು ಮತ್ತೆ ಮಂಡಿಸುವ ನಿರೀಕ್ಷೆಯಿದೆ. ಇದು ಲೋಕಸಭೆಯ ಗರಿಷ್ಠ ಸಂಖ್ಯಾಬಲವನ್ನು 850ಕ್ಕೆ ಹೆಚ್ಚಿಸಲು ದಾರಿ ಮಾಡಿಕೊಡಲಿದೆ.

​ಸಂವಿಧಾನದ 131ನೇ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಲು ಕಳೆದ ಏಪ್ರಿಲ್‌ನಲ್ಲಿ ಸರ್ಕಾರ ನಡೆಸಿದ್ದ ಪ್ರಯತ್ನವನ್ನು ಒಗ್ಗಟ್ಟಾದ ವಿರೋಧ ಪಕ್ಷಗಳು ವಿಫಲಗೊಳಿಸಿದ್ದವು.

ದಕ್ಷಿಣದ ರಾಜ್ಯಗಳ ಆತಂಕಗಳಲ್ಲಿ ಒಂದನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರವು ಈ ಬಾರಿ ಪರಿಷ್ಕೃತ ಸೂತ್ರವನ್ನು ಮುಂದಿಡುವ ಸಾಧ್ಯತೆಯಿದೆ. ಹೊಸ ಮಸೂದೆಯಲ್ಲಿ ಹಾಲಿ ಅನುಪಾತಕ್ಕೆ ಧಕ್ಕೆಯಾಗದಂತೆ ಪ್ರತಿ ರಾಜ್ಯದ ಲೋಕಸಭಾ ಸ್ಥಾನಗಳನ್ನು ಶೇ 50ರಷ್ಟು ಹೆಚ್ಚಿಸುವ ಪ್ರಸ್ತಾವ ಇರಬಹುದು ಎನ್ನಲಾಗಿದೆ. ಇದರಿಂದ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ಜನಗಣತಿಯಿಂದ ಪ್ರತ್ಯೇಕಿಸಿದಂತಾಗುತ್ತದೆ.

​ಕ್ಷೇತ್ರ ಪುನರ್‌ವಿಂಗಡಣೆಯನ್ನು ಜನಗಣತಿಗೆ ತಳುಕು ಹಾಕುವುದಕ್ಕೆ ತಮಿಳುನಾಡು ಸೇರಿದಂತೆ ದಕ್ಷಿಣದ ರಾಜ್ಯಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಾ ಬಂದಿವೆ. ಜನಸಂಖ್ಯಾ ಬೆಳವಣಿಗೆ ಹೆಚ್ಚಿರುವ ಉತ್ತರ ಭಾರತದ ರಾಜ್ಯಗಳಿಗೆ ಇದರಿಂದ ಅನ್ಯಾಯವಾಗಿ ಲಾಭವಾಗುತ್ತದೆ ಎಂಬುದು ಅವುಗಳ ವಾದವಾಗಿದೆ. ಜನಸಂಖ್ಯಾ ನಿಯಂತ್ರಣದಲ್ಲಿ ದಕ್ಷಿಣದ ರಾಜ್ಯಗಳು ಉತ್ತಮ ಸಾಧನೆ ಮಾಡಿರುವುದರಿಂದ, ಕೇವಲ ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರಗಳನ್ನು ಮರುಹಂಚಿಕೆ ಮಾಡಿದರೆ ಸಂಸತ್ತಿನಲ್ಲಿ ತಮ್ಮ ಪ್ರಾತಿನಿಧ್ಯದ ಪಾಲು ಕಡಿಮೆಯಾಗಬಹುದು ಎಂಬ ಆತಂಕವನ್ನು ಈ ರಾಜ್ಯಗಳು ವ್ಯಕ್ತಪಡಿಸಿವೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಶ್ಚಿಮ ಬಂಗಾಳ| ಟ್ರೈಬ್ಯುನಲ್‌ಗೆ ಮೇಲ್ಮನವಿ ಸಲ್ಲಿಸಿದ ಮತದಾರರ ಮನೆಗೆ ಪೊಲೀಸರು: ಯಾವ ಕಾನೂನು ಎಂದು ವಿಪಕ್ಷಗಳ ಪ್ರಶ್ನೆ

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯು...

ಔರಾದ್ | ಎಸ್‌ಡಿಎಂಸಿ ಅಧ್ಯಕ್ಷರಾಗಿ ಚನ್ನಬಸವ ಭೂರೆ ಅವಿರೋಧ ಆಯ್ಕೆ

ಔರಾದ್ ತಾಲ್ಲೂಕಿನ ಜೋಜನಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಾಲಾಭಿವೃದ್ಧಿ...

ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ: ಸಂಸತ್ತಿನ ಎರಡೂ ಸದನಗಳಲ್ಲಿ ಪರ ವಿರೋಧದ ಬಲಾಬಲ

ಕ್ಷೇತ್ರ ಪುನರ್‌ವಿಂಗಡಣೆ ಮತ್ತು ಶೇ 33ರಷ್ಟು ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದ...

ಸಮಾಜಕ್ಕೆ ಪ್ರಕೃತಿಯ ಸಮಾನತೆಯ ಪಾಠ ಹೇಳಿದ ಕನಕದಾಸರು ಮತ್ತವರ ಧರ್ಮಪ್ರಜ್ಞೆ

ಜನ್ಮದ ಆಧಾರದ ಮೇಲೆ ಮನುಷ್ಯನನ್ನು ತೂಗುವ ಸಮಾಜಕ್ಕೆ ಪ್ರಕೃತಿಯ ಸಮಾನತೆಯ ಪಾಠ...